ನಮ್ಮ ಬ್ಯಾಂಕ್ ಖಾತೆಯಿಂದ ಹಣ ಹಿಂಪಡೆಯಲು ಡೆಬಿಟ್ ಕಾರ್ಡ್ ಬಳಸುತ್ತೇವೆ. ಶಾಪಿಂಗ್ ಮಾಡಿದಾಗ ಹಣ ಪಾವತಿಗೆ ಡೆಬಿಟ್ ಕಾರ್ಡ್ (Debit Card) ಬಳಸುತ್ತೇವೆ. ನಾವು ಈ ಡೆಬಿಟ್ ಕಾರ್ಡ್ಗಳನ್ನು ಕಳೆದುಕೊಳ್ಳುವ ಅಥವಾ ಕಳುವಾಗುವ ಸಂದರ್ಭ ಬರಬಹುದು. ದುಷ್ಕರ್ಮಿಗಳು ನಿಮ್ಮ ಕಾರ್ಡನ್ನು ದುರುಪಯೋಗಿಸಿಕೊಳ್ಳುವ ಸಾಧ್ಯತೆ ಇಲ್ಲದಿಲ್ಲ. ಅಂಥ ಸಂದರ್ಭದಲ್ಲಿ ಏನು ಮಾಡಬೇಕು? ಕಳುವಾದ ಆ ಡೆಬಿಟ್ ಕಾರ್ಡನ್ನು ಕೂಡಲೇ ನಿಷ್ಕ್ರಿಯಗೊಳಿಸಬೇಕು. ಸ್ಟೇಟ್ ಬ್ಯಾಂಕ್ ಅಫ್ ಇಂಡಿಯಾದ (SBI) ಡೆಬಿಟ್ ಕಾರ್ಡ್ ನಿಮ್ಮದಾಗಿದ್ದರೆ ಮೂರ್ನಾಲ್ಕು ಸುಲಭ ವಿಧಾನಗಳಲ್ಲಿ ಅದನ್ನು ನಿಷ್ಕ್ರಿಯಗೊಳಿಸಬಹುದು. ಎಸ್ಬಿಐನ ಟಾಲ್ಫ್ರೀ ನಂಬರ್, ಎಸ್ಸೆಮ್ಮೆಸ್ ಮತ್ತು ನೆಟ್ಬ್ಯಾಂಕಿಂಗ್ ಮೂಲಕ ಕಾರ್ಡ್ ನಿಷ್ಕ್ರಿಯಗೊಳಿಸಲು ಸಾಧ್ಯ.
ಕಳುವಾದ ನಿಮ್ಮ ಎಸ್ಬಿಐ ಡೆಬಿಟ್ ಕಾರ್ಡನ್ನು ಬಹಲ ಸುಲಭವಾಗಿ ನಿಷ್ಕ್ರಿಯಗೊಳಿಸುವ ವಿಧಾನ ಎಂದರೆ ಅದು ಟಾಲ್ ಫ್ರೀ ನಂಬರ್ಗೆ ಡಯಲ್ ಮಾಡುವುದು. ನೀವು 1800 112211 ಅಥವಾ 1800 4253800 ನಂಬರ್ಗೆ ಕರೆ ಮಾಡುವ ಮೂಲಕ ಡೆಬಿಟ್ ಕಾರ್ಡ್ ನಿಷ್ಕ್ರಿಯಗೊಳಿಸಲು ಸಾಧ್ಯ. ಬ್ಯಾಂಕ್ಗೆ ಜೋಡಿತವಾದ ನಿಮ್ಮ ಮೊಬೈಲ್ ನಂಬರ್ನಿಂದ ಕರೆ ಮಾಡಬೇಕು.
ಇದನ್ನೂ ಓದಿ: EPF Withdrawal: ಉಮಂಗ್ ಆ್ಯಪ್ ಮೂಲಕ ಇಪಿಎಫ್ ಹಣ ವಿತ್ಡ್ರಾ ಮಾಡುವುದು ಬಹಳ ಸುಲಭ; ಇಲ್ಲಿದೆ ವಿವರ
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ