Sign In

By signing in or creating an account, you agree with Associated Broadcasting Company's Terms & Conditions and Privacy Policy.

Green Bond: ಗ್ರೀನ್ ಬಾಂಡ್ ಎಂದರೇನು? ಇದರ ಜನಪ್ರಿಯತೆ ಹೆಚ್ಚುತ್ತಿರುವುದೇಕೆ? ಇದರಿಂದ ಏನು ಅನುಕೂಲ?

Investments For Environmental Projects: ಪರಿಸರಸ್ನೇಹಿ ಯೋಜನೆಗಳಿಗೆ ಬಂಡವಾಳ ಸಂಗ್ರಹಿಸಲು ನೀಡಲಾಗುವ ಗ್ರೀನ್ ಬಾಂಡ್ ಭಾರತದಲ್ಲೂ ಜನಪ್ರಿಯವಾಗುತ್ತಿದೆ. ಉತ್ತಮ ಬಡ್ಡಿ ಜೊತೆಗೆ ತೆರಿಗೆ ಲಾಭಗಳನ್ನೂ ಗ್ರೀನ್ ಬಾಂಡ್ ತಂದುಕೊಡುತ್ತದೆ. ಈ ಗ್ರೀನ್ ಬಾಂಡ್ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಇಲ್ಲಿದೆ....

Green Bond: ಗ್ರೀನ್ ಬಾಂಡ್ ಎಂದರೇನು? ಇದರ ಜನಪ್ರಿಯತೆ ಹೆಚ್ಚುತ್ತಿರುವುದೇಕೆ? ಇದರಿಂದ ಏನು ಅನುಕೂಲ?
ಗ್ರೀನ್ ಬಾಂಡ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Apr 23, 2023 | 5:06 PM

ಹಣಕಾಸು ವಲಯದಲ್ಲಿ ಗ್ರೀನ್ ಬಾಂಡ್​ಗಳ (Green Bonds) ಜನಪ್ರಿಯತೆ ಹೆಚ್ಚುತ್ತಿದೆ. ಬಹಳಷ್ಟು ಜನರು ಗ್ರೀನ್ ಬಾಂಡ್​ಗಳ ಮೇಲೆ ಹೂಡಿಕೆ ಹಾಕುತ್ತಿದ್ದಾರೆ. ಇದೇ ಮಾರ್ಚ್ ತಿಂಗಳಲ್ಲಿ ಸೋವರೀನ್ ಗ್ರೀನ್ ಬಾಂಡ್​ಗಳ (Sovereign Green Bond) ಮೆಚ್ಯೂರಿಟಿ ಫಂಡ್​ಗಳಿಗಾಗಿ ಎಚ್​ಡಿಎಫ್​ಸಿ ಅಸೆಟ್ ಮ್ಯಾನೇಜ್ಮೆಂಟ್ ಕಂಪನಿ ಅರ್ಜಿ ಕೂಡ ಸಲ್ಲಿಸಿದೆ. ಇಷ್ಟೆಲ್ಲಾ ಸದ್ದು ಮಾಡುತ್ತಿರುವ ಹಸಿರು ಬಾಂಡ್ ಎಂದರೇನು? ಹಸಿರು ಬಾಂಡ್​ಗಳಿಂದ ಏನು ಪ್ರಯೋಜನ? ಈ ಗ್ರೀನ್ ಬಾಂಡ್ ಎಷ್ಟು ರಿಟರ್ನ್ ಕೊಡುತ್ತದೆ? ಜನರು ಯಾಕೆ ಗ್ರೀನ್ ಬಾಂಡ್​ಗಳತ್ತ ಮುಗಿಬೀಳುತ್ತಿದ್ದಾರೆ? ಗ್ರೀನ್ ಬಾಂಡ್​ಗಳ ಹಿಂದೆ ಸರ್ಕಾರದ ಪಾತ್ರ ಏನು? ಇವುಗಳ ಬಗ್ಗೆ ಉತ್ತರ ನೀಡುವ ವರದಿ ಇಲ್ಲಿದೆ.

ಗ್ರೀನ್ ಬಾಂಡ್​ಗಳೆಂದರೆ ಏನು?

ಗ್ರೀನ್ ಬಾಂಡ್ ಎಂದರೆ ಪರಿಸರಸ್ನೇಹಿ ಕಾರ್ಯ ಮತ್ತು ಯೋಜನೆಗಳಿಗೆ ಹೂಡಿಕೆ ಪಡೆಯಲು ವಿತರಣೆ ಆಗುವ ಬಾಂಡ್. ಇದನ್ನು ಕ್ಲೈಮೇಟ್ ಬಾಂಡ್ ಎಂತಲೂ ಕರೆಯುತ್ತಾರೆ. ಪರಿಸರ ಸಂಸ್ಥೆಗಳು, ಕಾರ್ಪೊರೇಟ್ ಕಂಪನಿಗಳು ಅಥವಾ ಸರ್ಕಾರಗಳು ಗ್ರೀನ್ ಬಾಂಡ್ ವಿತರಿಸುತ್ತವೆ. ಸರ್ಕಾರದಿಂದ ವಿತರಿಸಲಾಗುವ ಗ್ರೀನ್ ಬಾಂಡ್​ಗಳನ್ನು ಸೋವರೀನ್ ಗ್ರೀನ್ ಬಾಂಡ್ ಎಂದೂ ಕರೆಯಲಾಗುತ್ತದೆ.

ಇದನ್ನೂ ಓದಿShare Market: ಷೇರುಪೇಟೆಯ ಟಾಪ್10 ಕಂಪನಿಗಳಲ್ಲಿ ಲಾಭ ಮಾಡಿದ್ದು ಎರಡೆಯಾ? ಷೇರುದಾರರಿಗೆ ಒಂದು ವಾರದಲ್ಲಿ 1.17 ಲಕ್ಷ ಕೋಟಿ ಹಣ ನಷ್ಟ

ಈ ಗ್ರೀನ್ ಬಾಂಡ್ ಮೂಲಕ ಸಂಗ್ರಹಿಸಲಾಗುವ ಹಣವನ್ನು ಪರಿಸರ ಪೂರ್ವಕ ಯೋಜನೆ ಮತ್ತು ಕಾರ್ಯಗಳಿಗೆ ಮಾತ್ರ ಬಳಸಬೇಕೆಂಬ ನಿಯಮ ಇದೆ. ಉದಾಹರಣೆಗೆ, ಮರುಬಳಕೆ ಶಕ್ತಿ (ರಿವಿವಬಲ್ ಎನರ್ಜಿ), ತ್ಯಾಜ್ಯ ನಿರ್ವಹಣೆ, ಜಲ ಯೋಜನೆ, ಮಾಲಿನ್ಯ ನಿಯಂತ್ರಣ, ಗ್ರೀನ್ ಮೊಬಿಲಿಟಿ (ಎಲೆಕ್ಟ್ರಿಕ್ ವಾಹನ) ಇತ್ಯಾದಿ ಕಾರ್ಯಗಳಿಗೆ ಗ್ರೀನ್ ಬಾಂಡ್​ನ ಹಣವನ್ನು ಬಳಸಬೇಕು.

ಗ್ರೀನ್ ಬಾಂಡ್ ಯಾಕೆ ಮುಖ್ಯ?

ಗ್ರೀನ್ ಬಾಂಡ್ ಖರೀದಿಸುವ ಮೂಲಕ ಪರಿಸರಸ್ನೇಹ ಕಾರ್ಯಗಳನ್ನು ಬೆಂಬಲಿಸುವ ಮತ್ತು ನೆರವಾಗುವ ಅವಕಾಶ ಜನರಿಗೆ ಇದ್ದೇ ಇದೆ. ಪರಿಸರಸ್ನೇಹಿ ಕಾರ್ಯಗಳಿಗೆ ಬಂಡವಾಳ ಸಿಗುವುದು ಅಷ್ಟು ಸುಲಭವಲ್ಲ. ಗ್ರೀನ್ ಬಾಂಡ್ ಇಂತಹದ್ದೊಂದು ಅವಕಾಶವನ್ನು ಸಂಘ ಸಂಸ್ಥೆಗಳಿಗೆ ಒದಗಿಸುತ್ತದೆ. ಈ ಪರಿಸರಸ್ನೇಹಿ ಯೋಜನೆಗಳು ದಿಢೀರ್ ವಾಣಿಜ್ಯಾತ್ಮಕ ಲಾಭ ತರದೇ ಹೋದರೂ ದೀರ್ಘಾವಧಿಯ ದೃಷ್ಟಿಯಲ್ಲಿ ಇವು ಮಹತ್ತರ ಎನಿಸುವ ಯೋಜನೆಗಳಾಗಿರುತ್ತವೆ. ಅದಕ್ಕಾಗಿ, ಪರಿಸರ ಕಾಳಜಿ ಇರುವ ಜನರು ಗ್ರೀನ್ ಬಾಂಡ್​ಗಳನ್ನು ಖರೀದಿಸುವ ಮೂಲಕ ಪರಿಸರಸ್ನೇಹಿ ಯೋಜನೆಗಳಿಗೆ ಬೆಂಬಲಿಸುತ್ತಾರೆ.

ಇದನ್ನೂ ಓದಿGold Prediction: ಇನ್ನೊಂದು ವರ್ಷದಲ್ಲಿ ಚಿನ್ನದ ಬೆಲೆ ಎಷ್ಟು ಹೆಚ್ಚಾಗುತ್ತದೆ? ನಿಮ್ಮ ಹಣ ಎಷ್ಟು ಬೆಳೆಯುತ್ತದೆ? ಇಲ್ಲಿದೆ ಡೀಟೇಲ್ಸ್

ಹೂಡಿಕೆಯಾಗಿ ಗ್ರೀನ್ ಬಾಂಡ್​ನಿಂದ ಏನು ಲಾಭ?

ಸರ್ಕಾರಿ ಬಾಂಡ್​ಗಳಂತೆ ಗ್ರೀನ್ ಬಾಂಡ್ ಕೂಡ ನಿರ್ದಿಷ್ಟ ಅವಧಿಯದ್ದಾಗಿರುತ್ತದೆ. ಇದು ವಾರ್ಷಿಕ ಶೇ. 7ರ ಆಸುಪಾಸಿನಲ್ಲಿ ದರದಲ್ಲಿ ಬಡ್ಡಿಯನ್ನು ಹೂಡಿಕೆದಾರರಿಗೆ ಒದಗಿಸುತ್ತದೆ. ಬಡ್ಡಿ ಹಣ ತೀರಾ ಹೆಚ್ಚಲ್ಲದಿದ್ದರೂ ಗ್ರೀನ್ ಬಾಂಡ್ ಹಲವು ತೆರಿಗೆ ಲಾಭಗಳ ಅವಕಾಶ ನೀಡುತ್ತದೆ.

ಸರ್ಕಾರಕ್ಕೆ ಶಕ್ತಿಯಾಗಿದೆ ಗ್ರೀನ್ ಬಾಂಡ್:

ಸರ್ಕಾರ ಹವಾಮಾನ ಬದಲಾವಣೆ ವಿರುದ್ಧ ಬಹಳಷ್ಟು ಪರಿಸರಸ್ನೇಹಿ ಯೋಜನೆಗಳನ್ನು ಕೈಗೊಂಡಿದೆ. ಪೆಟ್ರೋಲಿಯಂ ಉತ್ಪನ್ನಗಳ ಬಳಕೆ ತಗ್ಗಿಸಿ, ಪರ್ಯಾಯ ಶಕ್ತಿಗಳಿಗೆ ಉತ್ತೇಜನ ಕೊಡುವ ಯೋಜನೆಗಳನ್ನು ನಡೆಸುತ್ತಿದೆ. ಈ ಕಾರ್ಯಗಳಿಗೆ ಬೇಕಾದ ಬಂಡವಾಳವನ್ನು ಕಲೆಹಾಕಲು ಸರ್ಕಾರಕ್ಕೆ ಗ್ರೀನ್ ಬಾಂಡ್ ಅನುಕೂಲ ಮಾಡಿಕೊಟ್ಟಿದೆ. ಸರ್ಕಾರದ ಸೋವರೀನ್ ಗ್ರೀನ್ ಬಾಂಡ್​​ಗಳಿಗೆ ಜನರಿಂದಲೂ ಉತ್ತಮ ಸ್ಪಂದನೆ ಸಿಕ್ಕಿದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 5:06 pm, Sun, 23 April 23

ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ