AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕರ್ಣ’ ಧಾರಾವಾಹಿ ಒಪ್ಪಿಕೊಳ್ಳಲು ಕಾರಣ ಆಯ್ತು ಒಂದು ಅಂಶ; ವಿವರಿಸಿದ ನಮ್ರತಾ ಗೌಡ  

ಜೀ ಕನ್ನಡದ ‘ಕರ್ಣ’ ಧಾರಾವಾಹಿಯಲ್ಲಿ ನಮ್ರತಾ ಗೌಡ ಅವರು ನಿತ್ಯಾ ಪಾತ್ರದಲ್ಲಿ ನಟಿಸಿದ್ದಾರೆ. ‘ಬಿಗ್ ಬಾಸ್ ಕನ್ನಡ ಸೀಸನ್ 10’ರಲ್ಲಿ ಭಾಗಿ ಆಗಿದ್ದ ಅವರು ಅಪಾರ ಜನಪ್ರಿಯತೆ ಪಡೆದರು. ಇದಾದ ಬಳಿಕ ಅವರು ಯಾವುದೇ ಆಫರ್​ನ ಒಪ್ಪಿಕೊಂಡಿರಲಿಲ್ಲ. ಈಗ ಅವರು ಹೊಸ ಧಾರಾವಾಹಿಯಲ್ಲಿ ಕಾಣಿಸಿಕೊಂಡು ಮೆಚ್ಚುಗೆ ಪಡೆದಿದ್ದಾರೆ.

‘ಕರ್ಣ’ ಧಾರಾವಾಹಿ ಒಪ್ಪಿಕೊಳ್ಳಲು ಕಾರಣ ಆಯ್ತು ಒಂದು ಅಂಶ; ವಿವರಿಸಿದ ನಮ್ರತಾ ಗೌಡ  
ನಮ್ರತಾ ಗೌಡ
ರಾಜೇಶ್ ದುಗ್ಗುಮನೆ
|

Updated on:Jul 08, 2025 | 12:32 PM

Share

ಜೀ ಕನ್ನಡದಲ್ಲಿ ‘ಕರ್ಣ’ ಧಾರಾವಾಹಿ (Karna Serial) ಪ್ರಸಾರ ಆರಂಭಿಸಿದೆ. ಈ ಧಾರಾವಾಹಿಯಲ್ಲಿ ಕಿರಣ್ ರಾಜ್​, ನಮ್ರತಾ ಗೌಡ ಹಾಗೂ ಭವ್ಯಾ ಗೌಡ ಮುಖ್ಯಭೂಮಿಕೆಯಲ್ಲಿ ಇದ್ದಾರೆ. ನಮ್ರತಾ ಅವರು ಈ ಧಾರಾವಾಹಿಯಲ್ಲಿ ನಿತ್ಯಾ ಹೆಸರಿನ ಪಾತ್ರ ಮಾಡಿದ್ದಾರೆ. ಈ ಧಾರಾವಾಹಿಯ ಕೆಲವು ಎಪಿಸೋಡ್​ಗಳು ಪ್ರಸಾರ ಕಂಡಿದ್ದು ಪ್ರೇಕ್ಷಕರಿಗೆ ಇಷ್ಟವಾಗಿದೆ. ಈ ಧಾರಾವಾಹಿಯಲ್ಲಿ ವಿವಿಧ ಭಾವನೆಗಳನ್ನು ತೋರಿಸಲಾಗುತ್ತಿದೆ. ‘ಕರ್ಣ’ ಇಷ್ಟ ಆಗಲು ಕಾರಣ ಏನು ಎಂಬುದನ್ನು ನಮ್ರತಾ ಗೌಡ ಅವರು ವಿವರಿಸಿದ್ದಾರೆ. ಅವರು ಈ ಬಗ್ಗೆ ಟಿವಿ9 ಕನ್ನಡ ಡಿಜಿಟಲ್ ಜೊತೆ ಮಾತನಾಡಿದ್ದಾರೆ.

ಎರಡು ವರ್ಷದ ಹಿಂದೇ ಬಂದಿತ್ತು ಆಫರ್..

‘ಬಿಗ್ ಬಾಸ್ ಆದಮೇಲೆ ಸಾಕಷ್ಟು ಆಫರ್​ಗಳು ಬಂದವು. ಯಾವುದೂ ಇಷ್ಟ ಆಗಿಲ್ಲ. ಒಳ್ಳೆಯ ಪಾತ್ರ ಹಾಗೂ ಕಥೆ ಹುಡುಕುವಾಗ ಸಿಕ್ಕಿದ್ದೇ ಕರ್ಣ’ ಎಂದಿದ್ದಾರೆ ನಮ್ರತಾ ಗೌಡ. ಇಲ್ಲೊಂದು ಟ್ವಿಸ್ಟ್ ಇದೆ. ಈ ಧಾರಾವಾಹಿಯ ಆಫರ್​ ನಮ್ರತಾಗೆ ಎರಡು ವರ್ಷಗಳ ಹಿಂದೇ ಬಂದಿತ್ತಂತೆ. ‘ಬಿಗ್ ಬಾಸ್​ಗೆ ಹೋಗುವ ಮೊದಲೇ ನನಗೆ ನಿತ್ಯಾ ಪಾತ್ರದ ಆಫರ್ ಬಂದಿತ್ತು. ಆದರೆ, ಧಾರಾವಾಹಿ ಸೆಟ್ಟೇರಲಿಲ್ಲ. ಈಗ ಮತ್ತೆ ನನ್ನನ್ನು ಅಪ್ರೋಚ್ ಮಾಡಿದರು. ನಾನು ಓಕೆ ಎಂದೆ. ಆರಂಭದ ಎಪಿಸೋಡ್​ನಲ್ಲಿ ನಾನು ಹೆಚ್ಚು ತೆರೆಮೇಲೆ ಕಾಣಿಸಿಕೊಳ್ಳೋದಿಲ್ಲ. ಆದಾಗ್ಯೂ ಜನರು ಹೆಚ್ಚಿನ ಪ್ರೀತಿ ಕೊಟ್ಟಿದ್ದಾರೆ’ ಎಂದಿದ್ದಾರೆ ಅವರು.

ಭವ್ಯಾ ಜೊತೆ ಬಾಂಡಿಂಗ್..

ಈ ಧಾರಾವಾಹಿಯಲ್ಲಿ ನಮ್ರತಾ ಅವರು ಭವ್ಯಾ ಗೌಡನ ಅಕ್ಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇವರನ್ನು ತೆರೆಮೇಲೆ ನೋಡಿದಾಗ ಇವರು ನಿಜವಾದ ಸಹೋದರಿಯರು ಎನ್ನುವ ಫೀಲ್ ಬರುತ್ತದೆ. ‘ನಾನು ಭವ್ಯಾ ಈ ಮೊದಲು ಒಂದೇ ನಿರ್ಮಾಣ ಸಂಸ್ಥೆ ಅಡಿಯಲ್ಲಿ ಕೆಲಸ ಮಾಡಿದ್ದೇವೆ. ನಮ್ಮಿಬ್ಬರ ಮಧ್ಯೆ ಒಳ್ಳೆಯ ಪರಿಚಯ ಇದೆ. ನಮ್ಮಿಬ್ಬರ ಮಧ್ಯೆ ಒಳ್ಳೆಯ ಒಡನಾಟ ಇದ್ದಿದ್ದರಿಂದ ಆ ಕೆಮಿಸ್ಟ್ರಿ ತರೋಕೆ ಸುಲಭ ಆಯ್ತು’ ಎನ್ನುತ್ತಾರೆ ನಮ್ರತಾ.

ಇದನ್ನೂ ಓದಿ
Image
ಆಂಧ್ರ ಪ್ರದೇಶದಲ್ಲಿ ಗಾಂಜಾ ಕಡಿಮೆ ಮಾಡಿದ ನಟ ಪವನ್ ಕಲ್ಯಾಣ್
Image
‘ನಿವೇದಿತಾಳನ್ನು ಈಗಲೂ ಮಿಸ್ ಮಾಡಿ ಕೊಳ್ತೀನಿ’; ಚಂದನ್ ಶೆಟ್ಟಿ
Image
PHOTOS: ನಟ ವಿಷ್ಣು ವಿಶಾಲ್-ಜ್ವಾಲಾ ದಂಪತಿ ಮಗಳಿಗೆ ಹೆಸರಿಟ್ಟ ಆಮಿರ್
Image
ರಿಲೀಸ್​ಗೆ ಒಂದು ತಿಂಗಳಿರುವಾಗ ಶೂಟ್ ಮುಗಿಸಿದ ‘ವಾರ್ 2’

ಧಾರಾವಾಹಿ ಇಷ್ಟ ಆಗೋಕೆ ಒಂದು ಕಾರಣ..

ಈ ಧಾರಾವಾಹಿಯಲ್ಲಿ ನಿತ್ಯಾ ಹೆಸರಿನ ಕ್ಯಾರೆಕ್ಟರ್ ನೋಡಿ ನಮ್ರತಾ ನಿಜಕ್ಕೂ ಖುಷಿಪಟ್ಟರಂತೆ. ‘ನಾನು ನಿಜ ಜೀವನದಲ್ಲಿ ತುಂಬಾನೇ ಪ್ರ್ಯಾಕ್ಟಿಕಲ್ ಆಗಿ ಆಲೋಚಿಸುತ್ತೇನೆ. ಭಾವನೆಗಳನ್ನು ತೋರಿಸಿಕೊಳ್ಳೋದಿಲ್ಲ. ಆ ಪಾತ್ರ ಕೂಡ ಹಾಗೆಯೇ ಇದೆ. ಕೆಲವು ಧಾರಾವಾಹಿಗಳಲ್ಲಿ ಕಥಾ ನಾಯಕಿ ಸ್ವಲ್ಪ ಅಳುಮುಂಜಿ ಆಗಿರುತ್ತಾಳೆ ಅಥವಾ ಸಾಫ್ಟ್ ಆಗಿರುತ್ತಾಳೆ. ಆದರೆ, ನಿತ್ಯಾ ಪಾತ್ರ ಇದಕ್ಕೆ ಸಂಪೂರ್ಣ ಭಿನ್ನವಾಗಿದೆ. ಈ ಕಾರಣಕ್ಕೆ ನನಗೆ ಪಾತ್ರ ಸಖತ್ ಇಷ್ಟ ಆಯ್ತು. ಹೀಗಾಗಿ ಧಾರಾವಾಹಿ ಒಪ್ಪಿಕೊಂಡೆ’ ಎನ್ನುತ್ತಾರೆ ಅವರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 12:28 pm, Tue, 8 July 25

ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ
ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ
ಅಯೋಧ್ಯೆಗೆ ಹೊರಟ ಸಚ್ಚಿದಾನಂದ ಸ್ವಾಮೀಜಿಗೆ ರೈಲಿನಲ್ಲಿ ವಿಶೇಷ ಸೌಲಭ್ಯ
ಅಯೋಧ್ಯೆಗೆ ಹೊರಟ ಸಚ್ಚಿದಾನಂದ ಸ್ವಾಮೀಜಿಗೆ ರೈಲಿನಲ್ಲಿ ವಿಶೇಷ ಸೌಲಭ್ಯ
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ