Lady Duped: ವರ್ಕ್ ಫ್ರಂ ಹೋಮ್ ಆಸೆಗೆ ಬಿದ್ದ ಯುವತಿಗೆ 11ಲಕ್ಷ ರೂ ಪಂಗನಾಮ; ದುಷ್ಕರ್ಮಿಗಳ ಚಾಕಚಕ್ಯತೆ ಬಗ್ಗೆ ಹುಷಾರ್..!

How Woman Lost Rs. 11.45 Lakh: ವಾಟ್ಸಾಪ್ ಮೆಸೇಜ್ ಮೂಲಕ ವಂಚಕರ ಜಾಲಕ್ಕೆ ಬಿದ್ದ ಗುರುಗ್ರಾಮ್​ನ ಯುವತಿಯೊಬ್ಬಳು 11.45 ಲಕ್ಷ ರೂ ಕಳೆದುಕೊಂಡ ಘಟನೆ ನಡೆದಿದೆ. ಅಲ್ಪ ಮೊತ್ತದ ಹಣಕ್ಕೆ ಹೈರಿಟರ್ನ್ ಕೊಟ್ಟು ಯುವತಿಯನ್ನು ನಂಬಿಸಿ ವಂಚಕರು ದೊಡ್ಡ ಮೊತ್ತ ಲಪಟಾಯಿಸಿದ್ದಾರೆ.

Lady Duped: ವರ್ಕ್ ಫ್ರಂ ಹೋಮ್ ಆಸೆಗೆ ಬಿದ್ದ ಯುವತಿಗೆ 11ಲಕ್ಷ ರೂ ಪಂಗನಾಮ; ದುಷ್ಕರ್ಮಿಗಳ ಚಾಕಚಕ್ಯತೆ ಬಗ್ಗೆ ಹುಷಾರ್..!
ಸಾಂದರ್ಭಿಕ ಚಿತ್ರ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Apr 23, 2023 | 11:49 AM

ನವದೆಹಲಿ: ಮನೆಯಿಂದ ಕುಳಿತು ಕೆಲಸ ಮಾಡುವ (Work From Home) ಅವಕಾಶ ಸಿಕ್ಕರೆ ಹೇಗೆ? ಕೆಲವೇ ದಿನಗಳಲ್ಲಿ ಹಣ ಡಬಲ್ ಮಾಡುವ ಮಾರ್ಗ ಸಿಕ್ಕರೆ ಹೇಗೆ? ಯಾರೂ ಕೂಡ ಈ ಅವಕಾಶ ಕಳೆದುಕೊಳ್ಳುವ ಮನಸು ಮಾಡಲಾರರು. ಆದರೆ ಈ ಎರಡು ಅವಕಾಶಗಳ ಮೂಲಕ ದುಷ್ಕರ್ಮಿಗಳು ಯುವತಿಯೊಬ್ಬಳಿಗೆ ಲಕ್ಷಾಂತರ ರೂ ಪಂಗನಾಮ ಹಾಕಿರುವ ಘಟನೆ ದೆಹಲಿ ಬಳಿಯ ಗುರುಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಗುರುಗ್ರಾಮದ ಸೆಕ್ಟರ್ 85 ನಿವಾಸಿಯಾದ ಆಗ್ರಾ ಮೂಲದ ಪೂಜಾ ವರ್ಮಾ ಎಂಬ ಯುವತಿ 11 ಲಕ್ಷ ರೂ ಕಳೆದುಕೊಂಡು ಪರಿತಪಿಸುತ್ತಿದ್ದಾಳೆ. ಈಕೆ ಪೊಲೀಸ್ ಠಾಣೆಯಲ್ಲಿ ದೂರು ಕೊಟ್ಟಿದ್ದು, ತನಿಖೆ ನಡೆಯುತ್ತಿದೆ. ವಂಚಕರ ಕೈಯಿಂದ ಈ ಮಹಿಳೆ 11 ಲಕ್ಷ ಹೇಗೆ ಕಳೆದುಕೊಂಡರು ಎಂಬ ಘಟನೆ ಬಹಳ ಕುತೂಹಲಕಾರಿ ಎನಿಸಿದೆ. ಎಲ್ಲರಿಗೂ ಎಚ್ಚರಿಕೆಯ ಕರೆಗಂಟೆ ಎನಿಸಿದೆ.

ವರ್ಕ್ ಫ್ರಂ ಹೋಮ್ ಕೆಲಸದ ಅವಕಾಶ ಇದೆ ಎಂದು ಹೇಳಿ ವಂಚನೆಯ ಜಾಲ ಶುರು

ಪೊಲೀಸ್ ಠಾಣೆಯಲ್ಲಿ ಪೂಜಾ ವರ್ಮಾ ನೀಡಿರುವ ದೂರಿನ ಪ್ರಕಾರ, ಆಕೆಗೆ ವಾಟ್ಸಾಪ್​ನಲ್ಲಿ ವಂಚಕರು ಕೆಲಸದ ಅವಕಾಶ ಇರುವ ಬಗ್ಗೆ ಮೆಸೇಜ್ ಹಾಕಿದ್ದಾರೆ. ಪಾರ್ಟ್ ಟೈಮ್ ಕೆಲಸದ ಅವಕಾಶ ಇದ್ದು, ಮನೆಯಿಂದಲೇ ಕೆಲಸ ಮಾಡುವ ಅವಕಾಶ ಎಂದು ಪೂಜಾಗೆ ಆಸೆ ಹುಟ್ಟಿಸಿದ್ದಾರೆ.

ಇದನ್ನೂ ಓದಿಬೇರೆ ಯುವಕರೊಂದಿಗೆ ಟಿಕ್ ಟಾಕ್ ಮಾಡುತ್ತಿದ್ದ ಪ್ರಿಯತಮೆಯನ್ನು ಕೊಲೆ ಮಾಡಿದ ಪಾಗಲ್ ಪ್ರೇಮಿ ಅರೆಸ್ಟ್

ವಿವಿಧ ಯೂಟ್ಯೂಬ್ ಚಾನಲ್​ಗಳನ್ನು ಸಬ್​ಸ್ಕ್ರೈಬ್ ಆಗುವುದು ಸೇರಿದಂತೆ ಕೆಲವೊಂದಿಷ್ಟು ಕೆಲಸಗಳನ್ನು ಮಾಡಬೇಕು ಎಂದು ವಂಚಕರು ಆ ಯುವತಿಗೆ ತಿಳಿಸುತ್ತಾರೆ. ಅದಾದ ಬಳಿಕ ಆ ವಂಚಕರು ಕಳುಹಿಸುವ ಲಿಂಕ್ ಮೂಲಕ ಯುವತಿಯು ಟೆಲಿಗ್ರಾಮ್ ಚಾನಲ್​ಗೆ ಸೇರ್ಪಡೆಯಾಗುತ್ತಾರೆ. ಅಲ್ಲಿಂದ ವಂಚಕರು ಪೂಜಾ ವರ್ಮಾಗೆ ಪಂಗನಾಮ ಹಾಕುವ ಆಟ ಶರುವಿಟ್ಟುಕೊಳ್ಳುತ್ತಾರೆ.

ಹಣ ಡಬಲ್ ಆಗುವ ಆಸೆಗೆ ಬಿದ್ದಳಾ ಯುವತಿ?

ವಂಚಕರ ಗಾಳಕ್ಕೆ ಬಿದ್ದ ಯುವತಿ ಟೆಲಿಗ್ರಾಂನ ಗ್ರೂಪ್​ವೊಂದಕ್ಕೆ ಸೇರುತ್ತಾಳೆ. ಅಲ್ಲಿ ಆಕೆ ಮನೆಯಿಂದಲೇ ಕೂತು ಯೂಟ್ಯೂಬ್ ಚಾನಲ್​ಗಳನ್ನು ಸಬ್​ಸ್ಕ್ರೈಬ್ ಆಗುವಂತೆ ತಿಳಿಸಲಾಗುತ್ತದೆ. ಇದರ ಜೊತೆಗೆ, ಒಂದೊಳ್ಳೆಯ ಸ್ಕೀಮ್ ಇದ್ದು, ಬ್ಯಾಂಕ್ ಖಾತೆಯೊಂದಕ್ಕೆ 5,000 ರೂ ಹಾಕುವಂತೆ ವಂಚಕರು ತಿಳಿಸುತ್ತಾರೆ. ಸಣ್ಣ ಮೊತ್ತ ಅಲ್ಲವಾ ಎಂದು ಪೂಜಾ ವರ್ಮಾ 5,000 ರೂ ಹಣವನ್ನು ಈ ಬ್ಯಾಂಕ್ ಖಾತೆಗೆ ಹಾಕುತ್ತಾಳೆ.

ಇದನ್ನೂ ಓದಿಬೆಂಗಳೂರಿನಲ್ಲಿ ನಕಲಿ ದಾಖಲಾತಿ ದಂಧೆ; ವಿದೇಶಿ ವಿದ್ಯಾರ್ಥಿಗಳಿಗೆ ವಂಚಿಸುತ್ತಿದ್ದ ಆರೋಪಿ ಅರೆಸ್ಟ್

ಪೂಜಾ ವರ್ಮಾಗೆ ಅಚ್ಚರಿ ಎನಿಸುವಂತೆ ಕೆಲವೇ ದಿನಗಳಲ್ಲಿ ಆಕೆಗೆ 6,440 ರೂ ರಿಟರ್ನ್ ಬರುತ್ತದೆ. ಇದು ಯಾವುದೋ ಬೋಗಸ್ ಸ್ಕೀಮ್ ಅಲ್ಲ ಎಂದು ಪೂಜಾ ನಂಬಿಬಿಡುತ್ತಾಳೆ. ಬಳಿಕ ಕಂಗನಾ ಹೆಸರಿನಲ್ಲಿ ಯುವತಿಯೊಬ್ಬಳು ಪೂಜಾ ವರ್ಮಾಗೆ ಕರೆ ಮಾಡಿ 10,000 ರೂ ಹೂಡಿಕೆ ಮಾಡುವಂತೆ ಕೇಳುತ್ತಾಳೆ. ಇದಕ್ಕೆ ಪೂಜಾ ಒಪ್ಪುತ್ತಾಳೆ. ಆ ನಂತರ, ಕಂಗನಾ ಈ ಸ್ಕೀಮ್​ನಲ್ಲಿ 1,00,000 ರೂ ಹೂಡಿಕೆ ಮಾಡಿದರೆ ಅದರಿಂದ ಬರುವ ಲಾಭಗಳನ್ನು ಆಗಾಗ್ಗೆ ಹಿಂಪಡೆಯಬಹುದು ಎಂದು ಹೇಳುತ್ತಾಳೆ. ಇದೇ ರೀತಿ ಪೂಜಾ ವರ್ಮಾ ಒಟ್ಟು 11.45 ಲಕ್ಷ ರೂ ಹಣವನ್ನು ವಂಚಕರು ಹೇಳಿದ ಬ್ಯಾಂಕ್ ಖಾತೆಗಳಿಗೆ ಹಾಕುತ್ತಾಳೆ. ಬಳಿಕ ವಂಚಕರ ಗ್ಯಾಂಗ್ ಕಣ್ಮರೆಯಾಗುತ್ತದೆ.

ಹೈ ರಿಟರ್ನ್ ಆಸೆಗೆ ಬೀಳದಿರಿ

ನಮ್ಮ ವಾಟ್ಸಾಪ್​ಗೆ ನಾನಾ ರೀತಿಯ ಆಮಿಷಗಳಿರುವ ಮೆಸೇಜ್​ಗಳು ಬರುವುದನ್ನು ಬಹುತೇಕ ನಾವೆಲ್ಲರೂ ನೋಡಿದ್ದೇವೆ. ಇದರಲ್ಲಿ ಕೊಡಲಾಗಿರುವ ಲಿಂಕ್​ಗಳು ನಿಗೂಢವಾಗಿರುತ್ತವೆ. ನಿಮ್ಮ ಹಣಕ್ಕೆ ಬಹಳ ಹೆಚ್ಚು ಬಡ್ಡಿ ಕೊಡುತ್ತೇವೆ; ಈ ಲಿಂಕ್ ಕ್ಲಿಕ್ ಮಾಡಿದರೆ ಉಚಿತ ಆ್ಯಪಲ್ ಫೋನ್ ಸಿಗುತ್ತೆ ಇತ್ಯಾದಿ ಭಾರೀ ಅಸೆ ಹುಟ್ಟಿಸಲಾಗುತ್ತದೆ. ಇವು ವಂಚಕ ಮೆಸೇಜ್​ಗಳೇ ಆಗಿರುವ ಸಾಧ್ಯತೆ ಹೆಚ್ಚು. ಹಾಗೆಯೇ, ಸ್ಕೀಮ್​ನ ಲಾಭ ಪಡೆಯಲು ಅಥವಾ ಗಿಫ್ಟ್ ಪಡೆಯಲು ಮೊದಲೇ ಒಂದಿಷ್ಟು ಹಣ ಪಾವತಿ ಮಾಡಬೇಕು ಎಂದೆಲ್ಲಾ ಹೇಳಿದಾಗ ಎಚ್ಚೆತ್ತುಕೊಳ್ಳುವುದು ಅನಿವಾರ್ಯ.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಇನ್ನಷ್ಟು ಅಪರಾಧ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 11:49 am, Sun, 23 April 23

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್