AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Share Market: ಷೇರುಪೇಟೆಯ ಟಾಪ್10 ಕಂಪನಿಗಳಲ್ಲಿ ಲಾಭ ಮಾಡಿದ್ದು ಎರಡೆಯಾ? ಷೇರುದಾರರಿಗೆ ಒಂದು ವಾರದಲ್ಲಿ 1.17 ಲಕ್ಷ ಕೋಟಿ ಹಣ ನಷ್ಟ

8 Companies Lose 1.17 Lakh Value In 1 Week: ಬಿಎಸ್​ಇಯ ಅತಿಹೆಚ್ಚು ಮೌಲ್ಯದ 10 ಕಂಪನಿಗಳ ಪೈಕಿ ಎಂಟು ಕಂಪನಿಗಳ ಷೇರುಗಳು ಬಹಳ ನಷ್ಟ ಕಂಡಿವೆ. ಷೇರು ಮೌಲ್ಯ ಕುಸಿತದಿಂದ ಒಂದು ವಾರದಲ್ಲಿ ಕಳೆದುಕೊಂಡ ಹಣ 1.17 ಲಕ್ಷ ಕೋಟಿ ಎನ್ನಲಾಗಿದೆ. ಇದರಲ್ಲಿ ಇನ್ಫೋಸಿಸ್ ಅತಿಹೆಚ್ಚು ಆಘಾತ ಅನುಭವಿಸಿದ ಕಂಪನಿ.

Share Market: ಷೇರುಪೇಟೆಯ ಟಾಪ್10 ಕಂಪನಿಗಳಲ್ಲಿ ಲಾಭ ಮಾಡಿದ್ದು ಎರಡೆಯಾ? ಷೇರುದಾರರಿಗೆ ಒಂದು ವಾರದಲ್ಲಿ 1.17 ಲಕ್ಷ ಕೋಟಿ ಹಣ ನಷ್ಟ
ಷೇರು ಮಾರುಕಟ್ಟೆ
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Apr 23, 2023 | 3:48 PM

Share

ಮುಖ್ಯಾಂಶಗಳು

  • ಬಿಎಸ್​​ಇಯ 10 ಅತಿಹೆಚ್ಚು ಮೌಲ್ಯದ ಕಂಪನಿಗಳಲ್ಲಿ ಎಂಟು ಕಂಪನಿಗಳು ಈ ವಾರ ನಷ್ಟ ಮಾಡಿಕೊಂಡಿವೆ.
  • ಇನ್ಫೋಸಿಸ್, ಆರ್​ಐಎಲ್, ಟಿಸಿಎಸ್, ಎಚ್​ಡಿಎಫ್​ಸಿ ಬ್ಯಾಂಕ್, ಹಿಂದೂಸ್ತಾನ್ ಯೂನಿಲಿವರ್, ಭಾರ್ತಿ ಏರ್​ಟೆಲ್, ಐಸಿಐಸಿಐ, ಎಚ್​ಡಿಎಫ್​ಸಿ ಷೇರುಗಳು ಕುಸಿತ ಕಂಡಿವೆ.
  • ಈ ಎಂಟು ಕಂಪನಿಗಳ ಷೇರುಕುಸಿತದಿಂದ ಒಟ್ಟು ಮೌಲ್ಯನಷ್ಟವಾಗಿರುವುದು ಒಂದು ವಾರದಲ್ಲಿ 1.17 ಲಕ್ಷ ಕೋಟಿ ರೂ

ನವದೆಹಲಿ: ಷೇರು ಮಾರುಕಟ್ಟೆಗಳಲ್ಲಿ ಒಂದಾದ ಬಾಂಬೆ ಸ್ಟಾಕ್ ಎಕ್ಸ್​ಚೇಂಜ್ (BSE) ಕಳೆದ ವಾರ ಬಹಳಷ್ಟು ನಷ್ಟ ಕಂಡಿದೆ. 30 ಷೆರುಗಳ ಬಿಎಸ್​ಇ ಸೆನ್ಸೆಕ್ಸ್ 775.96 ಪಾಯಿಂಟ್ಸ್ ಕಳೆದುಕೊಂಡಿದೆ. ಇನ್ಫೋಸಿಸ್ ಹಣಕಾಸು ವರದಿ ಮತ್ತು ಅದರ ಷೇರು ಕುಸಿತ ಕಳೆದ ವಾರದ ಹೈಲೈಟ್ ಎನಿಸಿದೆ. ಬಿಎಸ್​ಇಯ ಅತಿಹೆಚ್ಚು ಮೌಲ್ಯದ 10 ಕಂಪನಿಗಳ ಪೈಕಿ ಎಂಟು ಕಂಪನಿಗಳ ಷೇರುಗಳು ಬಹಳ ನಷ್ಟ ಕಂಡಿವೆ. ಈ 10 ಕಂಪನಿಗಳಲ್ಲಿ ಎರಡು ಷೇರು ಮಾತ್ರ ಈ ವಾರ ತುಸು ಸಕಾರಾತ್ಮಕವಾಗಿ ಬೆಳವಣಿಗೆ ಕಂಡಿದೆ. ಉಳಿದ ಎಂಟು ಕಂಪನಿಗಳು ಷೇರು ಮೌಲ್ಯ ಕುಸಿತದಿಂದ ಒಂದು ವಾರದಲ್ಲಿ ಕಳೆದುಕೊಂಡ ಹಣ (Market Capitalization) 1,17,493.78 ಕೋಟಿ ರೂ (1.17 ಲಕ್ಷ ಕೋಟಿ) ಎನ್ನಲಾಗಿದೆ. ಇದರಲ್ಲಿ ಇನ್ಫೋಸಿಸ್ ಅತಿಹೆಚ್ಚು ಆಘಾತ ಅನುಭವಿಸಿದ ಕಂಪನಿ.

ಬಿಎಸ್​ಇನಲ್ಲಿ 10 ಅತಿ ಹೆಚ್ಚು ಮೌಲ್ಯದ ಕಂಪನಿಗಳ ಪೈಕಿ ಇನ್ಫೋಸಿಸ್, ರಿಲಾಯನ್ಸ್ ಇಂಡಸ್ಟ್ರೀಸ್, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್), ಎಚ್​ಡಿಎಫ್​ಸಿ ಬ್ಯಾಂಕ್, ಹಿಂದೂಸ್ತಾನ್ ಯುನಿಲಿವರ್, ಭಾರ್ತಿ ಏರ್​ಟೆಲ್, ಐಸಿಐಸಿಐ, ಐಟಿಸಿ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಇವೆ. ಇವುಗಳ ಪೈಕಿ ಐಟಿಸಿ ಮತ್ತು ಎಸ್​ಬಿಐ ಹೊರತುಪಡಿಸಿ ಉಳಿದ ಕಂಪನಿಗಳ ಷೇರುಗಳು ಕಳೆದ ವಾರ ಕುಸಿತ ಕಂಡಿವೆ.

ಇನ್ಫೋಸಿಸ್​ಗೆ ಭಾರೀ ಆಘಾತ ತಂದ ಷೇರುಪೇಟೆ

ಇನ್ಫೋಸಿಸ್ ಏಪ್ರಿಲ್ 13ರಂದು ಕೊನೆಯ ತ್ರೈಮಾಸಿಕದ ತನ್ನ ಹಣಕಾಸು ವರದಿಯನ್ನು ಪ್ರಕಟಿಸಿತ್ತು. ಅದರಲ್ಲಿ ಇನ್ಫೋಸಿಸ್ ಲಾಭ ಹೆಚ್ಚಳವಾದರೂ, ನಿರೀಕ್ಷಿಸಿದ್ದಕ್ಕಿಂತ ಕಡಿಮೆ ಲಾಭ ಬಂದಿದೆ. ಅಲ್ಲದೇ ಮುಂದಿನ ವರ್ಷಕ್ಕೆ ಕಂಪನಿಯ ಆದಾಯ ಹೆಚ್ಚಳದ ನಿರೀಕ್ಷೆಯನ್ನೂ ಅದು ತಗ್ಗಿಸಿತು. ಈ ವರದಿ ಪ್ರಕಟವಾಗುತ್ತಲೇ ಷೇರುಪೇಟೆಯಲ್ಲಿ ಇನ್ಫೋಸಿಸ್​ಗೆ ಆಘಾತಗಳು ಎದುರಾದವು. ಷೇರು ಮೌಲ್ಯ ಕುಸಿತದ ಭರಾಟೆ ನಡೆಯಿತು. ಅದರ ಮಾರ್ಕೆಟ್ ವ್ಯಾಲ್ಯುಯೇಶನ್ 5,09,215 ಕೋಟಿಗೆ ಇಳಿಯಿತು. ಅಂದರೆ ಸುಮಾರು 66,854 ಕೋಟಿ ರೂನಷ್ಟು ಹಣವನ್ನು ಇನ್ಫೋಸಿಸ್ ನಷ್ಟ ಮಾಡಿಕೊಂಡಿತು.

ಇದನ್ನೂ ಓದಿ: Gold Prediction: ಇನ್ನೊಂದು ವರ್ಷದಲ್ಲಿ ಚಿನ್ನದ ಬೆಲೆ ಎಷ್ಟು ಹೆಚ್ಚಾಗುತ್ತದೆ? ನಿಮ್ಮ ಹಣ ಎಷ್ಟು ಬೆಳೆಯುತ್ತದೆ? ಇಲ್ಲಿದೆ ಡೀಟೇಲ್ಸ್

ಷೇರುಪೇಟೆಯಲ್ಲಿ ಈ ವಾರ ನಷ್ಟ ಮಾಡಿಕೊಂಡ ಇತರ ಕಂಪನಿಗಳು

  • ಎಚ್​ಡಿಎಫ್​ಸಿ ಬ್ಯಾಂಕ್​ಗೆ ಆದ ನಷ್ಟ 10,880 ಕೊಟಿ ರೂ
  • ಐಸಿಐಸಿಐ ಬ್ಯಾಂಕ್​ಗೆ ಆದ ನಷ್ಟ 10,462 ಕೋಟಿ ರೂ
  • ಟಿಸಿಎಸ್ ಸಂಸ್ಥೆಗೆ ಆದ ನಷ್ಟ 10,318 ಕೋಟಿ ರೂ
  • ಯೂನಿಲಿವರ್​ಗೆ ಆದ ನಷ್ಟ 8,458 ಕೋಟಿ ರೂ
  • ಎಚ್​ಡಿಎಫ್​ಸಿ ಸಂಸ್ಥೆಗೆ ಆದ ನಷ್ಟ 5,172 ಕೋಟಿ ರೂ
  • ರಿಲಾಯನ್ಸ್ ಇಂಡಸ್ಟ್ರೀಸ್ ಕಳೆದುಕೊಂಡ ಹಣ 4,566 ಕೋಟಿ ರೂ
  • ಭಾರ್ತಿ ಎರ್​ಟೆಲ್​ನ ಷೇರುಗಳ ಕುಸಿತದಿಂದ ಆದ ನಷ್ಟ 780 ಕೋಟಿ ರೂ

ಇನ್ನೊಂದೆಡೆ ಈ ಟಾಪ್ 10 ಕಂಪನಿಗಳಲ್ಲಿ ಐಟಿಸಿಯ ಮಾರ್ಕೆಟ್ ವ್ಯಾಲುಯೇಶನ್ 15,907 ಕೋಟಿ ರೂನಷ್ಟ ಹೆಚ್ಚಾಗಿದೆ. ಎಸ್​ಬಿಐ ಗಳಿಕೆ 8,796 ಕೋಟಿ ರೂನಷ್ಟು ಹೆಚ್ಚಳ ಕಂಡಿದೆ.

ಇದನ್ನೂ ಓದಿ: Lady Duped: ವರ್ಕ್ ಫ್ರಂ ಹೋಮ್ ಆಸೆಗೆ ಬಿದ್ದ ಯುವತಿಗೆ 11ಲಕ್ಷ ರೂ ಪಂಗನಾಮ; ದುಷ್ಕರ್ಮಿಗಳ ಚಾಕಚಕ್ಯತೆ ಬಗ್ಗೆ ಹುಷಾರ್..!

ಬಿಎಸ್​ಇ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಮೌಲ್ಯಯುತ 10 ಕಂಪನಿಗಳ ಪಟ್ಟಿ

ಈ ಪಟ್ಟಿಯಲ್ಲಿ ರಿಲಾಯನ್ಸ್ ಇಂಡಸ್ಟ್ರೀಸ್ ಮೊದಲ ಸ್ಥಾನದಲ್ಲಿದ್ದರೆ, ಭಾರ್ತಿ ಏರ್ಟೆಲ್ 10ನೇ ಸ್ಥಾನದಲ್ಲಿದೆ. ಈ ಪಟ್ಟಿ ಇಲ್ಲಿದೆ:

  • ರಿಲಾಯನ್ಸ್ ಇಂಡಸ್ಟ್ರೀಸ್ ಲಿ (ಆರ್​ಐಎಲ್)
  • ಟಿಸಿಎಸ್
  • ಎಚ್​ಡಿಎಫ್​ಸಿ ಬ್ಯಅಂಕ್
  • ಐಸಿಐಸಿಐ ಬ್ಯಾಂಕ್
  • ಹಿಂದೂಸ್ತಾನ್ ಯೂನಿಲಿವರ್
  • ಇನ್ಫೋಸಿಸ್
  • ಐಟಿಸಿ
  • ಎಚ್​ಡಿಎಫ್​ಸಿ
  • ಸ್ಟೇಟ್ ಬ್ಯಾಂಕ್ ಅಫ್ ಇಂಡಿಯಾ
  • ಭಾರ್ತಿ ಏರ್​ಟೆಲ್

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 2:01 pm, Sun, 23 April 23

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಸೌಜನ್ಯ ಕೇಸ್​​ ತನಿಖೆಗೆ SIT ಚಾಲನೆ: ಮೊದಲ ಸಭೆ, ಇನ್​ ಸೈಡ್​ ಮಾಹಿತಿ
ಸೌಜನ್ಯ ಕೇಸ್​​ ತನಿಖೆಗೆ SIT ಚಾಲನೆ: ಮೊದಲ ಸಭೆ, ಇನ್​ ಸೈಡ್​ ಮಾಹಿತಿ
ದಸರಾದಲ್ಲಿ ಭಾಗವಹಿಸಲು ಕನ್ನಡ ಚಿತ್ರರಂಗಕ್ಕೆ ಸಿಎಂ ವಿಶೇಷ ಆಹ್ವಾನ
ದಸರಾದಲ್ಲಿ ಭಾಗವಹಿಸಲು ಕನ್ನಡ ಚಿತ್ರರಂಗಕ್ಕೆ ಸಿಎಂ ವಿಶೇಷ ಆಹ್ವಾನ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಪ್ರಶಾಂತ್, ಗಗನ್ ತಮಾಷೆ ಮಾತಿಗೆ ಬಿದ್ದು ಬಿದ್ದು ನಕ್ಕ ಸೋನಿಕಾ ಗೌಡ
ಪ್ರಶಾಂತ್, ಗಗನ್ ತಮಾಷೆ ಮಾತಿಗೆ ಬಿದ್ದು ಬಿದ್ದು ನಕ್ಕ ಸೋನಿಕಾ ಗೌಡ
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್