Sign In

By signing in or creating an account, you agree with Associated Broadcasting Company's Terms & Conditions and Privacy Policy.

Best Data Plan: ಏರ್​ಟೆಲ್ Vs ಜಿಯೋ Vs ಬಿಎಸ್​ಎನ್​ಎಲ್ Vs ವೊಡಾಫೋನ್ ಐಡಿಯಾ ರೂ. 399 ಪ್ರೀಪೇಯ್ಡ್ ಪ್ಲಾನ್​ನಲ್ಲಿ ಏನೇನು ಆಫರ್?​

ಏರ್​ಟೆಲ್​, ಬಿಎಸ್​ಎನ್​ಎಲ್​, ಜಿಯೋ, Vi ಪ್ರೀಪೇಯ್ಡ್ ಪ್ಲಾನ್​ಗಳು 500 ರೂಪಾಯಿಗಳ ಒಳಗೆ ಯಾವುದು ಬೆಸ್ಟ್ ಎಂಬುದರ ವಿವರಣೆ ಇಲ್ಲಿದೆ.

Best Data Plan: ಏರ್​ಟೆಲ್ Vs ಜಿಯೋ Vs ಬಿಎಸ್​ಎನ್​ಎಲ್ Vs ವೊಡಾಫೋನ್ ಐಡಿಯಾ ರೂ. 399 ಪ್ರೀಪೇಯ್ಡ್ ಪ್ಲಾನ್​ನಲ್ಲಿ ಏನೇನು ಆಫರ್?​
ಸಾಂದರ್ಭಿಕ ಚಿತ್ರ
Follow us
Srinivas Mata
|

Updated on:May 07, 2021 | 7:28 PM

ಮೊಬೈಲ್ ಪ್ರೀಪೇಯ್ಡ್ ಪ್ಲಾನ್​ಗಳಲ್ಲೇ ಬೆಸ್ಟ್ ಆದಂಥವುಗಳಿಗಾಗಿ ಹುಡುಕುತ್ತಿದ್ದೀರಾ? 28 ದಿನಗಳಿಗಿಂತ ಹೆಚ್ಚಿನ ವ್ಯಾಲಿಡಿಟಿ ಇರಬೇಕು ಅಂದುಕೊಳ್ಳುತ್ತೀರಾ? ಇಲ್ಲಿದೆ ನೋಡಿ, ದಿನಕ್ಕೆ 1.5 ಜಿಬಿ ಡೇಟಾ ನೀಡುವ ಹಾಗೂ 56 ದಿನಗಳ ವ್ಯಾಲಿಡಿಟಿ ಇರುವ ಪ್ಲಾನ್​ಗಳಿವು. ಈ ಪ್ಲಾನ್​ಗಳು 500 ರೂಪಾಯಿ ಒಳಗಿವೆ. ಏರ್​ಟೆಲ್, ಜಿಯೋ ಹಾಗೂ ವೊಡಾಫೋನ್​ಐಡಿಯಾ (Vi) ಈ ಮೂರೂ ದಿನಕ್ಕೆ 1.5 ಜಿಬಿ ಡೇಟಾ ಪ್ಲಾನ್​ ಜತೆಗೆ 56 ದಿನಗಳ ವ್ಯಾಲಿಡಿಟಿಯನ್ನು ರೂ. 399ಕ್ಕೆ ನೀಡುತ್ತಿದೆ. ಒಂದು ವೇಳೆ ಈ ಮೇಲೆ ತಿಳಿಸಿದಂಥ ಡೇಟಾ, ವ್ಯಾಲಿಡಿಟಿ ಬೇಕೆಂದರೆ ಏರ್​ಟೆಲ್, ಜಿಯೋ ಹಾಗೂ ವೊಡಾಫೋನ್​ಐಡಿಯಾ ಈ ಪೈಕಿ ಒಂದನ್ನು ಆರಿಸಿಕೊಳ್ಳಬಹುದು.

ಆದರೆ, ಬಿಎಸ್​ಎನ್​ಎಲ್​ನಿಂದ 399 ರೂಪಾಯಿಯ ಪ್ರೀಪೇಯ್ಡ್​ ಪ್ಲಾನ್​ಗೆ 1 ಜಿಬಿ ಡೇಟಾ ಮಾತ್ರ ನಿತ್ಯ ನೀಡುತ್ತಿದ್ದು, 80 ದಿನಗಳ ವ್ಯಾಲಿಡಿಟಿ ಇದೆ. ಈಗ ಏರ್​ಟೆಲ್, ಜಿಯೋ, ಬಿಎಸ್​ಎನ್​ಎಲ್ ಮತ್ತು ವೊಡಾಫೋನ್​ಐಡಿಯಾದಿಂದ ಡಬಲ್ ಡೇಟಾ ನೀಡಲಾಗುತ್ತಿದ್ದು, ನಿತ್ಯವೂ 3 ಜಿಬಿ ಡೇಟಾ, ಅರ್ಧದಷ್ಟು ವ್ಯಾಲಿಡಿಟಿಗೆ ಸಿಗುತ್ತದೆ. ದರ ಮಾತ್ರ ಅದೇ ಇರುತ್ತದೆ.

ಏರ್​ಟೆಲ್​ 399 ಪ್ರೀಪೇಯ್ಡ್ ಪ್ಲಾನ್ ಏರ್​ಟೆಲ್​ನ ಈ ಪ್ರೀಪೇಯ್ಡ್​ ಆಫರ್ ನಿತ್ಯವೂ 1.5 ಜಿಬಿ ಡೇಟಾ ಒದಗಿಸುತ್ತದೆ. ಜತೆಗೆ ಅನಿಯಮಿತವಾದ ಕರೆ ಹಾಗೂ 56 ದಿನಗಳ ವ್ಯಾಲಿಡಿಟಿ ಇರುತ್ತದೆ. ಈ ಪ್ಲಾನ್​ನಲ್ಲಿ ದಿನಕ್ಕೆ 100 ಎಸ್ಸೆಮ್ಮೆಸ್ ದೊರೆಯುತ್ತದೆ. ಪ್ರೈಮ್ ವಿಡಿಯೋ ಮೊಬೈಲ್ ಎಡಿಷನ್, ಏರ್​ಟೆಲ್ XStream ಮತ್ತು ವಿಂಕ್ ಮ್ಯೂಸಿಕ್ ಚಂದಾದಾರರಾಗಬಹುದು.

ಬಿಎಸ್​ಎನ್​ಎಲ್​ 399 ಪ್ರೀಪೇಯ್ಡ್ ಪ್ಲಾನ್ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್​ನಿಂದಲೂ 399 ರೂಪಾಯಿಯ ಪ್ರೀಪೇಯ್ಡ್ ಪ್ಲಾನ್ ಇದ್ದು, ಪ್ರತಿ ನಿತ್ಯ 1 ಜಿಬಿ ಹೈಸ್ಪೀಡ್ ಡೇಟಾ ದೊರೆಯುತ್ತದೆ. ಒಂದು ಸಲ ಆ ಡೇಟಾ ಪೂರ್ತಿ ಬಳಕೆಯಾದ ಮೇಲೆ ವೇಗವು 80Kbpsಗೆ ಇಳಿಕೆ ಆಗುತ್ತದೆ. ಇನ್ನು ವ್ಯಾಲಿಡಿಟಿ 80 ದಿನ ಇರುತ್ತದೆ. ಅನಿಯಮಿತವಾದ ಕರೆ, ದಿನಕ್ಕೆ 100 ಎಸ್ಸೆಮ್ಮೆಸ್ ಸಿಗುತ್ತದೆ. ಇನ್ನು ಬಿಎಸ್​ಎನ್​ಎಲ್ ಉಚಿತ ಟ್ಯೂನ್ ಮತ್ತು ಲೋಕ್​ಧುನ್ ಅಥವಾ ಬಿಎಸ್​ಎನ್​ಎಲ್ ಟಿವಿ ಕಂಟೆಂಟ್ ಬಳಕೆ ಕೂಡ ಮಾಡಬಹುದು.

ಜಿಯೋ 399 ರೂಪಾಯಿ ಪ್ರೀಪೇಯ್ಡ್ ಪ್ಲಾನ್ ಜಿಯೋದ ಈ ರೀಚಾರ್ಜ್ ಪ್ಲಾನ್​ಗೆ ಪ್ರತಿ ನಿತ್ಯ 1.5 ಜಿಬಿ ಡೇಟಾ ಹಾಗೂ ಜತೆಗೆ ಅನಿಯಮಿತ ಕರೆ ಮತ್ತು ಪ್ರತಿ ದಿನ 100 ಎಸ್ಸೆಮ್ಮೆಸ್ ಹಾಗೂ ಕಾಂಪ್ಲಿಮೆಂಟರಿಯಾಗಿ 56 ದಿನಕ್ಕೆ ಜಿಯೋ ಅಪ್ಲಿಕೇಷನ್​ಗಳ ಸಬ್​ಸ್ಕ್ರಿಪ್ಷನ್ ದೊರೆಯುತ್ತದೆ.

Vi 399 ರೂ. ಪ್ರೀಪೇಯ್ಡ್ ಪ್ಲಾನ್ ಏರ್​ಟೆಲ್ ಮತ್ತು ಜಿಯೋ ರೀತಿಯಲ್ಲೇ ಇದು ಕೂಡ ದಿನಕ್ಕೆ 1.5 ಜಿಬಿ ಡೇಟಾ, ಅನಿಯಮಿತ ಕರೆ ಹಾಗೂ 100 ಎಸ್ಸೆಮ್ಮೆಸ್ ನೀಡುತ್ತದೆ. ವೀಕೆಂಡ್ ಡೇಟಾ ಅನುಕೂಲಗಳಿದ್ದು, Vi ಮೂವೀಸ್ ಮತ್ತು ಟೀವಿಯನ್ನು ನೋಡಬಹುದು. ಆ್ಯಪ್ ಮೂಲಕ ರೀಚಾರ್ಜ್ ಮಾಡಿದರೆ 5 ಜಿಬಿ ಎಕ್ಸ್​ಟ್ರಾ ಡೇಟಾ ಸಿಗುತ್ತದೆ.

ಏರ್​ಟೆಲ್ ವರ್ಸಸ್ ಬಿಎಸ್​ಎನ್​ಎಲ್ ವರ್ಸಸ್ Vi ಪ್ಲೀಪೇಯ್ಡ್ ಪ್ಲಾನ್- ದಿನಕ್ಕೆ 3ಜಿಬಿ ಡೇಟಾ- 500 ರೂ.ಗೂ ಕಡಿಮೆಗೆ ಜಿಯೋ ಜಿಯೋದ 349 ರೂಪಾಯಿಯ ಪ್ಲಾನ್ ದಿನಕ್ಕೆ 3ಜಿಬಿ ಡೇಟಾ ನೀಡುತ್ತದೆ. ಮತ್ತು ಅನಿಯಮಿತವಾಗಿ ನೆಟ್​- ಕಾಲಿಂಗ್ ಸೌಲಭ್ಯವನ್ನು 28 ದಿನಗಳ ಅವಧಿಗೆ ನೀಡುತ್ತದೆ. ಅನಿಯಮಿತವಾಗಿ ದೇಶೀಯ ಕರೆಗಳನ್ನು ಕೂಡ ಮಾಡಬಹುದು. ಕಾಂಪ್ಲಿಮೆಂಟರಿಯಾಗಿ ಜಿಯೋ ಅಪ್ಲಿಕೇಷನ್​ಗಳ ಸಬ್​ಸ್ಕ್ರಿಪ್ಷನ್ ಕೂಡ ದೊರೆಯುತ್ತದೆ.

ಏರ್​ಟೆಲ್​ ಏರ್​ಟೆಲ್​ನ 398 ರೂಪಾಯಿ ಪ್ರೀಪೇಯ್ಡ್ ಪ್ಲಾನ್​ನಲ್ಲಿ ದಿನಕ್ಕೆ 3ಜಿಬಿ ಡೇಟಾ 28 ದಿನಗಳ ವ್ಯಾಲಿಡಿಟಿಯೊಂದಿಗೆ ಬರುತ್ತದೆ. ಅನಿಯಮಿತವಾದ ಕರೆ ಹಾಗೂ ದಿನಕ್ಕೆ 100 ಎಸ್ಸೆಮ್ಮೆಸ್ ದೊರೆಯುತ್ತದೆ. ಹೆಚ್ಚುವರಿಯಾಗಿ Airtel Xstream ಪ್ರೀಮಿಯಂ​ ಚಂದಾದಾರಿಕೆ, ವಿಂಕ್ ಮ್ಯೂಸಿಕ್ ಮತ್ತು ಷಾ ಅಕಾಡೆಮಿ ಚಂದಾದಾರಿಕೆ ಸಿಗುತ್ತದೆ. ಉಚಿತ ಹಲೋ ಟ್ಯೂನ್, ಫಾಸ್​ಟ್ಯಾಗ್ ವಹಿವಾಟಿಗೆ 150 ರೂ. ಕ್ಯಾಶ್​ಬ್ಯಾಕ್ ಸಿಗುತ್ತದೆ. ಆದರೆ ಈ ಪ್ಲಾನಿಂಗ್​ನಲ್ಲಿ ಸ್ಟ್ರೀಮಿಂಗ್ ಅನುಕೂಲ ಇಲ್ಲ.

ಬಿಎಸ್​ಎನ್​ಎಲ್ ಇದು 398 ರೂಪಾಯಿಯ ಪ್ರೀಪೇಯ್ಡ್, ಪ್ರಮೋಷನಲ್ ಆಫರ್. ಅನಿಯಮಿತವಾದ ಡೇಟಾ ಇದ್ದು, ಯಾವುದೇ FUP ಮಿತಿ ಇಲ್ಲ. ಅನಿಯಮಿತ ಕರೆ ಹಾಗೂ ಜತೆಗೆ 100 ಎಸ್ಸೆಮ್ಮೆಸ್ ದೊರೆಯುತ್ತದೆ ಮತ್ತು 30 ದಿನಗಳ ವ್ಯಾಲಿಡಿಟಿ ಸಿಗುತ್ತದೆ. ಈ ಪ್ಲಾನ್​ನಲ್ಲಿ ಹೊರಹೋಗುವ ಪ್ರೀಮಿಯಂ ನಂಬರ್ಸ್, ಅಂತರರಾಷ್ಟ್ರೀಯ ನಂಬರ್​ಗಳು ಮತ್ತು ಇತರ ಚಾರ್ಜ್​ ಆಗುವ ಸಣ್ಣ ಕೋಡ್​ಗಳಿಗೆ ಅನ್ವಯ ಆಗಲ್ಲ.

Vi ಇದು 401 ರೂಪಾಯಿಯ ಪ್ಲಾನ್. ಪ್ರತಿ ನಿತ್ಯ 3GB ಡೇಟಾ 28 ದಿನಗಳ ಅವಧಿಗೆ ಸಿಗುತ್ತದೆ. ಪ್ರತಿ ನಿತ್ಯ 100 ಎಸ್ಸೆಮ್ಮೆಸ್ ಸಿಗುತ್ತದೆ. 16ಜಿಬಿ ಹೆಚ್ಚುವರಿಯಾಗಿ ಡೇಟಾ ಮತ್ತು ಡಿಸ್ನಿ+ ಹಾಟ್​ಸ್ಟಾರ್ 1 ವರ್ಷದ VIP ಸಬ್​ಸ್ಕ್ರಿಪ್ಷನ್ ದೊರೆಯುತ್ತದೆ. ಹೈಸ್ಪೀಡ್ ರಾತ್ರಿ ವೇಳೆ ಇಂಟರ್​ನೆಟ್, ವಾರಾಂತ್ಯದ ರೋಲ್​ಓವರ್ ಡೇಟಾ ಅನುಕೂಲ, Vi ಮೂವೀಸ್ ಮತ್ತು ಟಿವಿ ಕೂಡ ಸಿಗುತ್ತದೆ.

ಇದನ್ನೂ ಓದಿ: ಬ್ಯಾಟಲ್​ಗ್ರೌಂಡ್ಸ್ ಮೊಬೈಲ್ ಇಂಡಿಯಾ ಆಗಿ ಬರುತ್ತಿದೆ PUBG; ಅಧಿಕೃತ ಪೋಸ್ಟರ್ ಬಿಡುಗಡೆ

(Airtel Vs BSNL Vs Jio Vs Vi prepaid plans under Rs 500 explained here. Which one is the best to use?)

Published On - 4:37 pm, Fri, 7 May 21

ಸಂಪುಟ ಪುನಾರಚನೆ ಹೈಕಮಾಂಡ್ ವಿವೇಚನೆಗೆ ಬಿಟ್ಟ ವಿಷಯವಾಗಿದೆ: ಸಚಿವ
ಸಂಪುಟ ಪುನಾರಚನೆ ಹೈಕಮಾಂಡ್ ವಿವೇಚನೆಗೆ ಬಿಟ್ಟ ವಿಷಯವಾಗಿದೆ: ಸಚಿವ
ಪುಣೆ ಆಸ್ಪತ್ರೆಯಲ್ಲಿ ಅಂಗವಿಕಲ ನೆಲದಲ್ಲಿ ತೆವಳಿ ಹೋಗುತ್ತಿರುವ ವಿಡಿಯೋ
ಪುಣೆ ಆಸ್ಪತ್ರೆಯಲ್ಲಿ ಅಂಗವಿಕಲ ನೆಲದಲ್ಲಿ ತೆವಳಿ ಹೋಗುತ್ತಿರುವ ವಿಡಿಯೋ
ಮನೋಹರ್, ಹನುಮಂತರಾಯಪ್ಪ, ವೆಂಕಟೇಶ್ ನೇತೃತ್ವದಲ್ಲಿ ಪ್ರತಿಭಟನೆ
ಮನೋಹರ್, ಹನುಮಂತರಾಯಪ್ಪ, ವೆಂಕಟೇಶ್ ನೇತೃತ್ವದಲ್ಲಿ ಪ್ರತಿಭಟನೆ
ಪೋಷಕರಲ್ಲಿ ನಿರಾಳತೆ ಉಂಟು ಮಾಡಿದ ಸರ್ಕಾರದ ನಿರ್ಧಾರ
ಪೋಷಕರಲ್ಲಿ ನಿರಾಳತೆ ಉಂಟು ಮಾಡಿದ ಸರ್ಕಾರದ ನಿರ್ಧಾರ
ಆಟೋಗ್ರಾಫ್ ಕೇಳುವವರೆ ಇರಲಿಲ್ಲ.. ಈಗ ಕ್ಯೂ ನಿಲ್ಲುತ್ತಿದ್ದಾರೆ; ಜಿತೇಶ್
ಆಟೋಗ್ರಾಫ್ ಕೇಳುವವರೆ ಇರಲಿಲ್ಲ.. ಈಗ ಕ್ಯೂ ನಿಲ್ಲುತ್ತಿದ್ದಾರೆ; ಜಿತೇಶ್
ಸರ್ಕಾರಗಳು ನಮ್ಮ ಬವಣೆಯನ್ನು ಅರ್ಥಮಾಡಿಕೊಳ್ಳಬೇಕು: ಲಾರಿ ಮಾಲೀಕ
ಸರ್ಕಾರಗಳು ನಮ್ಮ ಬವಣೆಯನ್ನು ಅರ್ಥಮಾಡಿಕೊಳ್ಳಬೇಕು: ಲಾರಿ ಮಾಲೀಕ
ವರದಿಯಲ್ಲಿರುವ ಶಿಫಾರಸ್ಸುಗಳನ್ನು ಸರ್ಕಾರ ತಿರಸ್ಕರಿಸಬಹುದಾಗಿದೆ: ಖರ್ಗೆ
ವರದಿಯಲ್ಲಿರುವ ಶಿಫಾರಸ್ಸುಗಳನ್ನು ಸರ್ಕಾರ ತಿರಸ್ಕರಿಸಬಹುದಾಗಿದೆ: ಖರ್ಗೆ
Video: ವೇಗವಾಗಿ ಬಂದು ವಾಹನಗಳ ಮೇಲೆ ಹರಿದ ಬಸ್, ಮೂವರು ಸಾವು
Video: ವೇಗವಾಗಿ ಬಂದು ವಾಹನಗಳ ಮೇಲೆ ಹರಿದ ಬಸ್, ಮೂವರು ಸಾವು
ಮತ್ತೆ ಪೊಲೀಸರ ಬಂಧನದಲ್ಲಿ ರಜತ್, ವೈದ್ಯಕೀಯ ಪರೀಕ್ಷೆಗೆ ಕರೆದೊಯ್ದ ವಿಡಿಯೋ
ಮತ್ತೆ ಪೊಲೀಸರ ಬಂಧನದಲ್ಲಿ ರಜತ್, ವೈದ್ಯಕೀಯ ಪರೀಕ್ಷೆಗೆ ಕರೆದೊಯ್ದ ವಿಡಿಯೋ
ದಾವಣೆಗೆರೆಯಲ್ಲಿ ಮಹಿಳೆ ಮೇಲೆ ಹಲ್ಲೆ ನಡೆಸಿದವರನ್ನು ಬಿಡಲ್ಲ: ಸಿದ್ದರಾಮಯ್ಯ
ದಾವಣೆಗೆರೆಯಲ್ಲಿ ಮಹಿಳೆ ಮೇಲೆ ಹಲ್ಲೆ ನಡೆಸಿದವರನ್ನು ಬಿಡಲ್ಲ: ಸಿದ್ದರಾಮಯ್ಯ