Home Loan: ಗೃಹ ಸಾಲದಲ್ಲಿ ಸ್ಥಿರ ಹಾಗೂ ಬದಲಾಗುವ ಬಡ್ಡಿ ದರದ ಬಗ್ಗೆ ನಿಮಗೆಷ್ಟು ಗೊತ್ತಿದೆ?
ಗೃಹ ಸಾಲದ ಬಡ್ಡಿ ದರದಲ್ಲಿ ನಿಶ್ಚಿತ ಹಾಗೂ ಬದಲಾಗುವ ಬಡ್ಡಿ ದರ ಹೀಗೆ ಎರಡು ಬಗೆಯಿದೆ. ಅದರ ಬಗ್ಗೆ ವಿವರಣೆ ಈ ಲೇಖನದಲ್ಲಿದೆ.
- ಸ್ಥಿರ ದರ ಮತ್ತು ಬದಲಾಗುವ ಬಡ್ಡಿ ದರ ಮಧ್ಯದ ವ್ಯತ್ಯಾಸ ಏನು? ಸ್ಥಿರ ಬಡ್ಡಿದರದಲ್ಲಿ ಮಾರುಕಟ್ಟೆಯ ಪರಿಸ್ಥಿತಿಗಳಲ್ಲಿನ ಬದಲಾವಣೆಗಳನ್ನು ಲೆಕ್ಕಿಸದೆ ಸಾಲದ ಅವಧಿ ಉದ್ದಕ್ಕೂ ಬಡ್ಡಿಯು ಸ್ಥಿರವಾಗಿರುತ್ತದೆ. ಆದರೆ ಬದಲಾಗುವ ಬಡ್ಡಿದರದ ಸನ್ನಿವೇಶದಲ್ಲಿ ಮಾರುಕಟ್ಟೆಯ ಏರಿಳಿತಗಳನ್ನು ಅವಲಂಬಿಸಿ ಬಡ್ಡಿಯು ಕಡಿಮೆ ಆಗಬಹುದು ಅಥವಾ ಹೆಚ್ಚಾಗಬಹುದು.
- ಡೌನ್ ಪೇಮೆಂಟ್ ಎಂದರೇನು? ಸಾಮಾನ್ಯವಾಗಿ, ಬ್ಯಾಂಕಿಂಗ್ ಮತ್ತು ಹಣಕಾಸು ಸಂಸ್ಥೆಗಳು ಖರೀದಿಸಿದ ಆಸ್ತಿ ವೆಚ್ಚದ ಸುಮಾರು ಶೇ 75ರಿಂದ 85ರ ವರೆಗೆ ಪಾವತಿಸುತ್ತವೆ. ಉಳಿದ ಶೇ 25ರಿಂದ 15ರಷ್ಟು ಮೊತ್ತವನ್ನು ಅಪ್-ಫ್ರಂಟ್ ಆಧಾರದ ಮೇಲೆ ಪಾವತಿಸಲಾಗುತ್ತದೆ. ಇದನ್ನು ಡೌನ್ ಪೇಮೆಂಟ್ ಎಂದು ಕರೆಯಲಾಗುತ್ತದೆ.
- ಪ್ರಿ-ಇಎಂಐ ಎಂದರೇನು? ಪ್ರೀ-ಇಎಂಐ ಆಯ್ಕೆ ಅಡಿಯಲ್ಲಿ ಪ್ರಾಜೆಕ್ಟ್ ನಿರ್ಮಾಣದ ಪ್ರಗತಿಯ ಪ್ರಕಾರ ವಿತರಿಸಲಾಗುವ ಸಾಲದ ಮೊತ್ತದ ಮೇಲಿನ ಬಡ್ಡಿಯನ್ನು ಮಾತ್ರ ಸಾಲ ಪಡೆದವರು ಪಾವತಿಸಬೇಕಾಗುತ್ತದೆ. ನಿಜವಾದ ಇಎಂಐ ಪಾವತಿಯು ಮನೆಯನ್ನು ಸ್ವಾಧೀನಪಡಿಸಿಕೊಂಡ ನಂತರ ಪ್ರಾರಂಭವಾಗುತ್ತದೆ.
- ಹೆಚ್ಚಿನ ಸಾಲದ ಮೊತ್ತ ಮತ್ತು ವಿಸ್ತೃತ ಮರುಪಾವತಿ ಅವಧಿ ಮಂಜೂರಾತಿಯೊಂದಿಗೆ ಬಾಕಿ ವರ್ಗಾವಣೆ ಸಾಧ್ಯವೇ? ಹೌದು. ಪ್ರಕರಣದ ಅರ್ಹತೆ ಮತ್ತು ಅಗತ್ಯ/ ಸಾಲಗಾರರ ಅರ್ಹತೆ ಆಧಾರದ ಮೇಲೆ, ನವೀಕರಣ/ ವಿಸ್ತರಣೆ/ ಪೀಠೋಪಕರಣಗಳ ಉದ್ದೇಶಗಳಿಗಾಗಿ ಬ್ಯಾಂಕ್ ಇತರ ಬ್ಯಾಂಕ್/ಹಣಕಾಸು ಸಂಸ್ಥೆಯಿಂದ ತೆಗೆದುಕೊಂಡ ಮೊತ್ತಕ್ಕಿಂತ ಹೆಚ್ಚಿನ ಮೊತ್ತವನ್ನು ಮಂಜೂರು ಮಾಡಬಹುದು. ಅದೇ ರೀತಿ ವಿಸ್ತೃತ ಮರುಪಾವತಿ ಅವಧಿಯನ್ನು ಮಂಜೂರು ಮಾಡಬಹುದು. ಎಲ್ಲ ಸಮಯದಲ್ಲೂ ಬ್ಯಾಂಕಿನ ಯೋಜನೆಯಡಿಯಲ್ಲಿ ಗರಿಷ್ಠ ಅನುಮತಿಸುವ ಹಣಕಾಸು ಮತ್ತು ಭದ್ರತಾ ಮಾರ್ಜಿನ್‌ಗೆ ಸಂಬಂಧಿಸಿದ ಮಾನದಂಡಗಳನ್ನು ಬದಲಾಯಿಸಲು ಆಗುವುದಿಲ್ಲ.
- ಎಸ್‌ಬಿಐ ಹೋಮ್ ಲೋನ್‌ಗಳಿಗೆ ದೈನಂದಿನ ಕಡಿತದ ಬ್ಯಾಲೆನ್ಸ್‌ನಲ್ಲಿ ಬಡ್ಡಿಯನ್ನು ಲೆಕ್ಕ ಹಾಕಿದರೆ ಹೇಗೆ ಪ್ರಯೋಜನ ಆಗುತ್ತದೆ? ವಾರ್ಷಿಕ ಕಡಿಮೆಗೊಳಿಸುವ ಬ್ಯಾಲೆನ್ಸ್ ವಿಧಾನದಲ್ಲಿ (reducing balance method), ಮುಂಬರುವ ಒಂದು ವರ್ಷದಲ್ಲಿ ಮರುಪಾವತಿ ಮಾಡುವ ಮೊತ್ತದ ಮೇಲೆ ಬಡ್ಡಿಯನ್ನು ಪಾವತಿಸುವುದನ್ನು ಮುಂದುವರಿಯುತ್ತದೆ. ಏಕೆಂದರೆ ವರ್ಷದ ಪ್ರಾರಂಭದಲ್ಲಿ ಬಾಕಿ ಉಳಿದಿರುವ ಬ್ಯಾಲೆನ್ಸ್ ಆಧಾರದ ಮೇಲೆ ವರ್ಷದ ಬಡ್ಡಿಯನ್ನು ನಿರ್ಧರಿಸಲಾಗುತ್ತದೆ. ನಾವು ಬಳಸುವ ವಿಧಾನವಾದ ದೈನಂದಿನ ಕಡಿತದ ಬ್ಯಾಲೆನ್ಸ್‌ನ ಸಂದರ್ಭದಲ್ಲಿ, ಬಡ್ಡಿಯನ್ನು ಬಾಕಿ ಇರುವ ಸಾಲದ ಮೊತ್ತದ ಮೇಲೆ ಮಾತ್ರ ಲೆಕ್ಕ ಹಾಕಲಾಗುತ್ತದೆ, ಇದು ಪ್ರತಿ ಬಾರಿ EMIಗಳನ್ನು ಪಾವತಿಸಿದಾಗ ಅಥವಾ ಯಾವುದೇ ಪೂರ್ವಪಾವತಿಗಳನ್ನು ಕಡಿಮೆ ಮಾಡುತ್ತದೆ. ಇದು ಮೂಲಭೂತವಾಗಿ ಪರಿಣಾಮಕಾರಿ ಬಡ್ಡಿದರವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: Home Loan EMI: ಅಬ್ಬಾ! ಹೋಮ್ ಲೋನ್ ಮರುಪಾವತಿಯಲ್ಲೂ ಎಷ್ಟೊಂದು ಬಗೆ?