Gold Loans: ಶೇ. 10ಕ್ಕಿಂತಲೂ ಕಡಿಮೆ ಬಡ್ಡಿಗೆ ಸಾಲ? ಅತಿ ಕಡಿಮೆ ಬಡ್ಡಿಗೆ ಗೋಲ್ಡ್ ಲೋನ್ ಕೊಡುವ ಬ್ಯಾಂಕುಗಳಿವು
Gold Loans With Lowest Interest: ಐದಾರು ಬ್ಯಾಂಕುಗಳು ಶೇ. 9ಕ್ಕಿಂತಲೂ ಕಡಿಮೆ ಬಡ್ಡಿ ದರದಲ್ಲಿ ಚಿನ್ನದ ಮೇಲೆ ಸಾಲ ನೀಡುತ್ತವೆ. ಅತಿ ಕಡಿಮೆ ಬಡ್ಡಿಗೆ ಗೋಲ್ಡ್ ಲೋನ್ ಕೊಡುವ 10 ಬ್ಯಾಂಕುಗಳ ಪಟ್ಟಿ ಇಲ್ಲಿದೆ. ಚಿನ್ನದ ದರ ಹೆಚ್ಚಿರುವುದರಿಂದ ಹೆಚ್ಚು ಮೊತ್ತದ ಸಾಲ ಬಹಳ ಸುಲಭವಾಗಿ ಸಿಗುತ್ತದೆ.
ಚಿನ್ನ ಒಂದು ರೀತಿಯ ಆಪತ್ಕಾಲದ ನಿಧಿ. ಆಭರಣವಾಗಿ ನಮ್ಮ ಘನತೆ ಹೆಚ್ಚಿಸುತ್ತದೆ. ತುರ್ತು ಸಂದರ್ಭ ಬಂದರೆ ಮಾರಿ ಹಣ ಪಡೆಯಬಹುದು, ಅಥವಾ ಕಡಿಮೆ ಬಡ್ಡಿಯಲ್ಲಿ ಸುಲಭವಾಗಿ ಸಾಲ ಪಡೆಯಬಹುದು. ಚಿನ್ನದ ಬೆಲೆ ಯಾವತ್ತಿದ್ದರೂ ಕಡಿಮೆ ಆಗುವ ಮಾತಿಲ್ಲ. ಆಗೊಮ್ಮೆ ಈಗೊಮ್ಮೆ ಇಳಿಕೆಯಾದರೂ ಇದರ ಬೆಲೆ ಸಾಮಾನ್ಯವಾಗಿ ಮೇಲ್ಮುಖಿ. 10 ಗ್ರಾಮ್ ಚಿನ್ನದ ಬೆಲೆ 60,000 ರೂ ಆಸುಪಾಸಿನಲ್ಲಿದೆ. ಈ ಬೆಲೆಯಲ್ಲಿ ಚಿನ್ನವನ್ನು ಅಡ ಇಟ್ಟು ಸುಲಭವಾಗಿ ಸಾಲ (Gold Loan) ಪಡೆಯಬಹುದು. ಈಗ ಪ್ರತೀ ಗ್ರಾಮ್ ಚಿನ್ನದ ಮೇಲೆ 4ರಿಂದ 5 ಸಾವಿರ ರೂವರೆಗೂ ಸಾಲ ಸಿಗುತ್ತದೆ. ಬಡ್ಡಿ ದರ ಕೂಡ ತಿಂಗಳಿಗೆ ಶೇ. 1 ಅನ್ನೂ ಮೀರಲ್ಲ. 10 ಗ್ರಾಮ್ ಚಿನ್ನ ಇದ್ದರೆ 50,000 ರೂವರೆಗೂ ಸಾಲ ಪಡೆಯಬಹುದು. ಒಂದಿಷ್ಟು ಕಾಗದಪತ್ರಗಳಿಗೆ ಸಹಿ ಮಾಡಿಸಿಕೊಳ್ಳುವುದು ಬಿಟ್ಟರೆ ನಿಮಗೆ ಬೇರೆ ದಾಖಲೆಗಳನ್ನು ಒದಗಿಸುವ ಗೋಜಲು ಇರುವುದಿಲ್ಲ.
ಈಗ ಚಿನ್ನದ ಮೇಲಿನ ಸಾಲಕ್ಕೆ ವಿಧಿಸಲಾಗುವ ಬಡ್ಡಿ ದರ ಕೂಡ ಕಡಿಮೆ ಇದೆ. ಬಹುತೇಕ ಬ್ಯಾಂಕು ಮತ್ತು ಹಣಕಾಸು ಸಂಸ್ಥೆಗಳು ಗೋಲ್ಡ್ ಲೋನ್ಗೆ ಶೇ. 12ಕ್ಕಿಂತ ಹೆಚ್ಚು ಬಡ್ಡಿ (ವಾರ್ಷಿಕ) ಪಡೆಯುವುದಿಲ್ಲ. ಸೆಂಟ್ರಲ್ ಬ್ಯಾಂಕ್ ಅಫ್ ಇಂಡಿಯಾ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಂತೂ ಗೋಲ್ಡ್ ಸಾಲಕ್ಕೆ ಬಡ್ಡಿ ದರ ಕೇವಲ ಶೇ. 8.45 ಮತ್ತು ಶೇ. 8.65 ಮಾತ್ರ ಇದೆ.
ಇದನ್ನೂ ಓದಿ: ಬಚ್ಚಲು ಮನೆಯಲ್ಲಿ ಸುರಂಗ ಕೊರೆದು ಆಪಲ್ ಸ್ಟೋರ್‌ಗೆ ನುಗ್ಗಿದ ಕಳ್ಳರು 4.10 ಕೋಟಿ ರೂ ಮೌಲ್ಯದ 436 ಐಫೋನ್‌ಗಳನ್ನು ಕದ್ದರು!
ನೀವು ಒಂದು ವೇಳೆ ಚಿನ್ನ ಅಡವಿಟ್ಟು 5 ಲಕ್ಷ ರೂ ಮೊತ್ತದ ಸಾಲ ಪಡೆಯುವ ಉದ್ದೇಶ ಹೊಂದಿದ್ದೀರಿ ಎಂದಿಟ್ಟುಕೊಳ್ಳಿ. ಆಗ ಯಾವ್ಯಾವ ಬ್ಯಾಂಕು ಮತ್ತು ಹಣಕಾಸು ಸಂಸ್ಥೆಗಳಲ್ಲಿ ಎಷ್ಟು ಬಡ್ಡಿ ಇದೆ, 5 ಲಕ್ಷ ರೂ ಸಾಲಕ್ಕೆ 2 ವರ್ಷದ ಅವಧಿಗೆ ಎಷ್ಟು ಇಎಂಐ ಕಟ್ಟಬೇಕಾಗುತ್ತದೆ ಎಂಬ ವಿವರ ಈ ಕೆಳಕಂಡಂತಿದೆ:
- ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ (ಸಿಬಿಐ): ಈ ಸರ್ಕಾರಿ ಸ್ವಾಮ್ಯದ ಬ್ಯಾಂಕಿನಲ್ಲಿ ಚಿನ್ನದ ಸಾಲಕ್ಕೆ ಶೇ. 8.45 ಬಡ್ಡಿ; ಇಎಂಐ 22,716 ರೂ
- ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ (ಯುಬಿಐ): ಈ ಸರ್ಕಾರಿ ಸ್ವಾಮ್ಯದ ಬ್ಯಾಂಕಿನಲ್ಲಿ ಬಡ್ಡಿ ದರ ಶೇ. 8.65; ಇಎಂಐ 22,762 ರೂ
- ಯುಕೋ ಬ್ಯಾಂಕ್: ಈ ಸರ್ಕಾರಿ ಸ್ವಾಮ್ಯದ ಬ್ಯಾಂಕಿನಲ್ಲಿ ಬಡ್ಡಿ ದರ ಶೇ. 8.8; ಇಎಂಐ: 22,797 ರೂ
- ಪಂಜಾಬ್ ಅಂಡ್ ಸಿಂಧ್ ಬ್ಯಾಂಕ್: ಈ ಸರ್ಕಾರಿ ಸ್ವಾಮ್ಯದ ಬ್ಯಾಂಕಿನಲ್ಲಿ ಬಡ್ಡಿ ದರ ಶೇ. 8.85; ಇಎಂಐ 22,808 ರೂ
- ಇಂಡಿಯನ್ ಬ್ಯಾಂಕ್: ಇದೂ ಕೂಡ ಸರ್ಕಾರಿ ಬ್ಯಾಂಕೇ. ಇಲ್ಲಿ ಚಿನ್ನದ ಸಾಲಕ್ಕೆ ಬಡ್ಡಿ ದರ ಶೇ. 8.95 ಇದೆ. 2 ವರ್ಷದ ಅವಧಿಯ 5 ಲಕ್ಷ ರೂ ಸಾಲಕ್ಕೆ ಕಟ್ಟಬೇಕಾದ ಇಎಂಐ 22,831 ರೂ
ಇದನ್ನೂ ಓದಿ: Credit Card: ಕ್ರೆಡಿಟ್ ಕಾರ್ಡ್ ಯಾಕೆ ಮುಖ್ಯ? ಎಚ್ಚರ ವಹಿಸಬೇಕಾದ ಸಂಗತಿಗಳೇನು? ಇಲ್ಲಿದೆ ವಿವರ
- ಬ್ಯಾಂಕ್ ಆಫ್ ಬರೋಡ (ಬಿಒಬಿ): ಈ ಸರ್ಕಾರಿ ಸ್ವಾಮ್ಯದ ಬ್ಯಾಂಕ್ನಲ್ಲಿ ಬಡ್ಡಿ ದರ ಶೇ. 9.15ಇದೆ. ಇಎಂಐ 22,877 ರೂ
- ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್ಬಿ): ಇಲ್ಲಿ ಚಿನ್ನದ ಸಾಲಕ್ಕೆ ಬಡ್ಡಿ ದರ ಶೇ. 9.25 ಇದೆ. 2 ವರ್ಷದ ಅವಧಿಯ 5 ಲಕ್ಷ ರೂ ಸಾಲಕ್ಕೆ ಇಎಂಐ 22,900 ರೂ ಬರಬಹುದು.
- ಬ್ಯಾಂಕ್ ಆಫ್ ಮಹಾರಾಷ್ಟ್ರ: ಬಡ್ಡಿ ದರ ಶೇ. 9.3; ಇಎಂಐ 22,911 ರೂ
- ಫೆಡರಲ್ ಬ್ಯಾಂಕ್: ಇಲ್ಲಿ ಚಿನ್ನದ ಸಾಲಕ್ಕೆ ಶೇ. 9.49 ಬಡ್ಡಿ ದರ ಇದೆ. 5 ಲಕ್ಷದ ಸಾಲಕ್ಕೆ 22,955 ರೂನಂತೆ ತಿಂಗಳಿಗೆ ಕಂತುಗಳನ್ನು ಕಟ್ಟಬೇಕು.
- ಬಜಾಜ್ ಫೈನಾನ್ಸ್ ಸರ್ವಿಸ್: ಈ ಎನ್ಬಿಎಫ್ಸಿ ಬ್ಯಾಂಕ್ನಲ್ಲಿ ಚಿನ್ನದ ಸಾಲಕ್ಕೆ ಶೇ. 9.5 ಬಡ್ಡಿ ಇದೆ. ಸಾಲದ ಕಂತಿನ ಮೊತ್ತ 22,957 ರೂ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 4:36 pm, Fri, 21 April 23