
ನವದೆಹಲಿ, ಮಾರ್ಚ್ 26: ರೇಷನ್ ಕಾರ್ಡ್ ಹೊಂದಿರುವವರು ಇ-ಕೆವೈಸಿ (Ration Card e-KYC) ಮಾಡುವುದು ಕಡ್ಡಾಯವಾಗಿದೆ. ಕೇಂದ್ರ ಸರ್ಕಾರ ಮಾರ್ಚ್ 31ಕ್ಕೆ ಡೆಡ್ಲೈನ್ ನಿಗದಿ ಮಾಡಿದೆ. ಮುಂದಿನ ಮಂಗಳವಾರದೊಳಗೆ ರೇಷನ್ ಕಾರ್ಡ್ಗೆ ಆಧಾರ್ ದಾಖಲೆ ಸಲ್ಲಿಸದಿದ್ದರೆ ನಿಮ್ಮ ಪಡಿತರ ಸೌಲಭ್ಯ ಸ್ಥಗಿತಗೊಳ್ಳಬಹುದು. ರೇಷನ್ ಕಾರ್ಡ್ ದುರ್ಬಳಕೆ ತಡೆಯಲು, ಸರಿಯಾದ ಫಲಾನುಭವಿಗಳನ್ನು ಗುರುತಿಸಲು ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿದೆ.
ಈ ಹಂತಗಳಾದರೆ ಇ ಕೆವೈಸಿ ಪೂರ್ಣವಾಗುತ್ತದೆ.
ಇದನ್ನೂ ಓದಿ: ಗೋಲ್ಡ್ ಮಾನಿಟೈಸೇಶನ್ ಸ್ಕೀಮ್, 2 ಪ್ಲಾನ್ ನಿಲ್ಲಿಸಿದ ಸರ್ಕಾರ; ಏನಿದು ಚಿನ್ನ ನಗದೀಕರಣ ಯೋಜನೆ?
ಆನ್ಲೈನ್ನಲ್ಲಿ ಇ-ಕೆವೈಸಿ ಸಲ್ಲಿಸಲು ಕಷ್ಟವಾಗುತ್ತಿದ್ದರೆ ಆಫ್ಲೈನ್ನಲ್ಲೇ ಮಾಡಬಹುದು. ನಿಮ್ಮ ಸ್ಥಳೀಯ ರೇಷನ್ ಕಾರ್ಡ್ ಕಚೇರಿ ಅಥವಾ ಕಾಮನ್ ಸರ್ವಿಸ್ ಸೆಂಟರ್ನಲ್ಲಿ (Common Service Centre) ಇಕೆವೈಸಿ ಸಲ್ಲಿಸಬಹುದು.
ನಿಮ್ಮ ರೇಷನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ದಾಖಲೆಗಳನ್ನು ಕೊಂಡೊಯ್ಯಬೇಕು. ಫಿಂಗರ್ ಪ್ರಿಂಟ್ ಅಥವಾ ಐರಿಸ್ ಸ್ಕ್ಯಾನ್ ಮೂಲಕ ಬಯೋಮೆಟ್ರಿಕ್ಸ್ ವೆರಿಫೈ ಮಾಡಬಹುದು. ಇದಾದ ಬಳಿಕ ಇ-ಕೆವೈಸಿ ಪೂರ್ಣಗೊಂಡು ನಿಮಗೆ ದೃಢೀಕರಣ ಪತ್ರ ಸಿಗುತ್ತದೆ.
ರೇಷನ್ ಕಾರ್ಡ್ಗೆ ಇಕೆವೈಸಿ ಸಲ್ಲಿಸಲು ಸದ್ಯಕ್ಕೆ ಮಾರ್ಚ್ 31ಕ್ಕೆ ಗಡುವು ಕೊಡಲಾಗಿದೆ. ಕಾಲಾವಕಾಶ ಮತ್ತಷ್ಟು ವಿಸ್ತರಣೆ ಆಗುತ್ತದಾ ಗೊತ್ತಿಲ್ಲ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ