Gold Prediction: ಇನ್ನೊಂದು ವರ್ಷದಲ್ಲಿ ಚಿನ್ನದ ಬೆಲೆ ಎಷ್ಟು ಹೆಚ್ಚಾಗುತ್ತದೆ? ನಿಮ್ಮ ಹಣ ಎಷ್ಟು ಬೆಳೆಯುತ್ತದೆ? ಇಲ್ಲಿದೆ ಡೀಟೇಲ್ಸ್

Know Much Gold Rate Increase In 1 Year: ಈಗ 24 ಕ್ಯಾರಟ್ ಪರಿಶುದ್ಧ ಚಿನ್ನದ ಬೆಲೆ 10 ಗ್ರಾಮ್​ಗೆ 61,000 ರೂಗಿಂತ ಕಡಿಮೆ ಮಟ್ಟದಲ್ಲಿ ಇದೆ. ಮುಂದಿನ ಒಂದು ವರ್ಷದಲ್ಲಿ ಇದರ ಬೆಲೆ 10 ಗ್ರಾಮ್​ಗೆ 68,000 ರೂ ಮುಟ್ಟುವ ಸಾಧ್ಯತೆ ಇದೆ ಎಂದು ಈ ಉದ್ಯಮ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Gold Prediction: ಇನ್ನೊಂದು ವರ್ಷದಲ್ಲಿ ಚಿನ್ನದ ಬೆಲೆ ಎಷ್ಟು ಹೆಚ್ಚಾಗುತ್ತದೆ? ನಿಮ್ಮ ಹಣ ಎಷ್ಟು ಬೆಳೆಯುತ್ತದೆ? ಇಲ್ಲಿದೆ ಡೀಟೇಲ್ಸ್
ಚಿನ್ನ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Apr 23, 2023 | 12:54 PM

ನವದೆಹಲಿ: ಇವತ್ತಿನ ಅನಿಶ್ಚಿತ ಹಣಕಾಸು ಮತ್ತು ಆರ್ಥಿಕ ಪರಿಸ್ಥಿತಿಯಲ್ಲಿ ಚಿನ್ನ ಒಂದು ರೀತಿಯಲ್ಲಿ ಆಪತ್ಬಾಂಧವ ಇದ್ದಂತೆ. ಯಾವುದೇ ವಸ್ತುವಿನ ಮೌಲ್ಯ ಕುಸಿತವಾದರೂ ಚಿನ್ನದ ಬೆಲೆ ಸಾಮಾನ್ಯವಾಗಿ ಏರಿಕೆಯ ಮಾರ್ಗದಲ್ಲೇ ಇರುತ್ತದೆ. ಹಣದುಬ್ಬರಕ್ಕಿಂತ ದುಪ್ಪಟ್ಟು, ತ್ರಿಪಟ್ಟು ವೇಗದಲ್ಲಿ ಚಿನ್ನದ ದರ (Gold Rates) ಹೆಚ್ಚುತ್ತದೆ. ಹೂಡಿಕೆದಾರರಿಗೆ ಈಗಲೂ ಫೇವರಿಟ್ ಆದ ವಸ್ತುಗಳಲ್ಲಿ ಚಿನ್ನ ಪ್ರಮುಖವಾದುದು. ಭಾರತೀಯರಿಗೆ ಚಿನ್ನ ಹೂಡಿಕೆಗಿಂತಲೂ ಮಿಗಿಲಾದ ಅಮೂಲ್ಯ ವಸ್ತು. ಆಭರಣ, ಸಾಲಗಳಿಗೆ ಭಾರತೀಯರು ಚಿನ್ನವನ್ನು ಹೆಚ್ಚು ಉಪಯೋಗಿಸುತ್ತಾರೆ. ಈಗ 24 ಕ್ಯಾರಟ್ ಪರಿಶುದ್ಧ ಚಿನ್ನದ ಬೆಲೆ 10 ಗ್ರಾಮ್​ಗೆ 61,000 ರೂಗಿಂತ ಕಡಿಮೆ ಮಟ್ಟದಲ್ಲಿ ಇದೆ. ಮುಂದಿನ ಒಂದು ವರ್ಷದಲ್ಲಿ ಇದರ ಬೆಲೆ 10 ಗ್ರಾಮ್​ಗೆ 68,000 ರೂ ಮುಟ್ಟುವ ಸಾಧ್ಯತೆ ಇದೆ ಎಂದು ಈ ಉದ್ಯಮ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇನ್ನೂ ಕೆಲ ತಜ್ಞರ ಪ್ರಕಾರ ಚಿನ್ನದ ಇನ್ನಷ್ಟು ಏರಿಕೆ ಆಗಬಹುದು. ಚಿನ್ನದ ಬೆಲೆ ತುಸು ಇಳಿಕೆ ಕಾಣುತ್ತಿರುವ ಈ ಹೊತ್ತು ಚಿನ್ನದ ಮೇಲೆ ಹೂಡಿಕೆಗೆ ಪ್ರಶಸ್ತ ಸಮಯ ಆಗಿರಬಹುದು.

ನಿನ್ನೆ ಏಪ್ರಿಲ್ 22ರಂದು ಅಕ್ಷಯ ತೃತೀಯ ದಿನ ಇತ್ತು. ಬಹಳ ಚಿನ್ನದ ವ್ಯಾಪಾರಿಗಳು ಡಿಸ್ಕೌಂಟ್ ಇತ್ಯಾದಿ ಥರಹಾವೇರಿ ಅಫರ್​ಗಳನ್ನು ಒದಗಿಸಿದ್ದುಂಟು. ಅಕ್ಷಯ ತೃತೀಯ ದಿನದಂದು ಚಿನ್ನ ಖರೀದಿಸಿದರೆ ಮನೆಯಲ್ಲಿ ಐಶ್ವರ್ಯ ವೃದ್ಧಿಸುತ್ತದೆ ಎಂಬ ನಂಬಿಕೆ ಏನೇ ಇರಲಿ, ಚಿನ್ನದ ಬೆಲೆ ಕಡಿಮೆ ಆಗುತ್ತಿರುವ ಹೊತ್ತಿನಲ್ಲಿ ಚಿನ್ನ ಖರೀದಿಸಿದವರಿಗೆ ಭವಿಷ್ಯದಲ್ಲಿ ಅ ಹೂಡಿಕೆ ಹಣ ಬೆಳೆಯುವುದರಲ್ಲಿ ಸಂಶಯ ಇಲ್ಲ.

ಇದನ್ನೂ ಓದಿFD Schemes: ಬ್ಯಾಂಕಿಗಿಂತ ಪೋಸ್ಟ್ ಆಫೀಸ್​ನಲ್ಲಿ ಎಫ್​ಡಿ ಇಟ್ಟರೆ ಹೆಚ್ಚು ಅನುಕೂಲ ಹೇಗೆ? ವಿವರ ಇಲ್ಲಿದೆ

ಚಿನ್ನ ಖರೀದಿಸಲು ಅಕ್ಷಯ ತೃತೀಯ ದಿನವೇ ಆಗಬೇಕಿಲ್ಲ. ಯಾವ ದಿನ ಖರೀದಿಸಿದರೂ ಅದು ಯಾವತ್ತಿಗೂ ಉತ್ತಮ ಆಯ್ಕೆಯೇ. ಚಿನ್ನದ ಬೆಲೆ ಇಳಿಕೆ ಟ್ರೆಂಡ್ ಇನ್ನೂ ಕೆಲ ದಿನ ಮುಂದುವರಿಯಬಹುದು. 10 ಗ್ರಾಮ್​ನ ಅಪರಂಜಿ ಚಿನ್ನ (24 ಕ್ಯಾರಟ್) 58,000 ರೂ ಗಡಿಗಿಂತ ತುಸು ಕೆಳಗಿಳಿಯಬಹುದು ಎನ್ನಲಾಗುತ್ತಿದೆ. ಈ ಸಂದರ್ಭದಲ್ಲಿ ಚಿನ್ನವನ್ನು ಖರೀದಿಸಿದರೆ ಮುಂದಿನ ಒಂದು ವರ್ಷದಲ್ಲಿ ಶೇ. 20ರಷ್ಟು ಬೆಲೆ ಹೆಚ್ಚಳ ಆಗುವ ನಿರೀಕ್ಷೆ ಇದೆ. ಈಗಿನ ದರವಾದ 50,500 ರುಪಾಯಿಗೆ ಚಿನ್ನ ಖರೀದಿಸಿದರೂ ಒಂದು ವರ್ಷದಲ್ಲಿ ಅದು ಕನಿಷ್ಠ ಶೇ. 12ರಷ್ಟು ಬೆಲೆ ಹೆಚ್ಚಬಹುದು ಎನ್ನಲಾಗಿದೆ.

ಚಿನ್ನದ ಮೇಲೆ ಹೂಡಿಕೆಗೆ ಹಲವು ಮಾರ್ಗಗಳು

ಭಾರತೀಯರು ಸಾಮಾನ್ಯವಾಗಿ ಚಿನ್ನವನ್ನು ಒಡವೆಗಳ ರೂಪದಲ್ಲೇ ಹೆಚ್ಚಾಗಿ ಖರೀದಿಸುತ್ತಾರೆ. ಚಿನ್ನವನ್ನು ಹೂಡಿಕೆಯಾಗಿ ಖರೀದಿಸುವವರು ಗೋಲ್ಡ್ ಕಾಯಿನ್ ಇತ್ಯಾದಿ ಚಿನ್ನದ ಗಟ್ಟಿಗಳ ಮೇಲೆ ಹಣ ಹಾಕುತ್ತಾರೆ. ಇದಲ್ಲದೇ, ಚಿನ್ನವನ್ನು ಖರೀದಿಸಲು ಸವರನ್ ಗೋಲ್ಡ್ ಬಾಂಡ್, ಇಟಿಎಫ್, ಗೋಲ್ಡ್ ಮ್ಯೂಚುವಲ್ ಫಂಡ್ ಇತ್ಯಾದಿ ಯೋಜನೆಗಳಿವೆ.

ಇದನ್ನೂ ಓದಿGold Loans: ಶೇ. 10ಕ್ಕಿಂತಲೂ ಕಡಿಮೆ ಬಡ್ಡಿಗೆ ಸಾಲ? ಅತಿ ಕಡಿಮೆ ಬಡ್ಡಿಗೆ ಗೋಲ್ಡ್ ಲೋನ್ ಕೊಡುವ ಬ್ಯಾಂಕುಗಳಿವು

ಈ ಯೋಜನೆಗಳಲ್ಲಿ ನಿರ್ದಿಷ್ಟ ಹಣವನ್ನು ನಿಯಮಿತವಾಗಿ ಹೂಡುತ್ತಾ ಹೋಗಿ ಅದಕ್ಕೆ ತಕ್ಕಂತಹ ತೂಕದ ಚಿನ್ನವನ್ನು ಶೇಖರಿಸುತ್ತ ಹೋಗಬಹುದು. ಯೋಜನೆ ಮುಗಿದ ಬಳಿಕ ನಿರ್ದಿಷ್ಟ ಮೊತ್ತದ ಭೌತಿಕ ಚಿನ್ನವನ್ನು ಗ್ರಾಹಕರು ಪಡೆಯಬಹುದು.

ಇವಲ್ಲದೇ ಪೇಟಿಎಂ, ಫೋನ್ ಪೇ ಇತ್ಯಾದಿ ವ್ಯಾಲಟ್ ಆ್ಯಪ್​ಗಳಲ್ಲೂ ಗೋಲ್ಡ್ ಸ್ಕೀಮ್​ಗಳಿವೆ. ಇಲ್ಲಿಯೂ ನಾವು ಯಾವಾಗ ಬೇಕಾದರೂ, ಎಷ್ಟು ಬೇಕಾದರೂ ಆನ್​ಲೈನ್​ನಲ್ಲೇ ಚಿನ್ನವನ್ನು ಗ್ರಾಮ್ ಲೆಕ್ಕದಲ್ಲಿ ಖರೀದಿಸಬಹುದು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 12:54 pm, Sun, 23 April 23

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ