H-1B Visa: ಭಾರತೀಯರಿಗೆ ಖುಷಿ ಸುದ್ದಿ: ಅಮೆರಿಕದಲ್ಲಿ ಎಚ್-​1 ಬಿ ವೀಸಾ ಹೊಂದಿರುವ ಸಂಗಾತಿಗೂ ಕೆಲಸ ಮಾಡಲು ಅವಕಾಶ

ಅಮೆರಿಕ(America)ದಲ್ಲಿ ಎಚ್​-1ಬಿ ವೀಸಾ (H-1B Visa)  ಹೊಂದಿರುವವರ ಸಂಗಾತಿಗೂ ಕೆಲಸ ಮಾಡಲು ಅವಕಾಶ ನೀಡಬೇಕು ಎಂದು ಸ್ಥಳೀಯ ನ್ಯಾಯಾಲಯ ಮಹತ್ವದ ಆದೇಶ ನೀಡಿದೆ.

H-1B Visa: ಭಾರತೀಯರಿಗೆ ಖುಷಿ ಸುದ್ದಿ: ಅಮೆರಿಕದಲ್ಲಿ ಎಚ್-​1 ಬಿ ವೀಸಾ ಹೊಂದಿರುವ ಸಂಗಾತಿಗೂ ಕೆಲಸ ಮಾಡಲು ಅವಕಾಶ
ಎಚ್​-1ಬಿ ವೀಸಾ
Follow us
ನಯನಾ ರಾಜೀವ್
|

Updated on:Mar 31, 2023 | 12:05 PM

ಅಮೆರಿಕ(America)ದಲ್ಲಿ ಎಚ್​-1ಬಿ ವೀಸಾ (H-1B Visa)  ಹೊಂದಿರುವವರ ಸಂಗಾತಿಗೂ ಕೆಲಸ ಮಾಡಲು ಅವಕಾಶ ನೀಡಬೇಕು ಎಂದು ಸ್ಥಳೀಯ ನ್ಯಾಯಾಲಯ ಮಹತ್ವದ ಆದೇಶ ನೀಡಿದೆ. ಇದರಿಂದ ಅಮೆರಿಕಕ್ಕೆ ಹೋಗಿರುವ ಲಕ್ಷಾಂತರ ಭಾರತೀಯ ಕುಟುಂಬದಲ್ಲಿ ಇನ್ನೋರ್ವ ಸದಸ್ಯರು ಕೆಲಸ ಮಾಡಲು ಅನುವಾಗಲಿದೆ. ಕೋರ್ಟ್​ ಆದೇಶವನ್ನು ಅಮೆರಿಕದ ಜೋ ಬೈಡನ್ ಸರ್ಕಾರ ಹೇಗೆ ಅನುಷ್ಠಾನಕ್ಕೆ ತರಲಿದೆ ಎಂಬುದು ಈಗ ಕುತೂಹಲ ಮೂಡಿಸಿದೆ.

ಎಚ್ -1ಬಿ ವೀಸಾ ವಲಸೆಯೇತರ ವೀಸಾ ಆಗಿದ್ದು, ಅಮೆರಿಕದ ಕಂಪನಿಗಳಿಗೆ ಸೈದ್ಧಾಂತಿಕ ಅಥವಾ ತಾಂತ್ರಿಕ ಪರಿಣತಿಯ ಅಗತ್ಯವಿರುವ ವಿದೇಶಿ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ಅವಕಾಶ ಮಾಡಿಕೊಡುತ್ತದೆ. ಭಾರತ ಮತ್ತು ಚೀನಾದಂತಹ ದೇಶಗಳಿಂದ ಪ್ರತಿ ವರ್ಷ ಹತ್ತು ಸಾವಿರ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ತಂತ್ರಜ್ಞಾನ ಕಂಪನಿಗಳು ಇದನ್ನು ಅವಲಂಬಿಸಿವೆ.

ಸೇವ್ ಜಾಬ್ಸ್ ಯುಎಸ್ ಎ ಎಂಬುದು ಐಟಿ ಉದ್ಯೋಗಿಗಳನ್ನು ಒಳಗೊಂಡಿರುವ ಸಂಸ್ಥೆಯಾಗಿದೆ. ಅಮೆಜಾನ್, ಆಪಲ್, ಗೂಗಲ್ ಮತ್ತು ಮೈಕ್ರೋಸಾಫ್ಟ್ ನಂತಹ ಕಂಪನಿಗಳು ಸೇವ್ ಜಾಬ್ಸ್ ಕೋರ್ಟ್ ಮೆಟ್ಟಿಲೇರಿದ್ದಕ್ಕೆ ವಿರೋಧ ವ್ಯಕ್ತಪಡಿಸಿದ್ದವು. ಅಮೆರಿಕ ಇದುವರೆಗೂ ಎಚ್-1 ಬಿ ವೀಸಾ ಹೊಂದಿರುವವರ ಸಂಗಾತಿಗಳಿಗೆ ಸುಮಾರು 1,00, 000 ಕೆಲಸ ನೀಡಿದೆ.

ಮತ್ತಷ್ಟು ಓದಿ: H-1B Visa Registration: ಮಾ.1 ರಿಂದ 2024ರ ಎಚ್​-1ಬಿ ವೀಸಾ ನೋಂದಣಿ ಶುರು

ಎಚ್​ -1ಬಿ ವೀಸಾ ಹೊಂದಿರುವವರ ಸಂಗಾತಿಗಳಿಗೆ (ಪತಿ ಅಥವಾ ಪತ್ನಿ) ಉದ್ಯೋಗದ ಅಧಿಕೃತ ಕಾರ್ಡ್ ನೀಡುವ ಒಬಾಮಾ ಆಡಳಿತಾವಧಿಯ ನಿಯಮಗಳನ್ನು ವಜಾಗೊಳಿಸುವಂತೆ ಕೋರಿ ಅಮೆರಿಕದ ಸೇವ್ ಜಾಬ್ಸ್ ಯುಎಸ್ ಎ ನ್ಯಾಯಾಲಯದ ಮೆಟ್ಟಿಲೇರಿದ್ದರು.

ಈ ಅರ್ಜಿಯನ್ನು ವಜಾಗೊಳಿಸಿದ ಯುಎಸ್ ಜಿಲ್ಲಾ ನ್ಯಾಯಾಧೀಶರಾದ ತಾನ್ಯಾ ಚುಟ್ಕಾನ್, ಎಚ್-1ಬಿ ವೀಸಾ ಹೊಂದಿರುವವರ ಸಂಗಾತಿ ಅಮೆರಿಕದಲ್ಲಿ ಉದ್ಯೋಗ ಮಾಡಬಹುದು ಎಂದು ತೀರ್ಪು ನೀಡಿದೆ.

ಎಚ್​1ಬಿ ವೀಸಾ ಎಂದರೇನು? ಅಮೆರಿಕ ದೇಶದಲ್ಲಿ ಎಂಜಿನಿಯರ್ ಕೆಲಸ ಮಾಡಲು ಹೋಗುವವರಿಗೆ ಎಚ್1ಬಿ ವೀಸಾ ನೀಡಲಾಗುತ್ತದೆ. ಇದನ್ನು ಯಾರಿಗೆ ನೀಡಲಾಗುತ್ತದೆ? ಈ ವೀಸಾವನ್ನು ಪ್ರಮುಖವಾಗಿ ಐಟಿ ಎಂಜಿನಿಯರ್ಗಳಿಗೆ ನೀಡುತ್ತಾರೆ ಎನ್ನುವುದು ಗಮನಾರ್ಹ. ಭಾರತದಲ್ಲಿ ಮಾನ್ಯಗೊಂಡ ಯಾವುದಾದರೂ ವಿಶ್ವವಿದ್ಯಾಲದಿಂದ ಎಂಜಿನಿಯರಿಂಗ್ ಪದವಿ ಪಡೆದಿರಬೇಕು ಎನ್ನುವುದೇ ಪ್ರಮುಖ ಅರ್ಹತೆ.

ಅಮೆರಿಕದಲ್ಲಿ ಸಾಕಷ್ಟು ಐಟಿ ಕಂಪನಿಗಳಿದ್ದು ಅವುಗಳಲ್ಲಿ ಕೆಲಸ ಮಾಡಲು ಎಂಜಿನಿಯರ್​ಗಳು ಬೇಕಾಗಿದ್ದಾರೆ. ಭಾರತವೂ ಸೇರಿದಂತೆ ಅನ್ಯ ದೇಶಗಳಿಂದ ಹೋದವರು ಆ ಖಾಲಿ ಹುದ್ದೆಗಳನ್ನು ತುಂಬುತ್ತಿದ್ದಾರೆ.

ಒಂದು ಸಮೀಕ್ಷೆಯ ಪ್ರಕಾರ ಭಾರತೀಯ ಎಂಜಿನಿಯರ್​ಗಳು ಅಮೆರಿಕದ ಆರ್ಥಿಕ ವ್ಯವಸ್ಥೆಗೆ ಸುಮಾರು 1 ಬಿಲಿಯನ್ ಡಾಲರ್​ಗಳಷ್ಟು ಕೊಡುಗೆಯನ್ನು ನೀಡುತ್ತಿದ್ದಾರೆ.

ವಾರ್ಷಿಕ ಎಷ್ಟು ಎಚ್1ಬಿ ವೀಸಾಗಳನ್ನು ನೀಡಲಾಗುತ್ತದೆ? 2015 ವರ್ಷದಲ್ಲಿ ಅಮೆರಿಕ ದೇಶ ಬರೋಬ್ಬರಿ 1,72,748 ಎಂಜಿನಿಯರ್ಗಳಿಗೆ ಎಚ್1ಬಿ ವೀಸಾ ನೀಡಿದೆ. ಇದರಲ್ಲಿ ಶೇಕಡಾ 60ರಷ್ಟು ಭಾರತೀಯರಿಗೇ ನೀಡಲಾಗಿದೆ ಎಂಬುದು ಗಮನಾರ್ಹ.

ನೇರವಾಗಿ ಅಮೆರಿಕದಲ್ಲಿ ಕೆಲಸ ಹುಡುಕಲು ಇಚ್ಛಿಸುವುದಾದರೆ ಯಾವುದಾದರೂ ಸಲಹಾ ಕಂಪನಿಗಳ ಮೂಲಕ ಈ ವೀಸಾಕ್ಕೆ ಅರ್ಜಿ ಹಾಕಬಹುದಾಗಿದೆ. ಇದಲ್ಲದೇ ಭಾರತದಲ್ಲಿರುವ ಅನೇಕ ಐಟಿ ಕಂಪನಿಗಳು ತಮ್ಮ ಅಮೆರಿಕ ಕಕ್ಷಿಗಾರ ಕಂಪನಿಗಳ ಬಳಿ ಕಳಿಸಲೂ ಇಂಜಿನಿಯರ್ಗಳ ಪರವಾಗಿ ಅರ್ಜಿ ಸಲ್ಲಿಸಬಹುದಾಗಿದೆ.

ದೇಶದ ಎಲ್ಲ ಪ್ರಮುಖ ಐಟಿ ಕಂಪನಿಗಳು ಇಂಜಿನಿಯರ್ಗಳ ಪರವಾಗಿ ಅರ್ಜಿ ಸಲ್ಲಿಸುತ್ತವೆ. ಇದರಲ್ಲಿ ಇನ್ಫೋಸಿಸ್ 33,289 ಅರ್ಜಿಗಳನ್ನು ಪ್ರಸಕ್ತ ಸಾಲಿನಲ್ಲಿ ಸಲ್ಲಿಸಿದ್ದೇ ಅತಿ ಹೆಚ್ಚು.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:58 am, Fri, 31 March 23

ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?