Elon Musk: ಟ್ವಿಟ್ಟರ್ ಖರೀದಿಗೆ 3,55,409 ಕೋಟಿ ರೂ. ಸಿದ್ಧ ಮಾಡಿಕೊಂಡ ಎಲಾನ್ ಮಸ್ಕ್

ಟ್ವಿಟ್ಟರ್ ಇಂಕ್. ಖರೀದಿಗೆ 4650 ಕೋಟಿ ಯುಎಸ್​ಡಿ ಮೊತ್ತದೊಂದಿಗೆ ಸಿದ್ಧ ಇರುವುದಾಗಿ ವಿಶ್ವದ ನಂಬರ್ 1 ಶ್ರೀಮಂತ ಎಲಾನ್ ಮಸ್ಕ್ ಹೇಳಿದ್ದಾರೆ.

Elon Musk: ಟ್ವಿಟ್ಟರ್ ಖರೀದಿಗೆ 3,55,409 ಕೋಟಿ ರೂ. ಸಿದ್ಧ ಮಾಡಿಕೊಂಡ ಎಲಾನ್ ಮಸ್ಕ್
ಎಲಾನ್ ಮಸ್ಕ್ (ಸಂಗ್ರಹ ಚಿತ್ರ)
Follow us
TV9 Web
| Updated By: Srinivas Mata

Updated on: Apr 22, 2022 | 4:56 PM

ಟೆಸ್ಲಾ ಸಿಇಒ ಆದ ಎಲಾನ್ ಮಸ್ಕ್ ಅವರು ಟ್ವಿಟ್ಟರ್ ಇಂಕ್ (Twitter Inc.) ಅನ್ನು ಖರೀದಿಸಲು 4650 ಕೋಟಿ ಅಮೆರಿಕನ್ ಡಾಲರ್ ಹಣಕಾಸು ಒದಗಿಸಿದ್ದಾರೆ ಮತ್ತು ಅದರ ಷೇರುಗಳಿಗೆ ಟೆಂಡರ್ ಪ್ರಸ್ತಾಪವನ್ನು ಪ್ರಾರಂಭಿಸಲು ಯೋಜಿಸುತ್ತಿದ್ದಾರೆ ಎಂದು ಅಮೆರಿಕದ ಷೇರು ಮಾರುಕಟ್ಟೆ ನಿಯಂತ್ರಕರಿಗೆ ಸಲ್ಲಿಸಿದ ಫೈಲಿಂಗ್ ಗುರುವಾರ ತೋರಿಸಿದೆ. ಕಳೆದ ವಾರ ಟೆಸ್ಲಾ ಸಿಇಒ ಎಲಾನ್ ಮಸ್ಕ್ ಸಾಮಾಜಿಕ ಮಾಧ್ಯಮ ಕಂಪೆನಿಯಾದ ಟ್ವಿಟರ್​ ಅನ್ನು ಪ್ರತಿ ಷೇರಿಗೆ ಯುಎಸ್​ಡಿ 54.20 ಅಥವಾ ಸುಮಾರು 43 ಬಿಲಿಯನ್‌ ಯುಎಸ್​ಡಿಗೆ ಖರೀದಿಸುವ ಪ್ರಸ್ತಾವವನ್ನು ಘೋಷಿಸಿದರು. ಆ ಸಮಯದಲ್ಲಿ ಅವರು ಸ್ವಾಧೀನಕ್ಕೆ ಹೇಗೆ ಹಣಕಾಸು ಒದಗಿಸುತ್ತಾರೆ ಎಂದು ಹೇಳಿದ್ದರು.

ಎಲಾನ್ ಮಸ್ಕ್ ಗುರುವಾರ ಅಮೆರಿಕದ ಸೆಕ್ಯೂರಿಟೀಸ್ ನಿಯಂತ್ರಕರಿಗೆ ಸಲ್ಲಿಸಿದ ದಾಖಲೆಗಳಲ್ಲಿ, ಟ್ವಿಟ್ಟರ್​ನ ಎಲ್ಲ ಸಾಮಾನ್ಯ ಸ್ಟಾಕ್ ಅನ್ನು ಪ್ರತಿ ಷೇರಿಗೆ ಯುಎಸ್​ಡಿ 54.20ಕ್ಕೆ ನಗದು ರೂಪದಲ್ಲಿ ಖರೀದಿಸಲು ಟೆಂಡರ್ ಕೊಡುಗೆ ನೀಡಲು ಪರಿಶೋಧಿಸುತ್ತಿರುವುದಾಗಿ ಹೇಳಿದ್ದಾರೆ. ಮಸ್ಕ್ ಅವರ ಪ್ರಸ್ತಾವಕ್ಕೆ ಟ್ವಿಟರ್ ಪ್ರತಿಕ್ರಿಯಿಸಿಲ್ಲ ಎಂದು ದಾಖಲೆಗಳು ಹೇಳುತ್ತವೆ.

ಮಸ್ಕ್ ಸ್ವತಃ 33.5 ಶತಕೋಟಿ ಡಾಲರ್ ಹಾಕಲು ಬದ್ಧರಾಗಿದ್ದಾರೆ. ಇದರಲ್ಲಿ ಯುಎಸ್​ಡಿ 21 ಶತಕೋಟಿ ಈಕ್ವಿಟಿ ಮತ್ತು ಯುಎಸ್​ಡಿ 12.5 ಶತಕೋಟಿ ಮಾರ್ಜಿನ್ ಲೋನ್‌ಗಳು ವಹಿವಾಟಿಗೆ ಹಣಕಾಸು ಒದಗಿಸುತ್ತವೆ. ನಿಯಂತ್ರಕ ಫೈಲಿಂಗ್ ಪ್ರಕಾರ, ಮೋರ್ಗನ್ ಸ್ಟಾನ್ಲಿ ಸೇರಿದಂತೆ ಇತರ ಬ್ಯಾಂಕ್‌ಗಳು ಟ್ವಿಟ್ಟರ್​ಗೆ ಮತ್ತೊಂದು ಯುಎಸ್​ಡಿ 13 ಶತಕೋಟಿ ಸಾಲವನ್ನು ಒದಗಿಸಲು ಒಪ್ಪಿಕೊಂಡಿವೆ.

“ಮಸ್ಕ್​ಗೆ ಸಂಬಂಧಿಸಿದ ಕಂಪೆನಿಗಳು ಸರಿಸುಮಾರು ಯುಎಸ್​ಡಿ 46.5 ಶತಕೋಟಿ ಮೊತ್ತವನ್ನು ಒದಗಿಸಲು ಬದ್ಧತೆ ಪತ್ರಗಳನ್ನು ಸ್ವೀಕರಿಸಿವೆ,” ಎಂದು ಫೈಲಿಂಗ್​ನಲ್ಲಿ ತಿಳಿಸಲಾಗಿದೆ. ಟೆಂಡರ್ ಪ್ರಸ್ತಾವದ ಅಡಿಯಲ್ಲಿ ಸುಮಾರು ಶೇ 9ರಷ್ಟು ಟ್ವಿಟ್ಟರ್ ಷೇರುಗಳನ್ನು ಹೊಂದಿರುವ ಮಸ್ಕ್, ಮಂಡಳಿಯನ್ನು ಬೈಪಾಸ್ ಮಾಡುವ ಮೂಲಕ ಇತರ ಷೇರುದಾರರಿಗೆ ನೇರವಾಗಿ ತನ್ನ ಪ್ರಸ್ತಾವವನ್ನು ಮುಂದಿಡುತ್ತಾರೆ. ಕಳೆದ ವಾರ ಟ್ವಿಟರ್‌ನ ಮಂಡಳಿಯು “ಪಾಯಿಸನ್ ಪಿಲ್” ರಕ್ಷಣೆಯನ್ನು ಅಳವಡಿಸಿಕೊಂಡಿದ್ದು, ಅದು ಸ್ವಾಧೀನದ ಪ್ರಯತ್ನವನ್ನು ನಿಷೇಧಿಸುವಷ್ಟು ದುಬಾರಿ ಆಗಬಹುದು.

ಪಾಯಿಸನ್ ಪಿಲ್ ಎಂಬುದು ಕಂಪೆನಿ ಅಳವಡಿಸಿಕೊಳ್ಳುವ ರಣತಂತ್ರವಾಗಿದೆ. ಆ ಕಂಪೆನಿಯನ್ನು ಸ್ವಾಧೀನ ಪಡಿಸಿಕೊಳ್ಳುವ ಪ್ರಯತ್ನವನ್ನು ನಿರುತ್ತೇಜನಗೊಳಿಸುವ ಕ್ರಮ ಇದು. ಈಗಾಗಲೇ ಇರುವ ಷೇರುದಾರರು ರಿಯಾಯಿತಿ ಬೆಲೆಯಲ್ಲಿ ಇನ್ನಷ್ಟು ಷೇರು ಖರೀದಿಸುವಂತೆ ಹಕ್ಕನ್ನು ನೀಡಲಾಗುತ್ತದೆ.

ಇದನ್ನೂ ಓದಿ: Elon Musk: ಇನ್ನೆರಡು ವರ್ಷದಲ್ಲಿ ಎಲಾನ್ ಮಸ್ಕ್ ಆಸ್ತಿ 1 ಲಕ್ಷ ಕೋಟಿ ಯುಎಸ್​ಡಿ, ಅಂದರೆ 76 ಲಕ್ಷ ಕೋಟಿ ರೂ. ಅಂತಿದೆ ಈ ವರದಿ

ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಒಡೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಒಡೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ