Job Cut: ಚೀನಾದಲ್ಲಿ ಕಠಿಣ ವಾತಾವರಣ, ಪೂರ್ಣ ಕಾಲ್ತೆಗೆದ ಲಿಂಕ್ಡ್​ಇನ್; ಜಾಗತಿಕವಾಗಿ 716 ಮಂದಿ ಲೇ ಆಫ್

|

Updated on: May 09, 2023 | 12:16 PM

LinkedIn Layoffs: 716 ಮಂದಿಯನ್ನು ಲೇ ಆಫ್ ಮಾಡುವುದಾಗಿ ಲಿಂಕ್ಡ್​ಇನ್ ಘೋಷಿಸಿದೆ. ಇದರೊಂದಿಗೆ ಲಿಂಕ್ಡ್​ಇನ್​ನಲ್ಲಿ ಕೆಲಸ ಮಾಡುತ್ತಿರುವ 20,000 ಉದ್ಯೋಗಿಗಳಲ್ಲಿ ಬಹುತೇಕ ಎಲ್ಲರಿಗೂ ಅಭದ್ರತೆಯ ಭಾವನೆ ಆವರಿಸಿದೆ. ಚೀನಾದಲ್ಲಿದ್ದ ತನ್ನ ಇನ್​ಕರಿಯರ್ಸ್ ಆ್ಯಪ್ ಅನ್ನೂ ಲಿಂಕ್ಡ್​ಇನ್ ಪೂರ್ಣವಾಗಿ ನಿಲ್ಲಿಸಲಿದೆ.

Job Cut: ಚೀನಾದಲ್ಲಿ ಕಠಿಣ ವಾತಾವರಣ, ಪೂರ್ಣ ಕಾಲ್ತೆಗೆದ ಲಿಂಕ್ಡ್​ಇನ್; ಜಾಗತಿಕವಾಗಿ 716 ಮಂದಿ ಲೇ ಆಫ್
ಲಿಂಕ್ಡ್​ಇನ್
Follow us on

ನವದೆಹಲಿ: ಜಾಗತಿಕ ಟೆಕ್ ದೈತ್ಯ ಸಂಸ್ಥೆಗಳು ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕುವ (Layoffs) ಕರ್ಮಕಾಂಡ ನಿಲ್ಲುತ್ತಿಲ್ಲ. ಇತ್ತೀಚೆಗೆ 10,000ಕ್ಕೂ ಹೆಚ್ಚು ಮಂದಿ ಲೇ ಆಫ್ ಮಾಡಿದ್ದ ಮೈಕ್ರೋಸಾಫ್ಟ್ ಇದೀಗ ಅದರ ಅಂಗಸಂಸ್ಥೆ ಲಿಂಕ್ಡ್​ಇನ್​ನ (LinkedIn) ಉದ್ಯೋಗಿಗಳಿಗೆ ಜಾಬ್ ಕಟ್ ಭೀತಿ ಆವರಿಸಿದೆ. 716 ಮಂದಿಯನ್ನು ಲೇ ಆಫ್ ಮಾಡುವುದಾಗಿ ಲಿಂಕ್ಡ್​ಇನ್ ಘೋಷಿಸಿದೆ. ಇದರೊಂದಿಗೆ ಲಿಂಕ್ಡ್​ಇನ್​ನಲ್ಲಿ ಕೆಲಸ ಮಾಡುತ್ತಿರುವ 20,000 ಉದ್ಯೋಗಿಗಳಲ್ಲಿ ಬಹುತೇಕ ಎಲ್ಲರಿಗೂ ಅಭದ್ರತೆಯ ಭಾವನೆ ಆವರಿಸಿದೆ. ವರದಿಗಳ ಪ್ರಕಾರ ಕೆಲಸ ಕಳೆದುಕೊಳ್ಳಲಿರುವ ಹೆಚ್ಚಿನ ಉದ್ಯೋಗಿಗಳು ಲಿಂಕ್ಡ್​ಇನ್​ನ ಸೇಲ್ಸ್, ಅಪರೆಷನ್ಸ್ ಮತ್ತು ಸಪೋರ್ಟ್ ಟೀಮ್​ಗಳಲ್ಲಿ ಕೆಲಸ ಮಾಡುವವರು ಎನ್ನಲಾಗಿದೆ.

ಲಿಂಕ್ಡ್​ಇನ್​ನಲ್ಲಿ ಜಾಬ್ ಕಟ್ ನಿರ್ಧಾರಕ್ಕೆ ಏನು ಕಾರಣ?

ಮೈಕ್ರೋಸಾಫ್ಟ್ ಮಾಲಕತ್ವದ ಲಿಂಕ್ಡ್​ಇನ್ ಕಳೆದ ವರ್ಷ ಒಳ್ಳೆಯ ಲಾಭ ಹೆಚ್ಚಳ ಕಂಡಿದೆ. ಆದರೆ, ಭವಿಷ್ಯತ್ಕಾಲದ ಆಪತ್ತುಗಳನ್ನು ಎದುರಿಸುವ ಸಲುವಾಗಿ ಉದ್ಯೋಗಕಡಿತದ ನಿರ್ಧಾರಕ್ಕೆ ಲಿಂಕ್ಡ್​ಇನ್ ಬಂದಿದೆ. ಮುಂದಿನ ದಿನಗಳಲ್ಲಿ ಮಾರುಕಟ್ಟೆಯ ಅಗತ್ಯಗಳಿಗೆ ತಕ್ಕಂತೆ ಕಂಪನಿಯ ರೂಪುರೇಖೆಯನ್ನು ಬದಲಿಸಬೇಕಾಗುತ್ತದೆ. ಇದರ ಭಾಗವಾಗಿ ಜಾಬ್ ಕಟ್ ಮಾಡಲಾಗುತ್ತಿದೆ ಎಂದು ಲಿಂಕ್ಡ್ ಇನ್ ಸಿಇಒ ರಯಾನ್ ರೋಸ್ಲಾನ್​ಸ್ಕಿ ಹೇಳಿದ್ದಾಗಿ ಬಿಬಿಸಿ ವರದಿಯೊಂದು ಹೇಳಿದೆ.

ಇದನ್ನೂ ಓದಿShocking: ವರ್ಕ್ ಫ್ರಂ ಹೋಂ ಮಾಡೋರೇ ಹುಷಾರ್; ಈ ಮುಖಂಡರು ಹೇಳೋ ಮಾತು ನೋಡಿದ್ರೆ ವೃತ್ತಿಜೀವನ ಮುಗಿದಂತೆಯಾ? ಯಾರ್‍ಯಾರು ಏನು ಹೇಳಿದ್ರು?

ಲಿಂಕ್ಡ್​ಇನ್​ನಲ್ಲಿ 250 ಹೊಸ ನೇಮಕಾತಿ

716 ಮಂದಿಯನ್ನು ಲೇ ಆಫ್ ಮಾಡಲು ನಿರ್ಧರಿಸಿರುವ ಬೆನ್ನಲ್ಲೇ ಲಿಂಕ್ಡ್​ಇನ್ 250 ಹೊಸ ಉದ್ಯೋಗಗಳನ್ನು ಸೃಷ್ಟಿಸುತ್ತಿದೆ. ಈಗ ಕೆಲಸ ಕಳೆದುಕೊಳ್ಳಲಿರುವ 716 ಮಂದಿ ಈ ಹೊಸ 250 ಉದ್ಯೋಗಗಳಿಗೆ ಪ್ರಯತ್ನಿಸಬಹುದು. ಮುಂಬರುವ ಮಾರುಕಟ್ಟೆ ಬೇಡಿಕೆಗಳನ್ನು ಗಮನದಲ್ಲಿಟ್ಟುಕೊಂಡು ಈ 250 ಉದ್ಯೋಗಗಳನ್ನು ಸೃಷ್ಟಿಸಲಾಗುತ್ತಿದೆಯಂತೆ.

ಚೀನಾದಲ್ಲಿ ಲಿಂಕ್ಡ್​ಇನ್​ನ ಸ್ಥಳೀಯ ಆ್ಯಪ್ ಪರ್ಯವಸಾನ

ಲಿಂಕ್ಡ್​ಇನ್ ಸಂಸ್ಥೆ ಚೀನಾದಲ್ಲಿ ಇನ್​ಕರಿಯರ್ಸ್ (InCareers) ಎಂಬ ಆ್ಯಪ್ ಹೊಂದಿದೆ. ಇದು ಅಲ್ಲಿಯ ಸ್ಥಳೀಯ ಉದ್ಯೋಗಗಳ ಮಾಹಿತಿ ಮತ್ತು ಸೇವೆ ಹೊಂದಿರುವ ಅಪ್ಲಿಕೇಶನ್. ಚೀನಾದ ಕಠಿಣ ವಾತಾವರಣದ ಕಾರಣದಿಂದ ಇನ್​ಕರಿಯರ್ಸ್ ಸೇವೆ ಬಹುತೇಕ ನಿಂತುಹೋಗಿದೆ. ಆಗಸ್ಟ್ 9ರೊಳಗೆ ಚೀನಾದಿಂದ ಇನ್​ಕರಿಯರ್ಸ್ ಪೂರ್ಣವಾಗಿ ಹೊರಬೀಳಲಿದೆ. 2021ರಲ್ಲೇ ಇನ್​ಕರಿಯರ್ಸ್ ಚೀನೀ ಮಾರುಕಟ್ಟೆ ಬಿಟ್ಟಾಗಿತ್ತು. ಈಗ ಚೀನಾದಲ್ಲಿರುವ ಕಂಪನಿಗಳಿಗೆ ಹೊರದೇಶಗಳಲ್ಲಿ ಜನರನ್ನು ನೇಮಿಸಿಕೊಳ್ಳುವ ಮತ್ತು ತರಬೇತಿ ಕೊಡುವ ಸೇವೆಯನ್ನು ಮಾತ್ರ ಲಿಂಕ್ಡ್​ಇನ್ ಮುಂದುವರಿಸಲಿದೆ. ಅದು ಬಿಟ್ಟರೆ ಆಗಸ್ಟ್ 9ರೊಳಗೆ ಚೀನಾದಲ್ಲಿ ಲಿಂಕ್ಡ್​ಇನ್ ಉಪಸ್ಥಿಗೆ ಪೂರ್ತಿ ಅಂತ್ಯವಾಗಲಿದೆ.

ಇದನ್ನೂ ಓದಿCognizant Layoffs: ಆಗ ಅಕ್ಸೆಂಚರ್​ನಲ್ಲಿ 19 ಸಾವಿರ, ಈಗ ಕಾಗ್ನಿಜೆಂಟ್​ನಲ್ಲಿ 3,500 ಉದ್ಯೋಗಿಗಳ ಲೇ ಆಫ್

ಪಾಶ್ಚಿಮಾತ್ಯ ದೇಶಗಳ ಸೋಷಿಯಲ್ ಮೀಡಿಯಾಗಳ ಪೈಕಿ ಲಿಂಕ್ಡ್​ಇನ್ ಮಾತ್ರವೇ ಚೀನಾದಲ್ಲಿ ಅಸ್ತಿತ್ವ ಹೊಂದಿದ್ದು. ಫೇಸ್​ಬುಕ್, ವಾಟ್ಸಾಪ್, ಇನ್ಸ್​ಟಾಗ್ರಾಮ್, ಟ್ವಿಟ್ಟರ್ ಹೀಗೆ ಪಶ್ಚಿಮದ ಯಾವ ಸಾಮಾಜಿಕ ಜಾಲತಾಣಗಳು ಚೀನಾದಲ್ಲಿಲ್ಲ. ಈಗ ಲಿಂಕ್ಡ್​ಇನ್ ಕೂಡ ಅಲ್ಲಿಂದ ಕಾಲ್ತೆಗೆದಿದೆ.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ