Bengaluru Stampede; ಹಗಲು ರಾತ್ರಿ ಕೊಹ್ಲಿ ಅನ್ನುತ್ತಿದ್ದ ಮಗನಿಗೆ ಕ್ರಿಕೆಟರ್ನಿಂದ ಸಾವು ಬಿಟ್ಟರೆ ಬೇರೇನೂ ಸಿಗಲಿಲ್ಲ; ಶಿವಲಿಂಗನ ತಾಯಿ
ಪಿಯುಸಿಯಲ್ಲಿ ಕಾಮರ್ಸ್ ಸ್ಟ್ರೀಮ್ ತೆಗದುಕೊಳ್ಳಬೇಕು ಅಂದುಕೊಂಡಿದ್ದ ಶಿವಲಿಂಗ ಅನೇಕ ಕನಸುಗಳನ್ನು ಕಟ್ಟಿಕೊಂಡಿದ್ದ ಎಂದು ಅವನ ಅಮ್ಮ ಹೇಳುತ್ತಾರೆ. ಸತ್ತನಂತರ ಮೂರನೇ ದಿನದ ಕಾರ್ಯಕ್ರಮ ಮಾಡಲು ಊರಲ್ಲಿ ಉಳ್ಳವರಿಂದ ಸಾಲ ತೆಗೆದುಬೇಕಾಯಿತು, ಮುಂದಿನ ಸಂಸ್ಕಾರಗಳಿಗೂ ತಮ್ಮಲ್ಲಿ ದುಡ್ಡಿಲ್ಲ ಎನ್ನುವ ಶಿವಲಿಂಗನ ತಾಯಿ, ಮಗನ ಮೃತ ದೇಹವನ್ನು ಊರಿಗೆ ಕಳಿಸುವ ವ್ಯವಸ್ಥೆಯನ್ನಷ್ಟೇ ಸರ್ಕಾರ ಮಾಡಿದೆ ಎಂದು ಹೇಳುತ್ತಾರೆ.
ಯಾದಗಿರಿ, ಜೂನ್ 7: ಮೊನ್ನೆ ಬೆಂಗಳೂರಲ್ಲಿ ನಡೆದ ಕಾಲ್ತುಳಿತ ಪ್ರಕರಣದಲ್ಲಿ ದಾರುಣ ಸಾವನ್ನಪ್ಪಿದ ಯಾದಗಿರಿಯ ಶಿವಲಿಂಗನಿಗೆ ಕ್ರಿಕೆಟ್ ಹುಚ್ಚು ಮತ್ತು ವಿರಾಟ್ ಕೊಹ್ಲಿ ಅವನ ಆರಾಧ್ಯ ದೈವ. ತಾನೂ ಕೊಹ್ಲಿಯಂತೆ ಆಗಬೇಕು ಅನ್ನುತ್ತಿದ್ದ ಅವನಿಗೆ 5 ನೇ ವಯಸ್ಸಿನಿಂದ 17 ನೇ ವಯಸ್ಸಿನವರೆಗೆ ಬರೀ ವಿರಾಟ್ ಮೋಹ. ಅದರೆ ಅವನಿಗೆ ವಿರಾಟ್ ನಿಂದ ಸಾವು ಬಿಟ್ಟರೆ ಬೇರೇನೂ ಸಿಗಲಿಲ್ಲ ಎಂದು ಅವನ ಅಮ್ಮ ಹೇಳುತ್ತಾರೆ. ತೀರ ಬಡತನದ ಶಿವಲಿಂಗನ ಕುಟುಂಬ ಈ ಭಾಗದ ಅನೇಕ ಕುಟುಂಬಗಳಂತೆ ಬದುಕಲು ಬೆಂಗಳೂರಿಗೆ ಹೋಗಿ ಗಾರೆ ಕೆಲಸ ಮಾಡುತ್ತಾ ಜೀವನ ನಡೆಸುತಿತ್ತು. ಮಗ ಸತ್ತು ಮೂರು ದಿನಗಳಾದರೂ ಯಾವುದೇ ಅಧಿಕಾರಿ ಮನೆವರೆಗೆ ಬಂದಿಲ್ಲ ಮತ್ತು ಇದುವರೆಗೆ ಸರ್ಕಾರದಿಂದ ಯಾವ ನೆರವೂ ಸಿಕ್ಕಿಲ್ಲ ಎಂದು ಶಿವಲಿಂಗನ ತಾಯಿ ಹೇಳುತ್ತಾರೆ.
ಇದನ್ನೂ ಓದಿ: ಬೆಂಗಳೂರು ಕಾಲ್ತುಳಿತ ದುರಂತದ ವರದಿ ನೀಡುವಂತೆ ಜಸ್ಟೀಸ್ ಕುನ್ಹಾ ಆಯೋಗಕ್ಕೆ ಸರ್ಕಾರ ಸೂಚನೆ
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಶಿವಮೊಗ್ಗದಲ್ಲಿ ಅಮಾನವೀಯ ಘಟನೆ:ದೆವ್ವ ಬಿಡಿಸ್ತೀನಂತ ಮಹಿಳೆಯನ್ನೇ ಬಲಿಪಡೆದಳು

‘ನಿದ್ರಾದೇವಿ ನೆಕ್ಸ್ಟ್ ಡೋರ್’ ವೇದಿಕೆ ಮೇಲೆ ಭಾಷೆ ಬಗ್ಗೆ ಗಣೇಶ ಮಾತು

ಆನೆಗುಡ್ಡೆ ದೇವಸ್ಥಾನದಲ್ಲಿ ರಿಷಬ್ ಶೆಟ್ಟಿ ಹುಟ್ಟುಹಬ್ಬ ಆಚರಣೆ

ರಸ್ತೆ ಪೂರ್ಣಗೊಳ್ಳುವ ಮೊದಲೇ ಸುಂಕ ವಸೂಲಾತಿ; ಟೋಲ್ ಪ್ಲಾಜಾ ಧ್ವಂಸ
