ವಂಚಕರಿದ್ದಾರೆ ಹುಷಾರ್..! ಆಧಾರ್ ನಂಬರ್ ಬಹಿರಂಗಪಡಿಸಬೇಡಿ; ಅರೆಮುಚ್ಚಿದ ನಂಬರ್​ನ ಆಧಾರ್ ಡೌನ್​ಲೋಡ್ ಮಾಡಿ

Masked Aadhaar: 12 ಅಂಕಿಗಳ ಆಧಾರ್ ನಂಬರ್ ಅನ್ನು ದುರುಪಯೋಗಪಡಿಸಿಕೊಳ್ಳುವುದನ್ನು ತಪ್ಪಿಸಲು ಯುಐಡಿಎಐ ಮಾಸ್ಕ್ಡ್ ಆಧಾರ್ ಸೌಲಭ್ಯ ನೀಡಿದೆ. ಮೈ ಆಧಾರ್ ವೆಬ್​ಸೈಟ್​ಗೆ ಹೋಗಿ ಮಸುಕು ಮಾಡಿದ ಆಧಾರ್ ಕಾರ್ಡ್ ಅನ್ನು ಡೌನ್​ಲೋಡ್ ಮಾಡಬಹುದು. ಮಾಸ್ಕ್ಡ್ ಆಧಾರ್​ನಲ್ಲಿ 12 ಅಂಕಿಗಳಲ್ಲಿ ಮೊದಲ 8 ಅಂಕಿಗಳ ಜಾಗದಲ್ಲಿ ಎಕ್ಸ್ ಮಾರ್ಕ್ ಇರುತ್ತದೆ. ಕೊನೆಯ 4 ಅಂಕಿ ಮಾತ್ರ ಕಾಣುತ್ತವೆ.

ವಂಚಕರಿದ್ದಾರೆ ಹುಷಾರ್..! ಆಧಾರ್ ನಂಬರ್ ಬಹಿರಂಗಪಡಿಸಬೇಡಿ; ಅರೆಮುಚ್ಚಿದ ನಂಬರ್​ನ ಆಧಾರ್ ಡೌನ್​ಲೋಡ್ ಮಾಡಿ
ಆಧಾರ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 08, 2024 | 11:45 AM

ತಂತ್ರಜ್ಞಾನ ಹೆಚ್ಚಿದಂತೆ ಅದನ್ನು ದುರ್ಬಳಕೆ ಮಾಡಿಕೊಳ್ಳುವ ವಂಚಕರ ತಂತ್ರಗಾರಿಕೆಗಳೂ ಹಲವಿರುತ್ತವೆ. ಆರ್ಥಿಕ ವ್ಯವಸ್ಥೆಗೆ ಅನಿವಾರ್ಯದಂತೆಯೇ ಆಗಿ ಹೋಗಿರುವ ಆಧಾರ್ ಕಾರ್ಡ್ ಅನ್ನು ದುರುಳರು ದುರುಪಯೋಗ ಮಾಡಿಕೊಳ್ಳುತ್ತಿರುವ ಹಲವು ಪ್ರಕರಣಗಳು ದೇಶಾದ್ಯಂತ ಬೆಳಕಿಗೆ ಬರುತ್ತಲೇ ಇವೆ. 12 ಅಂಕಿಗಳಿರುವ ಆಧಾರ್ ನಂಬರ್ ಅನ್ನು ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆ ಇರುತ್ತದೆ. ಇದನ್ನು ತಡೆಯಲು ಯುಐಡಿಎಐನಿಂದ ಮಾಸ್ಕ್ಡ್ ಆಧಾರ್ (Masked Aadhaar) ಸೌಲಭ್ಯ ಒದಗಿಸಲಾಗಿದೆ. ಮಾಸ್ಕ್ಡ್ ಆಧಾರ್ ಎಂದರೆ ಆಧಾರ್ ನಂಬರ್​ನ ಕೆಲ ಅಂಕಿಗಳನ್ನು ಮಸುಕು ಮಾಡಲಾಗಿರುತ್ತದೆ. ಇದರಿಂದ ಪೂರ್ಣ ಸಂಖ್ಯೆ ಬಹಿರಂಗವಾಗಿ ಕಾಣುವುದಿಲ್ಲ.

ಮಾಸ್ಕ್ಡ್ ಆಧಾರ್ ಅಥವಾ ಮಸುಕು ಮಾಡಿದ ಆಧಾರ್​ನಲ್ಲಿ ಕೊನೆ ನಾಲ್ಕಂಕಿ ಬಿಟ್ಟು ಉಳಿದ ಅಂಕಿಗಳು ಮುಚ್ಚಿರುತ್ತವೆ. ಆದರೆ, ಹೆಸರು, ಫೋಟೋ ಇತ್ಯಾದಿ ಡೆಮೋಗ್ರಾಫಿಕ್ ಮಾಹಿತಿ ಕಾಣುತ್ತದೆ. ಆಧಾರ್ ಸಂಖ್ಯೆ ದುರ್ಬಳಕೆ ಆಗದಂತೆ ತಡೆಯಲು ಈ ವ್ಯವಸ್ಥೆ ಮಾಡಲಾಗಿದೆ.

ಇದನ್ನೂ ಓದಿ: FD Rates: ಎಚ್​ಡಿಎಫ್​ಸಿ, ಎಸ್​ಬಿಐ, ಐಸಿಐಸಿಐ ಬ್ಯಾಂಕುಗಳಲ್ಲಿ ನಿಶ್ಚಿತ ಠೇವಣಿಗಳಿಗೆ ಬಡ್ಡಿದರ ಎಷ್ಟಿದೆ? ಇಲ್ಲಿದೆ ತುಲನೆ

ಮಾಸ್ಕ್ ಮಾಡಿದ ಆಧಾರ್ ಡೌನ್​ಲೋಡ್ ಮಾಡುವುದು ಹೇಗೆ?

  • ಮೊದಲಿಗೆ ಯುಐಡಿಎಐ ವೆಬ್​ಸೈಟ್​ಗೆ ಹೋಗಿ: uidai.gov.in
  • ಮುಖ್ಯಪುಟದಲ್ಲಿ ಮೈ ಆಧಾರ್ ಸೆಕ್ಷನ್​ಗೆ ಹೋಗಿ, ಅಲ್ಲಿ ‘ಡೌನ್​ಲೋಡ್ ಆಧಾರ್’ ಅನ್ನು ಕ್ಲಿಕ್ ಮಾಡಿ
  • ಈಗ ಆಧಾರ್ ಡೌನ್​ಲೋಡ್ ಪುಟ ತೆರೆದುಕೊಳ್ಳುತ್ತದೆ.
  • ಇಲ್ಲಿ 12 ಅಂಕಿಗಳ ಆಧಾರ್ ಸಂಖ್ಯೆಯನ್ನು ನಮೂದಿಸಿ. ಅಥವಾ 16 ಅಂಕಿಗಳ ವರ್ಚುವಲ್ ಐಡಿ ಸಂಖ್ಯೆ ನಮೂದಿಸಿ.
  • ಜೊತೆಗೆ, ಆಧಾರ್​ನಲ್ಲಿರುವಂತೆ ಪೂರ್ಣ ಹೆಸರು, ಪಿನ್ ಕೋಡ್, ಸೆಕ್ಯುರಿಟಿ ಕೋಡ್ ವಿವರವನ್ನು ಈ ಪುಟದಲ್ಲಿ ನಮೂದಿಸಿ.
  • ಬಳಿಕ ‘ಸೆಲೆಕ್ಟ್ ಯುವರ್ ಪ್ರಿಫರೆನ್ಸ್’ ಸೆಕ್ಷನ್​ನಲ್ಲಿ ‘ಮಾಸ್ಕ್ಡ್ ಆಧಾರ್’ ಅನ್ನು ಆಯ್ಕೆ ಮಾಡಿ.
  • ನೊಂದಾಯಿತ ಮೊಬೈಲ್ ನಂಬರ್​ಗೆ ಬರುವ ಒಟಿಪಿ ಪಡೆದು, ಅದನ್ನು ನಮೂದಿಸಿದರೆ ವೆರಿಫಿಕೇಶನ್ ಪ್ರಕ್ರಇಯೆ ಪೂರ್ಣಗೊಳ್ಳುತ್ತದೆ.
  • ಈಗ ಮಸುಕು ಮಾಡಿದ ಆಧಾರ್ ಅನ್ನು ಪಿಡಿಎಫ್ ಫಾರ್ಮ್ಯಾಟ್​ನಲ್ಲಿ ಡೌನ್​ಲೋಡ್ ಮಾಡಬಹುದು. ಈ ಪಿಡಿಎಫ್ ಫೈಲ್ ಪಾಸ್​ವರ್ಡ್ ರಕ್ಷಿತವಾಗಿರುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ