Rs 5 Coin: ಭಾರತದ 5 ರೂ ನಾಣ್ಯ ಬಳಸಿ ಬಾಂಗ್ಲಾದಲ್ಲಿ ಬ್ಲೇಡ್ ಬಿಸಿನೆಸ್? ಆರ್​ಬಿಐ ಕಾಯಿನ್ ಕಥೆ

Old 5 Rupee vs New 5 Rupee Coin: ಹಳೆಯ 5 ರೂ ನಾಣ್ಯದಲ್ಲಿ ಉತ್ಕೃಷ್ಟ ಗುಣಮಟ್ಟದ ಲೋಹಗಳನ್ನು ಬಳಸಲಾಗುತ್ತಿದ್ದಾದ್ದರಿಂದ ಬಾಂಗ್ಲಾಗೆ ಅದನ್ನು ಕಳ್ಳಸಾಗಾಣಿಕೆ ಮಾಡಿ ಕರಗಿಸಿ ಬ್ಲೇಡ್​ಗಳನ್ನು ತಯಾರಿಸಲಾಗುತ್ತಿತ್ತು. ಹೀಗಾಗಿ, ಹೊಸ 5 ರೂ ನಾಣ್ಯ ಚಲಾವಣೆಯಲ್ಲಿದೆ.

Rs 5 Coin: ಭಾರತದ 5 ರೂ ನಾಣ್ಯ ಬಳಸಿ ಬಾಂಗ್ಲಾದಲ್ಲಿ ಬ್ಲೇಡ್ ಬಿಸಿನೆಸ್? ಆರ್​ಬಿಐ ಕಾಯಿನ್ ಕಥೆ
5 ರೂ ನಾಣ್ಯ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 27, 2023 | 3:33 PM

ನವದೆಹಲಿ: ಆರ್​ಬಿಐ (Reserve Bank of India) ಆಗಾಗ ನೋಟು ಮತ್ತು ನಾಣ್ಯಗಳ ಸ್ವರೂಪ ಬದಲಿಸುತ್ತಿರುತ್ತದೆ. ಖೋಟಾ ನೋಟು ನಿಯಂತ್ರಣ ಇತ್ಯಾದಿ ವಿವಿಧ ಕಾರಣಗಳಿಗೆ ಈ ಬದಲಾವಣೆ ಆಗುತ್ತಿರುತ್ತದೆ. ಆದರೆ, ಐದು ರೂ ನಾಣ್ಯದ ಸ್ವರೂಪದಲ್ಲಿ ಬದಲಾವಣೆ ಆಗಿರುವ ಕಥೆ ಕುತೂಹಲ ಮೂಡಿಸುತ್ತದೆ. 2 ಸಾವಿರ ರೂ ಮುಖಬೆಲೆಯ ನೋಟುಗಳ ಮುದ್ರಣ ನಿಂತಿರುವಂತೆಯೇ 5 ರೂ ಮುಖಬೆಲೆಯ ಹಳೆಯ ನಾಣ್ಯದ (5-Rupee Coin) ತಯಾರಿಕೆಯನ್ನು ಆರ್​ಬಿಐ ನಿಲ್ಲಿಸಿದೆ. ಈಗೆಲ್ಲಾ ಹಳೆಯ 5 ರೂ ನಾಣ್ಯ ಬಹುತೇಕ ಕಡಿಮೆ ಆಗಿದ್ದು, ಗೋಲ್ಡನ್ ಬಣ್ಣದ ಹೊಸ 5 ರೂ ನಾಣ್ಯಗಳು ಹೆಚ್ಚು ಚಲಾವಣೆಯಲ್ಲಿವೆ. ಈ ಬದಲಾವಣೆಗೆ ಕಾರಣವಾಗಿದ್ದು ಬಾಂಗ್ಲಾದೇಶೀಯರ ಸ್ಮಗ್ಲಿಂಗ್ ಬಿಸಿನೆಸ್.

ಹಳೆಯ 5 ರೂ ನಾಣ್ಯವನ್ನು ಬಾಂಗ್ಲಾದೇಶಕ್ಕೆ ಅಕ್ರಮವಾಗಿ ಸಾಗಾಣಿಕೆ ಮಾಡಲಾಗುತ್ತಿತ್ತು. ಈ ಒಂದು ನಾಣ್ಯದಿಂದ ಹಲವು ರೇಜರ್ ಬ್ಲೇಡ್ ತಯಾರಿಸಬಹುದಾದಷ್ಟು ಗುಣಮಟ್ಟ ಉಳ್ಳದಾಗಿದೆ ಈ ಹಳೆಯ ನಾಣ್ಯ. ಈ ಒಂದು ನಾಣ್ಯ ಕರಗಿಸಿದರೆ ಅದರಿಂದ ಬರುವ ಲೋಹ ಬಳಸಿ 6 ಬ್ಲೇಡ್ (ಶೇವಿಂಗ್ ಬ್ಲೇಡ್) ತಯಾರಿಸಬಹುದಂತೆ. ಒಂದೊಂದು ಬ್ಲೇಡ್ ಅನ್ನು 2 ರೂಗೆ ಮಾರಬಹುದು. ಐದು ರೂ ನಾಣ್ಯದಿಂದ 12 ರೂ ಆದಾಯ ಮಾಡಿಕೊಳ್ಳಬಹುದು. ಹೀಗಾಗಿ, ಹಳೆಯ 5 ರೂ ನಾಣ್ಯಗಳನ್ನು ಕಳ್ಳಸಾಗಾಣಿಕೆದಾರರು ದಂಡಿದಂಡಿಯಾಗಿ ಬಾಂಗ್ಲಾದೇಶಕ್ಕೆ ಸಾಗಿಸುತ್ತಿದ್ದುದು ಸರ್ಕಾರದ ಗಮನಕ್ಕೆ ಬಂದಿತ್ತು. ಈ ಕಾರಣಕ್ಕೆ ಆರ್​ಬಿಐ ಹೊಸ ನಾಣ್ಯ ತಯಾರಿಕೆ ಶುರುವಿಟ್ಟಿತು.

ಇದನ್ನೂ ಓದಿTwitter Layoffs: ರಾತ್ರಿ ಮನೆಗೆ ಹೋಗದೆ ಕಷ್ಟಪಟ್ಟಿದ್ದರ ಫಲಶ್ರುತಿ; ಟ್ವಿಟ್ಟರ್​ನಲ್ಲಿ ಕೆಲಸ ಕಳೆದುಕೊಂಡಳು ಕ್ರಾಫೋರ್ಡ್

ಹಳೆಯ ನಾಣ್ಯದಲ್ಲೇನಿದೆ ವಿಶೇಷತೆ?

ಹೊಸ 5 ರೂ ನಾಣ್ಯಕ್ಕೆ ಹೋಲಿಸಿದರೆ ಹಳೆಯ ನಾಣ್ಯದ ಗುಣಮಟ್ಟ ಉತ್ತಮವಾದುದು. ಒಂದು ನಾಣ್ಯ 9 ಗ್ರಾಂ ತೂಗುತ್ತದೆ. ಇದನ್ನು ಕುಪ್ರೋನಿಕೆಲ್ ಲೋಹದಿಂದ ಮಾಡಲಾಗಿದೆ. ಇದರ ಮುಖಬೆಲೆ 5 ರೂ ಆದರೂ, ನಾಣ್ಯದ ನೈಜ ಮೌಲ್ಯ ಭಿನ್ನವಾಗಿರಬಹುದು. ಕುಪ್ರೋ ನಿಕೆಲ್ ಲೋಹದ ಬೆಲೆ ತುಸು ದುಬಾರಿಯಾದ್ದರಿಂದ ಹಳೆಯ 5 ರೂ ನಾಣ್ಯ ಹೆಚ್ಚು ಮೌಲ್ಯಯುತವಾಗಿದೆ. ಇದನ್ನು ಕರಗಿಸಿ ಲೋಹವನ್ನು ಮಾರುಕಟ್ಟೆಗೆ ಮಾರಿದರೆ 5 ರೂಗಿಂತ ಹೆಚ್ಚು ಸಿಗುತ್ತದೆ. ಇದು ದುಷ್ಕರ್ಮಿಗಳಿಂದ ದುರ್ಬಳಕೆಗೆ ತುತ್ತಾಗಿ ಹೋಗಿದೆ. ಹೀಗಾಗಿ, ಹಳೆಯ 5 ರೂ ನಾಣ್ಯದ ಪ್ರಮಾಣ ಕಡಿಮೆ ಆಗಿಹೋಗಿದೆ ಎಂದು ವರದಿಗಳು ಹೇಳುತ್ತವೆ.

ಇಂಥ ದುರ್ಬಳಕೆಯನ್ನು ತಡೆಗಟ್ಟಲೆಂದೇ ಹೊಸ 5 ರೂ ನಾಣ್ಯವನ್ನು ರೂಪಿಸಲಾಗಿದೆ. ಹೊಸ 5 ರೂ ನಾಣ್ಯ ನೋಡಲು ಹೆಚ್ಚು ಸುಂದರವಾದರೂ ಅದರ ತೂಕ ಬಹಳ ಕಡಿಮೆ. ಅಲ್ಲದೇ ಈ ನಾಣ್ಯ ತಯಾರಿಕೆಗೆ ಕಡಿಮೆ ಬೆಲೆಯ ಲೋಹಗಳನ್ನು ಬೆರೆಸಲಾಗಿದೆ. ಇದನ್ನು ಕರಗಿಸಿ ಲಾಭದಾಯಕವೆನಿಸುವ ಉತ್ಪನ್ನಗಳನ್ನು ಮಾಡಲು ಆಗುವುದಿಲ್ಲ. ರೇಜರ್ ಬ್ಲೇಡ್ ತಯಾರಿಕೆಯೂ ಸಾಧ್ಯವಿಲ್ಲ.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್