AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜಮೌಳಿ ಕುಟುಂಬದಲ್ಲಿ ಶೋಕ, ಕೀರವಾಣಿ ತಂದೆ ಶಿವಶಕ್ತಿ ದತ್ತ ನಿಧನ

Shiva Shakti Dutta: ತೆಲುಗು ಚಿತ್ರರಂಗದ ಖ್ಯಾತ ಗೀತ ರಚನೆಕಾರ, ಚಿತ್ರಕತೆ ಬರಹಗಾರ ಶಿವ ಶಕ್ತಿ ದತ್ತ ನಿಧನ ಹೊಂದಿದ್ದಾರೆ. ಅವರಿಗೆ 93 ವರ್ಷ ವಯಸ್ಸಾಗಿತ್ತು. ಶಿವ ಶಕ್ತಿ ದತ್ತ ಅವರ ಆಸ್ಕರ್ ವಿಜೇತ ಎಂಎಂ ಕೀರವಾಣಿ ಅವರ ತಂದೆ, ಖ್ಯಾತ ನಿರ್ದೇಶಕ ಎಸ್​ಎಸ್ ರಾಜಮೌಳಿ ಅವರ ದೊಡ್ಡಪ್ಪ ಆಗಿದ್ದಾರೆ.

ರಾಜಮೌಳಿ ಕುಟುಂಬದಲ್ಲಿ ಶೋಕ, ಕೀರವಾಣಿ ತಂದೆ ಶಿವಶಕ್ತಿ ದತ್ತ ನಿಧನ
Ssd
ಮಂಜುನಾಥ ಸಿ.
|

Updated on: Jul 08, 2025 | 12:04 PM

Share

ತೆಲುಗು ಚಿತ್ರರಂಗದ (Tollywood) ಖ್ಯಾತ ಚಿತ್ರಕತೆ ಬರಹಗಾರ, ಗೀತ ರಚನೆಕಾರ ಶಿವಶಕ್ತಿ ದತ್ತ ನಿಧನ ಹೊಂದಿದ್ದಾರೆ. ರಾಜಮೌಳಿ ಅವರ ದೊಡ್ಡಪ್ಪ ಹಾಗೂ ಆಸ್ಕರ್ ವಿಜೇತ ಎಂಎಂ ಕೀರವಾಣಿ ಅವರ ತಂದೆ ಶಿವಶಕ್ತಿ ದತ್ತ ಅವರಿಗೆ 93 ವರ್ಷ ವಯಸ್ಸಾಗಿತ್ತು. ಶಿವಶಕ್ತಿ ದತ್ತ ಅವರು ‘ಬಾಹುಬಲಿ’, ‘ಆರ್​​ಆರ್​​ಆರ್’, ‘ಸೈ’ ಸೇರಿದಂತೆ ಹಲವಾರು ತೆಲುಗು ಸಿನಿಮಾಗಳಿಗೆ ಹಾಡುಗಳನ್ನು ಬರೆದಿದ್ದಾರೆ. ಹಲವಾರು ಸಿನಿಮಾಗಳಿಗೆ ಚಿತ್ರಕತೆ ಸಂಭಾಷಣೆಗಳನ್ನು ಸಹ ಬರೆದಿದ್ದಾರೆ. ಸಂಸ್ಕೃತ ಭಾಷೆಯ ಬಗ್ಗೆ ಹಿಡಿತ ಹೊಂದಿದ್ದ ಅವರು, ತಮ್ಮ ಹಾಡುಗಳಲ್ಲಿ ಸಂಸ್ಕೃತವನ್ನು ಬಳಸುತ್ತಿದ್ದ ರೀತಿಯಿಂದ ಜನಪ್ರಿಯತೆ ಗಳಿಸಿದ್ದರು.

1932 ರಲ್ಲಿ ಜನಿಸಿದ ಶಿವ ಶಕ್ತಿ ದತ್ತ ಅವರ ಮೂಲ ಹೆಸರು ಸುಬ್ಬಾ ರಾವ್, ಎಳೆಯ ವಯಸ್ಸಿನಲ್ಲೇ ಕಲೆಯ ಕಡೆ ಆಕರ್ಷಿತರಾದ ಅವರು ಮನೆ ಬಿಟ್ಟು ಹೋಗಿ ಮುಂಬೈಗೆ ಹೋಗಿ ಕಲೆಯಲ್ಲಿ ಡಿಪ್ಲಮೊ ಪದವಿ ಪಡೆದರು. ಬಳಿಕ ಆಂಧ್ರದ ಕವ್ವೂರಿಗೆ ವಾಪಸ್ಸಾಗಿ ಚಿತ್ರಕತೆ ಪ್ರಾರಂಭಿಸಿದರು. ಬಳಿಕ ಸಂಗೀತದಲ್ಲಿ ಆಸಕ್ತಿ ಬೆಳೆಸಿಕೊಂಡು ಸಂಗೀತ ಕಲಿತರು. ಬಳಿಕ ಸಿನಿಮಾಗಳ ಬಗ್ಗೆಯೂ ಆಸಕ್ತಿ ಮೂಡಿ, ಮದ್ರಾಸ್​ಗೆ ಸಹೋದರ ವಿಜಯೇಂದ್ರ ಪ್ರಸಾದ್ (ರಾಜಮೌಳಿ ತಂದೆ) ಜೊತೆಗೆ ತೆರಳಿದರು.

ಅಲ್ಲಿ ಶಿವ ಶಕ್ತಿ ಪ್ರಸಾದ್ ಮತ್ತು ವಿಜಯೇಂದ್ರ ಪ್ರಸಾದ್ ಸೇರಿ ಹಲವಾರು ಸಿನಿಮಾಗಳಿಗೆ ಸಹಾಯಕ ನಿರ್ದೇಶಕರಾಗಿ, ಚಿತ್ರಕತೆ ಬರಹಗಾರರಾಗಿ ಕೆಲಸ ಮಾಡಿದರು. ಒಂದು ಸಿನಿಮಾ ನಿರ್ದೇಶನಕ್ಕೆ ಮುಂದಾದರಾದರೂ ಹಣಕಾಸಿನ ಮುಗ್ಗಟ್ಟಿನಿಂದ ಸಿನಿಮಾ ಪೂರ್ಣವಾಗಲಿಲ್ಲ ಮಾತ್ರವಲ್ಲದೆ ಇಡೀ ಕುಟುಂಬ ಆರ್ಥಿಕ ಮುಗ್ಗಟ್ಟಿಗೆ ಸಿಲುಕಿಕೊಂಡಿತು. ಆ ಸಮಯದಲ್ಲಿಯೇ ರಾಜಮೌಳಿ ಮತ್ತು ಕೀರವಾಣಿ ಅವರುಗಳು ಸಿನಿಮಾ ಕ್ಷೇತ್ರದಲ್ಲಿ ದುಡಿಯಲು ಪ್ರಾರಂಭಿಸಿದರು.

ಇದನ್ನೂ ಓದಿ:‘ಕಣ್ಣಪ್ಪ’ ಸಿನಿಮಾ ಯಶಸ್ಸಿನ ಹಿಂದೆ ರಾಜಮೌಳಿ ತಂದೆಯ ನೆರವು

ರಾಜಮೌಳಿ ಕುಟುಂಬದ ಹಿರಿತಲೆ ಆಗಿದ್ದ ಶಿವಶಕ್ತಿ ಪ್ರಸಾದ್ ಅವರ ಬಗ್ಗೆ ರಾಜಮೌಳಿ, ವಿಜಯೇಂದ್ರ ಪ್ರಸಾದ್ ಮತ್ತು ಕೀರವಾಣಿ ಅವರಿಗೆ ಇನ್ನಿಲ್ಲದ ಗೌರವ. ಅವರಿಂದಲೇ ತಮ್ಮ ಕುಟುಂಬ ಸಿನಿಮಾ ಕ್ಷೇತ್ರಗ ಕಡೆಗೆ ಬಂದಿತು ಎಂದು ಹಲವಾರು ಸಂದರ್ಶನಗಳಲ್ಲಿ ರಾಜಮೌಳಿ ಹೇಳಿಕೊಂಡಿದ್ದಿದೆ. ಶಿವಶಕ್ತಿ ಪ್ರಸಾದ್, ತೆಲುಗು ಚಿತ್ರರಂಗದ ದಿಗ್ಗಜ ವ್ಯಕ್ತಿಗಳಲ್ಲಿ ಒಬ್ಬರು. ರಾಘವೇಂದ್ರ ರಾವ್ ಸೇರಿದಂತೆ ಅನೇಕರ ಜೊತೆಗೆ ಅವರು ಕೆಲಸ ಮಾಡಿದ್ದಾರೆ. ಅವರ ನಿಧನದ ಬಗ್ಗೆ ಚಿತ್ರರಂಗದ ಅನೇಕ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ