AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

PAN Reprint: ಪಾನ್ ಕಾರ್ಡ್ ಕಳೆದಿದೆಯೇ? ಮತ್ತೆ ಪಡೆಯಲು ಈ ವಿಧಾನ ಅನುಸರಿಸಿ

Know How To Get Duplicate PAN Card: ಪಾನ್ ಕಾರ್ಡ್ ಕಳೆದುಕೊಂಡರೆ ಅದರ ಡೂಪ್ಲಿಕೇಟ್ ಕಾಪಿ ಪಡೆಯಲು ಕೆಲ ವಿಧಾನಗಳಿವೆ. ಆನ್​ಲೈನ್ ಮೂಲಕವೂ ಪಾನ್ ಕಾರ್ಡ್ ರೀ ಇಷ್ಯೂ ಮಾಡಬಹುದು. ಆಫ್​ಲೈನ್​ನಲ್ಲೂ ಡೂಪ್ಲಿಕೇಟ್ ಕಾರ್ಡ್​ಗೆ ಅರ್ಜಿ ಸಲ್ಲಿಸಬಹುದು. ಅದರ ಮಾಹಿತಿ ಇಲ್ಲಿದೆ.

PAN Reprint: ಪಾನ್ ಕಾರ್ಡ್ ಕಳೆದಿದೆಯೇ? ಮತ್ತೆ ಪಡೆಯಲು ಈ ವಿಧಾನ ಅನುಸರಿಸಿ
ಪ್ಯಾನ್ ಕಾರ್ಡ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Feb 20, 2023 | 3:26 PM

ನವದೆಹಲಿ: ಪರ್ಮನೆಂಟ್ ಅಕೌಂಟ್ ನಂಬರ್ ಅಥವಾ ಪಾನ್ ನಂಬರ್ (PAN number) ಈಗ ಬಹಳ ಅಗತ್ಯವಾಗಿರುವ ದಾಖಲೆಗಳಲ್ಲಿ ಒಂದು. ಹಣಕಾಸು ಚಟುವಟಿಕೆಗಳಿಗೆ ಇದು ಅತ್ಯವಶ್ಯಕ. ಒಬ್ಬ ವ್ಯಕ್ತಿ ಒಂದು ಪಾನ್ ಕಾರ್ಡ್ ಮಾತ್ರ ಹೊಂದಲು ಸಾಧ್ಯ. ಒಂದಕ್ಕಿಂತ ಹೆಚ್ಚು ಪಾನ್ ನಂಬರ್ ಹೊಂದುವುದು ಅಪರಾಧ. 10 ಅಕ್ಷರ ಅಂಕಿಗಳ ಸಂಯೋಗದ ಸಂಖ್ಯೆಯನ್ನು (10 digit Alpha-numberic number) ಪಾನ್ ನಂಬರ್ ಹೊಂದಿರುತ್ತದೆ. ಈಗ ಆಧಾರ್ ಕಾರ್ಡ್​ಗೆ ಪಾನ್ ಸಂಖ್ಯೆಯನ್ನೂ ಜೋಡಿಸುವುದು ಕಡ್ಡಾಯ. ಈ ದಾಖಲೆಯನ್ನು ಜೋಪಾನವಾಗಿಟ್ಟುಕೊಳ್ಳುವುದು ಅಗತ್ಯ.

ಒಂದು ವೇಳೆ ಪಾನ್ ಕಾರ್ಡ್ ಕಳೆದುಹೋದರೆ ಏನು ಮಾಡಬೇಕು? ನಿಮಗೆ ಪಾನ್ ನಂಬರ್ ಗೊತ್ತಿದ್ದರೆ ಸಾಕು ಪಾನ್ ಕಾರ್ಡ್ ಮರಳಿ ಪಡೆಯಬಹುದು. ಆನ್​ಲೈನಲ್ಲೂ ನೀವು ಈ ಕೆಲಸ ಮಾಡಬಹುದು.

ಇದರ ವಿಧಾನಗಳು ಈ ಕೆಳಕಂಡಂತಿವೆ:

  • ಪಾನ್ ನಂಬರ್​ನ ಅಧಿಕೃತ ವೆಬ್​ಸೈಟ್ ಟಿಐಎನ್ಎನ್​ಎಸ್​ಡಿಎಲ್​ಗೆ ಭೇಟಿ ನೀಡಿ
  • ನಂತರ ಪಾನ್ ಕಾರ್ಡ್ ರೀಪ್ರಿಂಟ್ ಆಪ್ಶನ್ ಕಾಣುತ್ತದೆ. ಅದನ್ನು ಕ್ಲಿಕ್ ಮಾಡಿ
  • ನಂತರ ಹೆಸರು, ಜನ್ಮದಿನಾಂಕ, ಮೊಬೈಲ್ ನಂಬರ್ ಮೊದಲಾದ ಅಗತ್ಯ ಮಾಹಿತಿ ಭರ್ತಿ ಮಾಡಿ ಸಬ್ಮಿಟ್ ಮಾಡಿ.
  • ಈಗ ಟೋಕನ್ ನಂಬರ್ ಜನರೇಟ್ ಆಗುತ್ತದೆ. ಅರ್ಜಿದಾರರ ನೊಂದಾಯಿತ ಇಮೇಲ್​ಗೆ ಈ ಟೋಕನ್ ನಂಬರ್ ಕಳುಹಿಸಲಾಗುತ್ತದೆ. ಈ ನಂಬರ್ ಅನ್ನು ಅಪ್ಲಿಕೇಶನ್ ಸಲ್ಲಿಕೆಗೆ ಬಳಸಬೇಕಾಗುತ್ತದೆ.
  • ಟೋಕನ್ ನಂಬರ್ ಜನರೇಟ್ ಆದ ಬಳಿಕ ಪೊರ್ಟಲ್​ನಲ್ಲಿ ಪರ್ಸನಲ್ ಡೀಟೇಲ್ಸ್ ಪುಟದಲ್ಲಿರುವ ಇತರ ಮಾಹಿತಿಯನ್ನು ತುಂಬಿಸಿ.
  • ಇದಾದ ಬಳಿಕ ಅರ್ಜಿ ಸಲ್ಲಿಕೆಯ ಪ್ರಕ್ರಿಯೆ ಇರುತ್ತದೆ. ಇದರಲ್ಲೂ ಮೂರು ವಿಧಾನಗಳಿವೆ. ಭೌತಿಕವಾಗಿ ಅರ್ಜಿ ದಾಖಲೆಯನ್ನು ಕಚೇರಿಗೆ ಹೋಗಿ ಸಲ್ಲಿಸುವುದು ಒಂದು ವಿಧಾನವಾದರೆ, ಕೆವೈಸಿ ಮೂಲಕ ಡಿಜಿಟಲ್ ಆಗಿ ಅರ್ಜಿ ಸಲ್ಲಿಸಬಹುದು. ಮೂರನೇ ವಿಧಾನವೆಂದರೆ ಇಸಹಿ ಮೂಲಕ ಸಲ್ಲಿಸುವುದು.
  • ಭೌತಿಕವಾಗಿ ಅರ್ಜಿಯನ್ನು ಕಚೇರಿಗೆ ಕಳುಹಿಸುವುದಾದರೆ ಮೊದಲಿಗೆ ಮೇಲೆ ತಿಳಿಸಿದ ಪೋರ್ಟಲ್​ನಲ್ಲಿ ಅಪ್ಲಿಕೇಶನ್ ಪೇಮೆಂಟ್ ಮಾಡಬೇಕು. ನಂತರ ಸ್ವಿಕೃತಿ ಅರ್ಜಿ ತಯಾರಾಗುತ್ತದೆ. ಅದರ ಪ್ರಿಂಟ್ ತೆಗೆದುಕೊಳ್ಳಿ. ನಂತರ ಡ್ರೈವಿಂಗ್ ಲೈಸೆನ್ಸ್, ಆಧಾರ್, ವೋಟರ್ ಐಡಿ, ಜನನ ಪ್ರಮಾಣಪತ್ರ, ಪಾಸ್​ಪೋರ್ಟ್, ಎಸ್ಸೆಸ್ಸೆಲ್ಸಿ ಪ್ರಮಾಣಪತ್ರ ಮತ್ತಿತರ ಯಾವುದಾದರೂ ಅಗತ್ಯ ದಾಖಲೆಗಳನ್ನು ಜೊತೆಯಲ್ಲಿ ಕವರ್​ಗೆ ಸೇರಿಸಬೇಕು. ಎನ್​ವಿಲೋಪ್ ಮೇಲೆ ಸ್ವೀಕೃತಿ ಸಂಖ್ಯೆ ನಮೂದಿಸಿ, ಅಪ್ಲಿಕೇಶನ್ ಫಾರ್ ರೀಪ್ರಿಂಟ್ ಆಫ್ ಪಾನ್ ಎಂದು ಬರೆದಿರಬೇಕು. ಅದನ್ನು ಎನ್​ಎಸ್​ಡಿಎಲ್​ನ ಪಾನ್ ಸರ್ವಿಸ್ ಯೂನಿಟ್​ಗಳಿಗೆ ರಿಜಿಸ್ಟರ್ ಪೋಸ್ಟ್ ಮೂಲಕ ಕಳುಹಿಸಿಕೊಡಬೇಕು.

ಇದನ್ನೂ ಓದಿ: Wedding Insurance: ಮದುವೆಗೂ ಇನ್ಷೂರೆನ್ಸ್: ಏನು ಪ್ರಯೋಜನ? ಪ್ರೀಮಿಯಂ ಎಷ್ಟು? ಏನೇನೆಲ್ಲಾ ಕವರ್ ಆಗುತ್ತೆ? ವಿವರ ಇಲ್ಲಿದೆ

ಆನ್​ಲೈನ್​ನಲ್ಲಿ ಸಲ್ಲಿಸಲು:

ಇನ್ನು, ಆನ್​ಲೈನ್ ಮೂಲಕವೇ ನೀವು ಅರ್ಜಿ ಸಲ್ಲಿಸಲು ನಿರ್ಧರಿಸಿದಲ್ಲಿ ಇದಕ್ಕೆ ಆಧಾರ್ ನಂಬರ್ ಬಳಸಬಹುದು. ಆಧಾರ್​ಗೆ ನೀಡಲಾದ ನಿಮ್ಮ ನೊಂದಾಯಿತ ಮೊಬೈಲ್ ನಂಬರ್​ಗೆ ಬರುವ ಒಟಿಪಿ ಮೂಲಕ ಅರ್ಜಿ ವಿವರ ತುಂಬಬಹುದು. ಅರ್ಜಿ ಸಲ್ಲಿಸುವಾಗ ಡಿಜಿಟಲ್ ಸಿಗ್ನೇಚರ್ ಹಾಕಬೇಕಾಗುತ್ತದೆ.

ನಂತರ ನಿಮ್ಮ ಪಾಸ್​ಪೋರ್ಟ್ ಗಾತ್ರದ ಫೋಟೋ, ಸಹಿ ಮತ್ತಿತರ ದಾಖಲೆಗಳನ್ನು ಸ್ಕ್ಯಾನ್ ಮಾಡಿದ ಇಮೇಜ್​ಗಳನ್ನು ಅಪ್​ಲೋಡ್ ಮಾಡಬೇಕು. ಇದಾದ ಬಳಿಕ ಅಪ್ಲಿಕೇಶನ್ ಫಾರ್ಮ್ ಅನ್ನು ದೃಢಪಡಿಸಲು ಮತ್ತೊಮ್ಮೆ ಒಟಿಪಿ ಜನರೇಟ್ ಆಗುತ್ತದೆ.

ಇದನ್ನೂ ಓದಿ: Cheaper Items: ಹೊಸ ಜಿಎಸ್​ಟಿ ದರ: ಅಗ್ಗವಾಗಲಿರುವ ವಸ್ತುಗಳಿವು

ಇಲ್ಲಿ ನಿಮಗೆ ಎರಡು ರೀತಿಯ ಪಾನ್ ಕಾರ್ಡ್ ಅವಕಾಶ ಇರುತ್ತದೆ. ಒಂದು ಭೌತಿಕ ಪಾನ್ ಕಾರ್ಡ್. ಮತ್ತೊಂದು ಇ ಪಾನ್ ಕಾರ್ಡ್. ಎಲೆಕ್ಟ್ರಾನಿಕ್ ಪಾನ್ ಕಾರ್ಡ್ ಪಡೆಯಲು ಇಮೇಲ್ ವಿಳಾಸ ಕೊಡಬೇಕು. ಭೌತಿಕ ಪಾನ್ ಕಾರ್ಡ್ ಬೇಕೆಂದರೆ ಪಾನ್ ಡೇಟಾಬೇಸ್​ನಲ್ಲಿ ನೀವು ಇತ್ತೀಚೆಗೆ ನೀಡಿರುವ ವಿಳಾಸಕ್ಕೆ ಪಾನ್ ಕಾರ್ಡ್ ಪೋಸ್ಟ್ ಮೂಲಕ ಬರುತ್ತದೆ.

ಆಫ್​ಲೈನ್ ವಿಧಾನ:

ರಿಕ್ವೆಸ್ಟ್ ಫಾರ್ ನ್ಯೂ ಪಾನ್ ಕಾರ್ಡ್ ಹೆಸರಿನ ಫಾರ್ಮ್ ಅನ್ನು ಆನ್​ಲೈನ್ ಮೂಲಕ ಡೌನ್​ಲೋಡ್ ಮಾಡಿಕೊಂಡು, ಅದನ್ನು ಭರ್ತಿ ಮಾಡಬೇಕು. ಎರಡು ಪಾಸ್​ಪೋರ್ಟ್ ಗಾತ್ರದ ಫೋಟೋ, ಐಡಿ ಪ್ರೂಫ್, ವಿಳಾಸದ ಪ್ರೂಫ್, ಪ್ಯಾನ್ ಪ್ರೂಫ್ ದಾಖಲೆಗಳನ್ನು ಸೇರಿಸಿ ಎನ್​ಎಸ್​ಡಿಎಲ್ ಫೆಸಿಲಿಟೇಶನ್ ಸೆಂಟರ್​ಗೆ ಕಳುಹಿಸಬೇಕು. ಎರಡು ವಾರಗಳಲ್ಲಿ ಪಾನ್ ಕಾರ್ಡ್ ನಿಮ್ಮ ವಿಳಾಸಕ್ಕೆ ಬರುತ್ತದೆ.

Published On - 3:26 pm, Mon, 20 February 23