1 ಕಿಮೀ ವೆಚ್ಚ ಪೆಟ್ರೋಲ್ ಬೈಕ್ 2.25 ರೂ, ಸಿಎನ್​ಜಿ ಬೈಕ್ 1 ರೂ; ಬಜಾಜ್ ಫ್ರೀಡಂ ವಿಶ್ವದ ಮೊದಲ ಸಿಎನ್​ಜಿ ಬೈಕ್

Bajaj Freedom 125 bike launched: ಇವತ್ತು ಬಿಡುಗಡೆ ಆಗಿರುವ ಬಜಾಜ್ ಫ್ರೀಡಂ 125 ವಿಶ್ವದ ಮೊದಲ ಸಿಎನ್​ಜಿ ಬೈಕ್ ಆಗಿದೆ. ಒಂದು ಕಿಲೋ ಸಿಎನ್​ಜಿಯಲ್ಲಿ ಈ ಬೈಕ್ 100 ಕಿಮೀ ಓಡುತ್ತದೆ ಎಂದು ಹೇಳಲಾಗಿದೆ. ಫ್ರೀಡಂ 125 ಬೈಕ್​ನ ಬೆಲೆ 95,000 ರೂನಿಂದ 1,10,000 ರೂವರೆಗೂ ಇದೆ. ಈ ಬೈಕ್ ಬಗ್ಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಒಳ್ಳೆಯ ಮಾತುಗಳನ್ನಾಡಿದ್ದಾರೆ.

1 ಕಿಮೀ ವೆಚ್ಚ ಪೆಟ್ರೋಲ್ ಬೈಕ್ 2.25 ರೂ, ಸಿಎನ್​ಜಿ ಬೈಕ್ 1 ರೂ; ಬಜಾಜ್ ಫ್ರೀಡಂ ವಿಶ್ವದ ಮೊದಲ ಸಿಎನ್​ಜಿ ಬೈಕ್
ಬಜಾಜ್ ಫ್ರೀಡಂ 125 ಬೈಕ್​
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 05, 2024 | 6:24 PM

ನವದೆಹಲಿ, ಜುಲೈ 5: ಬಜಾಜ್ ಅಟೊ ಸಂಸ್ಥೆ ಇಂದು ಶುಕ್ರವಾರ ಫ್ರೀಡಂ 125 ಬೈಕ್ ಅನ್ನು ಬಿಡುಗಡೆ ಮಾಡಿದೆ. ಸಿಎನ್​ಜಿಯಲ್ಲಿ ಓಡುವ ವಿಶ್ವದ ಮೊದಲ ಬೈಕ್ ಇದಾಗಿದೆ. ಈ ಸಿಎನ್​ಜಿ ಬೈಕ್​ನ ಬೆಲೆ 95,000 ರೂನಿಂದ ಆರಂಭವಾಗಿ 1.10 ಲಕ್ಷ ರೂವರೆಗೂ ಇದೆ. ಪೆಟ್ರೋಲ್ ಎಂಜಿನ್​ನ ಬೈಕ್​ಗೆ ಹೋಲಿಸಿದರೆ ಈ ಸಿಎನ್​ಜಿ ಬೈಕ್ ತರುವ ಹಣದ ಉಳಿತಾಯ ಅಗಾಧವಾದುದು. ಈ ಬೈಕ್​ನ ಅನಾವರಣದ ವೇಳೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಉಪಸ್ಥಿತರಿದ್ದರು. ಈ ವಾಹನ ತಯಾರಿಸಲು ಬಜಾಜ್ ಸಂಸ್ಥೆ ಹಾಕಿದ ಆರ್ ಅಂಡ್ ಡಿ ಶ್ರಮವನ್ನು ಅವರು ಮೆಚ್ಚಿಕೊಂಡರು.

ಒಂದು ಕಿಮೀಗೆ ಒಂದು ರೂ ಮಾತ್ರ ವೆಚ್ಚ

ಬಜಾಜ್​ನ ಸಿಎನ್​ಜಿ ಬೈಕ್ ಆದ ಫ್ರೀಡಂ 125 ಪ್ರಾಯೋಗಿಕವಾಗಿ ಎಷ್ಟು ಹಣ ಉಳಿಸಬಹುದು ಎಂಬುದನ್ನು ನಿತಿನ್ ಗಡ್ಕರಿ ನಿದರ್ಶನ ಕೊಟ್ಟರು. ಅವರ ಪ್ರಕಾರ ಈಗಿನ ಬೆಲೆಯಲ್ಲಿ ಪೆಟ್ರೋಲ್ ದ್ವಿಚಕ್ರ ವಾಹನದಿಂದ ಆಗುವ ವೆಚ್ಚ ಒಂದು ಕಿಮೀಗೆ 2.25 ರೂ. ಆದರೆ, ಸಿಎನ್​ಜಿ ಬೈಕ್​ನಲ್ಲಿ ಒಂದು ಕಿಮೀಗೆ ಕೇವಲ ಒಂದು ರೂ ಮಾತ್ರವೇ ವೆಚ್ಚವಾಗುವುದು.

‘ನಾವು ದ್ವಿಚಕ್ರ ವಾಹನಗಳನ್ನು ರಫ್ತು ಮಾಡುವುದರಲ್ಲಿ ನಂಬರ್ ಒನ್ ಆಗಿದ್ದೇವೆ. ಪೆಟ್ರೋಲ್ ಬೈಕ್​ಗಳಿಗೆ ಹೋಲಿಸಿದರೆ ಸಿಎನ್​ಜಿ ಬೈಕ್ ವೆಚ್ಚ ಕಡಿಮೆ ಇರುವುದರಿಂದ ನಿಮಗೆ ಇನ್ನೂ ಹೆಚ್ಚಿನ ಮಾರುಕಟ್ಟೆ ಸಿಗುವ ಪೂರ್ಣ ವಿಶ್ವಾಸ ನನಗಿದೆ,’ ಎಂದು ನಿತಿನ್ ಗಡ್ಕರಿ ಹೇಳಿದರು.

ಇದನ್ನೂ ಓದಿ: ಕಮರಿತು ಟೆಸ್ಲಾ ಬರುವ ನಿರೀಕ್ಷೆ; ಭಾರತದ ಸಹವಾಸ ಬೇಡ ಎಂದು ಬಿಟ್ಟರಾ ಇಲಾನ್ ಮಸ್ಕ್?

ಪೆಟ್ರೋಲ್ ಮತ್ತು ಸಿಎನ್​ಜಿ ಟ್ಯಾಂಕ್​ಗಳೆರಡೂ ಉಂಟು…

ಬಜಾಜ್ ಫ್ರೀಡಂ 125 ಬೈಕ್​ನಲ್ಲಿ ಡುಯಲ್ ಟ್ಯಾಂಕ್ ಇದೆ. ಸೀಟಿನ ಕೆಳಗೆ ಎರಡು ಲೀಟರ್​ನ ಪೆಟ್ರೋಲ್ ಟ್ಯಾಂಕ್ ಮತ್ತು ಎರಡು ಕಿಲೋ ಸಿಎನ್​ಜಿ ಟ್ಯಾಂಕ್​ಗಳಿರುತ್ತವೆ. ಒಂದು ಕಿಲೋ ಸಿಎನ್​ಜಿ ಬೆಲೆ 60 ರೂ ಇದೆ. ಒಂದು ಕಿಲೋ ಸಿಎನ್​ಜಿಯಲ್ಲಿ ಬೈಕ್ 106 ಕಿಮೀ ಓಡುತ್ತದೆ ಎಂದು ಬಜಾಜ್ ಸಂಸ್ಥೆ ಹೇಳಿಕೊಂಡಿದೆ.

ನಿತಿನ್ ಗಡ್ಕರಿ ಅವರು ಇದೇ ವೇಳೆ ಪೆಟ್ರೋಲ್ ಟ್ಯಾಂಕ್ ಬದಲು ಎಥನಾಲ್ ಟ್ಯಾಂಕ್ ಇರಿಸುವಂತೆ ಬಜಾಜ್ ಆಟೊ ಸಂಸ್ಥೆಗೆ ಸಲಹೆ ನೀಡಿದರು. ಪೆಟ್ರೋಲ್​ಗಿಂತ ಎಥನಾಲ್ ಹೆಚ್ಚು ಪರಿಸರಸ್ನೇಹಿಯಾಗಿರುತ್ತದೆ ಎಂಬುದು ಅವರ ಅನಿಸಿಕೆ.

ಇದನ್ನೂ ಓದಿ: ಟಾಟಾ ನೆಕ್ಸಾನ್ ಗೆ ಭರ್ಜರಿ ಪೈಪೋಟಿ ನೀಡಲಿದೆ ಸ್ಕೋಡಾ ಹೊಸ ಸಬ್ ಕಂಪ್ಯಾಕ್ಟ್ ಎಸ್​ಯುವಿ

ಸಿಎನ್​ಜಿ ಕೂಡ ಪೆಟ್ರೋಲಿಯಂ ಪದಾರ್ಥವೇ ಆದರೂ ಪೆಟ್ರೋಲ್ ಮತ್ತು ಡೀಸಲ್​ಗೆ ಹೋಲಿಸಿದರೆ ಪರಿಸರಕ್ಕೆ ಕಡಿಮೆ ಹಾನಿ ಮಾಡುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಾಡೇ ನಮ್ಮ ಮನೆ ಗಾಡು:ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾನುವಾರದ ಬಾಡೂಟ ಜೋರು
ಬಾಡೇ ನಮ್ಮ ಮನೆ ಗಾಡು:ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾನುವಾರದ ಬಾಡೂಟ ಜೋರು
ಚೈತ್ರಾ ಡವ್ ಮಾಡೋದು ಕಣ್ಣಿಗೆ ಕಾಣುತ್ತಿದೆ: ಕಿಚ್ಚನ ಎದುರಲ್ಲೇ ಹೇಳಿದ ರಜತ್
ಚೈತ್ರಾ ಡವ್ ಮಾಡೋದು ಕಣ್ಣಿಗೆ ಕಾಣುತ್ತಿದೆ: ಕಿಚ್ಚನ ಎದುರಲ್ಲೇ ಹೇಳಿದ ರಜತ್
ಕಾರಿನಡಿ ಸಿಲುಕಿದ ಕರುವನ್ನು ಕಾಪಾಡಲು ರಸ್ತೆಯಲ್ಲಿ ಅಡ್ಡ ನಿಂತ ಹಸುಗಳು
ಕಾರಿನಡಿ ಸಿಲುಕಿದ ಕರುವನ್ನು ಕಾಪಾಡಲು ರಸ್ತೆಯಲ್ಲಿ ಅಡ್ಡ ನಿಂತ ಹಸುಗಳು
ಪ್ರಿಯಕರನ ಜೊತೆ ಇದ್ದಾಗ ದಿಢೀರನೇ ಮನೆಗೆ ಎಂಟ್ರಿ ಕೊಟ್ಟ ಗಂಡ; ಮುಂದೆನಾಯಿತು?
ಪ್ರಿಯಕರನ ಜೊತೆ ಇದ್ದಾಗ ದಿಢೀರನೇ ಮನೆಗೆ ಎಂಟ್ರಿ ಕೊಟ್ಟ ಗಂಡ; ಮುಂದೆನಾಯಿತು?
ಕುವೈತ್‌ನ ಬಯಾನ್ ಅರಮನೆಯಲ್ಲಿ ಪ್ರಧಾನಿ ಮೋದಿಗೆ ಗಾರ್ಡ್ ಆಫ್ ಆನರ್ ಪ್ರದಾನ
ಕುವೈತ್‌ನ ಬಯಾನ್ ಅರಮನೆಯಲ್ಲಿ ಪ್ರಧಾನಿ ಮೋದಿಗೆ ಗಾರ್ಡ್ ಆಫ್ ಆನರ್ ಪ್ರದಾನ
ಪ್ರತ್ಯೇಕ ಸಚಿವಾಲಯ: ಕಲ್ಯಾಣ ಕರ್ನಾಟಕಕ್ಕೆ ಸಿಹಿ ಸುದ್ದಿ ನೀಡಿದ ಸಿಎಂ
ಪ್ರತ್ಯೇಕ ಸಚಿವಾಲಯ: ಕಲ್ಯಾಣ ಕರ್ನಾಟಕಕ್ಕೆ ಸಿಹಿ ಸುದ್ದಿ ನೀಡಿದ ಸಿಎಂ
‘ಯುಐ’ ನೋಡಿ ಉಪೇಂದ್ರ ಆಧುನಿಕ ಬುದ್ಧ ಎಂದ ಆರ್ ಚಂದ್ರು
‘ಯುಐ’ ನೋಡಿ ಉಪೇಂದ್ರ ಆಧುನಿಕ ಬುದ್ಧ ಎಂದ ಆರ್ ಚಂದ್ರು
ಬಿಗ್​ಬಾಸ್ ಮನೆಯಲ್ಲಿ ಕಸದ ಬುಟ್ಟಿ: ಚೈತ್ರಾ ಕಸಕ್ಕೆ ಸಮಾನವೆ?
ಬಿಗ್​ಬಾಸ್ ಮನೆಯಲ್ಲಿ ಕಸದ ಬುಟ್ಟಿ: ಚೈತ್ರಾ ಕಸಕ್ಕೆ ಸಮಾನವೆ?
ಮಂಡ್ಯ: ಸಾಹಿತ್ಯ ಸಮ್ಮೇಳನದಲ್ಲಿ ಚಲುವರಾಯಸ್ವಾಮಿ ಭರ್ಜರಿ ಡ್ಯಾನ್ಸ್​
ಮಂಡ್ಯ: ಸಾಹಿತ್ಯ ಸಮ್ಮೇಳನದಲ್ಲಿ ಚಲುವರಾಯಸ್ವಾಮಿ ಭರ್ಜರಿ ಡ್ಯಾನ್ಸ್​
ಬಾಕ್ಸಿಂಗ್ ಡೇ ಟೆಸ್ಟ್​ಗಾಗಿ ಬೆವರಿಳಿಸಿದ ಟೀಮ್ ಇಂಡಿಯಾ ಬೌಲರ್​ಗಳು
ಬಾಕ್ಸಿಂಗ್ ಡೇ ಟೆಸ್ಟ್​ಗಾಗಿ ಬೆವರಿಳಿಸಿದ ಟೀಮ್ ಇಂಡಿಯಾ ಬೌಲರ್​ಗಳು