LIC ಕ್ಲೇಮ್ ಸೆಟ್ಲ್​ಮೆಂಟ್ ದಾಖಲಾತಿ ಸಲ್ಲಿಸುವುದಕ್ಕೆ ಸ್ವಲ್ಪ ಮಟ್ಟಿಗೆ ವಿನಾಯಿತಿ

|

Updated on: May 07, 2021 | 9:36 PM

LIC policy claim: ಕೋವಿಡ್ 19 ವ್ಯಾಪಕವಾಗಿ ಹಬ್ಬುತ್ತಿರುವುದಕ್ಕೆ ಕ್ಲೇಮ್ ಸೆಟ್ಲ್​ಮೆಂಟ್​ಗಳಿಗೆ ಎಲ್​ಐಸಿಯಿಂದ ಕೆಲವು ವಿನಾಯಿತಿಗಳನ್ನು ಘೋಷಿಸಲಾಗಿದೆ.

LIC ಕ್ಲೇಮ್ ಸೆಟ್ಲ್​ಮೆಂಟ್ ದಾಖಲಾತಿ ಸಲ್ಲಿಸುವುದಕ್ಕೆ ಸ್ವಲ್ಪ ಮಟ್ಟಿಗೆ ವಿನಾಯಿತಿ
ಪ್ರಾತಿನಿಧಿಕ ಚಿತ್ರ
Follow us on

ಕೊರೊನಾ ಬಿಕ್ಕಟ್ಟು ತೀವ್ರವಾಗಿರುವ ಹಿನ್ನೆಲೆಯಲ್ಲಿ ಜೀವ ವಿಮಾ ನಿಗಮದಿಂದ (ಎಲ್​ಐಸಿ) ಕ್ಲೇಮ್​ ವಿಲೇವಾರಿಗೆ ಅಗತ್ಯ ಇರುವ ದಾಖಲಾತಿಗಳಿಂದ ವಿನಾಯಿತಿ ನೀಡಲಾಗಿದೆ. ಇನ್ಷೂರೆನ್ಸ್ ಮಾಡಿಸಿಕೊಂಡ ವ್ಯಕ್ತಿಯು ಮೃತಪಟ್ಟಲ್ಲಿ ಅವರ ಹತ್ತಿರದ ಸಂಬಂಧಿಕರ ಬಳಿ ಪಾಲಿಕೆಯ ಡೆತ್ ಸರ್ಟಿಫಿಕೇಟ್ ಇಲ್ಲದಿದ್ದಲ್ಲಿ (ವಿಳಂಬದ ಕಾರಣಕ್ಕೆ), ಸಾವಿಗೆ ಸಾಕ್ಷ್ಯವಾಗಿ ಪರ್ಯಾಯವಾದ ದಾಖಲಾತಿಗಳನ್ನು ಸಲ್ಲಿಸುವುದಕ್ಕೆ ಅವಕಾಶ ನೀಡಲಾಗಿದೆ. ಇದರಲ್ಲಿ ಡೆತ್ ಸರ್ಟಿಫಿಕೇಟ್, ಮೃತಪಟ್ಟ ದಿನಾಂಕ ಮತ್ತು ಸಮಯವನ್ನು ಒಳಗೊಂಡ ಡಿಸ್​ಚಾರ್ಜ್ ಸಮ್ಮರಿ ಇರಬೇಕು. ಸರ್ಕಾರಿ, ಎಂಪ್ಲಾಯೀಸ್ ಸ್ಟೇಟ್ ಇನ್ಷೂರೆನ್ಸ್ ಕಾರ್ಪೊರೇಷನ್, ಸಶಸ್ತ್ರ ಪಡೆ ಮತ್ತು ಕಾರ್ಪೊರೇಟ್ ಆಸ್ಪತ್ರೆಗಳಲ್ಲಿನ ಡೆತ್ ಸಮ್ಮರಿಯನ್ನು ಸಹ ಸ್ವೀಕರಿಸಲಾಗುತ್ತದೆ.

ಆದರೆ, ಈ ದಾಖಲಾತಿಗಳಿಗೆ ಎಲ್​ಐಸಿ ಕ್ಲಾಸ್ 1 ಅಧಿಕಾರಿಗಳು ಅಥವಾ ಅಭಿವೃದ್ಧಿ ಅಧಿಕಾರಿ ಸಹ ಸಹಿ ಹಾಕಿರಬೇಕು. ಅಂತ್ಯಸಂಸ್ಕಾರದ ಪ್ರಮಾಣಪತ್ರ ಅಥವಾ ಸರಿಯಾದ ಗುರುತಿನ ಪತ್ರವನ್ನು ಸಂಬಂಧಪಟ್ಟ ಪ್ರಾಧಿಕಾರದಿಂದ ಪಡೆದಿರುವುದನ್ನು ಆ ಕ್ಲಾಸ್ 1 ಅಧಿಕಾರಿಗಳು ಗುರುತಿಸಬೇಕು. ಕೋವಿಡ್- 19ಗೆ ಹೊರತಾದ ಸಾವಿನ ಪ್ರಕರಣಗಳಲ್ಲಿ ಎಷ್ಟು ಬೇಗವೋ ಅಷ್ಟು ಬೇಗ ಪಾಲಿಕೆಯಿಂದ ಡೆತ್ ಸರ್ಟಿಫಿಕೇಟ್ ಒದಗಿಸಬೇಕು.

ಮೇ 7ನೇ ತಾರೀಕಿನ ಶುಕ್ರವಾರ, ಬೆಳಗ್ಗೆ 8 ಗಂಟೆಗೆ ಅನ್ವಯಿಸುವಂತೆ ಭಾರತದಲ್ಲಿ 4,14,188 ಹೊದ ಕೋವಿಡ್- 19 ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, 24 ಗಂಟೆಯಲ್ಲಿ 3915 ಸಾವಿನ ಪ್ರಕರಣಗಳು ಸಂಭವಿಸಿವೆ. ಇದು ಆರೋಗ್ಯ ಸಚಿವಾಲಯದಿಂದ ನೀಡಿರುವ ಮಾಹಿತಿಯಾಗಿದೆ. ಒಟ್ಟಾರೆಯಾಗಿ ಸಾವಿನ ಸಂಖ್ಯೆಯು 2,34,083 ಮತ್ತು ಒಟ್ಟಾರೆ ಪ್ರಕರಣಗಳು 2.14 ಕೋಟಿ ಆಗಿದೆ.

ಇನ್ನು ಕ್ಲೇಮ್​ಗಳ ಮೆಚ್ಯೂರಿಟಿಯಲ್ಲೂ ಸ್ವಲ್ಪ ಮಟ್ಟಿಗೆ ವಿನಾಯಿತಿಗಳನ್ನು ನೀಡಲಾಗಿದೆ. ಹತ್ತಿರದ ಯಾವುದೇ ಎಲ್​ಐಸಿ ಕಚೇರಿಯಲ್ಲಿ ಮೆಚ್ಯೂರಿಟಿ ಕ್ಲೇಮ್​ಗಳನ್ನು ಸಲ್ಲಿಸಬಹುದು ಎನ್ನಲಾಗಿದೆ. ಅಂದ ಹಾಗೆ ಮೇ 10ರಿಂದ ಅನ್ವಯ ಆಗುವಂತೆ ಸರ್ಕಾರದ ಅಧಿಸೂಚನೆಯ ಪ್ರಕಾರ, ಸೋಮವಾರದಿಂದ ಶುಕ್ರವಾರ ಬೆಳಗ್ಗೆ 10ರಿಂದ ಸಂಜೆ 5.30ರ ತನಕ ಮಾತ್ರ ಎಲ್​ಐಸಿ ಕಚೇರಿಗಳು ಕಾರ್ಯ ನಿರ್ವಹಣೆ ಮಾಡುತ್ತವೆ.

ಇದನ್ನೂ ಓದಿ: LIC Jeevan Labh policy : ಎಲ್​ಐಸಿ ಜೀವನ್​ ಲಾಭ್​ ಪಾಲಿಸಿ ಬಗ್ಗೆ ನಿಮಗೆ ಗೊತ್ತಿರಲೇಬೇಕಾದ ಮಾಹಿತಿಗಳಿವು

ಇದನ್ನೂ ಓದಿ: LIC Jeevan Saathi: ಗಂಡ- ಹೆಂಡತಿಗೆ ಇನ್ಷೂರೆನ್ಸ್ ಪಾಲಿಸಿ; ದಿನಕ್ಕೆ 120ರಂತೆ ಪಾವತಿಸಿ, 27 ಲಕ್ಷ ಉಳಿಸಿ

(LIC relaxes claim settlement documents due to corona second wave in India)