ನವದೆಹಲಿ, ಜುಲೈ 8: ಮಹಿಳೆಯರು ಕೆಲಸ ಮಾಡುವ ಕಂಪನಿಯಲ್ಲಿ ಮೆನ್ಸ್ಟ್ರುಯಲ್ ಅಥವಾ ಋತುಸ್ರಾವ (ಮುಟ್ಟು – Menstrual leave) ರಜೆ ಅವಕಾಶವನ್ನು ಕಡ್ಡಾಯಪಡಿಸಿ ಆದೇಶ ಹೊರಡಿಸಲು ಸರ್ವೋಚ್ಚ ನ್ಯಾಯಾಲಯ ಹಿಂದೇಟು ಹಾಕಿದೆ. ಕೋರ್ಟ್ನಿಂದ ಈ ಆದೇಶ ಹೊರಟರೆ ಚೆನ್ನಾಗಿರೋಲ್ಲ. ಕಂಪನಿಗಳಲ್ಲಿ ಮಹಿಳೆಯರಿಗೆ ಉದ್ಯೋಗಾವಕಾಶ ಕಡಿಮೆ ಆಗಬಹುದು ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ಸುಪ್ರೀಂ ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ಮಹಿಳೆಯರಿಗೆ ಮುಟ್ಟಿನ ರಜೆ ಕಡ್ಡಾಯಗೊಳಿಸುವ ಸಂಬಂಧ ವಿವಿಧ ಭಾಗಿದಾರರೊಂದಿಗೆ ಸಮಾಲೋಚನೆ ನಡೆಸಿ ಒಂದು ನೀತಿ ರೂಪಿಸಲು ಕೇಂದ್ರ ಸರ್ಕಾರಕ್ಕೆ ಕೋರ್ಟ್ ನಿರ್ದೇಶನ ನೀಡಿದೆ.
ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರಲ್ಲದೇ ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲ ಮತ್ತು ಮನೋಜ್ ಮಿಶ್ರಾ ಅವರೂ ಈ ನ್ಯಾಯಪೀಠದಲ್ಲಿದ್ದಾರೆ. ಮುಟ್ಟು ರಜೆಯನ್ನು ಕಡ್ಡಾಯಗೊಳಿಸುವಂತೆ ಸಲ್ಲಿಸಲಾದ ಅರ್ಜಿಯನ್ನು ಈ ವೇಳೆ ಕೋರ್ಟ್ ತಿರಸ್ಕರಿಸಿತು. ಕೇಂದ್ರ ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಕಾರ್ಯದರ್ಶಿ ಮತ್ತು ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯ ಭಾಟಿ ಅವರನ್ನು ಸಂಪರ್ಕಿಸುವಂತೆ ಅರ್ಜಿದಾರರ ಪರ ವಕೀಲ ರಾಕೇಶ್ ಖನ್ನ ಅವರಿಗೆ ಕೋರ್ಟ್ ಸೂಚನೆ ನೀಡಿತು.
ಇದನ್ನೂ ಓದಿ: ಆಯುಷ್ಮಾನ್ ಭಾರತ್ ಸ್ಕೀಮ್: ಇನ್ಷೂರೆನ್ಸ್ ಮೊತ್ತ ಹೆಚ್ಚಿಸಲು ಮತ್ತು ಹೆಚ್ಚು ಜನರಿಗೆ ತಲುಪಿಸಲು ಯತ್ನ ಸಾಧ್ಯತೆ
ಮುಟ್ಟು ರಜೆ ಅಥವಾ ಋತುಸ್ರಾವ ದಿನಗಳ ರಜೆ ಕೊಟ್ಟರೆ ಮಹಿಳೆಯರಿಗೆ ಕೆಲಸಕ್ಕೆ ಸೇರಲು ಉತ್ತೇಜನ ಹೇಗೆ ಸಿಗುತ್ತದೆ ಎಂದು ಕೇಳಿದ ನ್ಯಾಯಪೀಠ, ಒಂದು ವೇಳೆ ಈ ರೀತಿಯ ರಜೆಯನ್ನು ಕೋರ್ಟ್ ಕಡ್ಡಾಯಗೊಳಿಸಿದರೆ ಕಂಪನಿಗಳು ಮಹಿಳೆಯರನ್ನು ನೇಮಕ ಮಾಡಲು ಹಿಂದೇಟು ಹಾಕಬಹುದು. ಇದರಿಂದ ಮಹಿಳೆಯರಿಗೆಯೇ ಅನ್ಯಾಯ ಆಗಬಹುದು ಎಂದು ಶಂಕೆ ವ್ಯಕ್ತಪಡಿಸಿತು.
ಈ ವಿಚಾರದಲ್ಲಿ ಕೋರ್ಟ್ ತೀರ್ಮಾನ ಮಾಡುವುದು ಸಮಂಜಸವಲ್ಲ. ವಾಸ್ತವದಲ್ಲಿ ಇದು ಸರ್ಕಾರಿ ನೀತಿಗೆ ಸೇರಿದ್ದಾಗಿದೆ ಎಂದು ಸಿಜೆಐ ನೇತೃತ್ವದ ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಇದನ್ನೂ ಓದಿ: 1 ಕಿಮೀ ವೆಚ್ಚ ಪೆಟ್ರೋಲ್ ಬೈಕ್ 2.25 ರೂ, ಸಿಎನ್ಜಿ ಬೈಕ್ 1 ರೂ; ಬಜಾಜ್ ಫ್ರೀಡಂ ವಿಶ್ವದ ಮೊದಲ ಸಿಎನ್ಜಿ ಬೈಕ್
ಭಾರತದಲ್ಲಿ ಕೆಲವಾರು ಕಂಪನಿಗಳು ಮಹಿಳಾ ಉದ್ಯೋಗಿಗಳಿಗೆ ಮುಟ್ಟಿನ ರಜೆ ಕೊಡುವ ನೀತಿ ಹೊಂದಿವೆ. ವರ್ಷಕ್ಕೆ 10ರಿಂದ 24 ದಿನಗಳವರೆಗೆ ಪೀರಿಯಡ್ ಲೀವ್ ಅನ್ನು ಈ ಕಂಪನಿಗಳು ನೀಡುತ್ತವೆ. ಇಂಥ ಕೆಲ ಕಂಪನಿಗಳ ಪಟ್ಟಿ ಇಲ್ಲಿದೆ:
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 2:43 pm, Mon, 8 July 24