Google vs PhonePe: ಗೂಗಲ್​ಗೆ ಸೆಡ್ಡುಹೊಡೆಯುತ್ತಿರುವ ಫೋನ್​ಪೆ; ಪ್ಲೇಸ್ಟೋರ್​ಗೆ ಪ್ರತಿಯಾಗಿ ಬರಲಿದೆ ಹೊಸ ಆ್ಯಪ್ ಸ್ಟೋರ್

Android App Store Market: ಆಂಡ್ರಾಯ್ಡ್ ಮೊಬೈಲ್​ಗಳಲ್ಲಿ ಗೂಗಲ್ ಪ್ಲೇ ಸ್ಟೋರ್ ಜೊತೆಗೆ ಫೋನ್ ಪೇಯ ಹೊಸ ಆ್ಯಪ್ ಸ್ಟೋರ್​ವೊಂದನ್ನು ಮುಂದಿನ ದಿನಗಳಲ್ಲಿ ಕಾಣಬಹುದು. ಭಾರತೀಯರ ಸ್ಥಳೀಯ ಅಗತ್ಯಗಳಿಗೆ ತಕ್ಕಂತೆ ಆ್ಯಪ್ ಸ್ಟೋರ್ ಅನ್ನು ಫೋನ್ ಪೇ ರೂಪಿಸುತ್ತಿದೆ.

Google vs PhonePe: ಗೂಗಲ್​ಗೆ ಸೆಡ್ಡುಹೊಡೆಯುತ್ತಿರುವ ಫೋನ್​ಪೆ; ಪ್ಲೇಸ್ಟೋರ್​ಗೆ ಪ್ರತಿಯಾಗಿ ಬರಲಿದೆ ಹೊಸ ಆ್ಯಪ್ ಸ್ಟೋರ್
ಫೋನ್​ಪೇ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Apr 24, 2023 | 7:02 PM

ನವದೆಹಲಿ: ಗೂಗಲ್ ಪ್ರಾಬಲ್ಯದ ಆಂಡ್ರಾಯ್ಡ್ ಮಾರುಕಟ್ಟೆಯಲ್ಲಿ (Android Market) ನೆಲೆಯೂರಲು ಫೋನ್​ಪೇ ಯತ್ನಿಸುತ್ತಿದೆ. ಆಂಡ್ರಾಯ್ಡ್ ಮೊಬೈಲ್​ಗಳಲ್ಲಿ ಇರುವ ಪ್ಲೇ ಸ್ಟೋರ್​ಗೆ ಪ್ರತಿಯಾಗಿ ಫೋನ್ ಪೇ (PhonePe) ಹೊಸ ಆ್ಯಪ್ ಸ್ಟೋರ್ ಸ್ಥಾಪಿಸಲು ಹೊರಟಿದೆ. ಇದು ಸಾಕಾರವಾದರೆ ಭಾರತೀಯ ಮಾರುಕಟ್ಟೆಗೆ ಅಗತ್ಯ ಇರುವ ಆ್ಯಪ್​ಗಳ ಸಂಗ್ರಹವನ್ನು ಫೋನ್ ಪೇನ ಆ್ಯಪ್ ಸ್ಟೋರ್​ನಲ್ಲಿ ಕಾಣಬಹುದಾಗಿದೆ. ಫೋನ್ ಪೇ ಸ್ಥಳೀಯ ಮಾರುಕಟ್ಟೆಗೆ ಅನುಗುಣವಾಗಿರುವ ಆ್ಯಪ್​ಗಳ ಸ್ಟೋರ್ (Localized App Store) ನಿರ್ಮಾಣಕ್ಕೆ ಪ್ರಯತ್ನ ನಡೆಸಿದೆ. ಈ ಸುದ್ದಿಯನ್ನು ಫೋನ್ ಪೇ ಖಚಿತಡಿಸಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ವ್ಯಾಲಟ್ ಆ್ಯಪ್ ಆಗಿ ಭಾರತೀಯರಿಂದ ಸ್ಥಾಪನೆಯಾದ ಫೋನ್ ಪೇ ಕಂಪನಿಯನ್ನು ಅಮೆರಿಕದ ವಾಲ್ಮಾರ್ಟ್ ಗ್ರೂಪ್ (Walmart Group) ಖರೀದಿಸಿದೆ. ಇದಾದ ಬಳಿಕ ಫೋನ್ ಪೇ ಹೊಸ ಹೊಸ ಪ್ರಯೋಗಗಳನ್ನು ಕೈಗೊಳ್ಳುತ್ತಿದೆ. ಇದೀಗ ಗೂಗಲ್ ಪ್ರಾಬಲ್ಯದ ಕ್ಷೇತ್ರಕ್ಕೆ ಹೋಗಿ ನೆಲೆಯೂರಲು ಯತ್ನಿಸುತ್ತಿರುವುದು ಗಮನಾರ್ಹ.

ವರದಿಗಳ ಪ್ರಕಾರ ಫೋನ್ ಪೇನ ಆ್ಯಪ್ ಸ್ಟೋರ್​ನಲ್ಲಿ 12 ಭಾರತೀಯ ಭಾಷೆಗಳಿಗೆ ನೆರವು ಇರಲಿದೆಯಂತೆ. ದಿನದ 24 ಗಂಟೆಯೂ ಗ್ರಾಹಕರು ಲೈವ್ ಚ್ಯಾಟ್ ನಡೆಸಿ ತಮ್ಮ ಸಮಸ್ಯೆಗಳನ್ನು ನಿವಾರಿಸಿಕೊಳ್ಳುವ ಸೌಲಭ್ಯ ಒದಗಿಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿAkriti Chopra: ಈಕೆ ಆಕೃತಿ ಚೋಪ್ರಾ; ಉದ್ಯೋಗಿಯಾದವಳಿಗೆ ಸಿಕ್ತು ಸಹ-ಸಂಸ್ಥಾಪಕಿ ಪಟ್ಟ; ಗಂಡನ ಸಂಸ್ಥೆಯನ್ನೇ ಖರೀದಿಸಿತು ಈಕೆಯ ಕಂಪನಿ

ಗೂಗಲ್​ನ ಪ್ಲೇ ಸ್ಟೋರ್​ಗೆ ಪರ್ಯಾಯವಾಗಿರುವ, ಭಾಷೆಯ ವಿಚಾರದಲ್ಲಿ ಮತ್ತು ಗ್ರಾಹಕ ಅಸಕ್ತಿ ವಿಚಾರದಲ್ಲಿ ಹೆಚ್ಚು ಸ್ಥಳೀಕೃತವಾದ ಆ್ಯಪ್ ಅನ್ನು ನಿರ್ಮಿಸಲಾಗುತ್ತಿದೆ ಎಂದು ಫೋನ್ ಪೇ ಅಧಿಕಾರಿಯೊಬ್ಬರು ಹೇಳಿದ್ದಾಗಿ ಟೆಕ್​ಕ್ರಂಚ್​ನ ವರದಿಯಲ್ಲಿ ತಿಳಿಸಲಾಗಿದೆ.

ಗೂಗಲ್​ನಿಂದ ಫೋನ್​ಪೇ ಆ್ಯಪ್ ಸ್ಟೋರ್​ಗೆ ಅಡ್ಡಿಯಾಗುವುದಿಲ್ಲವಾ?

ಆಂಡ್ರಾಯ್ಡ್ ತಂತ್ರಾಂಶ ಗೂಗಲ್​ಗೆ ಸೇರಿದ್ದಾಗಿದೆ. ಹೀಗಾಗಿ ಆಂಡ್ರಾಯ್ಡ್ ಮೊಬೈಲ್​ಗಳಲ್ಲಿ ಗೂಗಲ್ ಆಡಿದ್ದೇ ಆಟ. ಆದರೆ, ಈ ಆಟಕ್ಕೆ ಭಾರತದ ಸಿಸಿಐ ಬ್ರೇಕ್ ಹಾಕಿದೆ. ಆಂಡ್ರಾಯ್ಡ್ ಮೊಬೈಲ್ ಮತ್ತು ಪ್ಲೇ ಸ್ಟೋರ್​ನಲ್ಲಿ ತನ್ನ ಉತ್ಪನ್ನಗಳು ಹಾಗೂ ತನಗೆ ಬೇಕಾದವರ ಉತ್ಪನ್ನಗಳಿಗೆ ಗೂಗಲ್ ಆದ್ಯತೆ ಕೊಡುತ್ತಿದೆ. ಮೊಬೈಲ್ ಉಪಕರಣ ತಯಾರಕರ ಮೇಲೂ ಒತ್ತಡ ಹಾಕುತ್ತಿದೆ ಎಂಬ ಆರೋಪ ಇದೆ. ಇದೇ ಕಾರಣಕ್ಕೆ ಕಾಂಪಿಟೀಶನ್ ಕಮಿಷನ್ ಆಫ್ ಇಂಡಿಯಾ ಸಂಸ್ಥೆ ಗೂಗಲ್​ಗೆ ದಂಡ ವಿಧಿಸಿದ್ದು, ಆಂಡ್ರಾಯ್ಡ್ ಪ್ಲಾಟ್​ಫಾರ್ಮ್​ನಲ್ಲಿ ಸ್ಪರ್ಧೆಗಳಿಗೆ ಅನುವು ಮಾಡಿಕೊಡಬೇಕೆಂದು ಗೂಗಲ್​ಗೆ ಆದೇಶಿಸಿದೆ.

ಇದನ್ನೂ ಓದಿGold Prediction: ಇನ್ನೊಂದು ವರ್ಷದಲ್ಲಿ ಚಿನ್ನದ ಬೆಲೆ ಎಷ್ಟು ಹೆಚ್ಚಾಗುತ್ತದೆ? ನಿಮ್ಮ ಹಣ ಎಷ್ಟು ಬೆಳೆಯುತ್ತದೆ? ಇಲ್ಲಿದೆ ಡೀಟೇಲ್ಸ್

ಈ ಕಾರಣಕ್ಕೆ ಗೂಗಲ್ ಸಂಸ್ಥೆ ಫೋನ್​ಪೇಯ ಆ್ಯಪ್ ಸ್ಟೋರ್​ಗೆ ಅಡ್ಡಿಪಡಿಸುವಂತಿಲ್ಲ. ಫೋನ್ ಪೇ ಈಗಾಗಲೆ ಒಇಎಂಗಳನ್ನು (ಮೊಬೈಲ್ ತಯಾರಕರು) ಸಂಪರ್ಕಿಸಿ ತನ್ನ ಆ್ಯಪ್ ಸ್ಟೋರ್ ಸ್ಥಾಪನೆ ಬಗ್ಗೆ ಮಾತುಕತೆ ನಡೆಸಿದೆ. ಒಂದು ಒಇಎಂ ಜೊತೆ ಫೋನ್ ಪೇ ನಡೆಸಿದ ಮಾತುಕತಡೆ ಫಲಪ್ರದ ಕೂಡ ಆಗಿದೆ ಎಂದು ತಿಳಿದುಬಂದಿದೆ. ಬಹುತೇಕ ಎಲ್ಲಾ ಒಇಎಂಗಳು ಫೋನ್ ಪೇಯ ಹೊಸ ಆ್ಯಪ್ ಸ್ಟೋರ್ ಬಗ್ಗೆ ಅತೀವ ಕುತೂಹಲ ವ್ಯಕ್ತಪಡಿಸಿವೆಯಂತೆ.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 7:02 pm, Mon, 24 April 23

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್