LPG Cylinder Price: ವಾಣಿಜ್ಯ ಬಳಕೆಯ 19ಕೆಜಿ ಎಲ್​ಪಿಜಿ ಸಿಲಿಂಡರ್​ ಬೆಲೆ ಏರಿಕೆ

|

Updated on: Dec 01, 2023 | 8:28 AM

ತೈಲ ಮಾರುಕಟ್ಟೆ ಕಂಪನಿಗಳು (OMC) ಶುಕ್ರವಾರ ವಾಣಿಜ್ಯ ಬಳಕೆಯ 19 ಕೆಜಿ ಎಲ್‌ಪಿಜಿ ಸಿಲಿಂಡರ್‌ಗಳ (LPG Cylinder) ಬೆಲೆಯನ್ನು ಹೆಚ್ಚಿಸಿವೆ ಎಂದು ಮೂಲಗಳು ತಿಳಿಸಿವೆ. ವರದಿಗಳ ಪ್ರಕಾರ ಡಿಸೆಂಬರ್ 1 ರಿಂದ ಜಾರಿಗೆ ಬರುವಂತೆ 19 ಕೆಜಿಯ ವಾಣಿಜ್ಯ ಎಲ್‌ಪಿಜಿ ಗ್ಯಾಸ್ (Gas) ಸಿಲಿಂಡರ್ ದರವನ್ನು 21 ರೂ.ಗಳಷ್ಟು ಹೆಚ್ಚಿಸಲಾಗಿದೆ. ಈ ಹೆಚ್ಚಳದ ನಂತರ ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಚಿಲ್ಲರೆ ಮಾರಾಟ ಬೆಲೆ ಇಂದಿನಿಂದ 1775.50 ರೂ.ನಿಂದ 1796.50 ರೂ.ಗೆ ಹೆಚ್ಚಳವಾದಂತಾಗಿದೆ.

LPG Cylinder Price: ವಾಣಿಜ್ಯ ಬಳಕೆಯ 19ಕೆಜಿ ಎಲ್​ಪಿಜಿ ಸಿಲಿಂಡರ್​ ಬೆಲೆ ಏರಿಕೆ
ಸಲಿಂಡರ್
Follow us on

ತೈಲ ಮಾರುಕಟ್ಟೆ ಕಂಪನಿಗಳು (OMC) ಶುಕ್ರವಾರ ವಾಣಿಜ್ಯ ಬಳಕೆಯ 19 ಕೆಜಿ ಎಲ್‌ಪಿಜಿ ಸಿಲಿಂಡರ್‌ಗಳ (LPG Cylinder) ಬೆಲೆಯನ್ನು ಹೆಚ್ಚಿಸಿವೆ ಎಂದು ಮೂಲಗಳು ತಿಳಿಸಿವೆ. ವರದಿಗಳ ಪ್ರಕಾರ ಡಿಸೆಂಬರ್ 1 ರಿಂದ ಜಾರಿಗೆ ಬರುವಂತೆ 19 ಕೆಜಿಯ ವಾಣಿಜ್ಯ ಎಲ್‌ಪಿಜಿ ಗ್ಯಾಸ್ (Gas) ಸಿಲಿಂಡರ್ ದರವನ್ನು 21 ರೂ.ಗಳಷ್ಟು ಹೆಚ್ಚಿಸಲಾಗಿದೆ. ಈ ಹೆಚ್ಚಳದ ನಂತರ ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಚಿಲ್ಲರೆ ಮಾರಾಟ ಬೆಲೆ ಇಂದಿನಿಂದ 1775.50 ರೂ.ನಿಂದ 1796.50 ರೂ.ಗೆ ಹೆಚ್ಚಳವಾದಂತಾಗಿದೆ.

ಈ ಹಿಂದೆ ನವೆಂಬರ್ 16 ರಂದು ಅದರ ಬೆಲೆ ಕಡಿತಗೊಂಡು 1775.50 ರೂ. ಆಗಿತ್ತು. ಇಂದಿನಿಂದ ಮುಂಬೈನಲ್ಲಿ 19 ಕೆಜಿ ಸಿಲಿಂಡರ್ ಬೆಲೆ 1749 ರೂ., ಕೋಲ್ಕತ್ತಾದಲ್ಲಿ 1885.50 ರೂ., ಚೆನ್ನೈನಲ್ಲಿ 1968.50 ರೂ. ವಾಣಿಜ್ಯ ಅನಿಲ ಸಿಲಿಂಡರ್‌ಗಳ ಬೆಲೆಯಲ್ಲಿನ ಹೆಚ್ಚಳವು ವಿಶೇಷವಾಗಿ ರೆಸ್ಟೋರೆಂಟ್ ಅಥವಾ ಆಹಾರ ವ್ಯವಹಾರದ ಮೇಲೆ ಪರಿಣಾಮ ಬೀರುತ್ತದೆ.

14.2 ಕೆಜಿ ಎಲ್ ಪಿಜಿ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಕಂಪನಿಗಳು ಯಾವುದೇ ಬದಲಾವಣೆ ಮಾಡಿಲ್ಲ. ಈ ಹಿಂದೆ ಸರ್ಕಾರ ಈ ಸಿಲಿಂಡರ್‌ನ ಬೆಲೆಯನ್ನು 200 ರೂಪಾಯಿಗಳಷ್ಟು ಕಡಿಮೆ ಮಾಡಿತ್ತು.

ಮತ್ತಷ್ಟು ಓದಿ: LPG Cylinder Price: ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಬೆಲೆ ಇಳಿಕೆ; ಬೆಂಗಳೂರಿನಲ್ಲಿ ಈಗೆಷ್ಟಿದೆ ಗ್ಯಾಸ್ ಬೆಲೆ?

ಇಂಡಿಯನ್ ಆಯಿಲ್‌ನ ಅಧಿಕೃತ ವೆಬ್‌ಸೈಟ್ ಪ್ರಕಾರ, ಈ ಸಿಲಿಂಡರ್ ದೆಹಲಿಯಲ್ಲಿ 903 ರೂ.ಗೆ ಲಭ್ಯವಿದೆ. ಈ ಸಿಲಿಂಡರ್ ನೋಯ್ಡಾದಲ್ಲಿ 900.50 ರೂ.ಗೆ ಲಭ್ಯವಿದೆ. ಅದೇ ರೀತಿ, ಪ್ರತಿ ಸಿಲಿಂಡರ್ ಕೋಲ್ಕತ್ತಾದಲ್ಲಿ ರೂ 929, ಮುಂಬೈನಲ್ಲಿ ರೂ 902.50 ಮತ್ತು ಚೆನ್ನೈನಲ್ಲಿ ರೂ 918.50 ಕ್ಕೆ ಲಭ್ಯವಿದೆ.

ತೈಲ ಮಾರುಕಟ್ಟೆ ಕಂಪನಿಗಳು ಡಿಸೆಂಬರ್ 1 ರಂದು ಏವಿಯೇಷನ್ ​​ಟರ್ಬೈನ್ ಇಂಧನದ (ಎಟಿಎಫ್) ಬೆಲೆಯನ್ನು ಕಡಿಮೆ ಮಾಡಿದೆ. ದೇಶೀಯ ವಿಮಾನಯಾನ ಸಂಸ್ಥೆಗಳಿಗೆ ಈಗ ರಾಜಧಾನಿ ದೆಹಲಿಯಲ್ಲಿ 1,06,155.67 ರೂ., ಕೋಲ್ಕತ್ತಾದಲ್ಲಿ 1,44,639.70 ರೂ., ಮುಂಬೈನಲ್ಲಿ 99,223.44 ರೂ. ಮತ್ತು ಚೆನ್ನೈನಲ್ಲಿ ಪ್ರತಿ ಕಿಲೋ ಲೀಟರ್‌ಗೆ 1,09,966.39 ರೂ.ಗೆ ಸಿಗಲಿದೆ.

ವಾಣಿಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ