Bengaluru Stampede; ಸಿಎಂ ಮತ್ತು ಡಿಸಿಎಂ ನಡುವಿನ ಪ್ರತಿಷ್ಠೆಯ ಕಾಳಗಕ್ಕೆ ಅಮಾಯಕ ಮಕ್ಕಳು ಬಲಿ: ಕುಮಾರಸ್ವಾಮಿ
ಕುಮಾರಸ್ವಾಮಿಯವರ ಆರೋಗ್ಯದ ಬಗ್ಗೆ ಡಿಕೆ ಸುರೇಶ್ ಟೀಕೆ ಮಾಡಿರುವುದಕ್ಕೆ ವ್ಯಗ್ರರಾದ ಕುಮಾರಸ್ವಾಮಿ, ನನ್ನ ಆರೋಗ್ಯ ಸರಿಯಾಗೇ ಇದೆ, ಮಂಡ್ಯ ಜಿಲ್ಲೆಯ ಜನರ ಆಶೀರ್ವಾದ ನನ್ನ ಮೇಲೆ ಇರೋವರೆಗೆ ಅರೋಗ್ಯ ಚೆನ್ನಾಗೇ ಇರುತ್ತದೆ, ನನ್ನ ಮೇಲೆ ಯಾವ ಒತ್ತಡವೂ ಇಲ್ಲ, ದೇವರು ನನ್ನನ್ನು ನೋಡಿಕೊಳ್ಳುತ್ತಾನೆ ಎಂದು ಹೇಳಿದರು.
ಮಂಡ್ಯ, ಜೂನ್ 7: ಬೆಂಗಳೂರಲ್ಲಿ ಬುಧವಾರ ನಡೆದ ಕಾಲ್ತುಳಿತ ಪ್ರಕರಣಕ್ಕೆ (stampede) ಸರ್ಕಾರವೇ ಹೊಣೆ ಎಂದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಪುನರುಚ್ಛರಿಸಿದರು. ಆರ್ಸಿಬಿ ಆಟಗಾರರಿಗೆ ಅಭಿನಂದನೆ ಸಲ್ಲಿಸ್ತಾ ಇದ್ದೇವೆ, ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರಬೇಕೆಂದು ಮುಖ್ಯಮಂತ್ರಿ ಟ್ವೀಟ್ ಮಾಡಿದ್ದಾರೆ. ಉಪ ಮುಖ್ಯಮಂತ್ರಿ ಕನಕಪುರದಲ್ಲಿ ಹೇಳಿಕೆ ನೀಡಿದ್ದಾರೆ, ಈ ಹಿನ್ನೆಲೆಯಲ್ಲಿ ಅಭಿಮಾನಿಗಳ ಭದ್ರತೆಗೆ ಸೂಕ್ತ ವ್ಯವಸ್ಥೆ ಮಾಡೋದು ಸರ್ಕಾರದ ಜವಾಬ್ದಾರಿಯಾಗಿತ್ತು ಎಂದು ಕುಮಾರಸ್ವಾಮಿ ಹೇಳಿದರು. ಅಸಲಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಶಿವಕುಮಾರ್ ನಡುವೆ ಪ್ರತಿಷ್ಠೆಯ ಕಾಳಗ ನಡೆಯುತ್ತಿದೆ, ಅವರ ವರ್ಚಸ್ಸಿನ ಕಿತ್ತಾಟಕ್ಕೆ ಅಮಾಯಕ ಕುಟುಂಬಗಳ ಮಕ್ಕಳು ಬಲಿಯಾದರು ಎಂದು ಕುಮಾರಸ್ವಾಮಿ ಹೇಳಿದರು.
ಇದನ್ನೂ ಓದಿ: Bengaluru Stampede: ಸದನದಲ್ಲಿ ಶಿವಕುಮಾರ್ಗೆ ನನ್ನ ವಿರುದ್ಧ ಮಾತಾಡುವುದೇನಿದೆ? ಹೆಚ್ ಡಿ ಕುಮಾರಸ್ವಾಮಿ
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ