AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Madenuru Manu: ‘ಅತ್ಯಾಚಾರ ಆಗಿದೆ, ಎರಡು ಬಾರಿ ಪ್ರೆಗ್ನೆಂಟ್ ಆಗಿದ್ದೆ’; ‘ಕಾಮಿಡಿ ಕಿಲಾಡಿ’ ಕಲಾವಿದರ ಜಗಳ ಬೀದಿಗೆ

ಕನ್ನಡದ ಹಾಸ್ಯ ಕಲಾವಿದ ಮಡೆನೂರು ಮನು ವಿರುದ್ಧ ಅತ್ಯಾಚಾರದ ಆರೋಪ ಕೇಳಿಬಂದಿದೆ. 2018 ರಲ್ಲಿ ಪರಿಚಯವಾದ ಯುವತಿಯ ಮೇಲೆ ಅವರು ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ಈ ಘಟನೆಯ ನಂತರ ಅವರು ಮದುವೆಯಾಗಿದ್ದರು ಎಂದು ಸಂತ್ರಸ್ತೆ ಹೇಳಿದ್ದಾರೆ. ಸಂತ್ರಸ್ತೆ ಎರಡು ಬಾರಿ ಗರ್ಭಿಣಿಯಾಗಿದ್ದರು ಮತ್ತು ಮನು ಗರ್ಭಪಾತ ಮಾಡಿಸಿದ್ದರು ಎಂದು ಆರೋಪಿಸಲಾಗಿದೆ.

Madenuru Manu: ‘ಅತ್ಯಾಚಾರ ಆಗಿದೆ, ಎರಡು ಬಾರಿ ಪ್ರೆಗ್ನೆಂಟ್ ಆಗಿದ್ದೆ’; ‘ಕಾಮಿಡಿ ಕಿಲಾಡಿ’ ಕಲಾವಿದರ ಜಗಳ ಬೀದಿಗೆ
ಮನು ಹಾಗೂ ಸಂತ್ರಸ್ತೆ
ರಾಜೇಶ್ ದುಗ್ಗುಮನೆ
| Updated By: Digi Tech Desk|

Updated on:May 22, 2025 | 3:37 PM

Share

ಮಡೆನೂರು ಮನು (Madenuru Manu) ವಿರುದ್ಧ ಅತ್ಯಾಚಾರ ಆರೋಪ ಕೇಳಿ ಬಂದಿದೆ. 2018ರಲ್ಲಿ ಪರಿಚಯ ಆದ ಯುವತಿ ಮೇಲೆ ಅವರು ಅತ್ಯಾಚಾರ ಮಾಡಿರೋದು ಸದ್ಯದ ಆರೋಪ. ಈ ಯುವತಿ ಹಾಗೂ ಮನು ‘ಕಾಮಿಡಿ ಕಿಲಾಡಿಗಳು’ ಶೋನಲ್ಲಿ ಒಟ್ಟಾಗಿ ಕೆಲಸ ಮಾಡಿದ್ದರು. ಅತ್ಯಾಚಾರದಿಂದ ತಾವು ಎರಡು ಬಾರಿ ಪ್ರೆಗ್ನೆಂಟ್ ಆಗಿದ್ದಾಗಿಯೂ ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ. ಈ ದೂರನ್ನು ಆಧರಿಸಿ ಪೊಲೀಸರು ಮನು ಮೇಲೆ ಕೇಸ್ ದಾಖಲು ಮಾಡಿಕೊಂಡಿದ್ದಾರೆ.

2018ರಲ್ಲಿ ಮನು ಹಾಗೂ ಯುವತಿ ಮಧ್ಯೆ ಪರಿಚಯ ಬೆಳೆಯಿತು. ಯುವತಿಗೆ ಬಾಡಿಗೆ ಮನೆಯನ್ನು ಮನುವೇ ಹುಡುಕಿಕೊಟ್ಟಿದ್ದ. ‘ಕಾಮಿಡಿ ಕಿಲಾಡಿಗಳು’ ಶೋನಲ್ಲಿ ಇವರು ಒಟ್ಟಾಗಿ ಕಾಣಿಸಿಕೊಂಡಿದ್ದರು.  ಯುವತಿ ಜೊತೆ ಆಪ್ತತೆ ಬೆಳೆಸಿಕೊಂಡಿದ್ದ ಮನುಗೆ ಆಗಲೇ ಮದುವೆ ಆಗಿ ಒಂದು ಮಗು ಕೂಡ ಇತ್ತು. ಇಬ್ಬರೂ ಕಾರ್ಯಕ್ರಮ ಒಂದಕ್ಕೆ ತೆರಳಿದ್ದಾಗ ಅತ್ಯಾಚಾರ ನಡೆದಿದೆ ಎಂದು ಯುವತಿ ಆರೋಪಿಸಿದ್ದಾರೆ.

2022ರ ಘಟನೆ

2022ರ ನವೆಂಬರ್ 29ರಂದು ಶಿವಮೊಗ್ಗದ ಶಿಕಾರಿಪುರದ ಕಾರ್ಯಕ್ರಮಕ್ಕೆ ಮನು ಹಾಗೂ ಯುವತಿ ತೆರಳಿದ್ದರು. ಅಲ್ಲಿ ಒಂದು ಹಾಸ್ಯ ಕಾರ್ಯಕ್ರಮ‌ ಮಾಡಿದ್ದರು. ಕಾರ್ಯಕ್ರಮದ ಬಳಿಕ ಸಂಭಾವನೆ ನೀಡೋ ನೆಪದಲ್ಲಿ ಮನು ಯುವತಿಯನ್ನು ರೂಂಗೆ ಕರೆದಿದ್ದರು. ಬಳಿಕ ಯುವತಿ ಮೇಲೆ ಅವರು ಅತ್ಯಾಚಾರ ಮಾಡಿದ್ದಾಗಿ ಎಫ್​​ಐಆರ್​ನಲ್ಲಿ ಉಲ್ಲೇಖ ಆಗಿದೆ.

ಇದನ್ನೂ ಓದಿ
Image
ಕನ್ನಡ ಕಿರುತೆರೆ ನಟಿಯ ಮೇಲೆ ಅತ್ಯಾಚಾರ; ನಟ ಮಡೆನೂರು ಮನು ವಿರುದ್ಧ FIR
Image
‘ನಾನು ಯಶ್ ಅಭಿಮಾನಿ ಅಲ್ಲ, ಆದರೆ ಆ ಹೀರೋ ನಂಗೆ ಆದರ್ಶ’; ಯಶ್ ತಾಯಿ
Image
25ನೇ ವಯಸ್ಸಿಗೆ ಕಾಲಿಟ್ಟ ಸುಹಾನ; ಶಾರುಖ್ ಮಗಳ ಬಳಿ ಇದೆ ದುಬಾರಿ ವಸ್ತುಗಳು
Image
‘ತಿಂಗಳಿಗೆ 40 ಲಕ್ಷ ಜೀವನಾಂಶ ಕೊಡಿ’; ಬೇಡಿಕೆ ಇಟ್ಟ ಜಯಮ್​ ರವಿ ಪತ್ನಿ

ಗುಟ್ಟಾಗಿ ವಿವಾಹ

ಅತ್ಯಾಚಾರ ಆದ ಬೆನ್ನಲ್ಲೇ ಮನು ಅವರು ಯುವತಿಯನ್ನು ವಿವಾಹ ಕೂಡ ಆಗಿದ್ದರು! ಹೌದು ಅದೇ ವರ್ಷ ಡಿಸೆಂಬರ್​ 3ರಂದು ಮನೆಗೆ ಬಂದಿದ್ದ ಮನು ಬಲವಂತವಾಗಿ ತಾಳಿ ಕಟ್ಟಿದ್ದರಂತೆ. ಆ ಬಳಿಕ ಹಲವು ಬಾರಿ ನನ್ನ ಮೇಲೆ ಅತ್ಯಾಚಾರ ಮಾಡಿದ್ದಾರೆ ಎಂಬುದು ಸಂತ್ರಸ್ತೆಯ ಆರೋಪ.

ಪ್ರೆಗ್ನೆಂಟ್ ಆದೆ

ಅತ್ಯಾಚಾರದ ಬಳಿಕ ಸಂತ್ರಸ್ತೆ ಪ್ರೆಗ್ನೆಂಟ್ ಆದರು. ಮನು ಗರ್ಭಪಾತ ಆಗುವ ಮಾತ್ರೆ ನೀಡಿದ್ದರು. ಇದಾದ ಬಳಿಕವೂ ಸಂತ್ರಸ್ತೆ ಮತ್ತೊಮ್ಮೆ ಗರ್ಭಿಣಿ ಆಗಿದ್ದರು. ಆ ಬಳಿಕ ಎರಡನೇ ಬಾರಿಯೂ ಮನು ಗರ್ಭಪಾತ ಮಾಡಿಸಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: ಕನ್ನಡ ಕಿರುತೆರೆ ನಟಿಯ ಮೇಲೆ ಅತ್ಯಾಚಾರ; ನಟ ಮಡೆನೂರು ಮನು ವಿರುದ್ಧ ಎಫ್​ಐಆರ್

ನನ್ನನ್ನು ಬಳಸಿಕೊಂಡಿದ್ದಾರೆ ಎಂದ ಸಂತ್ರಸ್ತೆ

‘ಬಾಡಿಗೆ ಮನೆಯಲ್ಲಿ ಹಲವು ಬಾರಿ ಲೈಂಗಿಕವಾಗಿ ಬಳಸಿಕೊಂಡಿದ್ದಾರೆ. ಫೋನ್​ನಲ್ಲಿ ವಿಡಿಯೋ ಮಾಡಿಟ್ಟುಕೊಂಡಿದ್ದಾನೆ. ವಿಚಾರ ಯಾರಿಗಾದ್ರೂ ಹೇಳಿದರೆ ಕೊಲೆ ಮಾಡೋದಾಗಿ ಬೆದರಿಕೆ ಹಾಕಿದ್ದಾನೆ. ಜೊತೆಗೆ ಲಕ್ಷಾಂತರ ರೂಪಾಯಿ ಹಣ ಕೂಡ ನೀಡಿದ್ದೇನೆ. ಈತನ ವಿರುದ್ದ ಕಾನೂನು ಕ್ರಮ ಜರುಗಿಸಿ’ ಎಂಬುದು ಸಂತ್ರಸ್ತೆಯ ಕೋರಿಕೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 2:59 pm, Thu, 22 May 25