Cheaper Items: ಹೊಸ ಜಿಎಸ್​ಟಿ ದರ: ಅಗ್ಗವಾಗಲಿರುವ ವಸ್ತುಗಳಿವು

|

Updated on: Feb 20, 2023 | 1:18 PM

49th GST Council Meeting: ಶನಿವಾರ ನಡೆದ 49ನೇ ಜಿಎಸ್​ಟಿ ಕೌನ್ಸಿಲ್ ಸಭೆಯಲ್ಲಿ ಪೆನ್ಸಿಲ್ ಶಾರ್ಪ್ನರ್, ಲಿಕ್ವಿಡ್ ಜ್ಯಾಗರಿ, ಟ್ಯಾಗ್ ಟ್ರ್ಯಾಕಿಂಗ್ ಡಿವೈಸ್ ಮೊದಲಾದ ವಸ್ತುಗಳ ಮೇಲಿನ ತೆರಿಗೆಯನ್ನು ಇಳಿಸಲಾಗಿದೆ. ಇವುಗಳ ಬೆಲೆ ಕಡಿಮೆಗೊಂಡಿದೆ.

Cheaper Items: ಹೊಸ ಜಿಎಸ್​ಟಿ ದರ: ಅಗ್ಗವಾಗಲಿರುವ ವಸ್ತುಗಳಿವು
ಸಾಂದರ್ಭಿಕ ಚಿತ್ರ
Follow us on

ನವದೆಹಲಿ: ಮೊನ್ನೆ ಶನಿವಾರ ನಡೆದ ಜಿಎಸ್​ಟಿ ಸಭೆಯಲ್ಲಿ (49th GST Council Meeting) ಯಾವ್ಯಾವುದರ ತೆರಿಗೆ ಏರಿಕೆ, ಇಳಿಕೆ ಮಾಡಬೇಕೆಂದು ನಿರ್ಧರಿಸಲಾಗಿದೆ. ಈ ಬಗ್ಗೆ ಒಂದಷ್ಟು ಸ್ಪಷ್ಟ ಚಿತ್ರಣ ಈಗ ಲಭ್ಯವಾಗಿದೆ. ಪೆನ್ಸಿಲ್ ಶಾರ್ಪ್ನರ್​ಗಳ ಮೇಲಿನ ಜಿಎಸ್​ಟಿ ದರ ಶೇ. 18ರಷ್ಟಿಂದ ಶೇ. 12ಕ್ಕೆ ಇಳಿಸಲಾಗಿದೆ. ಟ್ಯಾಗ್ ಟ್ರ್ಯಾಕಿಂಗ್ ಡಿವೈಸ್ ಅಥವಾ ಡಾಟಾ ಲಾಗರ್​ಗಳಿಗೆ ಯಾವುದೇ ತೆರಿಗೆ ವಿಧಿಸದಿರಲು ನಿರ್ಧರಿಸಲಾಗಿದೆ. ಈ ಮೊದಲು ಇವುಗಳಿಗೆ ಶೇ. 18ರಷ್ಟು ಜಿಎಸ್​ಟಿ ಇತ್ತು.

ಇನ್ನು, ಧ್ರವ ರೂಪದ ಬೆಲ್ಲಕ್ಕೆ ಶೇ. 15ರಷ್ಟು ಇದ್ದ ಜಿಎಸ್​ಟಿಯನ್ನು ಶೂನ್ಯಕ್ಕೆ ತರಲಾಗಿದೆ. ಅಂದರೆ ಇದಕ್ಕೆ ಯಾವುದೇ ತೆರಿಗೆ ಇರುವುದಿಲ್ಲ. ಚಿಲ್ಲರೆಯಾಗಿ ಈ ಉತ್ಪನ್ನವನ್ನು ಮಾರುವುದಾದರೆ ಶೇ. 5ರಷ್ಟು ತೆರಿಗೆ ಹಾಕಲಾಗುತ್ತದೆ. ಇದನ್ನು ಪ್ಯಾಕೇಜ್ ರೂಪದಲ್ಲಿ ಮಾರುವಾಗಲೂ ಶೇ. 5ರಷ್ಟು ಜಿಎಸ್​ಟಿ ಇರುತ್ತದೆ.

ಇದೇ ವೇಳೆ, ಕಲ್ಲಿದ್ದಲು ತ್ಯಾಜ್ಯ ಅಥವಾ ಕಲ್ಲಿದ್ದಲು ಉಳಿಕೆಗೆ ತೆರಿಗೆ ವಿನಾಯಿತಿ ನೀಡಲು ಜಿಎಸ್​ಟಿ ಕೌನ್ಸಿಲ್ ತೀರ್ಮಾನಿಸಿದೆ. ಕಚ್ಛಾ ಕಲ್ಲಿದ್ದಲನ್ನು ನೀರಿನಿಂದ ಸ್ವಚ್ಛಗೊಳಿಸಿದ ಬಳಿಕ ಸಿಗುವ ಕಲ್ಲಿದ್ದಲು ಹೆಚ್ಚು ಪರಿಸರಸ್ನೇಹಿಯಾಗಿರುತ್ತದೆ. ಅದಕ್ಕೆ ಬೆಲೆ ಹೆಚ್ಚು ಇರುತ್ತದೆ. ನಂತ ಉಳಿಯುವ ಈ ಕಲ್ಲಿದ್ದಲು ತ್ಯಾಜ್ಯವನ್ನು ಬೇರೆ ಕೆಲ ಔದ್ಯಮಿಕ ಉತ್ಪಾದನೆಗಳಿಗೆ ಬಳಸಬಹುದಾಗಿದೆ.

ಬೆಲೆ ಇಳಿಕೆಯಾಗಿರುವುದು

ಪೆನ್ಸಿಲ್ ಶಾರ್ಪ್ನರ್: ಜಿಎಸ್​​ಟಿ ಶೇ. 18ರಿಂದ 12ಕ್ಕೆ ಇಳಿಕೆ

ದ್ರವರೂಪದ ಬೆಲ್ಲ: ಶೇ. 15ರ ಜಿಎಸ್​ಟಿ ಈಗ ಶೂನ್ಯ

ಟ್ಯಾಗ್ ಟ್ರ್ಯಾಕಿಂಗ್ ಸಾಧನ: ಶೂನ್ಯ ತೆರಿಗೆ

ಕೋಲ್ ರಿಜೆಕ್ಟ್: ತೆರಿಗೆ ಇಲ್ಲ

ಇದನ್ನೂ ಓದಿ: Cable Operators vs Broadcasters: ಕೆಲ ಕೇಬಲ್ ಟಿವಿಗಳಲ್ಲಿ ಪ್ರಸಾರ ನಿಲ್ಲಿಸಿವೆ ಝೀ, ಸ್ಟಾರ್, ಸೋನಿ ವಾಹಿನಿಗಳು

ಶನಿವಾರ ನಡೆದದ್ದು 49ನೇ ಜಿಎಸ್​ಟಿ ಕೌನ್ಸಿಲ್ ಸಭೆ. ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆ ವಹಿಸಿದ್ದ ಈ ಸಭೆಯಲ್ಲಿ ವಿವಿಧ ರಾಜ್ಯಗಳ ಹಣಕಾಸು ಸಚಿವರು ಮತ್ತು ಉನ್ನತ ಸ್ತರದ ಅಧಿಕಾರಿಗಳು ಪಾಲ್ಗೊಂಡಿದ್ದರು. ಈ ಸಭೆಯಲ್ಲಿ ನಿರ್ಮಲಾ ಸೀತಾರಾಮನ್ ಅವರು ಮೇಲ್ಮನವಿ ನ್ಯಾಯಮಂಡಳಿಗಳ ಸ್ಥಾಪನೆ ವಿಚಾರದ ಬಗ್ಗೆ ಮಾತನಾಡಿದರು. ಪಾನ್ ಮಸಾಲ ಮತ್ತು ಗುಟ್ಕಾ ವ್ಯವಹಾರಗಳಲ್ಲಿ ಆಗುತ್ತಿರುವ ತೆರಿಗೆ ವಂಚನೆಯನ್ನು ನಿಯಂತ್ರಣಕ್ಕೆ ತರುವ ವ್ಯವಸ್ಥೆ ಬಗ್ಗೆಯೂ ಚರ್ಚಿಸಲಾಯಿತು. ಈ ಬಗ್ಗೆ ಗ್ರೂಪ್ ಆಫ್ ಮಿನಿಸ್ಟರ್​ನ ವರದಿಯನ್ನು ಬಹುತೇಕ ಒಪ್ಪಲಾಗಿದ್ದು, ಕೆಲ ತಿದ್ದುಪಡಿಗಳು ಮಾತ್ರ ಅಗತ್ಯ ಇದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಈ ಜಿಎಸ್​ಟಿ ಸಭೆಯಿಂದ ಬಂದ ಮುಖ್ಯ ಸುದ್ದಿ ಪರಿಹಾರ ಹಣದ್ದು. ಐದು ವರ್ಷಗಳ ಜಿಎಸ್​ಟಿ ಪರಿಹಾರದ ಬಾಕಿ ಹಣವಾದ 16,982 ಕೋಟಿ ರೂಪಾಯಿಯನ್ನು ಕೇಂದ್ರ ಸರ್ಕಾರ ತನ್ನ ಜೇಬಿನಿಂದಲೇ 6 ರಾಜ್ಯಗಳಿಗೆ ಹಂಚುತ್ತದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ದೆಹಲಿ, ತಮಿಳುನಾಡು, ತೆಲಂಗಾಣ ಮೊದಲಾದ 6 ರಾಜ್ಯಗಳಿಗೆ ಕೇಂದ್ರ ಸರ್ಕಾರ 16,982 ಕೋಟಿ ರೂ ವಿತರಿಸಲಿದೆ.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ