LIC Premium Income: ಪ್ರೀಮಿಯಮ್​ಗಳಿಂದ ಎಲ್​ಐಸಿ ಈ ವರ್ಷ ಗಳಿಸಿದ ಆದಾಯ ಎಷ್ಟು? ಖಾಸಗಿ ವಿಮಾ ಕಂಪನಿಗಳದ್ದೆಷ್ಟು?

|

Updated on: Apr 25, 2023 | 10:44 AM

Life Insurance Corporation Market Share: ಭಾರತೀಯ ವಿಮಾ ಮಾರುಕಟ್ಟೆಯಲ್ಲಿ ಬಹಳಷ್ಟು ಇನ್ಷೂರೆನ್ಸ್ ಕಂಪನಿಗಳು ಸ್ಪರ್ಧಿಸುತ್ತಿವೆಯಾದರೂ ಭಾರತೀಯ ಜೀವ ವಿಮಾ ನಿಗಮದ ಪ್ರಾಬಲ್ಯ ಹೆಚ್ಚು ಕುಂದಿಲ್ಲ. ಪ್ರೀಮಿಯಮ್ ಕಲೆಕ್ಷನ್ ವಿಚಾರಕ್ಕೆ ಬಂದರೆ ಮಾರುಕಟ್ಟೆಯಲ್ಲಿ ಎಲ್​ಐಸಿ ಹೊಂದಿರುವ ಪಾಲು ಬರೋಬ್ಬರಿ ಶೇ. 62.58ರಷ್ಟು.

LIC Premium Income: ಪ್ರೀಮಿಯಮ್​ಗಳಿಂದ ಎಲ್​ಐಸಿ ಈ ವರ್ಷ ಗಳಿಸಿದ ಆದಾಯ ಎಷ್ಟು? ಖಾಸಗಿ ವಿಮಾ ಕಂಪನಿಗಳದ್ದೆಷ್ಟು?
ಎಲ್​ಐಸಿ
Follow us on

ನವದೆಹಲಿ: ಭಾರತದ ಅತಿದೊಡ್ಡ ಹಾಗು ಸರ್ಕಾರಿ ಸ್ವಾಮ್ಯದ ಜೀವ ವಿಮಾ ಕಂಪನಿ ಎಲ್​ಐಸಿ (LIC- Life Insurance Corporation) ಕಳೆದ ಹಣಕಾಸು ವರ್ಷದಲ್ಲಿ ಒಳ್ಳೆಯ ಪ್ರೀಮಿಯಮ್ ಕಲೆಕ್ಷನ್ ಮಾಡಿದೆ. 2022-23ರ ಹಣಕಾಸು ವರ್ಷದಲ್ಲಿ ಪಾಲಿಸಿ ಪ್ರೀಮಿಯಮ್​ಗಳಿಂದಲೇ ಎಲ್​ಐಸಿ ಗಳಿಸಿದ ಆದಾಯ (Income From Policy Premiums) 2.32ಲಕ್ಷ ಕೋಟಿ ರೂ ಆಗಿದೆ. ಹಿಂದಿನ ಹಣಕಾಸು ವರ್ಷದಲ್ಲಿ (2021-22) ಪ್ರೀಮಿಯಮ್​ಗಳಿಂದ ಬಂದ ಆದಾಯ 1.99 ಲಕ್ಷ ಕೋಟಿ ರೂ ಆಗಿತ್ತು. 2023ರ ಹಣಕಾಸು ವರ್ಷದಲ್ಲಿ ಈ ಆದಾಯದಲ್ಲಿ ಶೇ. 17ರಷ್ಟು ಹೆಚ್ಚಳವಾಗಿದೆ. ಗಮನಾರ್ಹ ಎಂದರೆ ಭಾರತೀಯ ವಿಮಾ ಮಾರುಕಟ್ಟೆಯಲ್ಲಿ ಬಹಳಷ್ಟು ಇನ್ಷೂರೆನ್ಸ್ ಕಂಪನಿಗಳು ಸ್ಪರ್ಧಿಸುತ್ತಿವೆಯಾದರೂ ಭಾರತೀಯ ಜೀವ ವಿಮಾ ನಿಗಮದ ಪ್ರಾಬಲ್ಯ ಹೆಚ್ಚು ಕುಂದಿಲ್ಲ. ಪ್ರೀಮಿಯಮ್ ಕಲೆಕ್ಷನ್ ವಿಚಾರಕ್ಕೆ ಬಂದರೆ ಮಾರುಕಟ್ಟೆಯಲ್ಲಿ ಎಲ್​ಐಸಿ ಹೊಂದಿರುವ ಪಾಲು ಬರೋಬ್ಬರಿ ಶೇ. 62.58ರಷ್ಟು.

ಇನ್ನು, 2022-23ರ ಹಣಕಾಸು ವರ್ಷದಲ್ಲಿ ಪ್ರೀಮಿಯಮ್​ಗಳಿಂದ ಬಂದ ಅದಾಯದಲ್ಲಿ ಅತಿಹೆಚ್ಚಳ ಕಂಡ ವಿಮಾ ಕಂಪನಿಗಳ ಪಟ್ಟಿಯಲ್ಲಿ ಎಲ್​ಐಸಿ ಎರಡನೇ ಸ್ಥಾನಕ್ಕೆ ಬರುತ್ತದೆ. ಎಚ್​ಡಿಎಫ್​ಸಿ ಲೈಫ್ ಸಂಸ್ಥೆ ಶೇ. 18.83ರಷ್ಟು ಬೆಳವಣಿಗೆ ಕಂಡಿದೆ. ಎಲ್​ಐಸಿ ಶೇ. 17, ಎಸ್​ಬಿಐ ಲೈಫ್ ಇನ್ಷೂರೆನ್ಸ್ ಕಂಪನಿ ಶೇ. 16.22 ಮತ್ತು ಐಸಿಐಸಿಐ ಪ್ರೂಡೆನ್ಷಿಯಲ್ ಶೇ. 12.55ರಷ್ಟು ಪ್ರೀಮಿಯಮ್ ಆದಾಯ ಪ್ರಗತಿ ಸಾಧಿಸಿವೆ.

ಇನ್ನು, ವೈಯಕ್ತಿಕ ಸಿಂಗಲ್ ಪ್ರೀಮಿಯಮ್ ವಿಷಯಕ್ಕೆ ಬಂದರೆ ಎಲ್​ಐಸಿ ಶೇ. 3.30ರಷ್ಟು ಬೆಳವಣಿಗೆ ಹೊಂದಿದೆ. ವೈಯಕ್ತಿಕ ನಾನ್ಸಿಂಗಲ್ ಪ್ರೀಮಿಯಮ್​ಗಳಿಂದ ಬಂದ ಆದಾಯ ಶೇ. 10ರಷ್ಟು ಹೆಚ್ಚಾಗಿದೆ.

ಇದನ್ನೂ ಓದಿGoogle vs PhonePe: ಗೂಗಲ್​ಗೆ ಸೆಡ್ಡುಹೊಡೆಯುತ್ತಿರುವ ಫೋನ್​ಪೆ; ಪ್ಲೇಸ್ಟೋರ್​ಗೆ ಪ್ರತಿಯಾಗಿ ಬರಲಿದೆ ಹೊಸ ಆ್ಯಪ್ ಸ್ಟೋರ್

ಎಲ್​ಐಸಿಯ ಗ್ರೂಪ್ ಸಿಂಗಲ್ ಪ್ರೀಮಿಯಮ್ 2022ರ ಹಣಕಾಸು ವರ್ಷದಲ್ಲಿ 1,39,350.36ಕೋಟಿ ಆದಾಯ ಇದ್ದದ್ದು 2023ರ ವರ್ಷದಲ್ಲಿ 1,67,235 ಕೋಟಿ ರೂಗೆ ಏರಿದೆ. ಅಂದರೆ ಗ್ರೂಪ್ ಸಿಂಗಲ್ ಪ್ರೀಮಿಯಮ್​ಗಳಿಂದ ಬಂದ ಆದಾಯ ಶೇ. 21.76ರಷ್ಟು ಹೆಚ್ಚಾಗಿದೆ.

ಮಾರ್ಚ್ ತಿಂಗಳಲ್ಲಿ ಪ್ರೀಮಿಯಮ್​ಗಳ ಭರ್ಜರಿ ಏರಿಕೆ; ಏನು ಕಾರಣ?

2023ರ ಮಾರ್ಚ್ ತಿಂಗಳಲ್ಲಿ ಎಲ್​ಐಸಿ ಭರ್ಜರಿ ಪ್ರೀಮಿಯಮ್​ಗಳನ್ನು ಕಲೆಹಾಕಿದೆ. ಆ ತಿಂಗಳು ವೈಯಕ್ತಿಕ ವಿಭಾಗದಲ್ಲಿ ಬಂದ ಪ್ರೀಮಿಯಮ್​ಗಳು 10,000 ಕೋಟಿ ರೂ. ಇತರ ಎಲ್ಲಾ ಖಾಸಗಿ ಇನ್ಷೂರೆನ್ಸ್ ಕಂಪನಿಗಳಿಗಿಂತಲೂ ಹೆಚ್ಚು.

2023 ಮಾರ್ಚ್​ನಲ್ಲಿ ವಿಮಾ ಕಂಪನಿಗಳ ವೈಯಕ್ತಿಕ ವಿಭಾಗದ ಪ್ರೀಮಿಯಮ್ ಕಲೆಕ್ಷನ್ಸ್ ವಿವರ ಇಲ್ಲಿದೆ:

ಎಲ್​ಐಸಿ: 10,000 ಕೋಟಿ ರೂ

ಎಚ್​ಡಿಎಫ್​ಸಿ ಲೈಫ್: 2,989.17 ಕೋಟಿ ರೂ

ಎಸ್​ಬಿಐ ಲೈಫ್: 2,318.77 ಕೋಟಿ ರೂ

ಟಾಟಾ ಎಐಎ ಲೈಫ್: 1,884.41 ಕೋಟಿ ರೂ

ಇದನ್ನೂ ಓದಿAdani Bonds: ಹೂಡಿಕೆದಾರರ ವಿಶ್ವಾಸ ಗಳಿಸಲು ಅದಾನಿ ಹರಸಾಹಸ; ಡಾಲರ್ ಸಾಲಪತ್ರಗಳ ಮರುಖರೀದಿಗೆ ಹೆಜ್ಜೆ; ಅದಾನಿ ನಡೆಯ ಮರ್ಮವೇನು?

ವೈಯಕ್ತಿಕ ನಾನ್ಸಿಂಗಲ್ ಪ್ರೀಮಿಯಮ್ ವಿಭಾಗದಲ್ಲಿ ಆದಾಯ ಶೇ. 10.49ರಷ್ಟು ಏರಿಕೆ ಕಂಡಿದೆ ಎಲ್​ಐಸಿ. 2022 ಮಾರ್ಚ್​ನಲ್ಲಿ ಈ ವಿಭಾಗದಲ್ಲಿ ಎಲ್​ಐಸಿ ಪ್ರೀಮಿಯಮ್ ಕಲೆಕ್ಷನ್ 5,501.12 ಕೋಟಿ ರೂ ಇತ್ತು. 2023 ಮಾರ್ಚ್​ನಲ್ಲಿ ಇದು 6,077.97 ಕೋಟಿ ರೂ ಆಗಿದೆ.

ಮಾರ್ಚ್ ತಿಂಗಳಲ್ಲಿ ಎಲ್​ಐಸಿ ಮಾತ್ರವಲ್ಲ ಹಲವು ಖಾಸಗಿ ಇನ್ಷೂರೆನ್ಸ್ ಕಂಪನಿಗಳೂ ಅತಿಹೆಚ್ಚು ಪ್ರೀಮಿಯಮ್ ಕಲೆಕ್ಷನ್ ಕಂಡಿವೆ. ಏಪ್ರಿಲ್ 1ಕ್ಕೆ ಮುನ್ನ ನಾನ್ಲಿಂಕ್ಡ್ ಇನ್ಷೂರೆನ್ಸ್ ಪಾಲಿಸಿಗಳ ತೆರಿಗೆ ಸೌಲಭ್ಯಗಳನ್ನು ಹಿಂಪಡೆಯುವ ಹಿನ್ನೆಲೆಯಲ್ಲಿ ಮಾರ್ಚ್ ತಿಂಗಳಲ್ಲಿ ಪ್ರೀಮಿಯಮ್ ವಹಿವಾಟು ಅತಿಹೆಚ್ಚು ಆಗಿದೆ.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 10:44 am, Tue, 25 April 23