TV9 Kannada Lifestyle, Auto, Furniture Expo 2023: ಬೆಂಗಳೂರಿನ ಅರಮನೆ ಮೈದಾನದಲ್ಲಿ ಏಪ್ರಿಲ್ 29ರಿಂದ ಮೇ 1ರವರೆಗೂ ಇದೆ ಅಪೂರ್ವ ಅವಕಾಶ

Lifestyle Expo In Bangalore Palace Ground: 2023 ಏಪ್ರಿಲ್ 29, 30 ಮತ್ತು ಮೇ 1ರಂದು ಬೆಂಗಳೂರಿನ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಟಿವಿ9 ಕನ್ನಡ ಲೈಫ್​ಸ್ಟೈಲ್ ಫರ್ನಿಚರ್ ಅಟೊಮೊಬೈಲ್ ಎಕ್ಸ್​ಪೋ ಕಾರ್ಯಕ್ರಮ ನಡೆಯಲಿದೆ. ಇದರ ವಿಶೇಷತೆಗಳನ್ನು ತಿಳಿಯಿರಿ.

TV9 Kannada Lifestyle, Auto, Furniture Expo 2023: ಬೆಂಗಳೂರಿನ ಅರಮನೆ ಮೈದಾನದಲ್ಲಿ ಏಪ್ರಿಲ್ 29ರಿಂದ ಮೇ 1ರವರೆಗೂ ಇದೆ ಅಪೂರ್ವ ಅವಕಾಶ
ಟಿವಿ9 ಎಕ್ಸ್​ಪೋ
Follow us
TV9 Web
| Updated By: ಸುಗ್ಗನಹಳ್ಳಿ ವಿಜಯಸಾರಥಿ

Updated on:Apr 25, 2023 | 12:45 PM

ಭಾರತದ ಗಾರ್ಡನ್ ಸಿಟಿ ಮತ್ತು ಟೆಕ್ನಾಲಜಿ ಹಬ್ ಎಂದೇ ಬೆಂಗಳೂರು ಹೆಸರುವಾಸಿಯಾಗಿದೆ. ವಿವಿಧ ಸ್ಟಾರ್ಟ್‌ಅಪ್‌ಗಳು ಮತ್ತು ತಂತ್ರಜ್ಞಾನ ಆಧಾರಿತ ಕಂಪನಿಗಳು ಬೆಂಗಳೂರಿನಲ್ಲಿ ತಮ್ಮ ಪ್ರಧಾನ ಕಛೇರಿಯನ್ನು ಹೊಂದಿವೆ. ಬೆಂಗಳೂರು ತನ್ನ ಕಾಸ್ಮೋಪಾಲಿಟನ್ ಸಂಸ್ಕೃತಿಯಿಂದಾಗಿ ಫ್ಯಾಷನ್ ಕೇಂದ್ರವಾಗಿಯೂ ಹೆಸರುವಾಸಿಯಾಗಿದೆ. ಈ ಬೇಸಿಗೆಯಲ್ಲಿ ತಮ್ಮ ಶಾಪಿಂಗ್‌ಗಾಗಿ ರಿಯಾಯಿತಿ ಮತ್ತು ಹಣಕ್ಕೆ ಮೌಲ್ಯದ ಡೀಲ್‌ಗಳನ್ನು ಹುಡುಕುತ್ತಿರುವವರಿಗೆ, TV9 ಕನ್ನಡ ಲೈಫ್‌ಸ್ಟೈಲ್ ಆಟೋಮೊಬೈಲ್ ಮತ್ತು ಫರ್ನಿಚರ್ ಎಕ್ಸ್‌ಪೋ (TV9 Kannada Lifestyle, Automobile, Furniture Expo 2023) ಅತ್ಯುತ್ತಮ ಅವಕಾಶವಾಗಿದೆ. ಟಿವಿ9 ನೆಟ್‌ವರ್ಕ್, ಭಾರತದ ಅತಿದೊಡ್ಡ ಸುದ್ದಿ ನೆಟ್‌ವರ್ಕ್, ಹೈದರಾಬಾದ್, ವೈಜಾಗ್, ಕೋಲ್ಕತ್ತಾ, ಮೈಸೂರು, ಮಂಗಳೂರು, ಅಹಮದಾಬಾದ್ ಮತ್ತು ಸೂರತ್ ಸೇರಿದಂತೆ ಭಾರತದಾದ್ಯಂತದ ಪ್ರಮುಖ ನಗರಗಳಲ್ಲಿ ಪ್ರಾಪರ್ಟಿ ಎಕ್ಸ್‌ಪೋಗಳನ್ನು ಆಯೋಜಿಸುತ್ತಿದೆ. ಹಿಂದಿನ TV9 ಲೈಫ್‌ಸ್ಟೈಲ್ ಆಟೋಮೊಬೈಲ್ ಮತ್ತು ಫರ್ನಿಚರ್ ಎಕ್ಸ್‌ಪೋ 2022 ರ ಅಕ್ಟೋಬರ್‌ನಲ್ಲಿ ಬೆಂಗಳೂರಿನಲ್ಲಿ ಆಯೋಜಿಸಲಾಗಿತ್ತು. ಇದು 25,000 ಕ್ಕೂ ಹೆಚ್ಚು ಸಂದರ್ಶಕರನ್ನು ಕಂಡು, ಮಾರುಕಟ್ಟೆಯಲ್ಲಿ ಹೊಸ ಮಾನದಂಡ ಸೃಷ್ಟಿಸಿತ್ತು.

TV9 ಕನ್ನಡ ಜೀವನಶೈಲಿ ಆಟೋಮೊಬೈಲ್ ಮತ್ತು ಪೀಠೋಪಕರಣಗಳ ಎಕ್ಸ್‌ಪೋ 2023 ಏಪ್ರಿಲ್ 29, 30 ಮತ್ತು ಮೇ 1 ರಂದು ಬೆಂಗಳೂರಿನ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ನಡೆಯಲಿದೆ. ಬಹು ನಿರೀಕ್ಷಿತ ಈವೆಂಟ್ ಒಂದೇ ಸೂರಿನಡಿ ಆಟೋಮೊಬೈಲ್, ಪೀಠೋಪಕರಣಗಳು, ಎಲೆಕ್ಟ್ರಾನಿಕ್ಸ್, ಫ್ಯಾಷನ್ ಮತ್ತು ಸ್ವಾಸ್ಥ್ಯ ಸೇರಿದಂತೆ ವ್ಯಾಪಕ ಶ್ರೇಣಿಯ ಗ್ರಾಹಕ ಸೇವೆಗಳನ್ನು ಪ್ರದರ್ಶಿಸುತ್ತದೆ.

ಪ್ರಮುಖ ಬ್ರಾಂಡ್​ಗಳ ಪ್ರತಿನಿಧಿಗಳೊಂದಿಗೆ ಗ್ರಾಹಕರು ನೇರ ಸಂಪರ್ಕ ಹೊಂದಲು ಎಕ್ಸ್​ಪೋ ವೇದಿಕೆ ಹಾಕಿಕೊಡುತ್ತದೆ. ಇದರಿಂದ ಮಾರಾಟಗಾರರು ಮತ್ತು ಗ್ರಾಹಕರು ಇಬ್ಬರಿಗೂ ಎಕ್ಸ್​ಪೋದಿಂದ ಅನುಕೂಲವಾಗುತ್ತದೆ. ತಮ್ಮ ಮನೆಗೆ ಶಾಪಿಂಗ್ ಮಾಡಲು, ನವೀಕರಿಸಲು ಅಥವಾ ಹೊಸ ವಸ್ತುಗಳನ್ನು ಖರೀದಿಸಲು ಯೋಜಿಸುವವರಿಗೆ ಎಕ್ಸ್‌ಪೋ ಪ್ರಯೋಜನ ನೀಡುತ್ತದೆ. ಉತ್ತಮ ಡೀಲ್‌ಗಳ ಹುಡುಕಾಟದಲ್ಲಿ ಜನರು ಅಲ್ಲಿ ಇಲ್ಲಿ ತಲೆ ಕೆಡಿಸಿಕೊಂಡು ಸುತ್ತಬೇಕಿಲ್ಲ. ಈ ಎಕ್ಸ್​ಪೋ ನಿಸ್ಸಂದೇಹವಾಗಿ ಮೆಗಾ ಅವಕಾಶವಾಗಿದೆ.

ಇದನ್ನೂ ಓದಿTV9 Network: ವಿಶ್ವದ ಮೊದಲ ನ್ಯೂಸ್ ಒಟಿಟಿ ನ್ಯೂಸ್9 ಪ್ಲಸ್ ಮತ್ತು ಟಿವಿ9 ನೆಟ್ವರ್ಕ್ ಸಿಇಒ ಬರುಣ್ ದಾಸ್​ಗೆ WCRCINTಯಿಂದ ಪ್ರಶಸ್ತಿ, ಗೌರವ

TV9 ಕನ್ನಡ ಲೈಫ್‌ಸ್ಟೈಲ್ ಆಟೋಮೊಬೈಲ್ ಮತ್ತು ಪೀಠೋಪಕರಣಗಳ ಎಕ್ಸ್‌ಪೋ ನಮ್ಮ ಸಮಾಜದ ಎಲ್ಲಾ ಸ್ತರಗಳ ಜನರಿಗೆ ತಲುಪಬಲ್ಲ ಆಯ್ಕೆಗಳನ್ನು ಹೊಂದಿದೆ. ಕಡಿಮೆ ಬೆಲೆಯಿಂದ ಹಿಡಿದು ಐಷಾರಾಮಿಯವರೆಗೆ ಹಲವಾರು ಆಯ್ಕೆಗಳನ್ನು ನೀಡುತ್ತದೆ. ಗ್ರಾಹಕರು ತಮ್ಮ ಅಭಿರುಚಿ, ಬಜೆಟ್ ಮತ್ತು ಆದ್ಯತೆಗಳಿಗೆ ಅನುಗುಣವಾಗಿ ತಮ್ಮ ಆಯ್ಕೆಯನ್ನು ತೆಗೆದುಕೊಳ್ಳಬಹುದು.

ಸಂದರ್ಶಕರ ಅನುಕೂಲಕ್ಕಾಗಿ ಮತ್ತು ಉಚಿತ ಪ್ರವೇಶಕ್ಕಾಗಿ ವಿಶಾಲವಾದ ಪಾರ್ಕಿಂಗ್ ಸ್ಥಳ ಲಭ್ಯವಿರುವುದರಿಂದ, ಶಾಪಿಂಗ್ ಪ್ರಿಯರು ಈ ಸುವರ್ಣ ಅವಕಾಶವನ್ನು ಕಳೆದುಕೊಳ್ಳಲು ಯಾವುದೇ ಕಾರಣವಿಲ್ಲ!

ಪ್ರದರ್ಶನ ವಿವರ:

TV9 Kannada Lifestyle Automobile and Furniture Expo

ದಿನಾಂಕ: 2023 ಏಪ್ರಿಲ್ 29, 30 ಮತ್ತು ಮೇ 1

ಸ್ಥಳ: ತ್ರಿಪುರವಾಸಿನಿ, ಅರಮನೆ ಮೈದಾನ, ಬೆಂಗಳೂರು

Published On - 12:44 pm, Tue, 25 April 23

ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ
ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ
ಕೊಟ್ಟ ಮಾತಿನಂತೆ ಉಡುಗೊರೆ ಕಳಿಸಿದ ಕಿಚ್ಚ ಸುದೀಪ್, ಭಾವುಕಗೊಂಡ ಹನುಮಂತ
ಕೊಟ್ಟ ಮಾತಿನಂತೆ ಉಡುಗೊರೆ ಕಳಿಸಿದ ಕಿಚ್ಚ ಸುದೀಪ್, ಭಾವುಕಗೊಂಡ ಹನುಮಂತ
ಸರ್ಕಾರಿ ನೌಕರರಿಗೆ ಅನ್ನಭಾಗ್ಯ ಸ್ಕೀಮಿನ ಅಕ್ಕಿ ಕೊಡಬೇಕಿಲ್ಲ: ಸಿದ್ದರಾಮಯ್ಯ
ಸರ್ಕಾರಿ ನೌಕರರಿಗೆ ಅನ್ನಭಾಗ್ಯ ಸ್ಕೀಮಿನ ಅಕ್ಕಿ ಕೊಡಬೇಕಿಲ್ಲ: ಸಿದ್ದರಾಮಯ್ಯ