LIC Housing Finance: ಹೋಮ್ ಲೋನ್ ಮೇಲಿನ ಬಡ್ಡಿ ದರವನ್ನು ಹೆಚ್ಚಿಸಿದ ಎಲ್​ಐಸಿ ಹೌಸಿಂಗ್ ಫೈನಾನ್ಸ್

ಜೂನ್ 20, 2022ರಿಂದ ಅನ್ವಯ ಆಗುವಂತೆ ಎಲ್​ಐಸಿ ಹೌಸಿಂಗ್ ಫೈನಾನ್ಸ್​ನಿಂದ ಹೋಮ್​ ಲೋನ್ ಬಡ್ಡಿ ದರವನ್ನು ಏರಿಕೆ ಮಾಡಲಾಗಿದೆ. ಕನಿಷ್ಠ ಬಡ್ಡಿ ದರ ಎಷ್ಟಾಗಿದೆ ಎಂಬ ವಿವರ ಇಲ್ಲಿದೆ.

LIC Housing Finance: ಹೋಮ್ ಲೋನ್ ಮೇಲಿನ ಬಡ್ಡಿ ದರವನ್ನು ಹೆಚ್ಚಿಸಿದ ಎಲ್​ಐಸಿ ಹೌಸಿಂಗ್ ಫೈನಾನ್ಸ್
ಸಾಂದರ್ಭಿಕ ಚಿತ್ರ
Edited By:

Updated on: Jun 22, 2022 | 10:17 AM

ಎಲ್​ಐಸಿ ಹೌಸಿಂಗ್ ಫೈನಾನ್ಸ್​ನಿಂದ (LIC HFL) ಬೆಂಚ್‌ಮಾರ್ಕ್ ಪ್ರೈಮ್ ಲೆಂಡಿಂಗ್ ದರವನ್ನು (LHPLR) 60 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಿಸಿದೆ. ಬೆಂಚ್​ಮಾರ್ಕ್ ಸಾಲ ದರವನ್ನು ಗೃಹ ಸಾಲಗಳ (Home Loan) ಬೆಲೆಯಲ್ಲಿ ಬಳಸಲಾಗುತ್ತದೆ. ಗೃಹ ಸಾಲಗಳ ಮೇಲಿನ ಪರಿಷ್ಕೃತ ಬಡ್ಡಿದರಗಳು ಜೂನ್ 20, 2022ರಿಂದ ಜಾರಿಗೆ ಬಂದಿದ್ದು, ಈಗ ಶೇಕಡಾ 7.50ರಿಂದ ಪ್ರಾರಂಭವಾಗಲಿದೆ ಎಂದು ಎಲ್ಐಸಿ ಹೌಸಿಂಗ್ ಫೈನಾನ್ಸ್ ಹೇಳಿಕೆಯಲ್ಲಿ ತಿಳಿಸಿದೆ. 700 ಅಥವಾ ಅದಕ್ಕಿಂತ ಹೆಚ್ಚಿನ ಕ್ರೆಡಿಟ್ ಸ್ಕೋರ್ ಹೊಂದಿರುವ ಅರ್ಜಿದಾರರಿಗೆ ಮನೆ ಸಾಲಗಳ ಮೇಲಿನ ಹೊಸ ಬಡ್ಡಿ ದರಗಳು ಶೇ 7.50ರಿಂದ ಪ್ರಾರಂಭವಾಗುತ್ತವೆ. LIC HFL ಪ್ರಕಾರ, ಪರಿಷ್ಕೃತ ದರಗಳು ಜೂನ್ 20, 2022ರಂದು ಜಾರಿಗೆ ಬಂದಿದೆ.

ಜೂನ್ 10 ರಂದು, ಹೋಮ್ ಡೆವಲಪ್‌ಮೆಂಟ್ ಫೈನಾನ್ಸ್ ಕಾರ್ಪೊರೇಷನ್ (ಎಚ್‌ಡಿಎಫ್‌ಸಿ) ಗೃಹ ಸಾಲದ ಮೇಲಿನ ತನ್ನ ರಿಟೇಲ್ ಪ್ರೈಮ್ ಲೆಂಡಿಂಗ್ ದರವನ್ನು (ಆರ್‌ಪಿಎಲ್‌ಆರ್) 50 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಿಸಿದೆ. HFDCಯ ಗೃಹ ಸಾಲದ ದರಗಳು ಪರಿಣಾಮಕಾರಿಯಾಗಿ ಶೇಕಡಾ 7.55ರಿಂದ ಪ್ರಾರಂಭವಾಗುತ್ತವೆ. ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಈ ತಿಂಗಳ ಆರಂಭದಲ್ಲಿ ರೆಪೊ ದರವನ್ನು 50 ಬೇಸಿಸ್ ಪಾಯಿಂಟ್‌ಗಳಿಂದ ಹೆಚ್ಚಿಸಿ, ಶೇಕಡಾ 4.90ಗೆ ಏರಿಸಿದ್ದು, ಇದು ಹೆಚ್ಚಿನ ಹಣಕಾಸು ಸಂಸ್ಥೆಗಳು ತಮ್ಮ ಸಾಲದ ದರಗಳನ್ನು ಹೆಚ್ಚಿಸಲು ಕಾರಣ ಆಗಿದೆ.

ಆರ್‌ಬಿಐ ತನ್ನ ಪಾಲಿಸಿ ದರವನ್ನು ಹೆಚ್ಚಿಸಿದ ನಂತರ ಬ್ಯಾಂಕ್‌ಗಳು ತಮ್ಮ ಮಾರ್ಜಿನಲ್ ಕ್ರೆಡಿಟ್ ಲೆಂಡಿಂಗ್ ರೇಟ್ (ಎಂಸಿಎಲ್‌ಆರ್) ಹೆಚ್ಚಿಸಿವೆ. ಕೊಟಕ್ ಮಹೀಂದ್ರಾ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್‌ಗಳು ತಮ್ಮ ಎಂಸಿಎಲ್‌ಆರ್ ಅನ್ನು ಹೆಚ್ಚಿಸಿವೆ. ಎಸ್‌ಬಿಐ, ಬ್ಯಾಂಕ್ ಆಫ್ ಬರೋಡಾ ಮತ್ತು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಎಂಸಿಎಲ್‌ಆರ್ ಅನ್ನು ಸಹ ಹೆಚ್ಚಿಸಲಾಗಿದೆ. ಸಾಲಗಾರರು ತಮ್ಮ ಸಾಲಗಳ ಮೇಲೆ ಹೆಚ್ಚಿನ ಬಡ್ಡಿದರಗಳನ್ನು ಪಾವತಿಸಬೇಕಾಗುತ್ತದೆ, ಇದರಿಂದಾಗಿ ಹೆಚ್ಚಿನ ಇಎಂಐಗಳು ಅಥವಾ ಮರುಹೊಂದಿಸುವ ದಿನಾಂಕದ ನಂತರ ಸಾಧ್ಯತೆಯಿದ್ದರೆ ಅವರ ಸಾಲದ ಅವಧಿಯನ್ನು ವಿಸ್ತರಿಸಲಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: Interest Only Home Loans: ಬಡ್ಡಿ ಮಾತ್ರ ಗೃಹ ಸಾಲದ ಬಗ್ಗೆ ಗೊತ್ತಿರಬೇಕಾದ ಸಂಗತಿಗಳಿವು