LIC Policyholders: ಐಪಿಒಗಾಗಿ ಪಾಲಿಸಿ ಜತೆಗೆ ಆಧಾರ್ ಜೋಡಣೆ ಮಾಡಲು ಪಾಲಿಸಿದಾರರಿಗೆ ಎಲ್​ಐಸಿ ಸೂಚನೆ

| Updated By: Srinivas Mata

Updated on: Dec 03, 2021 | 1:54 PM

ಭಾರತೀಯ ಜೀವ ವಿಮಾ ನಿಗಮದ ಐಪಿಒಗೆ ಮೀಸಲು ಇಡುವ ಉದ್ದೇಶದಿಂದ ಪಾಲಿಸಿ ಜತೆಗೆ ಆಧಾರ್​ ಜೋಡಣೆ ಮಾಡುವಂತೆ ಪಾಲಿಸಿದಾರರಿಗೆ ಸೂಚಿಸಲಾಗಿದೆ.

LIC Policyholders: ಐಪಿಒಗಾಗಿ ಪಾಲಿಸಿ ಜತೆಗೆ ಆಧಾರ್ ಜೋಡಣೆ ಮಾಡಲು ಪಾಲಿಸಿದಾರರಿಗೆ ಎಲ್​ಐಸಿ ಸೂಚನೆ
ಆಧಾರ್ (ಸಂಗ್ರಹ ಚಿತ್ರ)
Follow us on

ಇನ್ಷೂರೆನ್ಸ್ ಕಂಪೆನಿಯಾದ ಭಾರತೀಯ ಜೀವ ನಿಗಮದಿಂದ ಪಾಲಿಸಿದಾರರಿಗೆ ಸೂಚನೆಯೊಂದನ್ನು ನೀಡಿದ್ದು, ಯಾರ ಬಳಿ ಡಿಮ್ಯಾಟ್​ ಖಾತೆ ಇದೆಯೋ ಅಂಥವರು ತಮ್ಮ ಆದಾಯ ತೆರಿಗೆಯ ಪ್ಯಾನ್​ ಅನ್ನು ಪಾಲಿಸಿಯನ್ನು ಜೋಡಣೆ ಮಾಡುವಂತೆ ತಿಳಿಸಿದೆ. ಹಾಗೆ ಮಾಡುವ ಮೂಲಕವಾಗಿ ಮೀಸಲಿಟ್ಟ ವಿಭಾಗದಲ್ಲಿ ಐಪಿಒಗೆ ಅರ್ಜಿ ಸಲ್ಲಿಸಬಹುದು. ಈ ತನಕ ಯಾರ ಬಳಿ ಡಿಮ್ಯಾಟ್ ಖಾತೆ ಇಲ್ಲವೋ ಒಂದು ಖಾತೆ ತೆರೆದು, ಪಾಲಿಸಿಗಳಿಗೆ ಆಧಾರ್ ಜೋಡಣೆ ಮಾಡಬಹುದು. ವ್ಯವಸ್ಥೆ ಮಾಡಿಕೊಳ್ಳುವ ಮೂಲಕ ಈ ವರ್ಗದಡಿಯಲ್ಲಿ ಅರ್ಜಿ ಸಲ್ಲಿಸಬಹುದು. ಸರ್ಕಾರವು ಎಲ್​ಐಸಿಯಿಂದ ಬಂಡವಾಳ ಹಿಂತೆಗೆ​ತದಿಂದ 1 ಲಕ್ಷ ಕೋಟಿ ರೂಪಾಯಿ ಸಂಗ್ರಹಿಸುವುದಕ್ಕೆ ಗುರಿ ಇರಿಸಿಕೊಂಡಿದೆ. ಮುಂದಿನ ಕೆಲವು ತಿಂಗಳಲ್ಲಿ ಎಲ್ಐಸಿ ಐಪಿಒ ಬಂಡವಾಳ ಮಾರುಕಟ್ಟೆಗೆ ಬಿಡುಗಡೆ ಆಗಲಿದೆ.

ಖಚಿತವಾಗಿಯೂ ಭಾರತೀಯ ಜೀವ ನಿಗಮದ ಈ ಐಪಿಒ ಭಾರತದಲ್ಲಿ ಅತಿದೊಡ್ಡ ಐಪಿಒ ಆಗಲಿದೆ. ಅಧಿಕೃತ ಮಾಹಿತಿ ಪ್ರಕಾರ, ಈಚೆಗೆ ಬಿಡುಗಡೆ ಮಾಡಿದ ಐಪಿಒದಲ್ಲಿ ಪೇಟಿಎಂನಿಂದ 18,300 ಕೋಟಿ ರೂಪಾಯಿ ಸಂಗ್ರಹ ಮಾಡಲಾಗಿತ್ತು. ಆ ಮೊತ್ತವನ್ನು ಮೀರಿಸಿ, ಎಲ್​ಐಸಿ ಐಪಿಒ ಬರಲಿದೆ.

ಐಪಿಒ ಸಂದರ್ಭದಲ್ಲಿ ಪಾಲಿಸಿದಾರರಿಗೆ ಮೀಸಲು ಇಡುವ ಉದ್ದೇಶಕ್ಕಾಗಿ ಈ ವರ್ಷದ ಆರಂಭದಲ್ಲಿ ಕೇಂದ್ರ ಸರ್ಕಾರದಿಂದ LIC ಕಾಯ್ದೆ, 1956ಕ್ಕೆ ತಿದ್ದುಪಡಿ ತಂದಿದೆ. ಜಾಹೀರಾತು ಮೂಲಕವಾಗಿ ಪಾಲಿಸಿಯನ್ನು ಆಧಾರ್ ಜತೆಗೆ ಹೇಗೆ ಜೋಡಣೆ ಮಾಡಬೇಕು ಎಂಬುದರ ಬಗ್ಗೆ ಎಲ್​ಐಸಿಯಿಂದ ಪಾಲಿಸಿದಾರರಿಗೆ ಮಾಹಿತಿ ನೀಡಲಾಗಿದೆ.

ಇದನ್ನೂ ಓದಿ: LIC IPO: ಎಲ್​ಐಸಿ ಐಪಿಒದಿಂದ ಉದ್ಯೋಗ ನಷ್ಟ, ಸಾಮಾಜಿಕ ವೆಚ್ಚ ಎಂದು ಎಚ್ಚರಿಸಿದ ಕಾರ್ಮಿಕ ಒಕ್ಕೂಟ