ಡಾಲರ್​ಗೂ ಚಿನ್ನಕ್ಕೂ ಎಣ್ಣೆ ಶೀಗೆಕಾಯಿ ಸಂಬಂಧ; ಆದರೂ ಡಾಲರ್ ಜೊತೆಜೊತೆಗೆ ಚಿನ್ನದ ಬೆಲೆಯೂ ಏರುತ್ತಿರೋದ್ಯಾಕೆ?

Know Why Gold, Silver Prices going Record High: ಚಿನ್ನ ಮತ್ತು ಬೆಳ್ಳಿ ಬೆಲೆ ಇತ್ತೀಚಿನ ಕೆಲ ವಾರಗಳಲ್ಲಿ ಬಹಳ ಅಸಹಜವಾಗಿ ಹೆಚ್ಚುತ್ತಿದೆ. ಡಾಲರ್ ದರ ಹೆಚ್ಚಿದರೆ ಚಿನ್ನದ ಬೆಲೆ ಕಡಿಮೆ ಆಗುವುದು ಮಾರುಕಟ್ಟೆ ಟ್ರೆಂಡ್. ಇಲ್ಲಿ ಡಾಲರ್ ದರ ಏರಿಕೆ ಆಗುತ್ತಿರುವ ಜೊತೆ ಜೊತೆಗೆ ಚಿನ್ನ, ಬೆಳ್ಳಿ ದರಗಳೂ ಅಸಾಮಾನ್ಯವಾಗಿ ಹೆಚ್ಚಳವಾಗುತ್ತಿವೆ. ಜಾಗತಿಕ ರಾಜಕೀಯ ಬಿಕ್ಕಟ್ಟು, ಸಾರ್ವತ್ರಿಕ ಚುನಾವಣೆಗಳು, ಚೀನಾದ ಚಿನ್ನ ಖರೀದಿ ಭರಾಟೆ ಇತ್ಯಾದಿ ಅಂಶಗಳು ಚಿನ್ನದ ಬೆಲೆ ಹೆಚ್ಚಳಕ್ಕೆ ಕಾರಣವಿರಬಹುದು ಎಂದು ತಜ್ಞರು ಲೆಕ್ಕಾಚಾರ ಹಾಕಿದ್ದಾರೆ.

ಡಾಲರ್​ಗೂ ಚಿನ್ನಕ್ಕೂ ಎಣ್ಣೆ ಶೀಗೆಕಾಯಿ ಸಂಬಂಧ; ಆದರೂ ಡಾಲರ್ ಜೊತೆಜೊತೆಗೆ ಚಿನ್ನದ ಬೆಲೆಯೂ ಏರುತ್ತಿರೋದ್ಯಾಕೆ?
ಚಿನ್ನ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Apr 08, 2024 | 12:00 PM

ಚಿನ್ನ ಮತ್ತು ಬೆಳ್ಳಿ ಬೆಲೆಗಳು (gold and silver prices) ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ಸತತವಾಗಿ ಮೀರಿ ಹೋಗುತ್ತಲೇ ಇವೆ. ನಿರೀಕ್ಷೆಗಿಂತ ಬಹಳ ವೇಗವಾಗಿ ಬೆಲೆಗಳು ಹೆಚ್ಚುತ್ತಿವೆ. ಅಚ್ಚರಿ ಎಂದರೆ ಅಮೆರಿಕದ ಡಾಲರ್ ಮೌಲ್ಯವೂ ಈ ಸಂದರ್ಭದಲ್ಲಿ ಹೆಚ್ಚುತ್ತಿದೆ. ಸಾಮಾನ್ಯವಾಗಿ ಡಾಲರ್ ಮೌಲ್ಯ ಹೆಚ್ಚಿದರೆ ಚಿನ್ನದ ಬೆಲೆ ಕಡಿಮೆ ಆಗುತ್ತದೆ. ಡಾಲರ್ ಮೌಲ್ಯ ಕುಸಿದರೆ ಚಿನ್ನಕ್ಕೆ ಬೇಡಿಕೆ ಹೆಚ್ಚುತ್ತದೆ. ಇದು ಮಾರುಕಟ್ಟೆಯ ಸಹಜ ಪ್ರವೃತ್ತಿ. ಆದರೆ, ಈಗ ಡಾಲರ್ ದರ ಹೆಚ್ಚುತ್ತಿದೆ. ಜೊತೆಜೊತೆಗೆ ಚಿನ್ನದ ಬೆಲೆಯೂ ಹೆಚ್ಚುತ್ತಿದೆ. ಕಳೆದ 10 ದಿನದಲ್ಲಿ ಚಿನ್ನದ ಬೆಲೆ ಗ್ರಾಮ್​ಗೆ 450 ರೂನಷ್ಟು ಹೆಚ್ಚಾಗಿದೆ. ಈ ಅಸಹಜ ಮಾರುಕಟ್ಟೆ ಪ್ರವೃತ್ತಿಗೆ ಏನು ಕಾರಣ?

ಚಿನ್ನದ ಬೆಲೆ ಹೆಚ್ಚಲು ಪ್ರಮುಖ ಕಾರಣಗಳಿವು

  1. ಅಮೆರಿಕದಲ್ಲಿ ಬಡ್ಡಿದರ ಕಡಿತಗೊಳಿಸುವ ಪರ್ವ ಶೀಘ್ರದಲ್ಲೇ ಆರಂಭವಾಗಬಹುದು ಎನ್ನುವ ನಿರೀಕ್ಷೆ
  2. ಚೀನಾದಿಂದ ಹೇರಳವಾಗಿ ಚಿನ್ನದ ಖರೀದಿ
  3. ಜಾಗತಿಕ ರಾಜಕೀಯ (geo politics) ಬಿಕ್ಕಟ್ಟಿನ ಸ್ಥಿತಿ
  4. ಪ್ರಮುಖ ಆರ್ಥಿಕತೆಯ ದೇಶಗಳಲ್ಲಿ ಚುನಾವಣೆಗಳು ನಡೆಯುತ್ತಿರುವುದು
  5. ಭಾರತದ ರುಪಾಯಿ ಮೌಲ್ಯ ಕುಸಿಯುತ್ತಿರುವುದು

ಇದನ್ನೂ ಓದಿ: ಚಿನ್ನ, ಬೆಳ್ಳಿ ಮತ್ತೆ ದುಬಾರಿ; ಈ ವಾರವೂ ಬೆಲೆಗಳ ನಾಗಾಲೋಟ

ಇಸ್ರೇಲ್ ಪ್ಯಾಲಸ್ಟೀನ್ ಸಂಘರ್ಷ, ರಷ್ಯಾ ಉಕ್ರೇನ್ ಕಗ್ಗಂಟು ಇತ್ಯಾದಿ ಜಾಗತಿಕ ರಾಜಕೀಯ ಸೂಕ್ಷ್ಮ ಸಂಗತಿ ಒಂದು ರೀತಿಯಲ್ಲಿ ಅನಿಶ್ಚಿತ ವಾತಾವರಣ ನಿರ್ಮಿಸಿದೆ. ಪೆಟ್ರೋಲಿಯಂ ಹೊಂದಿದ ದೇಶಗಳು ಯುದ್ಧದಲ್ಲಿ ಭಾಗಿಯಾಗಿಬಿಟ್ಟರೆ ಜಾಗತಿಕ ಆರ್ಥಿಕತೆಗೆ ಹೊಡೆತ ಕೊಡಬಹುದು ಎನ್ನುವ ದೂರಾಲೋಚನೆಯು ಹೂಡಿಕೆದಾರರದ್ದಾಗಿದೆ. ಈ ಸಂದರ್ಭದಲ್ಲಿ ಸುರಕ್ಷಿತ ಹೂಡಿಕೆ ಎಂದರೆ ಚಿನ್ನ, ಬೆಳ್ಳಿ ಇತ್ಯಾದಿ ಅಪರೂಪದ ಲೋಹಗಳೇ.

ಚೀನಾದ ಸೆಂಟ್ರಲ್ ಬ್ಯಾಂಕ್ ಇತ್ತೀಚಿನ ಕೆಲ ವಾರಗಳಲ್ಲಿ ಚಿನ್ನ, ಬೆಳ್ಳಿಗಳನ್ನು ಯಥೇಚ್ಛವಾಗಿ ಖರೀದಿಸುತ್ತಿದೆ. ಇದೂ ಕೂಡ ಚಿನ್ನಕ್ಕೆ ಬೇಡಿಕೆ ಹೆಚ್ಚಿಸಿದೆ.

ಇದರ ಜೊತೆಗೆ, ಅಮೆರಿಕದ ಕೃಷಿಯೇತರ ಸಂಬಳದ ದತ್ತಾಂಶ ಬಿಡುಗಡೆ ಆಗಿದ್ದರ ಪರಿಣಾಮವೂ ಇದೆ. ಈ ದತ್ತಾಂಶದ ಪ್ರಕಾರ ಅಮೆರಿಕದಲ್ಲಿ ನಿರುದ್ಯೋಗ ಪ್ರಮಾಣವು ಶೇ. 3.9ರಿಂದ ಶೇ. 3.8ಕ್ಕೆ ಇಳಿದಿದೆ. ಇದಾದ ಬಳಿಕ ಚಿನ್ನ ಮತ್ತು ಬೆಳ್ಳಿ ಬೆಲೆಗಳು ದಾಖಲೆಯ ಮಟ್ಟಕ್ಕೆ ಏರತೊಡಗಿದವು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು