ಎಚ್ಚರ; ಕೋಟಕ್ ಮ್ಯೂಚುವಲ್ ಫಂಡ್ ಹೆಸರಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ನಕಲಿ ಖಾತೆಗಳು

| Updated By: Ganapathi Sharma

Updated on: Nov 25, 2022 | 2:37 PM

ಬ್ರ್ಯಾಂಡ್​ ಹೆಸರು, ಲೋಗೊ, ವಕ್ತಾರರ ಐಡೆಂಟಿಟಿಯನ್ನು ಕೆಲವು ಸಾಮಾಜಿಕ ಮಾಧ್ಯಮಗಳಲ್ಲಿ ಹಾಗೂ ಟೆಲಿಗ್ರಾಂ ಗ್ರೂಪ್​ಗಳಲ್ಲಿ ದುರ್ಬಳಕೆ ಮಾಡಿರುವುದು ಗಮನಕ್ಕೆ ಬಂದಿದೆ ಎಂದು ಪ್ರಕಟಣೆಯಲ್ಲಿ ಕಂಪನಿ ಉಲ್ಲೇಖಿಸಿದೆ.

ಎಚ್ಚರ; ಕೋಟಕ್ ಮ್ಯೂಚುವಲ್ ಫಂಡ್ ಹೆಸರಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ನಕಲಿ ಖಾತೆಗಳು
ಕೋಟಕ್ ಮ್ಯೂಚವಲ್ ಫಂಡ್
Image Credit source: Kotak mutual fund
Follow us on

ಮುಂಬೈ: ಕೋಟಕ್ ಮ್ಯೂಚವಲ್ ಫಂಡ್ (Kotak Mutual Fund) ಹೆಸರಿನಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ (Social Media) ಕೆಲವು ನಕಲಿ ಖಾತೆಗಳು ತೆರೆದಿರುವುದು ಗಮನಕ್ಕೆ ಬಂದಿದೆ. ನಕಲಿ ಟೆಲಿಗ್ರಾಂ ಗ್ರೂಪ್​ಗಳೂ ಕಾರ್ಯಾಚರಿಸುತ್ತಿರುವುದು ಗೊತ್ತಾಗಿದೆ. ಹೂಡಿಕೆದಾರುರು, ಉದ್ಯಮ ಪಾಲುದಾರರು ಹಾಗೂ ಸಾರ್ವಜನಿಕರು ಈ ಕುರಿತು ಎಚ್ಚರಿಕೆ ವಹಿಸಬೇಕು ಎಂದು ಮ್ಯೂಚುವಲ್ ಫಂಡ್ ಕಂಪನಿ ತಿಳಿಸಿದೆ. ‘ಎಚ್ಚರದಿಂದಿರಿ. ನಕಲಿ ಟೆಲಿಗ್ರಾಂ ಗ್ರೂಪ್​ಗಳು ಮತ್ತು ಇತರ ಸಾಮಾಜಿಕ ಮಾಧ್ಯಮ ಖಾತೆಗಳಿಂದ ವಂಚನೆಗೆ ಒಳಗಾಗಬೇಡಿ’ ಎಂದು ಹೂಡಿಕೆದಾರರು, ಉದ್ಯಮ ಪಾಲುದಾರರನ್ನು ಉದ್ದೇಶಿಸಿ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ಕೋಟಕ್ ಮಹೀಂದ್ರಾ ಅಸೆಟ್​ ಮ್ಯಾನೇಜ್​ಮೆಂಟ್ ಕಂಪನಿ ತಿಳಿಸಿದೆ.

ಬ್ರ್ಯಾಂಡ್​ ಹೆಸರು, ಲೋಗೊ, ವಕ್ತಾರರ ಐಡೆಂಟಿಟಿಯನ್ನು ಕೆಲವು ಸಾಮಾಜಿಕ ಮಾಧ್ಯಮಗಳಲ್ಲಿ ಹಾಗೂ ಟೆಲಿಗ್ರಾಂ ಗ್ರೂಪ್​ಗಳಲ್ಲಿ ದುರ್ಬಳಕೆ ಮಾಡಿರುವುದು ಗಮನಕ್ಕೆ ಬಂದಿದೆ ಎಂದು ಪ್ರಕಟಣೆಯಲ್ಲಿ ಕಂಪನಿ ಉಲ್ಲೇಖಿಸಿದೆ.

‘ಕೋಟಕ್ ಮ್ಯೂಚುವಲ್ ಫಂಡ್ ಒಂದು ಅಧಿಕೃತ ಟೆಲಿಗ್ರಾಂ ಹ್ಯಾಂಡಲ್​ ಅನ್ನು ಮಾತ್ರ (https://t.me/kotakmutualfund) ಒಳಗೊಂಡಿದೆ. ಕಂಪನಿಯು ಹೂಡಿಕೆದಾರರನ್ನು ಯಾವುದೇ ರೀತಿಯಲ್ಲೂ ಅಸಹ ಹೂಡಿಕೆಗೆ ಪ್ರೇರೇಪಿಸಿ ಹಾದಿ ತಪ್ಪಿಸುವ ಕೃತ್ಯ ಎಸಗುವುದಿಲ್ಲ. ಮ್ಯೂಚುವಲ್ ಫಂಡ್ ಹೂಡಿಕೆ ಮಾರುಕಟ್ಟೆ ರಿಸ್ಕ್​ಗಳಿಗೆ ಕಾಣರವಾಗಬಹುದು. ಹೂಡಿಕೆ ಮಾಡುವ ಮುನ್ನ ಅದಕ್ಕೆ ಸಂಬಂಧಿಸಿದ ಎಲ್ಲ ವಿವರಗಳನ್ನು ಓದಿಕೊಂಡು, ಡಾಖಲೆಗಳನ್ನು ಗಮನಿಸಬೇಕು’ ಎಂದು ಕಂಪನಿ ಮನವಿ ಮಾಡಿದೆ.

‘ವಂಚನೆಯ ಗ್ರೂಪ್​ಗಳ ಬಗ್ಗೆ ಬಳಕೆದಾರರು ಮತ್ತು ಹೂಡಿಕೆದಾರರು ದಯಮಾಡಿ abuse@telegram.org ಗೆ ರಿಪೋರ್ಟ್ ಮಾಡಿ. mutual@kotak.com ಗೆ ಸಂದೇಶ ಕಳುಹಿಸಿ ಗಮನಕ್ಕೆ ತನ್ನಿ’ ಎಂದು ಕೋಟಕ್ ಮ್ಯೂಚವಲ್ ಫಂಡ್ ವಿನಂತಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ