Highest Paid CEOs: ವಿಶ್ವದಲ್ಲೇ ಅತಿ ಹೆಚ್ಚು ವೇತನ ಪಡೆಯುವ ಸಿಇಒಗಳಿವರು; ಮೊದಲ ಸ್ಥಾನದಲ್ಲಿರುವ ಮಸ್ಕ್ಗೆ ಅಬ್ಬಾ ಅದೆಷ್ಟು ಸಂಬಳ!
ಅತಿ ಹೆಚ್ಚು ವೇತನ ಪಡೆಯುವ ವಿಶ್ವದ ಟಾಪ್ ಸಿಇಒಗಳ ಪಟ್ಟಿ ಇಲ್ಲಿದೆ. ಇದು ಫಾರ್ಚೂನ್ 500 ಪಟ್ಟಿ. ಇದರಲ್ಲಿ ನಂಬರ್ ಸ್ಥಾನದಲ್ಲಿ ಇರುವುದು ಎಲಾನ್ ಮಸ್ಕ್. ಎಷ್ಟು ವೇತನ ಪಡೆಯುತ್ತಾರೆ ಎಂಬ ವಿವರ ಇಲ್ಲಿದೆ.
ಕಳೆದ ವರ್ಷ- 2021ರಲ್ಲಿ ಅತಿ ಹೆಚ್ಚು ವೇತನ ಪಡೆದ ಸಿಇಒಗಳ ಪಟ್ಟಿಯನ್ನು ಫಾರ್ಚೂನ್ 500 ಬಿಡುಗಡೆ ಮಾಡಿದೆ. ಅದರಲ್ಲಿ ಮೊದಲ ಸ್ಥಾನದಲ್ಲಿ ಇರುವವರು ಟೆಸ್ಲಾ ಮತ್ತು ಸ್ಪೇಸ್ಎಕ್ಸ್ನ ಸಿಇಒ ಎಲಾನ್ ಮಸ್ಕ್ (Elon Musk). ಆ ನಂತರದ ಸ್ಥಾನಗಳಲ್ಲಿ ಇರುವ ಸಿಇಒಗಳು ಯಾರು ಅಂತ ನೋಡಿದರೆ ಆಪಲ್ ಕಂಪೆನಿಯ ಟಿಮ್ ಕುಕ್, ನೆಟ್ಫ್ಲಿಕ್ಸ್ನ ರೀಡ್ ಹೇಸ್ಟಿಂಗ್ಸ್, ಮೈಕ್ರೋಸಾಫ್ಟ್ನ ಸತ್ಯ ನಾಡೆಲ್ಲ ಇವರು ಹೆಸರುಗಳು ಕಾಣುತ್ತವೆ. ಹಾಗಿದ್ದರೆ 2021ರಲ್ಲಿ ಎಲಾನ್ಮಸ್ಕ್ ಪಡೆದ ವೇತನ ಎಷ್ಟು ಎಂದು ಗಮನಿಸುವುದಾದರೆ, 2350 ಕೋಟಿ ಅಮೆರಿಕನ್ ಡಾಲರ್ ಆಗುತ್ತದೆ. ಇದರಲ್ಲಿ 2018ರಲ್ಲಿ ಕೊಡಮಾಡಿದ್ದ ಟೆಸ್ಲಾ ಸ್ಟಾಕ್ ಆಪ್ಷನ್ ನಗದು ಮಾಡಿಕೊಂಡಿರುವುದು ಸಹ ಸೇರಿವೆ. ಅದು ಈ ವರೆಗೆ ಸಿಇಒಗಳಿಗೆ 2021ರಲ್ಲಿ ನೀಡಿರುವುದರಲ್ಲೇ ಅತಿ ಹೆಚ್ಚಿನ ವೇತನ ಆಗುತ್ತದೆ.
2350 ಕೋಟಿ ಅಮೆರಿಕನ್ ಡಾಲರ್ ಅಂದರೆ ಭಾರತದ ರೂಪಾಯಿ ಲೆಕ್ಕದಲ್ಲಿ ಎಷ್ಟಾಯಿತು ಗೊತ್ತಾ? ಇವತ್ತಿನ (ಮೇ 30, 2022) ಡಾಲರ್ ವಿರುದ್ಧದ ಭಾರತೀಯ ರೂಪಾಯಿ ಮೌಲ್ಯದಲ್ಲಿ 1,82,167.18 ಕೋಟಿ (1.82 ಲಕ್ಷ ಕೋಟಿ ರೂಪಾಯಿ) ಆಗುತ್ತದೆ. ಅಂದರೆ ಭಾರತದ ಒಂದು ರಾಜ್ಯದ ಬಜೆಟ್ಗೆ ಸಮಾನವಾದ ಮೊತ್ತ ಇದು. ಫಾರ್ಚೂನ್ 500ರ ಪಟ್ಟಿಯಲ್ಲಿ ಟೆಸ್ಲಾ 65ನೇ ಸ್ಥಾನದಲ್ಲಿದೆ. 2021ನೇ ಇಸವಿ ಟೆಸ್ಲಾ ಪಾಲಿಗೆ ಅತ್ಯುತ್ತಮವಾದ ವರ್ಷ. 5380 ಕೋಟಿ ಆದಾಯ ಬಂದಿತ್ತು. ಅಂದರೆ 2020ನೇ ಇಸವಿಗೆ ಹೋಲಿಸಿದರೆ ಶೇ 71ರಷ್ಟು ಹೆಚ್ಚಳವಾದಂತೆ ಆಯಿತು.
ಈ ಮಧ್ಯೆ ಆಪಲ್ ಕಂಪೆನಿ ಸಿಇಒ 2021ನೇ ಇಸವಿಯೊಂದರಲ್ಲೇ 77.5 ಕೋಟಿ ಅಮೆರಿಕನ್ ಡಾಲರ್ ಗಳಿಸಿದ್ದಾರೆ. ಹತ್ತು ವರ್ಷದ ಅನುದಾನದ 170 ಕೋಟಿ ಮೌಲ್ಯದ ಷೇರುಗಳು ದೊರೆಯುತ್ತದೆ. ಫಾರ್ಚೂನ್ 500 ಪಟ್ಟಿಯಲ್ಲಿ ಕಂಪೆನಿ 3ನೇ ಸ್ಥಾನದಲ್ಲಿದೆ. ಕಂಪೆನಿಯು ಜಾಗತಿಕ ಚಿಪ್ ಕೊರತೆ ಸವಾಲಾಗಿ ಪರಿಣಮಿಸಿತು. ಆದರೆ ಯಶಸ್ವಿಯಾಗಿ ಆಂತರಿಕವಾಗಿಯೇ ಸಲಕರಣೆಗಳ ಉತ್ಪಾದನೆ ಆರಂಭಿಸಿದೆ. NVIDIA ಸಹ ಸಂಸ್ಥಾಪಕರು ಮತ್ತು ನೆಟ್ಫ್ಲಿಕ್ಸ್ನ ರೀಡ್ ಹೇಸ್ಟಿಂಗ್ ಕ್ರಮವಾಗಿ ಮೂರು, ನಾಲ್ಕನೇ ಸ್ಥಾನದಲ್ಲಿ ಇದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: Apple CEO Salary: ಆಪಲ್ ಕಂಪೆನಿ ಸಿಇಒ ಟಿಮ್ ಕುಕ್ ವೇತನ ಎಷ್ಟು ನೂರು ಕೋಟಿ ಗೊತ್ತಾ?