Covid test: ಎದೆಯ ಎಕ್ಸ್-ರೇಗಳ ಮೂಲಕ ಕೋವಿಡ್-19 ಶೀಘ್ರ ಪತ್ತೆ ಹಚ್ಚಲು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಆಲ್ಗೊರಿದಂ ಅಭಿವೃದ್ಧಿ
ಎದೆಯ ಎಕ್ಸ್ರೇ ಮೂಲಕ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಬಳಸಿ ಕೆಲವೇ ನಿಮಿಷಗಳಲ್ಲಿ ಕೋವಿಡ್-19 ಕಂಡುಹಿಡಿಯುವಂಥ ಸಾಧನವನ್ನು ಡಿಆರ್ಡಿಒ ಮತ್ತು ಸಿಎಐಆರ್ನಿಂದ ಸೃಷ್ಟಿಸಲಾಗಿದೆ.
ಎದೆಯ ಎಕ್ಸ್-ರೇಗಳ ಮೂಲಕ ಕೋವಿಡ್-19 ಶೀಘ್ರವಾಗಿ ಪತ್ತೆ ಮಾಡುವುದಕ್ಕೆ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (AI)ಆಲ್ಗೊರಿದಂ ಅನ್ನು ಡಿಫೆನ್ಸ್ ರೀಸರ್ಚ್ ಅಂಡ್ ಡೆವಲಪ್ಮೆಂಟ್ ಆರ್ಗನೈಸೇಷನ್ (DRDO) ಮತ್ತು ಸೆಂಟರ್ ಫಾರ್ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಅಂಡ್ ರೋಬೋಟಿಕ್ಸ್ (CAIR) ಸೃಷ್ಟಿ ಮಾಡಿದೆ. ಇದನ್ನು ಡೆವಲಪ್ ಮಾಡಿದವರ ಪ್ರಕಾರ, ಈ ಸಾಧನಕ್ಕೆ Atman AI ಎಂದು ಹೆಸರಿಡಲಾಗಿದೆ. ಎದೆಯ ಎಕ್ಸ್ರೇ ಸ್ಕ್ರೀನಿಂಗ್ಗೆ ಬಳಸಲಾಗುತ್ತದೆ. ಮತ್ತು ಶೇ 96.73ರಷ್ಟು ನಿಖರ ಫಲಿತಾಂಶ ಬರುತ್ತದೆ. CAIR, DRDO ನಿರ್ದೇಶಕ ಡಾ. ಯು.ಕೆ. ಸಿಂಗ್ ಮಾತನಾಡಿ, ಕೋವಿಡ್- 19 ರೋಗಿಗಳಿಗೆ ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡಲು ಮತ್ತು ಶೀಘ್ರವಾಗಿ ಕೊರೊನಾ ಪತ್ತೆ ಹಚ್ಚಲು, ರೋಗ ಪತ್ತೆ ಹಚ್ಚುವ ಸಾಧನವನ್ನು ಕಂಡುಹಿಡಿದಿದ್ದರಿಂದ ಫ್ರಂಟ್ಲೈನ್ ಸಹಭಾಗಿಗಳು ಮತ್ತು ಕ್ಲಿನಿಷಿಯನ್ಸ್ಗಳಿಗೆ ಅನುಕೂಲವಾಗಲಿದೆ ಎಂದಿದ್ದಾರೆ.
ಕೊರೊನಾವೈರಸ್ ಪರೀಕ್ಷೆಗೆ ಇರುವ ವ್ಯವಸ್ಥೆ ಸೀಮಿತವಾಗಿದೆ. ಎಕ್ಸ್-ರೇಗಳನ್ನು ಬಳಸಿ ಶೀಘ್ರವಾಗಿ ಫಲಿತಾಂಶವನ್ನು ಕಡುಹಿಡಿಯುವುದಕ್ಕೆ ಆರ್ಟಿಫಿಷಿಯನ್ ಇಂಟೆಜೆನ್ಸ್ ಸಾಧನ ಅಭಿವೃದ್ಧಿ ಪಡಿಸುವುದಕ್ಕೆ ಬಹಳ ಪ್ರಯತ್ನಗಳು ನಡೆಯುತ್ತಿವೆ. ಕೋವಿಡ್ 19 ಅನ್ನು ಸೂಚ್ಯವಾಗಿ ರೇಡಿಯಾಲಜಿಕಲ್ ಮೂಲಕ ತಾನಾಗಿಯೇ ಪತ್ತೆ ಹಚ್ಚಲು ಸಹಾಯ ಆಗುತ್ತದೆ. ವಿಶೇಷವಾಗಿ ತುರ್ತು ಸಂದರ್ಭದಲ್ಲಿ ಇದನ್ನು ಪರೀಕ್ಷಿಸುವುದಕ್ಕೆ ಫಿಜಿಷಿಯನ್ಗಳು ಮತ್ತು ರೇಡಿಯಾಲಜಿಸ್ಟ್ಗಳಿಗೆ ಅವಕಾಶ ಮಾಡಿಕೊಡಲಾಗುತ್ತದೆ ಎಂದು ವಿವರಿಸಲಾಗಿದೆ.
ಎಕ್ಸ್ರೇ ಬಳಸಿ ರೋಗವನ್ನು ಪತ್ತೆ ಹಚ್ಚುವುದು ವೇಗವಾಗಿ ಆಗುತ್ತದೆ. ಖರ್ಚು ಕಡಿಮೆ ಮತ್ತು ಪರಿಣಾಮಕಾರಿಯಾಗಿರುತ್ತದೆ. ನಮ್ಮ ದೇಶದ ಸಣ್ಣ ಪಟ್ಟಣಗಳಲ್ಲಿ ಎಲ್ಲಿ ಸಿ.ಟಿ. ಸ್ಕ್ಯಾನ್ ಸುಲಭವಾಗಿ ಸಿಗುವುದಿಲ್ಲವೋ ಅಂಥಲ್ಲಿ ಸಹಾಯ ಆಗುತ್ತದೆ. ಇದರಿಂದ ರೇಡಿಯಾಲಜಿಸ್ಟ್ಗಳ ಮೇಲಿನ ಹೊರೆ ಕಡಿಮೆ ಆಗುತ್ತದೆ. ಸದ್ಯಕ್ಕೆ ಕೋವಿಡ್ಗೆ ಬಳಸುವ ಸಿ.ಟಿ. ಮಶೀನ್ಗಳನ್ನು ಬೇರೆ ಕಾಯಿಲೆಗಳಿಗೆ ಬಳಸಬಹುದು ಎಂದು ಡೆಲವಪರ್ಗಳು ಹೇಳಿದ್ದಾರೆ.
RT- PCR ಪಾಸಿಟಿವ್ ಇರುವ ರೋಗಿಯ ಎದೆಯ ಎಕ್ಸ್-ರೇಗಳನ್ನು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಮಾಡೆಲ್ಗಳನ್ನು ಬಳಸಿ, ವಿವಿಧ ಹಂತಗಳಲ್ಲಿ ವಿಶ್ಲೇಷಣೆ ಮಾಡಲಾಗುತ್ತದೆ. ಆಳವಾದ ಅಧ್ಯಯನ ಅಪ್ಲಿಕೇಷನ್ಗಳನ್ನು ದೇಶೀಯವಾಗಿ CAIR- DRDOನಿಂದ ಅಭಿವೃದ್ಧಿ ಮಾಡಲಾಗಿದೆ. ಕೋವಿಡ್- 19 ಸ್ಕ್ರೀನಿಂಗ್ಗಾಗಿ ಎದೆಯ ಡಿಜಿಟಲ್ ಎಕ್ಸ್-ರೇಗಳನ್ನು ಬಳಸಲಾಗುತ್ತದೆ ಎಂದು ವಿವರಿಸಿದ್ದಾರೆ.
ಈ ಮಧ್ಯೆ ರೇಡಿಯಾಲಜಿಸ್ಟ್ ಡಿಜಿಟಲ್ ನೆಟ್ವರ್ಕ್ಗಳ 5C ನೆಟ್ವರ್ಕ್ ದೇಶದಲ್ಲಿ 1000 ಆಸ್ಪತ್ರೆಗಳಲ್ಲಿ ಬಳಸಲು ನಿರ್ಧರಿಸಿದೆ. ಇದಕ್ಕೆ ಎಚ್ಸಿಜಿ ಅಕೆಡಮಿಕ್ಸ್ ಬೆಂಬಲ ಪಡೆಯಲಾಗಿದೆ. ಈಗಿನ ಈ ಸಾಧನದಿಂದ ಸಮಯಕ್ಕೆ, ಸರಿಯಾದ ಚಿಕಿತ್ಸೆ ಒದಗಿಸಲು ಸಹಾಯ ಆಗುತ್ತದೆ ಎಂದು 5C ನೆಟ್ವರ್ಕ್ ಸಿಇಒ ಕಲ್ಯಾಣ್ ಶಿವಶೈಲಮ್ ಹೇಳಿದ್ದಾರೆ. ಎಚ್ಸಿಜಿ ಕ್ಯಾನ್ಸರ್ ಆಸ್ಪತ್ರೆ ಡೀನ್ ಡಾ. ವಿಶಾಲ್ ರಾವ್ ಮಾತನಾಡಿ, ಆಸ್ಪತ್ರೆಯಲ್ಲಿ ಪರಿಣಾಮಕಾರಿ ಚಿಕಿತ್ಸೆ ನೀಡಲು ನೆರವಾಗುತ್ತದೆ. ರೋಗಿಗಳು ಹಾಗೂ ಹೆಲ್ತ್ಕೇರ್ ವ್ಯವಸ್ಥೆ ಮೇಲೆ ಹಣಕಾಸಿನ ಹೊರೆ ಆಗದಂತೆ ಇದು ಆಗುತ್ತದೆ. ಶ್ವಾಸಕೋಶದ ಕಾಯಿಲೆಯನ್ನು ಆರಂಭದಲ್ಲೇ ಕಂಡುಹಿಡಿಯಲು ಸಹಾಯ ಆಗುತ್ತದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಕೋವಿಡ್ ಸೋಂಕು ಬಂದ ಕೂಡಲೇ ಯಾರಿಗೂ ಆಕ್ಸಿಜನ್ ಕೊರತೆ ಇರುವುದಿಲ್ಲ. ಯಾರು ಆತಂಕಕ್ಕೆ ಒಳಗಾಗೋದು ಬೇಡ.
ಇದನ್ನೂ ಓದಿ: AI ಆಧಾರಿತ ಆಲ್ಗರಿದಂ ಬಳಸಿ ಸಂಗಾತಿ ಆಯ್ಕೆ, ರಾಜಕೀಯ ನಾಯಕರಿಗೆ ವೋಟು; ಏನ್ ಸ್ವಾಮಿ ಇದೆಲ್ಲಾ?
(DRDO and CAIR developed AI algorithm to find Covid through Xrays analysing in minutes)