ನವದೆಹಲಿ: ಪ್ರಸಕ್ತ ಹಣಕಾಸು ವರ್ಷದ ಮೊದಲ ದಿನವೇ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ದರವನ್ನು (LPG cylinder rate) ಕಡಿಮೆ ಮಾಡಿವೆ. ಪ್ರತಿ ಸಿಲಿಂಡರ್ ದರ ಸುಮಾರು 92 ರೂ.ನಷ್ಟು ಇಳಿಕೆಯಾಗಿದೆ. ಗೃಹ ಬಳಕೆಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬೆಲೆ ಪರಿಷ್ಕರಣೆಯಾಗಿಲ್ಲ. 14.2 ಕೆಜಿ ಸಿಲಿಂಡರ್ ಬೆಲೆ ಕಳೆದ ತಿಂಗಳಿನಷ್ಟೇ ಅಸ್ತಿತ್ವದಲ್ಲಿದೆ. ಕಳೆದ ತಿಂಗಳು ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್ ದರವನ್ನು 50 ರೂ. ಹೆಚ್ಚಿಸಲಾಗಿತ್ತು. ಮಾರ್ಚ್ ತಿಂಗಳಲ್ಲಿ ವಾಣಿಜ್ಯ ಬಳಕೆಯ ಸಿಲಿಂಡರ್ ದರವನ್ನು 350 ರೂ.ನಷ್ಟು ಹೆಚ್ಚಿಸಲಾಗಿತ್ತು. ಇದೀಗ 92 ರೂ. ಇಳಿಕೆ ಮಾಡಲಾಗಿದೆ.
ದೆಹಲಿ – ₹ 2028
ಕೋಲ್ಕತ್ತ – ₹ 2132
ಮುಂಬೈ – ₹ 1980
ಚೆನ್ನೈ – ₹ 2192.50
ಚೆನ್ನೈ – ₹ 2192.50
ಬೆಂಗಳೂರು – ₹1115.5
ಶ್ರೀನಗರ – ₹1,219
ದೆಹಲಿ – ₹1,103
ಪಟ್ನಾ – ₹1,202
ಲೇಹ್- ₹1,340
ಐಜ್ವಾಲ್ – ₹1255
ಅಂಡಮಾನ್ – ₹1179
ಅಹಮದಾಬಾದ್ – ₹1110
ಭೋಪಾಲ್ – ₹1118.5
ಜೈಪುರ – ₹1116.5
ಮುಂಬೈ – ₹1112.5
ಕನ್ಯಾಕುಮಾರಿ – ₹1187
ರಾಂಚಿ – ₹1160.5
ಶಿಮ್ಲಾ – ₹1147.5
ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್ಗಳಂತಲ್ಲದೆ, 19 ಕೆಜಿ ವಾಣಿಜ್ಯ ಬಳಕೆಯ ಸಿಲಿಂಡರ್ಗಳ ದರ ಆಗಾಗ ಏರಿಳಿತಗೊಳ್ಳುತ್ತಲೇ ಇರುತ್ತವೆ.
ಸದ್ಯ ದೆಹಲಿಯಲ್ಲಿ ವಾಣಿಜ್ಯ ಬಳಕೆಯೆ ಎಲ್‌ಪಿಜಿ ಸಿಲಿಂಡರದ ದರ 2,028 ರೂ. ಆಗಿದೆ. ಕಳೆದೊಂದು ವರ್ಷದಲ್ಲಿ ಈ ಸಿಲಿಂಡರ್ ದರ ದೆಹಲಿಯಲ್ಲಿ 225 ರೂ.ನಷ್ಟು ಇಳಿಕೆಯಾಗಿದೆ.
ಮತ್ತಷ್ಟು ಓದಿ: LPG Subsidy: 2023-24ನೇ ಸಾಲಿಗೂ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಸಬ್ಸಿಡಿ ವಿಸ್ತರಣೆ
ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ನೀಡಲಾಗುತ್ತಿರುವ 200 ರೂ. ಸಬ್ಸಿಡಿಯನ್ನು 2023-24ನೇ ಸಾಲಿಗೂ ವಿಸ್ತರಿಸುವುದಾಗಿ ಕಳೆದ ವಾರವಷ್ಟೇ ಕೇಂದ್ರ ಸರ್ಕಾರ ಘೋಷಿಸಿತ್ತು. ಉಜ್ವಲ ಯೋಜನೆ ಅಡಿ 9.59 ಕೋಟಿ ಫಲಾನುಭವಿಗಳು ಇದ್ದಾರೆ. ಇವರು 14.2 ಕೆಜಿ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ಗೆ 200 ರೂ. ಸಬ್ಸಿಡಿ ಪಡೆಯುತ್ತಾರೆ. ಫಲಾನುಭವಿಗಳಿಗೆ ಸರ್ಕಾರ ವರ್ಷಕ್ಕೆ 12 ಸಿಲಿಂಡರ್ಗಳನ್ನು ತುಂಬಲು ಅನುಮತಿ ನೀಡಿದೆ. ಅಂದರೆ ಒಂದು ವರ್ಷದಲ್ಲಿ 12 ಅಡುಗೆ ಅನಿಲ ಸಿಲಿಂಡರ್ಗಳ ಮೇಲೆ ಪ್ರತಿ ಸಿಲಿಂಡರ್ಗೆ 200 ರೂ. ಸಬ್ಸಿಡಿ ನೀಡಿದಂತಾಗುತ್ತದೆ ಎಂದು ಸಚಿವ ಅನುರಾಗ್ ಠಾಕೂರ್ ಇತ್ತೀಚೆಗೆ ತಿಳಿಸಿದ್ದರು.
ವಾಣಿಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ