FD Schemes: ಬ್ಯಾಂಕಿಗಿಂತ ಪೋಸ್ಟ್ ಆಫೀಸ್​ನಲ್ಲಿ ಎಫ್​ಡಿ ಇಟ್ಟರೆ ಹೆಚ್ಚು ಅನುಕೂಲ ಹೇಗೆ? ವಿವರ ಇಲ್ಲಿದೆ

Comparing FD Schemes of Post Office and Banks: ಬ್ಯಾಂಕ್ ಮತ್ತು ಅಂಚೆ ಕಚೇರಿಯಲ್ಲಿನ ಫಿಕ್ಸೆಡ್ ಡೆಪಾಸಿಟ್​ಗಳಲ್ಲಿ ಬಡ್ಡಿ ದರದಲ್ಲಿ ಅಂತ ವ್ಯತ್ಯಾಸ ಇಲ್ಲದು. ಆದರೂ ಕೂಡ ಅಂಚೆ ಕಚೇರಿಯಲ್ಲಿನ ಎಫ್​ಡಿ ಸ್ಕೀಮ್​ಗಳು ತುಲನಾತ್ಮಕವಾಗಿ ಉತ್ತಮ ಎಂದು ಪರಿಗಣಿತವಾಗಿವೆ. ಬ್ಯಾಂಕ್​ಗಿಂತ ಅಂಚೆ ಕಚೇರಿ ಎಫ್​ಡಿಗಳು ಯಾಕೆ ಉತ್ತಮ ಎಂಬ ಮಾಹಿತಿ ಇಲ್ಲಿದೆ....

FD Schemes: ಬ್ಯಾಂಕಿಗಿಂತ ಪೋಸ್ಟ್ ಆಫೀಸ್​ನಲ್ಲಿ ಎಫ್​ಡಿ ಇಟ್ಟರೆ ಹೆಚ್ಚು ಅನುಕೂಲ ಹೇಗೆ? ವಿವರ ಇಲ್ಲಿದೆ
ಪೋಸ್ಟ್ ಆಫೀಸ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Apr 23, 2023 | 10:40 AM

ಹಣದುಬ್ಬರ ತಡೆಯಲು ಭಾರತೀಯ ರಿಸರ್ವ್ ಬ್ಯಾಂಕ್ (RBI) ಕೆಲ ತಿಂಗಳು ಕಾಲ ಸತತವಾಗಿ ರೆಪೋ ದರ ಏರಿಸಿದ ಪರಿಣಾಮ ಬಡ್ಡಿ ದರ 250 ಬೇಸಿಸ್ ಪಾಯಿಂಟ್​ಗಳಷ್ಟು ಹೆಚ್ಚಾಯಿತು. ಸಹಜವಾಗಿ ಬ್ಯಾಂಕ್​ನ ಠೇವಣಿ ಮತ್ತು ಸಾಲಗಳ ಮೇಲಿನ ಬಡ್ಡಿ ದರಗಳೂ ಹೆಚ್ಚಾಗಿವೆ. ನಿಶ್ಚಿತ ಠೇವಣಿಗಳು ಮತ್ತೆ ಬೇಡಿಕೆ ಪಡೆದಿವೆ. ಉಳಿತಾಯದ ಹಣವನ್ನು ಸುರಕ್ಷಿತವಾಗಿ ಹೂಡಿಕೆ ಮಾಡಲು ನಿಶ್ಚಿತ ಠೇವಣಿಗಳು ಈಗಲೂ ಜನಸಾಮಾನ್ಯರ ನೆಚ್ಚಿನ ಸಾಧನಗಳಾಗಿವೆ. ತುಸು ಹೆಚ್ಚು ರಿಸ್ಕ್ ಎನಿಸುವ ಷೇರುಗಳ ಮೇಲಿನ ಹೂಡಿಕೆ, ಮ್ಯೂಚುವಲ್ ಫಂಡ್, ಎಸ್​ಐಪಿಗಿಂತ ನಿಶ್ಚಿತ ಠೇವಣಿ ಯೋಜನೆಗಳು ಹೆಚ್ಚು ಸುರಕ್ಷಿತ ಎನಿಸುವುದರಿಂದ ಜನರ ಒಲವು ಎಫ್​ಡಿಯತ್ತಲೇ ಹೆಚ್ಚಿದೆ. ಈಗ ಅಂಚೆ ಕಚೇರಿಗಳಲ್ಲೂ ನಿಶ್ಚಿತ ಠೇವಣಿ (Term Deposits) ಯೋಜನೆಗಳಿವೆ. ಬ್ಯಾಂಕ್ ಮತ್ತು ಅಂಚೆ ಕಚೇರಿಯಲ್ಲಿನ ಫಿಕ್ಸೆಡ್ ಡೆಪಾಸಿಟ್​ಗಳಲ್ಲಿ ಬಡ್ಡಿ ದರದಲ್ಲಿ ಅಂತ ವ್ಯತ್ಯಾಸ ಇಲ್ಲದು. ಆದರೂ ಕೂಡ ಅಂಚೆ ಕಚೇರಿಯಲ್ಲಿನ ಎಫ್​ಡಿ ಸ್ಕೀಮ್​ಗಳು ತುಲನಾತ್ಮಕವಾಗಿ ಉತ್ತಮ ಎಂದು ಪರಿಗಣಿತವಾಗಿವೆ. ಬ್ಯಾಂಕ್​ಗಿಂತ ಅಂಚೆ ಕಚೇರಿ ಎಫ್​ಡಿಗಳು ಯಾಕೆ ಉತ್ತಮ ಎಂಬ ಮಾಹಿತಿ ಇಲ್ಲಿದೆ

ಬ್ಯಾಂಕ್ ಮತ್ತು ಅಂಚೆ ಕಚೇರಿಯ ಎಫ್​ಡಿಗೆ ಇರುವ ಬಡ್ಡಿ ದರಗಳು

ಪೋಸ್ಟ್ ಆಫೀಸ್​ನಲ್ಲಿ ನಿಶ್ಚಿತ ಠೇವಣಿಗಳಿಗೆ ಶೇ. 6.8ರಿಂದ 7.5ರವರೆಗೂ ಬಡ್ಡಿ ಕೊಡಲಾಗುತ್ತದೆ. ಬ್ಯಾಂಕುಗಳಲ್ಲಿ ಎಫ್​ಡಿಗಳಿಗೆ ನಿರ್ದಿಷ್ಟ ಬಡ್ಡಿ ಎಂಬುದಿಲ್ಲ. ಒಂದೊಂದು ಬ್ಯಾಂಕ್​ನಲ್ಲೂ ಬಡ್ಡಿ ದರದಲ್ಲಿ ವ್ಯತ್ಯಾಸ ಇರುತ್ತದೆ. ಕೆಲ ಬ್ಯಾಂಕುಗಳಲ್ಲಿ ನಿಶ್ಚಿತ ಠೇವಣಿಗಳಿಗೆ ಶೇ. 9ರವರೆಗೂ ಬಡ್ಡಿ ಕೊಡಲಾಗುತ್ತದೆ. ಕೆಲ ಬ್ಯಾಂಕುಗಳಲ್ಲಿ ಬಡ್ಡಿ ಶೇ. 7ಕ್ಕೆ ಸೀಮಿತವಾಗಬಹುದು.

ಠೇವಣಿ ಹಣದ ಸುರಕ್ಷತೆ

ಪೋಸ್ಟ್ ಆಫೀಸ್ ಸ್ಕೀಮ್​ಗಳು ನೇರವಾಗಿ ಕೇಂದ್ರ ಸರ್ಕಾರಕ್ಕೆ ಸಂಬಂಧಿಸಿದ್ದಾಗಿರುತ್ತವೆ. ಹೀಗಾಗಿ, ನೀವು ಪೋಸ್ಟ್ ಆಫೀಸ್​ನಲ್ಲಿ ಇರಿಸುವ ಉಳಿತಾಯ ಹಣ ಬಹುತೇಕ ಸುರಕ್ಷಿತ ಎಂದು ಭಾವಿಸಬಹುದು. ಈ ಅಂಚೆ ಕಚೇರಿ ಯೋಜನೆಗಳಿಗೆ ಸರ್ಕಾರವೇ ಗ್ಯಾರಂಟಿ.

ಇದನ್ನೂ ಓದಿChanakya Niti: ಆರ್ಥಿಕ ಸಮಸ್ಯೆಗಳ ಪರಿಹಾರಕ್ಕೆ ಚಾಣಕ್ಯ ನೀಡಿದ ಈ ಸಲಹೆಗಳನ್ನು ಅನುಸರಿಸಿ

ಇನ್ನು, ಬ್ಯಾಂಕ್ ಎಫ್​ಡಿಯಾದರೆ ಇದಕ್ಕೆ ಆ ಬ್ಯಾಂಕೇ ಜವಾಬ್ದಾರಿ. ಬ್ಯಾಂಕ್ ದಿವಾಳಿಯಾದರೆ ಗ್ರಾಹಕರ ಹಣಕ್ಕೆ ಖಾತ್ರಿ ಎಂಬುದಿರುವುದಿಲ್ಲ. ಬ್ಯಾಂಕ್​ನಲ್ಲಿ ಇರಿಸುವ ಎಫ್​ಡಿಯಲ್ಲಿ 5 ಲಕ್ಷ ರೂವರೆಗಿನ ಮೊತ್ತಕ್ಕೆ ಆರ್​ಬಿಐ ವಿಮಾ ಗ್ಯಾರಂಟಿ ಒದಗಿಸುತ್ತದೆ. ಅದಕ್ಕಿಂತ ಹೆಚ್ಚಿನ ಮೊತ್ತಕ್ಕೆ ಅನಿಶ್ಚಿತತೆ ಎದುರಾಗಬಹುದು. ಅಲ್ಲದೇ, ಆರ್​ಬಿಐ ರೆಪೋ ದರ ಇಳಿಸಿದರೆ ಬ್ಯಾಂಕು ಕೂಡ ಬಡ್ಡಿ ದರಗಳನ್ನು ಇಳಿಕೆ ಮಾಡಬಹುದು.

ಬ್ಯಾಂಕ್ ಮತ್ತು ಪೋಸ್ಟ್ ಆಫೀಸ್ ಎಫ್​ಡಿಯ ಇತರ ಸಂಗತಿಗಳ ಹೋಲಿಕೆ:

ಬ್ಯಾಂಕ್​ನಲ್ಲಿ ನಿಶ್ಚಿತ ಠೇವಣಿಗಳನ್ನು 10 ವರ್ಷಗಳವರೆಗೂ ಇರಿಸಬಹುದು. ಪೋಸ್ಟ್ ಆಫೀಸ್​ನಲ್ಲಿ ಗರಿಷ್ಠ ಅವಧಿ 5 ಮಾತ್ರ.

ತೆರಿಗೆ ಅನುಕೂಲತೆಯ ವಿಷಯಕ್ಕೆ ಬಂದರೆ ಬ್ಯಾಂಕ್ ಮತ್ತು ಅಂಚೆ ಕಚೇರಿಯ ನಿಶ್ಚಿತ ಠೇವಣಿಗಳು ಬಹುತೇಕ ಸಮಸ್ಥಿತಿಯಲ್ಲಿವೆ. ಎರಡರಲ್ಲೂ 1.5 ಲಕ್ಷ ರೂವರೆಗೂ ಟ್ಯಾಕ್ಸ್ ಬೆನಿಫಿಟ್ ಪಡೆಯಬಹುದು.

ಇದನ್ನೂ ಓದಿGold Loans: ಶೇ. 10ಕ್ಕಿಂತಲೂ ಕಡಿಮೆ ಬಡ್ಡಿಗೆ ಸಾಲ? ಅತಿ ಕಡಿಮೆ ಬಡ್ಡಿಗೆ ಗೋಲ್ಡ್ ಲೋನ್ ಕೊಡುವ ಬ್ಯಾಂಕುಗಳಿವು

ಬ್ಯಾಂಕ್ ಮತ್ತು ಪೋಸ್ಟ್ ಆಫೀಸ್ ಎಫ್​​ಡಿ: ಯಾವುದನ್ನು ಆಯ್ದುಕೊಂಡರೆ ಸರಿ?

ಜನರು ತಮ್ಮ ಅಮೂಲ್ಯ ಗಳಿಕೆಯ ಉಳಿತಾಯ ಹಣವನ್ನು ಹೂಡಿಕೆ ಮಾಡುವ ಮುನ್ನ ಕೆಲವೊಂದಿಷ್ಟು ಮಹತ್ವದ ಸಂಗತಿಗಳನ್ನು ಪರಾಮರ್ಶಿಸುವುದು ಉಚಿತ. ಅಧಿಕ ಬಡ್ಡಿ ಅಥವಾ ಅಧಿಕ ರಿಟರ್ನ್ ಬರಬೇಕು ಎಂಬುದೊಂದೇ ಮಾನದಂಡವಾದರೆ ಅದರ ಹಿಂದೆ ಅಪಾಯವೂ ಸಂಯೋಜಿತವಾಗಿರುತ್ತದೆ ಎಂಬುದು ಗೊತ್ತಿರಬೇಕು.

ನಮ್ಮ ಹಣದ ಸುರಕ್ಷತೆ ಜೊತೆಗೆ ಉತ್ತಮ ಎನಿಸುವ ಬಡ್ಡಿ ದರ ಸಿಗುವುದು ಮುಖ್ಯ. ಈ ಲೆಕ್ಕ ನೋಡಿದಾಗ ಪೋಸ್ಟ್ ಆಫೀಸ್ ಸ್ಕೀಮ್​ಗಳು ಬ್ಯಾಂಕುಗಳ ಎಫ್​ಡಿಗಿಂತ ಉತ್ತಮ ಆಯ್ಕೆ ಆಗಬಹುದು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ