ಷೇರುಮಾರುಕಟ್ಟೆ
ಮುಂಬೈ, ಸೆಪ್ಟೆಂಬರ್ 17: ಇಂದು ಪ್ರಧಾನಿ ನರೇಂದ್ರ ಮೋದಿ (Narendra Modi birthday) ಅವರ ಜನ್ಮದಿನವಾಗಿದ್ದು, ಭಾರತದಲ್ಲಿ ಅವರ ಸಾಧನೆ, ಅವರಿಂದಾದ ಸುಧಾರಣೆಗಳನ್ನು ಹಾಗೂ ಅದರ ಪರಿಣಾಮಗಳನ್ನು ಅವಲೋಕಿಸುವ ಸಮಯವೂ ಹೌದು. ಕಳೆದ ಒಂದು ವರ್ಷ ಭಾರತದಲ್ಲಿ ಹೂಡಿಕೆದಾರರಿಗೆ ಅತಿಹೆಚ್ಚು ಮಂದಹಾಸ ತಂದ ಘಳಿಗೆಗಳಲ್ಲಿ ಒಂದು. ಭಾರತೀಯ ಷೇರುಮಾರುಕಟ್ಟೆಗಳು ಒಂದು ವರ್ಷದಲ್ಲಿ ಅದ್ವಿತೀಯವಾಗಿ ಬೆಳೆದಿವೆ. ಷೇರುಪೇಟೆಯ ಈ ಪರಿ ಬೆಳವಣಿಗೆಗೆ ಜಾಗತಿಕ ವಿದ್ಯಮಾನಗಳು ಒಂದೆಡೆ ಕಾರಣವಾದರೆ, ಪ್ರಧಾನಿಯಾಗಿ ನರೇಂದ್ರ ಮೋದಿ ಕೈಗೊಂಡ ಸುಧಾರಣಾ ಕ್ರಮಗಳ ಫಲಶ್ರುತಿ ಇನ್ನೊಂದೆಡೆ ಇದೆ. ಬಾಂಬೆ ಸ್ಟಾಕ್ ಎಕ್ಸ್ಚೇಂಜ್ ಮತ್ತು ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ಗಳ ವಿವಿಧ ಸೂಚ್ಯಂಕಗಳು ಒಂದು ವರ್ಷದಲ್ಲಿ ಭಾರೀ ಲಾಭ ತಂದಿವೆ.
ಕಳೆದ ವರ್ಷದ ಮೋದಿ ಜನ್ಮದಿನವಾದ 2022 ಸೆಪ್ಟೆಂಬರ್ 17ರಿಂದ ಈಚೆಗೆ ವಿವಿಧ ಸೂಚ್ಯಂಕಗಳು ಎಷ್ಟು ಹೆಚ್ಚಳಗೊಂಡಿವೆ ಎಂಬುನ್ನು ನೋಡಿದರೆ ಬಹುತೇಕ ಎಲ್ಲಾ ಸೂಚ್ಯಂಕಗಳು ಶೇ. 10ಕ್ಕಿಂತಲೂ ಹೆಚ್ಚು ಬೆಳವಣಿ ಕಂಡಿವೆ. ಬಿಎಸ್ಇ ಕ್ಯಾಪ್ ಗೂಡ್ಸ್ ಸೂಚ್ಯಂಕವಂತೂ ಬರೋಬ್ಬರಿ 40 ಪ್ರತಿಶತದಷ್ಟು ಹೆಚ್ಚಳ ಕಂಡಿದೆ.
ಇದನ್ನೂ ಓದಿ: ತೆರಿಗೆ ಉಳಿಸುವ ನರೇಂದ್ರ ಮೋದಿ ಟ್ರಿಕ್ಸ್; ಇನ್ಫ್ರಾ ಬಾಂಡ್ಗಳಲ್ಲಿ ಹೂಡಿಕೆ ಮಾಡಿದ್ದ ಪ್ರಧಾನಿ; ಏನಿದು ಈ ಇನ್ಫ್ರಾಸ್ಟ್ರಕ್ಚರ್ ಬಾಂಡ್ಸ್?
ಪ್ರಮುಖ ಬಿಎಸ್ಇ ಸೂಚ್ಯಂಕಗಳು ಹಾಗೂ 1 ವರ್ಷದಲ್ಲಿ ಆದ ಬದಲಾವಣೆ
- ಸೆನ್ಸೆಕ್ಸ್: 67,838.63 ಅಂಕಗಳು (ಶೇ. 13.19 ಹೆಚ್ಚಳ)
- ಬಿಎಸ್ಇ ಮಿಡ್ಕ್ಯಾಪ್: 32,505.37 ಅಂಕಗಳು (ಶೇ. 23.56)
- ಬಿಎಸ್ಇ ಸ್ಮಾಲ್ಕ್ಯಾಪ್: 37,828.56 ಅಂಕಗಳು (ಶೇ. 26.47)
- ಬಿಎಸ್ಇ 100: 20,666.08 ಅಂಕಗಳು (ಶೇ. 12.14)
- ಬಿಎಸ್ಇ 200: 8,819.05 ಅಂಕಗಳು (ಶೇ. 11.52ರಷ್ಟು ಹೆಚ್ಚಳ)
- ಬಿಎಸ್ಇ 500: 28,008.55 ಅಂಕಗಳು (ಶೇ. 12.77)
- ಬಿಎಸ್ಇ ಆಟೊ: 37,161.01 ಅಂಕಗಳು (ಶೇ. 21.7)
- ಬಿಎಸ್ಇ ಕ್ಯಾಂಕ್ಎಕ್ಸ್: 51,844.91 ಅಂಕಗಳು (ಶೇ. 10.03)
- ಬಿಎಸ್ಇ ಕಾನ್ಸ್ ಡುರಬಲ್ಸ್: 46,264.35 ಅಂಕಗಳು (ಶೇ. 7.21ರಷ್ಟು ಹೆಚ್ಚಳ)
- ಬಿಎಸ್ಇ ಕ್ಯಾಪ್ ಗೂಡ್ಸ್: 47,045.67 ಅಂಕಗಳು (ಶೇ. 40.69)
- ಬಿಎಸ್ಇ ರಿಯಾಲ್ಟಿ: 4,693.02 ಅಂಕಗಳು (ಶೇ. 25)
- ಬಿಎಸ್ಇ ಮೆಟಲ್: 23,480.18 ಅಂಕಗಳು (ಶೇ. 20.8)
- ಬಿಎಸ್ಇ ಆಯಿಲ್ ಅಂಡ್ ಗ್ಯಾಸ್: 19,259.72 ಅಂಕಗಳು (ಶೇ. 3.24ರಷ್ಟು ಇಳಿಕೆ)
- ಬಿಎಸ್ಇ ಪಿಎಸ್ಯು: 12,378 ಅಂಕಗಳು (ಶೇ. 30.68ರಷ್ಟು ಹೆಚ್ಚಳ)
ಇದನ್ನೂ ಓದಿ: ನರೇಂದ್ರ ಮೋದಿ ಜನ್ಮದಿನ ವಿಶೇಷ; ಕಳೆದ ಒಂದು ವರ್ಷದಲ್ಲಿ ಭಾರತ ಹೇಗೆ ಬದಲಾಗಿದೆ ನೋಡಿ?
ಪ್ರಮುಖ ಎನ್ಎಸ್ಇ ಸೂಚ್ಯಂಕಗಳು ಹಾಗೂ 1 ವರ್ಷದಲ್ಲಿ ಆದ ಬದಲಾವಣೆ
- ನಿಫ್ಟಿ 50: 20,192.30 ಅಂಕಗಳು (ಶೇ. 12.95ರಷ್ಟು ಹೆಚ್ಚಳ)
- ನಿಫ್ಟಿ 500: 17,665 ಅಂಕಗಳು (ಶೇ. 13.38ರಷ್ಟು ಹೆಚ್ಚಳ)
- ನಿಫ್ಟಿ ನೆಕ್ಸ್ಟ್ 50: 46,051.85 ಅಂಕಗಳು (ಶೇ. 1.41)
- ನಿಫ್ಟಿ ಮಿಡ್ಕ್ಯಾಪ್ 100: 40,829 ಅಂಕಗಳು (ಶೇ. 25.96)
- ನಿಫ್ಟಿ ರಿಯಾಲ್ಟಿ: 586 (ಶೇ. 21ರಷ್ಟು ಹೆಚ್ಚಳ)
- ನಿಫ್ಟಿ ಮಿಡ್ಕ್ಯಾಪ್ 50: 11,647 ಅಂಕಗಳು (ಶೇ. 20.28ರಷ್ಟು ಹೆಚ್ಚಳ)
ಇದನ್ನೂ ಓದಿ: PM Modi Birthday: ವೈಮಾನಿಕ ದಾಳಿಯಿಂದ ಹಿಡಿದು 370ನೇ ವಿಧಿಯನ್ನು ತೆಗೆದುಹಾಕುವವರೆಗೆ ಪ್ರಧಾನಿ ಮೋದಿಯವರ ಮಹತ್ವದ ನಿರ್ಧಾರಗಳು ಇಲ್ಲಿವೆ
ಇಲ್ಲಿ ಕೆಲ ಪ್ರಮುಖ ಸೂಚ್ಯಂಕಗಳ ಬೆಳವಣಿಗೆಯ ವಿವರ ಇದೆ. ಈ ಸೂಚ್ಯಂಕಗಳು ಯಾಕೆ ಮುಖ್ಯ ಎಂದರೆ ಇವೆಲ್ಲವೂ ಹಲವು ಮ್ಯುಚುವಲ್ ಫಂಡ್ಗಳಿಗೆ ಆಧಾರವಾಗಿವೆ. ಈ ಸೂಚ್ಯಂಕಗಳ ಪಟ್ಟಿಯಲ್ಲಿರುವ ಕಂಪನಿಗಳ ಮೇಲೆ ಹೂಡಿಕೆ ಮಾಡುವ ಮ್ಯೂಚುವಲ್ ಫಂಡ್ಗಳನ್ನು ಇಂಡೆಕ್ಸ್ ಫಂಡ್ಗಳೆಂದು ಪರಿಗಣಿಸಲಾಗುತ್ತದೆ. ಇಂಥ ಇಂಡೆಕ್ಸ್ ಫಂಡ್ಗಳು ಲಕ್ಷಾಂತರ ಕೋಟಿ ರೂನಷ್ಟು ಹೂಡಿಕೆ ಹೊಂದಿವೆ. ಹೀಗಾಗಿ, ಇಂಡೆಕ್ಸ್ ಫಂಡ್ಗಳ ಬೆಳವಣಿಗೆ ಬಗೆಗಿನ ಮಾಹಿತಿ ಬಹಳ ಮುಖ್ಯ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ