Kumara Mangalam Birla: ಕೊರೊನಾ ಕಾಲದಲ್ಲಿ ಕುಮಾರ ಮಂಗಲಂ ಬಿರ್ಲಾ ಬಿ-ಸ್ಕೂಲ್​ ವಿದ್ಯಾರ್ಥಿಗಳಿಗೆ ಹೇಳಿದ 4 ಪಾಠ

ಆದಿತ್ಯ ಬಿರ್ಲಾ ಸಮೂಹದ ಅಧ್ಯಕ್ಷ ಕುಮಾರ ಮಂಗಲಂ ಬಿರ್ಲಾ ಅವರು ಶನಿವಾರದಂದು ಐಐಎಂ-ಎ ಪದವಿ ಪ್ರಮಾಣ ವರ್ಚುವಲ್ ಸಮಾರಂಭದಲ್ಲಿ ನಾಲ್ಕು ವಾಸ್ತವಿಕ ಪಾಠವನ್ನು ಮಾಡಿದ್ದಾರೆ. ಏನದು ಎಂಬ ವಿವರ ಇಲ್ಲಿದೆ.

Kumara Mangalam Birla: ಕೊರೊನಾ ಕಾಲದಲ್ಲಿ ಕುಮಾರ ಮಂಗಲಂ ಬಿರ್ಲಾ ಬಿ-ಸ್ಕೂಲ್​ ವಿದ್ಯಾರ್ಥಿಗಳಿಗೆ ಹೇಳಿದ 4 ಪಾಠ
ಐಐಎಂ-ಎ (ಸಂಗ್ರಹ ಚಿತ್ರ)
Follow us
Srinivas Mata
|

Updated on:May 08, 2021 | 10:25 PM

ನವದೆಹಲಿ: ಕಳೆದ ಒಂದು ವರ್ಷದ ಈ ಬಿಕ್ಕಟ್ಟು ಕೇವಲ ಸರ್ಕಾರದ ಪಾತ್ರದ ಮೇಲಷ್ಟೇ ಬೆಳಕನ್ನು ಚೆಲ್ಲಿಲ್ಲ. ಅದರ ಜತೆಗೆ ಸಮಾಜ, ಕಂಪೆನಿಗಳು, ವೈಯಕ್ತಿಕಕವಾಗಿಯೂ ಉತ್ತಮವಾದದ್ದನ್ನು ಹೊರತರುವಲ್ಲಿ ಪಾತ್ರಗಳು ಹೇಗೆ ಮುಖ್ಯ ಆಗುತ್ತದೆ ಎಂಬುದನ್ನೂ ತೋರಿಸಿಕೊಟ್ಟಿದೆ ಎಂದು ಆದಿತ್ಯ ಬಿರ್ಲಾ ಸಮೂಹದ ಅಧ್ಯಕ್ಷ ಕುಮಾರ ಮಂಗಲಂ ಬಿರ್ಲಾ ಅವರು ಶನಿವಾರದಂದು ಐಐಎಂ- ಅಹ್ಮದಾಬಾದ್​ ಸಮಾರಂಭದಲ್ಲಿ ಹೇಳಿದ್ದಾರೆ. ಅಂದಹಾಗೆ ಐಐಎಂ-ಎ ಮಂಡಳಿಯ ಅಧ್ಯಕ್ಷರೂ ಆಗಿರುವ ಬಿರ್ಲಾ, ಟಾಪ್ ಬಿಜಿನೆಸ್ ಸ್ಕೂಲ್​ನ ಪದವಿ ವಿದ್ಯಾರ್ಥಿಗಳಿಗೆ ನಾಲ್ಕು ಪಾಠವನ್ನು ಹೇಳಿದ್ದಾರೆ.

ಯಶಸ್ವಿ ಆಗೋದು ಹೇಗೆ, ಸಹಾನುಭೂತಿ ಮತ್ತು ವಿವಿಧ ಆಯಾಮಗಳ ಬಗ್ಗೆ ಮಾತನಾಡಿದ್ದಾರೆ. ಐಐಎಂ-ಎ ಪದವಿ ಪ್ರಮಾಣ (ಕಾನ್ವೊಕೇಷನ್) ವರ್ಚುವಲ್ ಸಮಾರಂಭದಲ್ಲಿ ಮಾತನಾಡಿದ ಅವರು, ಐಕ್ಯೂ (ಇಂಟೆಲಿಜೆನ್ಸ್ ಕೋಶೆಂಟ್) ಮತ್ತು ಇಕ್ಯೂ (ಎಮೋಷನಲ್ ಕೋಶೆಂಟ್) ಎರಡನ್ನೂ ಪ್ರತ್ಯೇಕ ಗುಣಗಳಾಗಿ ನೋಡಲು ಇಷ್ಟಪಡುವುದಿಲ್ಲ. ಅದರ ಬದಲಿಗೆ ಸಂಪೂರ್ಣ ವ್ಯಕ್ತಿತ್ವಕ್ಕೆ ಅವು ಪೂರಕ ಗುಣಗಳಾಗಿರುತ್ತವೆ ಎಂದಿದ್ದಾರೆ. ಅಂದ ಹಾಗೆ ಕುಮಾರ ಮಂಗಲಂ ಬಿರ್ಲಾ ಅವರು ಹೇಳಿದ ಆ ನಾಲ್ಕು ಸಂದೇಶಗಳು ಇಲ್ಲಿವೆ:

1) ನಿಮ್ಮ ಅತಿ ಮುಖ್ಯ ಗುರಿಯ ವ್ಯಾಖ್ಯಾನ ಮಾಡಿಕೊಳ್ಳಿ ಜಾಗತಿಕ ಸಾಂಕ್ರಾಮಿಕ ಬಿಕ್ಕಟ್ಟು ಮತ್ತು ಕಳೆದ ಹನ್ನೆರಡು ತಿಂಗಳು ಕೇವಲ ಸರ್ಕಾರದ ಜವಾಬ್ದಾರಿ ಮೇಲೆ ಮಾತ್ರ ಬೆಳಕು ಚೆಲ್ಲಿಲ್ಲ. ಆದರೆ ನಮ್ಮೆಲ್ಲರಿಗಾಗಿ ಸಮಾಜ, ಕಂಪೆನಿಗಳು ಮತ್ತು ವೈಯಕ್ತಿಕವಾಗಿ ಉತ್ತಮವಾದದ್ದನ್ನು ಮಾಡುತ್ತಿದ್ದಾರೆ. ಅಲ್ಪಾವಧಿಯನ್ನು ಏನಾಗಬಹುದು ಎಂದು ಅಂದಾಜು ಮಾಡುವಂಥ ಸಮಯ ಇದು. ಸಿಕ್ಕಾಪಟ್ಟೆ ಏರಿಳಿತಗಳಿವೆ. ಮತ್ತು ಆದ್ದರಿಂದ ಈ ಹಿಂದೆಂದಿಗಿಂತಲೂ ನೀವು ಏನಾಗಬೇಕು ಮತ್ತು ನಿಮ್ಮ ಸಿದ್ಧಾಂತಗಳೇನು ಎಂದು ಈಗ ವ್ಯಾಖ್ಯಾನಿಸಿಕೊಳ್ಳಬೇಕಿದೆ. ನೀವೆಲ್ಲಿಗೆ ಸೂಕ್ತರಾಗ್ತೀರಿ, ನೀವು ಯಾವುದಕ್ಕೆ ಹೆಸರಾಗಬೇಕು? ಆಲೋಚನೆ ಮಾಡುವುದಕ್ಕೆ ಹಾಗೂ ಉತ್ತರವನ್ನು ವ್ಯಾಖ್ಯಾನಿಸಿಕೊಳ್ಳುವುದಕ್ಕೆ ಉತ್ತಮ ಸಮಯ ಇದೇ.

2) ನಿಮ್ಮ 20ರ ಹರೆಯದಲ್ಲೇ ಪ್ರಯೋಗಗಳನ್ನು ಮಾಡಿ ನೀವು ಏನಾಗಬೇಕು, ನಿಮಗೆ ಏನು ಬೇಕು ಎಂಬ ಬಗ್ಗೆ ಸ್ಪಷ್ಟವಾಗಿ ಗೊತ್ತಾದ ಮೇಲೆ, ಅಲ್ಪಾವಧಿಯಲ್ಲಿ, ನಿಮ್ಮ ಮುಂದಿನ ಚಾಪ್ಟರ್​ಗೆ 20ರ ಹರೆಯದಲ್ಲೇ ಹಾದಿಯನ್ನು ಕಂಡುಕೊಳ್ಳಬೇಕು. ಒಬ್ಬ ಬುದ್ಧಿವಂತ ಉದ್ಯಮಿ ಹೇಳಿದಂತೆ, ರಿಸ್ಕ್ ತೆಗೆದುಕೊಳ್ಳೋದು ಅಂತಾರಲ್ಲ, ಅದರೊಳಗೇ ವಿಫಲವಾಗುವ ಸಾಧ್ಯತೆ ಜಾಸ್ತಿ. ಇಲ್ಲದಿದ್ದರೆ ಅದನ್ನು ಖಚಿತವಾಗಿ ತೆಗೆದುಕೊಳ್ಳುವುದು ಅನ್ನಲಾಗುತ್ತಿತ್ತು. ಬಹಳ ಜನ ಪದವೀಧರರು ಕಾರ್ಪೊರೇಟ್ ಜಗತ್ತು ಪ್ರವೇಶಿಸುವುದು, ಇದನ್ನು ನಾನು ಮಾಡಬೇಕು ಎಂಬ ಧೋರಣೆಯೊಂದಿಗೆ ಅಂತಲೇ ಎಂದು ನಾನು ಅಂದುಕೊಳ್ತೇನೆ. ನಾನು ಪ್ರಯೋಗ ಅಂದಾಗ, ಅದರರ್ಥ ನಿಮ್ಮದೇ ಸ್ವಂತ ಉದ್ಯಮ ಅಥವಾ ಕಂಪೆನಿ ಶುರು ಮಾಡಿ ಅಂತಲ್ಲ. ಅದರ ಬದಲಿಗೆ ಫ್ಯಾಕ್ಟರೀಲಿ ಕೆಲಸ ಮಾಡಿ, ಬೇರೆ ದೇಶದಲ್ಲಿ ಕೆಲಸ ಮಾಡಿ, ವೈವಿಧ್ಯಮಯವಾದ ವಲಯಗಳಲ್ಲಿ ದುಡಿಯಿರಿ, ನಿಮಗೆ ಪರಿಚಯವೇ ಇಲ್ಲದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಿ. ನಿಮ್ಮ ವೃತ್ತಿ ಬದುಕಲ್ಲಿ ಮೇಲೇರುತ್ತಾ ಹೋದಂತೆ ಪ್ರಯೋಗ ಮಾಡುವುದಕ್ಕೆ ತೆರಬೇಕಾದ ಬೆಲೆ ಜಾಸ್ತಿ ಆಗುತ್ತಾ ಹೋಗುತ್ತದೆ. ಬೇಗ ಆರಂಭಿಸಿ ಮತ್ತು ಪ್ರಯೋಗ ಮಾಡಿ. ಏನನ್ನಾದರೂ ತತ್ ಕ್ಷಣವೇ ಮಾಡಿ. ಆ ತಕ್ಷಣದ ಪ್ರವೃತ್ತಿಯ ಮೇಲೆ ನಿಯಂತ್ರಣ ಇಟ್ಟುಕೊಳ್ಳಿ, ಜತೆಗೆ ಸಕಾರಾತ್ಮಕತೆ ಮತ್ತು ಕ್ರಿಯೇಟಿವಿಟಿ ಇರಲಿ. ಯಾವುದರ ಮೇಲೆ ಗಮನ ಇರಬೇಕು ಎಂಬ ಆಲೋಚನೆ ಇರಲಿ. ನಿಮ್ಮ ಅನುಭವ ಮತ್ತು ಪ್ರಯೋಗ ಎರಡನ್ನೂ ಒಗ್ಗೂಡಿಸುವ ಆ ತಂತುವಿನ ಬಗ್ಗೆ ತಿಳಿಯಿರಿ. ಇದು ನನ್ನ ಮುಂದಿನ ಅಂಶಕ್ಕೆ ಕರೆತಂದಿದೆ.

3) ನಿಮ್ಮದೇ ಸ್ವಂತ ಸಾಮರ್ಥ್ಯವನ್ನು ಬೆಳೆಸಿಕೊಳ್ಳಿ ದಂತಕಥೆಯಾಗಿರುವ ಕಲಾವಿದ ವ್ಯಾನ್​ ಗೋ ಹೇಳಿರುವಂಥದ್ದು ಇದು: ಅದ್ಭುತವಾದದ್ದು ಹಾಗೇ ತಕ್ಷಣಕ್ಕೆ ಆಗಿಬಿಡುವುದಿಲ್ಲ. ಸಣ್ಣಸಣ್ಣವೆಲ್ಲ ಒಗ್ಗೂಡಿದ್ದರ ಫಲವಾಗಿ ಅದು ಆಗಿರುತ್ತದೆ. ನಿಮ್ಮ ಸಾಮರ್ಥ್ಯ ಅಂದರೆ ಅದು ನಿಮ್ಮದೇ ಒಟ್ಟುಹಾಕಿದ ಅನುಭವಗಳು. ಅಂದಹಾಗೆ ಅನುಭವಗಳನ್ನ ಕಲಿಕೆಯ ಒಂದೊಂದು ಘಟಕಕಗಳು ಅಂದುಕೊಳ್ಳಿ. ಒಂದು ವರ್ಷದಲ್ಲಿ ನೀವು ಹೆಚ್ಚು ಗಳಿಸಿಕೊಂಡಿರಿ ಅಂದರೆ, ಅದು ಹೆಚ್ಚು ಮೌಲ್ಯಯುತ. ಬೇಗ ಸೇರಿಸಿಕೊಳ್ಳುತ್ತಾ ಹೋದರೆ, ಪುಟ 4 ಮತ್ತು 5 ಅಂತ ಸೇರಿಸಿಕೊಳ್ತೀರಿ. ಒಂದಕ್ಕೊಂದು ಸೇರಿಕೊಳ್ಳುತ್ತಾ ಹೋಗುತ್ತದೆ. ನೆನಪಿರಲಿ, ನಿಮ್ಮ ಕಲಿಕೆಯ ಸಾಮರ್ಥ್ಯ ಇದೆಯಲ್ಲಾ ಅದರ ಸ್ವಭಾವ ಎಲಾಸ್ಟಿಕ್​ನಂತೆ. ಜಾಸ್ತಿಯಾದಂತೆಲ್ಲ ಹಿಗ್ಗುತ್ತಾ ಹೋಗುತ್ತದೆ.

4) ಇಂಟೆಲಿಜೆನ್ಸ್ ಕೋಶೆಂಟ್​ಗೆ ಭಾವನೆಯನ್ನೂ ಸೇರಿಸಿ ನನಗೆ ಗೊತ್ತು, ಕಳೆದ 2 ವರ್ಷದಲ್ಲಿ ಹಗಲು- ರಾತ್ರಿಗಳನ್ನು ಒಂದು ಮಾಡಿ ಕಠಿಣಾತಿಕಠಿಣವಾದ ಉದ್ಯಮದ ಸಮಸ್ಯೆಗಳನ್ನು ಬಗೆಹರಿಸಿರುತ್ತೀರಿ. ವಾಸ್ತವ ಏನೆಂದರೆ, ಸ್ಪ್ರೆಡ್​ಶೀಟ್ ಮೂಲಕ ಉದ್ಯಮ ಕಟ್ಟುವುದಕ್ಕೆ ನಿಮ್ಮಿಂದ ಸಾಧ್ಯವಿಲ್ಲ. ಕಾರ್ಖಾನೆಯ ಕಾರ್ಮಿಕರು ಅನಾರೋಗ್ಯಕ್ಕೆ ತುತ್ತಾಗುತ್ತಿರುವುದರಿಂದ ಈ ವರ್ಷ ಬಹಳ ವಿಸ್ತೃತವಾದ ಉದ್ಯಮದ ಯೋಜನೆಗಳನ್ನು ತೆರೆದಿಡಲಾಗುತ್ತಿದೆ. ವಲಸೆ ಕಾರ್ಮಿಕರು ಮೌನವಾಗಿ ವಾಪಸಾಗುತ್ತಿದ್ದಂತೆ ಸಪ್ಲೈ ಚೈನ್ (ಪೂರೈಕೆ ಜಾಲ) ಅಸ್ಥಿರವಾದವು. ಆದ್ದರಿಂದ, ನೀವು ಯೋಚಿಸುವ ರೀತಿಯಲ್ಲಿ ಒಂದೇ ಆಯಾಮವನ್ನು ತಂದುಕೊಳ್ಳಬೇಡಿ. ನಿಮ್ಮ ಆಲೋಚನೆಗೆ ಇತರ ಆಯಾಮಗಳನ್ನು ಸೇರಿಸುವ ಅಗತ್ಯವಿದೆ. ಮುಖ್ಯವಾಗಿ ಸಹಾನುಭೂತಿ ಮತ್ತು ಅನುಕಂಪದ ಅಗತ್ಯ ಇದೆ. ಐಕ್ಯೂ ಮತ್ತು ಇಕ್ಯೂ ಅನ್ನು ನಾನು ಪ್ರತ್ಯೇಕ ಗುಣಗಳು ಎಂಬಂತೆ ನೋಡುವುದಿಲ್ಲ, ಆದರೆ ವ್ಯಕ್ತಿತ್ವವನ್ನು ಆರೋಗ್ಯಕರವಾಗಿಸುವ ಪೂರಕ ಗುಣಲಕ್ಷಣಗಳು ಇವು.

ಇದನ್ನೂ ಓದಿ: Gold investments: ಭಾರತದ ಯುವಜನತೆಗೆ ಚಿನ್ನದ ಹೂಡಿಕೆ ಮೇಲಿನ ವ್ಯಾಮೋಹ ಉಳಿದಿದೆಯಾ?

( Aditya Birla group chairman Kumara Mangalam Birla shared 4 lessons with IIM-A students on convocation day)

Published On - 10:23 pm, Sat, 8 May 21

ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್