Bengaluru Stampede: ಸದನದಲ್ಲಿ ಶಿವಕುಮಾರ್ಗೆ ನನ್ನ ವಿರುದ್ಧ ಮಾತಾಡುವುದೇನಿದೆ? ಹೆಚ್ ಡಿ ಕುಮಾರಸ್ವಾಮಿ
ಪರಿಹಾರದ ವಿಷಯದಲ್ಲಿ ಕುಮಾರಸ್ವಾಮಿ ಸ್ಪಷ್ಟವಾದ ಪ್ರತಿಕ್ರಿಯೆ ನೀಡಲಿಲ್ಲ. ಕರ್ನಾಟಕ ಸರ್ಕಾರ ಮತ್ತು ಆರ್ಸಿಬಿ ತಂಡದ ಮಾಲೀಕರು ಕಾಲ್ತುಳಿತದಲ್ಲಿ ಮಡಿದವರ ಕುಟುಂಬಗಳಿಗೆ ಹತ್ತತ್ತು ಲಕ್ಷ ರೂ. ನೀಡುತ್ತಿದ್ದಾರೆ, ಹಣ ಎಷ್ಟು ನೀಡಿದರೂ ಹೋದ ಜೀವವಂತೂ ವಾಪಸ್ಸು ಬರಲಾರದು, ವಿಶೇಷ ಪ್ರಕರಣ ಅಂತ ಪರಿಗಣಿಸಿ ಸರ್ಕಾರ ಏನು ತೀರ್ಮಾನ ತೆಗೆದುಕೊಳ್ಳುತ್ತೋ ನೋಡೋಣ ಎಂದು ಅವರು ಹೇಳಿದರು.
ಬೆಂಗಳೂರು, ಜೂನ್ 7: ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ, ಅಧಿವೇಶನದಲ್ಲಿ ನನ್ನ ಬಗ್ಗೆ ಮಾತಾಡುತ್ತೇನೆ ಅಂತ ಡಿಕೆ ಶಿವಕುಮಾರ್ (DK Shivakumar) ಹೇಳುತ್ತಿರುವುದರ ಅರ್ಥವೇನು, ಹಿಂದೆ ಅವರು ಏನು ಮಾತಾಡಿದ್ದಾರೆ ಅಂತ ಮುಂದೆ ಮಾತಾಡುತ್ತಾರೆ? ಅಧಿಕಾರಕ್ಕೆ ಬಂದ ಕಳೆದ ಎರಡು ವರ್ಷಗಳಲ್ಲಿ ಅವರು ಏನು ಮಾಡಿದ್ದಾರೆ ಎಂದು ಪ್ರಶ್ನಿಸಿದರು. ಬುಧವಾರ ನಡೆದ ಕಾಲ್ತುಳಿತದ ಪ್ರಕರಣ ಪಕ್ಕಕ್ಕಿಟ್ಟರೂ, ಬೆಂಗಳೂರು ನಗರ ಜಿಲ್ಲೆಗೆ ನೀಡಿರುವ ಕೊಡುಗೆಯಾದರೂ ಏನು ಅಂತ ಕುಮಾರಸ್ವಾಮಿ ಕೇಳಿದರು.
ಇದನ್ನೂ ಓದಿ: Bengaluru Stampede; ದಕ್ಷರನ್ನು ಸಸ್ಪೆಂಡ್ ಮಾಡಿ ರಾಜ್ಯದ ಜನತೆಗೆ ಸರ್ಕಾರ ಕೆಟ್ಟ ಸಂದೇಶ ನೀಡಿದೆ: ಹೆಚ್ ಡಿ ಕುಮಾರಸ್ವಾಮಿ
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos

ಚನ್ನಪಟ್ಟಣದ ದಶವಾರ ಗ್ರಾಮದಲ್ಲಿ ಬಿ. ಸರೋಜಾದೇವಿ ಅಂತ್ಯಕ್ರಿಯೆಗೆ ಸಿದ್ಧತೆ

ಸಿಎಂರನ್ನು ಉದ್ದೇಶಪೂರ್ವಕವಾಗಿ ಆಹ್ವಾನಿಸಿಲ್ಲವಾದರೆ ಖಂಡನಾರ್ಹ: ರಾಜಣ್ಣ

ಬಿ.ಸಿ. ಪಾಟೀಲ್ ಸಿನಿಮಾಗೆ ಸಮಸ್ಯೆ ಆದಾಗ ಸಹಾಯ ಮಾಡಿದ್ದ ಬಿ. ಸರೋಜಾದೇವಿ

ಕೀಟನಾಶಕ ಮಿಶ್ರಿತ ನೀರು ಕುಡಿದು 12 ಮಂದಿ ಮಕ್ಕಳು ಅಸ್ವಸ್ಥ
