Bengaluru Stampede: ಕಾಲ್ತುಳಿತದಲ್ಲಿ ಗಾಯಗೊಂಡವರು 65 ಮಂದಿ ಆರ್ಸಿಬಿ ಅಭಿಮಾನಿಗಳು, ತನಿಖೆಯಲ್ಲಿ ಬಹಿರಂಗ
Bengaluru RCB Victory Celebrations Stampede: ಆರ್ಸಿಬಿ ಗೆಲುವನ್ನು ಸಂಭ್ರಮಿಸಲು ಬುಧವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿಜಯೋತ್ಸವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವಿಜಯೋತ್ಸವ ಕಾರ್ಯಕ್ರಮ ವೀಕ್ಷಿಸಲು ಕ್ರೀಡಾಂಗಣಕ್ಕೆ ಲಕ್ಷಾಂತರ ಅಭಿಮಾನಿಗಳು ಆಗಮಿಸಿದ್ದರು. ಈ ವೇಳೆ ಕಾಲ್ತುಳಿತ ಸಂಭವಿಸಿ 11 ಮಂದಿ ಮೃತಟ್ಟಿದ್ದರು. 65 ಮಂದಿ ಗಾಯಗೊಂಡಿದ್ದಾರೆ ಎಂದು ತನಿಖೆಯಲ್ಲಿ ಬಹಿರಂಗವಾಗಿದೆ.

ಬೆಂಗಳೂರು, ಜೂನ್ 07: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗಡೆ ಸಂಭವಿಸಿದ ಕಲ್ತುಳಿತದಲ್ಲಿ (Chinnaswamy stampede) 65 ಮಂದಿ ಗಾಯಗೊಂಡಿದ್ದು ಅವರನ್ನು ನಗರದ ವಿವಿಧ 10 ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಲಾಗಿತ್ತು ಎಂಬುವುದು ಮ್ಯಾಜಿಸ್ಟ್ರೇಟ್ ತನಿಖೆಯಲ್ಲಿ ತಿಳಿದುಬಂದಿದೆ. 65 ಮಂದಿಯಲ್ಲಿ 43 ಜನ ಈಗಾಗಲೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, 22 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ ತನಿಖೆಯಿಂದ ಗೊತ್ತಾಗಿದೆ.
ಕಾಲ್ತುಳಿತದಲ್ಲಿ ಗಾಯಗೊಂಡವರನ್ನು ಕೂಡಲೇ ಚಿನ್ನಸ್ವಾಮಿ ಕ್ರೀಡಾಂಗಣದ ಸನಿಹ ಇದ್ದ ಬೌರಿಂಗ್, ಲೇಡಿ ಕರ್ಜನ್ ಮತ್ತು ವೈದೇಹಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಮ್ಯಾಜಿಸ್ಟ್ರೇಟ್ ತನಿಖೆಯಲ್ಲಿ ನಗರದ ಪ್ರಮುಖ 10 ಖಾಸಗಿ ಆಸ್ಪತ್ರೆಗಳಲ್ಲಿ ಗಾಯಾಳುಗಳು ಚಿಕಿತ್ಸೆ ಪಡೆದರು ಎಂಬುದು ಬಹಿರಂಗವಾಗಿದೆ.
ಯಾವ್ಯಾವ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿಲಾಗಿದೆ
- ವೈದೇಹಿ ಆಸ್ಪತ್ರೆ- 14
- ಮಣಿಪಾಲ್ – 04
- ಸ್ಪರ್ಶ್ ಆಸ್ಪತ್ರೆ – 05
- ಹೆಚ್ ಎಎಲ್ ಮಣಿಪಾಲ್ – 06
- ಬೌರಿಂಗ್ – 20
- ವಿಕ್ರಮ್ ಹಾಸ್ಪಿಟಲ್ – 01
- ಪೋರ್ಟಿಸ್ ಆಸ್ಪತ್ರೆ – 05
- ಅಪೋಲೋ – 01
- ಸೆಂಟ್ ಫಿಲೋಮಿನೋ – 05
- ಹೊಸ್ಮೆಟ್ ಆಸ್ಪತ್ರೆ – 04
ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಮತ್ತೊಂದು ದೂರು
ಈಗಾಗಲೇ ದುರಂತ ಸಂಬಂಧ RCB, KSCA, DNA ಕಂಪನಿ ವಿರುದ್ಧ 2 FIR ದಾಖಲಾಗಿದ್ದವು. ಇದೀಗ ಕಾಲ್ತುಳಿತದಲ್ಲಿ ಗಾಯಗೊಂಡ ಬಿ.ಕಾಂ ವಿದ್ಯಾರ್ಥಿ ವೇಣು ದೂರು ಆಧರಿಸಿ ಮತ್ತೊಂದು FIR ದಾಖಲಾಗಿದೆ. RCB ಜಾಹೀರಾತು ನೋಡಿ, ಉಚಿತ ಟಿಕೆಟ್ ಎಂದು ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಬಂದಿದ್ದೆ, ಕ್ರೀಡಾಂಗಣದ ಗೇಟ್ ನಂ.6ರ ಬಳಿ ನೂಕುನುಗ್ಗಲು ಉಂಟಾಗಿತ್ತು, ಈ ವೇಳೆ ಬಲಗಾಲ ಮೇಲೆ ಬ್ಯಾರಿಕೇಡ್ ಬಿದ್ದಿತ್ತು. ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುವುದಾಗಿ ವೇಣು ಉಲ್ಲೇಖ ಮಾಡಿದ್ದಾರೆ.
ಇದನ್ನೂ ಓದಿ: ಕಾಲ್ತುಳಿತ ಬೆನ್ನಲ್ಲೇ ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ, ಗುಪ್ತಚರ ಇಲಾಖೆಗೆ ಹೊಸ ಮುಖ
ಕೆಎಸ್ಸಿಎ ಕಾರ್ಯದರ್ಶಿ ಸ್ಥಾನಕ್ಕೆ ಶಂಕರ್ ರಾಜಿನಾಮೆ
ಇದೆಲ್ಲದರ ನಡುವೆ ಹಠಾತ್ ಬೆಳವಣಿಗೆ ಎಂಬಂತೆ ನೈತಿಕ ಹೊಣೆಹೊತ್ತು ಕೆಎಸ್ಸಿಎ ಕಾರ್ಯದರ್ಶಿ ಸ್ಥಾನಕ್ಕೆ ಶಂಕರ್ ಮತ್ತು ಖಜಾಂಚಿ ಜೈರಾಮ್ ರಾಜೀನಾಮೆ ಸಲ್ಲಿಸಿದ್ದಾರೆ. ಶುಕ್ರವಾರವೇ ಕೆಎಸ್ಸಿಎ ಅಧ್ಯಕ್ಷರಿಗೆ ಇಬ್ಬರೂ ರಾಜೀನಾಮೆ ಸಲ್ಲಿಸಿದ್ದಾರೆ. ಶಂಕರ್ ಹಾಗೂ ಜೈರಾಮ್ ವಿರುದ್ಧ ಪದಾಧಿಕಾರಿಗಳು ಸಿಡಿದೆದ್ದಿದ್ದರು. ಹೈಕೋರ್ಟ್ ರಿಲೀಫ್ ಕೊಟ್ಟ ಬಳಿಕ ಕೆಎಸ್ಸಿಎಯಲ್ಲಿ ಸಭೆ ನಡೆಸಲಾಗಿತ್ತು. ಈ ವೇಳೆ ಬ್ರಿಜೇಶ್ ಪಟೇಲ್ ಖಡಕ್ ಸೂಚನೆ ಬಳಿಕ ಇಬ್ಬರು ರಾಜೀನಾಮೆ ಸಲ್ಲಿಸಿದ್ದಾರೆ. ಸದ್ಯ ಕೆಎಸ್ಸಿಎ ಜಂಟಿ ಸೆಕ್ರೆಟರಿ ಆಗಿರೋ ಶಾವೀರ್ ತಾರಪೂರ್ಗೆ ಇಬ್ಬರ ಹುದ್ದೆಯ ಹೊಣೆ ಹೊರಿಸಲಾಗಿದೆ.
ವರದಿ: ಲಕ್ಷ್ಮೀ ನರಸಿಂಹ








