AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

LIC Results: ಎಲ್​ಐಸಿಯ ಇಂದಿನ ಹಣಕಾಸು ಫಲಿತಾಂಶದಿಂದ ಏನನ್ನು ನಿರೀಕ್ಷಿಸಬಹುದು? ಹೂಡಿಕೆದಾರರು ಷೇರು ಖರೀದಿಸಬಹುದಾ?

ಎಲ್​ಐಸಿ ಹಣಕಾಸು ಫಲಿತಾಂಶ ಇಂದು (ಮೇ 30, 2022) ಪ್ರಕಟ ಆಗಲಿದೆ. ಹೂಡಿಕೆದಾರರು ಏನನ್ನು ನಿರೀಕ್ಷೆ ಮಾಡಬಹುದು ಎಂಬ ವಿವರ ಇಲ್ಲಿದೆ.

LIC Results: ಎಲ್​ಐಸಿಯ ಇಂದಿನ ಹಣಕಾಸು ಫಲಿತಾಂಶದಿಂದ ಏನನ್ನು ನಿರೀಕ್ಷಿಸಬಹುದು? ಹೂಡಿಕೆದಾರರು ಷೇರು ಖರೀದಿಸಬಹುದಾ?
ಸಾಂದರ್ಭಿಕ ಚಿತ್ರ
Srinivas Mata
|

Updated on:May 30, 2022 | 11:15 AM

Share

ಎಲ್​ಐಸಿ (LIC) ಷೇರುದಾರರಿಗೆ ಮೇ 30ನೇ ತಾರೀಕಿನ ಸೋಮವಾರ ಬಹಳ ಮುಖ್ಯವಾದ ದಿನ. ಏಕೆಂದರೆ ಮೇ 17ನೇ ತಾರೀಕಿನಂದು ಈ ಷೇರು ಲಿಸ್ಟಿಂಗ್ ಆಗಿದ್ದು ಐಪಿಒದಲ್ಲಿ ವಿತರಿಸಿದ್ದಕ್ಕಿಂತ ಕಡಿಮೆ ಬೆಲೆಗೆ. ಆ ನಂತರವಾದರೂ ಚೇತರಿಸಿಕೊಂಡಿತಾ ಅಂದರೆ, ಹೂಡಿಕೆದಾರರ ನಿರೀಕ್ಷೆಗೆ ಇರಲಿ, ರಿಯಾಯಿತಿಯಲ್ಲಿ ವಿತರಿಸಿದ್ದ ದರದ ಬಳಿಯೂ ಷೇರಿನ ಬೆಲೆ ಇಲ್ಲ. ಸದ್ಯಕ್ಕೆ ಪ್ರತಿ ಷೇರಿಗೆ 800 ರೂಪಾಯಿಗಿಂತ ಸ್ವಲ್ಪ ಮೇಲ್ಮಟ್ಟದಲ್ಲಿ ವಹಿವಾಟು ನಡೆಯುತ್ತಿದೆ. ಸೋಮವಾರದಂದು ಪ್ರಕಟವಾಗುವ ಫಲಿತಾಂಶದಿಂದ 2021-22ರ ಪೂರ್ಣ ಅವಧಿಯ ಹಣಕಾಸಿನ ಫಲಿತಾಂಶ ಹಾಗೂ ಜನವರಿಯಿಂದ ಮಾರ್ಚ್ ತನಕದ ನಾಲ್ಕನೇ ತ್ರೈಮಾಸಿಕದ ಫಲಿತಾಂಶ ಗೊತ್ತಾಗಲಿದೆ. ಇನ್ನು ಇದೇ ವೇಳೆ ಡಿವಿಡೆಂಡ್ ಘೋಷಣೆ ಮಾಡಬಹುದು, ಅದರಲ್ಲೂ ಉತ್ತಮವಾದ ಡಿವಿಡೆಂಡ್ ಇದಾಗಿರಲಿದೆ ಎಂಬ ನಿರೀಕ್ಷೆ ಹೂಡಿಕೆದಾರರದು. ಅದಕ್ಕೆ ಕಾರಣ ಕೂಡ ಸ್ಪಷ್ಟ; ಕಳೆದ ಬಾರಿ ಎಲ್​ಐಸಿಯಿಂದ ಡಿವಿಡೆಂಡ್ ಪಾವತಿ ಮಾಡಿಲ್ಲ. ಹಾಗಿದ್ದರೆ ಷೇರುದಾರರು ಈಗಿನ ದರದಲ್ಲಿ ಎಲ್​ಐಸಿ ಮೇಲೆ ಹೂಡಿಕೆ ಮಾಡಬಹುದಾ? ಈ ಪ್ರಶ್ನೆಗೆ ಮಾರುಕಟ್ಟೆ ತಜ್ಞರಾದ ಕೆ.ಜಿ.ಕೃಪಾಲ್ ಅವರು ಟಿವಿ9 ಡಿಜಿಟಲ್ ಕನ್ನಡದ ಜತೆಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಎಲ್​ಐಸಿ ಮೂಲಭೂತವಾಗಿ ಬಹಳ ಗಟ್ಟಿಯಾದ ಕಂಪೆನಿ. ಇದನ್ನೇ ನಾವು ಫಂಡಮೆಂಟಲಿ ಸ್ಟ್ರಾಂಗ್ ಅಂತ ಕರೆಯುತ್ತೀವಿ. ಅದರ ಹೂಡಿಕೆ ಕೇಂದ್ರ ಸರ್ಕಾರದ ಸಾಲಪತ್ರ, ರಾಜ್ಯ ಸರ್ಕಾರದ ಸಾಲಪತ್ರ, ಈಕ್ವಿಟಿ ಷೇರುಗಳು, ಡಿಬೆಂಚರ್​ಗಳು ಮತ್ತು ಬಾಂಡ್​ಗಳು, ಮ್ಯೂಚುವಲ್ ಫಂಡ್ ಮತ್ತು ಇಟಿಎಫ್​ಗಳಲ್ಲಿ ಹಂಚಿಹೋಗಿವೆ. ವ್ಯಾಪಕವಾದ ವೈವಿಧ್ಯಮಯ ಹೂಡಿಕೆ ಇದೆ. ಅದರಲ್ಲೂ ಈಕ್ವಿಟಿ ಹೂಡಿಕೆ ಗಮನಿಸುವುದಾದರೆ, ರಿಲಯನ್ಸ್, ಏಷ್ಯನ್ ಪೇಂಟ್ಸ್, ಎನ್​ಎಂಡಿಸಿ, ಕೋಲ್​ ಇಂಡಿಯಾ, ಬಿಪಿಸಿಎಲ್​, ಅಲ್ಟ್ರಾಟೆಕ್ ಸಿಮೆಂಟ್, ಸನ್​ ಫಾರ್ಮಾ, ಮಾರುತಿ ಸುಜುಕಿ, ಒಎನ್​ಜಿಸಿ ಹೀಗೆ ಸ್ಥಿರವಾದ ಹಾಗೂ ಉತ್ತಮವಾದ ಡಿವಿಡೆಂಡ್​ ನೀಡುವ, ಅತ್ಯುತ್ತಮವಾದ ಕಂಪೆನಿಗಳಲ್ಲೇ ಹೂಡಿಕೆ ಮಾಡಲಾಗಿದೆ. ಇದರ ಜತೆಗೆ ಎಲ್​ಐಸಿಯ ರಿಯಲ್ ಎಸ್ಟೇಟ್​ ಆಸ್ತಿ ಪ್ರಮಾಣ ಏನೂ ಕಡಿಮೆ ಇಲ್ಲ ಎಂದರು.

KG Kripal

ಕೆ.ಜಿ.ಕೃಪಾಲ್

ಈ ದೇಶಕ್ಕೆ ಅತ್ಯುತ್ತಮವಾದ ಕಂಪೆನಿಗಳನ್ನು ನೀಡುವುದರಲ್ಲಿ ಎಲ್​ಐಸಿಯ ಪಾತ್ರ ಏನು ಎಂಬುದನ್ನು ನಾವು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಇದು ಕೇವಲ ಭಾವನಾತ್ಮಕ ವಿಚಾರ ಮಾತ್ರ ಅಲ್ಲ, ವ್ಯವಹಾರದ ದೃಷ್ಟಿಯಿಂದಲೂ ಅದರ ವ್ಯಾಪ್ತಿಯನ್ನು ತೋರಿಸುತ್ತದೆ. ಈಗ ಈ ಎಲ್​ಐಸಿಯ 10 ರೂಪಾಯಿ ಮುಖಬೆಲೆಯ ಷೇರು 820ಕ್ಕಿಂತ ಸ್ವಲ್ಪ ಮೇಲ್ಮಟ್ಟದಲ್ಲಿ ವಹಿವಾಟು ನಡೆಸುತ್ತಿದೆ. ಖರೀದಿ ಮಾಡಬೇಕು ಅಂದುಕೊಳ್ಳುವವರು ಸ್ವಲ್ಪಸ್ವಲ್ಪ ಪ್ರಮಾಣದಲ್ಲಿ ಎಲ್​ಐಸಿ ಷೇರು ಖರೀದಿ ಶುರು ಮಾಡಬಹುದು. ಇನ್ನೂ ಒಂದು ಪ್ರಮುಖ ಅಂಶ ಅಂದರೆ, ಎಲ್​ಐಸಿಯ ಕಾರ್ಪೊರೇಟ್ ಆಡಳಿತ ಅದೇ ಕ್ಷೇತ್ರದಲ್ಲಿ ಇರುವ ಇತರ ಕಂಪೆನಿಗಳಿಗೆ ಹೋಲಿಸಿದರೆ ಖಂಡಿತಾ ಉತ್ತಮವಾಗಿದೆ ಎಂದರು.

ಮತ್ತೊಬ್ಬ ಹೂಡಿಕೆದಾರರು ಮಾತನಾಡಿ, ಎಲ್​ಐಸಿ ಖಾಸಗೀಕರಣ ಎಂಬುದೇ ಒಂದೊಳ್ಳೆ ಆಲೋಚನೆ. ಇನ್ನು ಮುಂದೆ ಕಂಪೆನಿಯು ಒಂದಿಷ್ಟು ಆಕ್ರಮಣಕಾರಿಯಾಗಿ ಆಡಳಿತ ನಡೆಸಬಹುದು ಎಂದು ನಿರೀಕ್ಷೆ ಮಾಡಬಹುದು. ಗ್ರಾಮೀಣ ಪ್ರದೇಶಗಳಲ್ಲಿ ಇವತ್ತಿಗೂ ಎಲ್​ಐಸಿ ಬಗ್ಗೆ ಜನರಲ್ಲಿ ಬ್ರ್ಯಾಂಡ್ ವ್ಯಾಲ್ಯೂ ಇದೆ. ಇನ್ನು ಕೊರೊನಾ ನಂತರದ ಕಾಲಘಟ್ಟದಲ್ಲಿ ಇನ್ಷೂರೆನ್ಸ್ ಮಾಡಿಸುವ ಬಗ್ಗೆ ಜನರಲ್ಲಿ ಅರಿವು ಹೆಚ್ಚಾಗಿದೆ. ಆದ್ದರಿಂದ ಕಂಪೆನಿಗೆ ಭವಿಷ್ಯದಲ್ಲಿ ಉತ್ತಮ ಅವಕಾಶಗಳಿವೆ. ಇನ್ನು ಷೇರು ಖರೀದಿ ಅನ್ನೋ ವಿಚಾರಕ್ಕೆ ಬಂದರೆ, ಅಲ್ಪಾವಧಿಗೋ ಮಧ್ಯಮಾವಧಿಗೋ ಅಥವಾ ದೀರ್ಘಾವಧಿಗೋ ಎಂಬುದನ್ನು ಮೊದಲಿಗೆ ನಿರ್ಧರಿಸಬೇಕು. ಕಂಪೆನಿಯ ಬ್ಯಾಲೆನ್ಸ್​ಶೀಟ್ ಸೇರಿದಂತೆ ಇತರ ಅಂಶಗಳನ್ನು ಗಮನಿಸಬೇಕು. ವದಂತಿಗಳನ್ನು ನಂಬಬಾರದು. ವಾಸ್ತವದ ಗುರಿಯನ್ನು ಇರಿಸಿಕೊಳ್ಳಬೇಕು ಎಂದರು.

(ಎಚ್ಚರಿಕೆ: ಇಲ್ಲಿ ವ್ಯಕ್ತವಾಗಿರುವ ಅಭಿಪ್ರಾಯಗಳು ಲೇಖಕರದು. ಇದಕ್ಕೂ ಟಿವಿ9 ಸಂಸ್ಥೆಗೂ ಸಂಬಂಧ ಇಲ್ಲ. ಇದು ಹಣಕಾಸಿನ ವಿಚಾರವಾದ್ದರಿಂದ ಆಲೋಚಿಸಿ, ನಿರ್ಧಾರ ಕೈಗೊಳ್ಳಬೇಕು)

ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: LIC Stock Market Debut: 949 ರೂ.ಗೆ ಹಂಚಿದ್ದ ಎಲ್​ಐಸಿ ಷೇರು ಶೇ 9ರಷ್ಟು ಕಡಿಮೆಗೆ 867 ರೂಪಾಯಿಯಲ್ಲಿ ಮಾರುಕಟ್ಟೆ ಲಿಸ್ಟಿಂಗ್

Published On - 11:14 am, Mon, 30 May 22

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ