AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕನ್ನಡದ ಹೀರೋಗಳಿಗೆ ಇದನ್ನು ಹೇಳೋ ಗಟ್ಸ್ ಇದೆಯಾ; ಸೋನು ನಿಗಮ್ ಹೀಗೆ ಹೇಳಿದ್ರಾ?

ಬೆಂಗಳೂರಿನ SBI ಬ್ಯಾಂಕ್‌ನಲ್ಲಿ ಮ್ಯಾನೇಜರ್ ಕನ್ನಡ ಮಾತನಾಡಲು ನಿರಾಕರಿಸಿದ ಘಟನೆ ವಿವಾದ ಸೃಷ್ಟಿಸಿದೆ. ತೇಜಸ್ವಿ ಸೂರ್ಯ ಈ ವಿಷಯದಲ್ಲಿ ಬ್ಯಾಂಕ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದರು. ಈ ಬೆನ್ನಲ್ಲೇ ಸೋನು ನಿಗಮ್ ಮಾಡಿದ ಟ್ವೀಟ್ ಒಂದು ವೈರಲ್ ಆಗಿದೆ. ಈ ಟ್ವೀಟ್​ನ ಸತ್ಯಾಸತ್ಯತೆ ಬಗ್ಗೆ ಇಲ್ಲಿದೆ ವಿವರ.

‘ಕನ್ನಡದ ಹೀರೋಗಳಿಗೆ ಇದನ್ನು ಹೇಳೋ ಗಟ್ಸ್ ಇದೆಯಾ; ಸೋನು ನಿಗಮ್ ಹೀಗೆ ಹೇಳಿದ್ರಾ?
ಸೋನು ನಿಗಮ್
ರಾಜೇಶ್ ದುಗ್ಗುಮನೆ
|

Updated on:May 22, 2025 | 11:41 AM

Share

ಗಾಯಕ ಸೋನು ನಿಗಮ್ (Sonu Nigam) ಅವರು ಒಂದಾದ ಮೇಲೆ ಒಂದರಂತೆ ವಿವಾದ ಮಾಡಿಕೊಳ್ಳುತ್ತಲೇ ಇದ್ದಾರೆ. ಇತ್ತೀಚೆಗೆ ಕನ್ನಡಿಗರನ್ನು ಕೆಣಕಿ ಅವರು ಸುದ್ದಿ ಆಗಿದ್ದರು. ‘ಕನ್ನಡ ಕನ್ನಡ ಎಂದಿದ್ದಕ್ಕೆ ಪಹಲ್ಗಾಮ್​ನಲ್ಲಿ ಭಯೋತ್ಪಾದನಾ ದಾಳಿ ಆಯಿತು’ ಎಂದು ಹೇಳಿದ್ದರು. ಇದರಿಂದ ಅವರು ಟೀಕೆ ಎದುರಿಸಿದ್ದರು. ಈಗ ಸೋನು ನಿಗಮ್ ಹೆಸರಿ ಟ್ವಿಟರ್ ಖಾತೆಯಿಂದ ಮಾಡಿದ ಟ್ವೀಟ್ ಒಂದು ಚರ್ಚೆಗೆ ಕಾರಣ ಆಗಿದೆ. ಅಸಲಿಗೆ ಅವರು ಇದನ್ನು ಮಾಡಿಯೇ ಇಲ್ಲ. ಸೋನು ನಿಗಮ್ ಟ್ವಿಟರ್ ಬಳಕೆ ಮಾಡೋದು ಬಿಟ್ಟು 7 ವರ್ಷಗಳೇ ಆಗಿವೆ.

ಏನಿದು ಬ್ಯಾಂಕ್ ಘಟನೆ?

ಬೆಂಗಳೂರಿನ ಚಂದಾಪುರದ ಎಸ್​ಬಿಐ ಬ್ಯಾಂಕ್​ಗೆ ಕೆಲಸದ ನಿಮಿತ್ತ ಗ್ರಾಹಕರೊಬ್ಬರು ಹೋದಾಗ ಅಲ್ಲಿನ ಬ್ಯಾಂಕ್​ ಮ್ಯಾನೇಜರ್ ಪ್ರಿಯಾಂಕಾ​ ಉದ್ಧಟತನ ತೋರಿದ್ದರು. ಗ್ರಾಹಕನಿಗೆ ಹಿಂದಿ ಮಾತನಾಡುವಂತೆ ಹೇಳಿದ್ದೂ ಅಲ್ಲದೆ, ಯಾವತ್ತೂ ಕನ್ನಡ ಮಾತನಾಡಲ್ಲ ಎಂದು ದರ್ಪ ತೋರಿದ್ದರು.

ಇದನ್ನೂ ಓದಿ
Image
‘ನಾನು ಯಶ್ ಅಭಿಮಾನಿ ಅಲ್ಲ, ಆದರೆ ಆ ಹೀರೋ ನಂಗೆ ಆದರ್ಶ’; ಯಶ್ ತಾಯಿ
Image
25ನೇ ವಯಸ್ಸಿಗೆ ಕಾಲಿಟ್ಟ ಸುಹಾನ; ಶಾರುಖ್ ಮಗಳ ಬಳಿ ಇದೆ ದುಬಾರಿ ವಸ್ತುಗಳು
Image
‘ತಿಂಗಳಿಗೆ 40 ಲಕ್ಷ ಜೀವನಾಂಶ ಕೊಡಿ’; ಬೇಡಿಕೆ ಇಟ್ಟ ಜಯಮ್​ ರವಿ ಪತ್ನಿ
Image
‘ಸೀತಾ ರಾಮ’ಗೆ ಕೊನೆಯ ದಿನದ ಶೂಟಿಂಗ್; ಸೀರಿಯಲ್ ಪೂರ್ಣಗೊಳ್ಳಲು ಕಾರಣವೇನು?

ತೇಜಸ್ವಿ ಸೂರ್ಯ ಖಡಕ್ ಪ್ರತಿಕ್ರಿಯೆ

ಎಸ್​ಬಿಐ ಬ್ಯಾಂಕ್​ನ ಬ್ರ್ಯಾಂಚ್ ಮ್ಯಾನೇಜರ್ ಅರವರ ಈ ರೀತಿಯ ದುಂಡಾವರ್ತನೆ ಸಹಿಸಲು ಆಗದು. ಕರ್ನಾಟಕದಲ್ಲಿ ಸೇವೆ ಸಲ್ಲಿಸುತ್ತಿರುವ ಸಂದರ್ಭದಲ್ಲಿ, ಅದರಲ್ಲಿಯೂ ಬ್ಯಾಂಕಿಂಗ್ ವಲಯದಲ್ಲಿ ಗ್ರಾಹಕರು ಮಾತನಾಡುವ ಸ್ಥಳೀಯ ಭಾಷೆಯಲ್ಲಿಯೇ ವ್ಯವಹರಿಸತಕ್ಕದ್ದು. ಕರ್ನಾಟಕದಲ್ಲಿ ಬ್ಯಾಂಕಿಂಗ್ ಸೇವೆಗಳಲ್ಲಿ ಸ್ಥಳೀಯ ಕನ್ನಡಿಗರನ್ನು ಪರಿಗಣಿಸುವಂತೆ ನಾನು ಸಂಸತ್ತಿನ ಒಳಗೆ ಮತ್ತು ಹೊರಗೆ ಹಲವು ಬಾರಿ ಪ್ರಸ್ತಾಪಿಸಿದ್ದೇನೆ. ಇತ್ತೀಚೆಗಿನ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಮುಂದೆಯೂ ನಾನು ಇದನ್ನೇ ಪುನರುಚ್ಚರಿಸಿ, ಸ್ಥಳೀಯ ಭಾಷೆ ಬಲ್ಲವರನ್ನೇ ನೇಮಕ ಮಾಡಿಕೊಳ್ಳುವಂತೆ ಒತ್ತಾಯಿಸಿದ್ದು, ಈ ಕುರಿತಂತೆ DFS ನೀತಿಯಡಿಯಲ್ಲಿಯೇ ನೇಮಕಾತಿ ಕೈಗೊಳ್ಳುವಂತೆ ಎಸ್​ಬಿಐ ಬಳಿ ವಿನಂತಿಸುತ್ತೇನೆ. ಈ ರೀತಿಯ ವರ್ತನೆ ತೋರಿರುವ ಬ್ಯಾಂಕ್ ಅಧಿಕಾರಿ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಸಂಬಂಧಪಟ್ಟವರ ಬಳಿ ನಾನು ಒತ್ತಾಯಿಸಿದ್ದು, ಕರ್ನಾಟಕದಲ್ಲಿ ಸೇವೆ ಸಲ್ಲಿಸುವ ಬ್ಯಾಂಕಿಂಗ್ ವಲಯ ಸಿಬ್ಬಂದಿಗಳು ಗ್ರಾಹಕರೊಂದಿಗೆ ಕನ್ನಡದಲ್ಲೇ ವ್ಯವಹರಿಸುವ ಅಗತ್ಯತೆ ಇದೆ’ ಎಂದಿದ್ದರು.

ಸೋನು ನಿಗಮ್ ಎಂದು ಹೇಳಿಕೊಂಡ ವ್ಯಕ್ತಿ ಹೇಳಿದ್ದೇನು?

‘ಕನ್ನಡ ಸಿನಿಮಾ ಹಿಂದಿಗೆ ಡಬ್​ ಮಾಡಬೇಡಿ. ಕನ್ನಡ ಸಿನಿಮಾನ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಮಾಡಬೇಡಿ. ತೇಜಸ್ವಿ ಸೂರ್ಯ ಅವರೇ ಇದನ್ನು ಕನ್ನಡ ಹೀರೋಗಳಿಗೆ ಹೇಳುವ ಗಟ್ಸ್ ನಿಮಗೆ ಇದೆಯೇ ಅಥವಾ ನೀವೋಬ್ಬ ಭಾಷಾ ಹೋರಾಟಗಾರ ಅಷ್ಟೆಯೇ’ ಎಂದು ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: ಎಂದಿಗೂ ಕನ್ನಡ ಮಾತನಾಡಲ್ಲ ಅಂತ ದರ್ಪ ತೋರಿದ್ದ SBI ಬ್ಯಾಂಕ್​ ಮ್ಯಾನೇಜರ್​: ಸಿಎಂ ಖಂಡನೆ ಬೆನ್ನಲ್ಲೇ ಎತ್ತಂಗಡಿ

ಸೋನು ನಿಗಮ್ ಟ್ವಿಟರ್ ಇಲ್ಲ

ಸೋನು ನಿಗಮ್ ಅವರು ಟ್ವಿಟರ್ ಬಳಕೆ ಮಾಡೋದು ನಿಲ್ಲಿಸಿ ಏಳು ವರ್ಷಗಳು ಕಳೆದಿವೆ. ಆದರೆ, ಅವರ ಹೆಸರಲ್ಲಿ ಬೇರೊಬ್ಬರು ಖಾತೆ ತೆರೆದಿದ್ದಾರೆ. ಈ ಬಗ್ಗೆ ಸೋನು ನಿಗಮ್ ಪ್ರಶ್ನೆ ಮಾಡಿದ್ದರು. ಆದರೆ, ಆ ವ್ಯಕ್ತಿ ನನ್ನ ಹೆಸರು ಸೋನು ನಿಗಮ್ ಎಂದು ದಾಖಲೆ ನೀಡಿದ್ದರು. ಕೆಲವರು ತಪ್ಪಾಗಿ ಅರ್ಥೈಸಿಕೊಂಡು ಸೋನು ನಿಗಮ್​ಗೆ ಬೈಯ್ಯುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 11:32 am, Thu, 22 May 25

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್