H-1B Visa Registration: ಮಾ.1 ರಿಂದ 2024ರ ಎಚ್​-1ಬಿ ವೀಸಾ ನೋಂದಣಿ ಶುರು

ಕೌಶಲ್ಯಯುತ ವೃತ್ತಿಪರರಿಗೆ ನೀಡಲಾಗುವ ಎಚ್​-1ಬಿ ವೀಸಾಗಳಿಗಾಗಿ 2024ನೇ ಸಾಲಿನ ನೋಂದಣಿ ಮಾರ್ಚ್​ 1 ರಿಂದ ಶುರುವಾಗಲಿದೆ. ಮಾರ್ಚ್​ 17ರವರೆಗೆ ನಡೆಯಲಿದೆ ಎಂದು ಅಮೆರಿಕದ ಸಿಟಿಜನ್​ಶಿಪ್ ಆಂಡ್ ಇಮಿಗ್ರೇಷನ್ ಸರ್ವೀಸಸ್​ ಪ್ರಕಟಿಸಿದೆ.

H-1B Visa Registration: ಮಾ.1 ರಿಂದ 2024ರ ಎಚ್​-1ಬಿ ವೀಸಾ ನೋಂದಣಿ ಶುರು
ಎಚ್​1ಬಿ ವೀಸಾ
Follow us
ನಯನಾ ರಾಜೀವ್
|

Updated on:Feb 28, 2023 | 11:41 AM

ಕೌಶಲ್ಯಯುತ ವೃತ್ತಿಪರರಿಗೆ ನೀಡಲಾಗುವ ಎಚ್​-1ಬಿ ವೀಸಾಗಳಿಗಾಗಿ 2024ನೇ ಸಾಲಿನ ನೋಂದಣಿ ಮಾರ್ಚ್​ 1 ರಿಂದ ಶುರುವಾಗಲಿದೆ. ಮಾರ್ಚ್​ 17ರವರೆಗೆ ನಡೆಯಲಿದೆ ಎಂದು ಅಮೆರಿಕದ ಸಿಟಿಜನ್​ಶಿಪ್ ಆಂಡ್ ಇಮಿಗ್ರೇಷನ್ ಸರ್ವೀಸಸ್​ ಪ್ರಕಟಿಸಿದೆ. H-1B ಮಾದರಿಯ ವೀಸಾವು US ಉದ್ಯೋಗದಾತರಿಗೆ ವಿದೇಶಿ ಉದ್ಯೋಗಿಗಳನ್ನು ವಿಶೇಷ ಉದ್ಯೋಗಗಳಲ್ಲಿ ತಾತ್ಕಾಲಿಕವಾಗಿ ನೇಮಿಸಿಕೊಳ್ಳಲು ಇರುವ ಏಕೈಕ ಮಾರ್ಗವಾಗಿದೆ. ಹೆಚ್ಚಾಗಿ, H-1B ಪ್ರಕಾರದ ವೀಸಾ ಹೊಂದಿರುವವರು ಗ್ರೀನ್ ಕಾರ್ಡ್‌ಗೆ ಅರ್ಹತೆಯನ್ನು ಪಡೆಯುತ್ತಾರೆ. ಪ್ರತಿ ವರ್ಷ, H-1B ವೀಸಾಕ್ಕಾಗಿ ಉದ್ಯೋಗದಾತರಿಂದ 85,000 ಕ್ಕೂ ಹೆಚ್ಚು ಅರ್ಜಿಗಳನ್ನು ಸ್ವೀಕರಿಸಲಾಗುತ್ತದೆ.

ಅರ್ಹ ವೃತ್ತಿಪರರು ಮತ್ತು ಅವರ ಪ್ರತಿನಿಧಿಗಳು ಈ ಅವಧಿಯಲ್ಲಿ ಆನ್​ಲೈನ್ ಎಚ್​1ಬಿ ನೋಂದಣಿ ವ್ಯವಸ್ಥೆಯ ಮೂಲಕ ತಮ್ಮ ಅರ್ಜಿಯನ್ನು ಭರ್ತಿಗೊಳಿಸಿ ಸಲ್ಲಿಸಬಹುದಾಗಿದೆ. ಯುಎಸ್​ಸಿಐಎಸ್ ಪ್ರತಿ ನೋಂದಣಿಗೆ ಕ್ರಮಸಂಖ್ಯೆ ನೀಡಲಿದ್ದು, ಇದರ ಮೂಲಕ ನೋಂದಣಿ ಸ್ಥಿತಿಗತಿ ತಿಳಿಯಬಹುದು.

ಮತ್ತಷ್ಟು ಓದಿ: ಭಾರತ, ಬ್ರಿಟನ್ ಹೊಸ ವೀಸಾ ಯೋಜನೆ ಜಾರಿ; ಅರ್ಹತೆ ಏನು, ಅರ್ಜಿ ಸಲ್ಲಿಕೆ ಹೇಗೆ? ಇಲ್ಲಿದೆ ಮಾಹಿತಿ

H-1B ವೀಸಾ ಅಂದರೆ ಏನು..? H-1B ವೀಸಾ ವಲಸೆ ರಹಿತ ವೀಸಾ ಆಗಿದ್ದು, ವಿಶೇಷ ಸೈದ್ಧಾಂತಿಕ ಅಥವಾ ತಾಂತ್ರಿಕ ಕೌಶಲ್ಯಗಳೊಂದಿಗೆ ವಿದೇಶಿ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ಅಮೆರಿಕ ಕಂಪನಿಗಳಿಗೆ ಅನುವು ಮಾಡಿಕೊಡುತ್ತದೆ. ಭಾರತ ಮತ್ತು ಚೀನಾದಂತಹ ದೇಶಗಳಿಂದ ವಾರ್ಷಿಕವಾಗಿ ಸಾವಿರಾರು ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ತಂತ್ರಜ್ಞಾನ ಕಂಪನಿಗಳು ಈ ವೀಸಾವನ್ನು ಅವಲಂಬಿಸಿವೆ.

ವೀಸಾಗೆ ಅರ್ಜಿ ಸಲ್ಲಿಸುವ ವಿಧಾನ -ನೋಂದಣಿಗಾಗಿ ಅರ್ಜಿ ಸಲ್ಲಿಸಲು myUSCIC ಖಾತೆಯನ್ನು ರಚಿಸಿ. ಅರ್ಜಿದಾರರು 10 ಡಾಲರ್ ಮೊತ್ತವನ್ನು ಪಾವತಿಸಬೇಕಾಗುತ್ತದೆ. ಇದನ್ನು ಮರುಪಾವತಿಸುವುದಿಲ್ಲ, https://myaccount.uscis.gov/users/sign_up

-ತಮ್ಮ ಸ್ವಂತ ನೋಂದಣಿಗಳನ್ನು ಸಲ್ಲಿಸುತ್ತಿರುವವರು registrant ಖಾತೆಯನ್ನು ಬಳಸಬೇಕಾಗುತ್ತದೆ.

-ಹೊಸ ಖಾತೆ ರಚನೆಯ ಪ್ರಕ್ರಿಯೆಯು ಫೆ.21ರಿಂದ ಆರಂಭವಾಗಿದೆ.

– ಫಲಾನುಭವಿಗಳ ವಿವರಗಳನ್ನು ನಮೂದಿಸಲು ಪ್ರತಿನಿಧಿಗಳು ಮತ್ತು ನೋಂದಣಿದಾರರು ಮಾರ್ಚ್ 1 ರವರೆಗೆ ಕಾಯಬೇಕಾಗುತ್ತದೆ. ನಂತರ, ಅವರು ಪ್ರತಿ ಫಲಾನುಭವಿಗಳು 10 ಡಾಲರ್ ನೋಂದಣಿ ಶುಲ್ಕವನ್ನು ಸಲ್ಲಿಸಬೇಕು.

-ಅಮೆರಿಕ ಸರ್ಕಾರವು ಮಾರ್ಚ್ 31 ರೊಳಗೆ ಅಂತಿಮ ಆಯ್ಕೆಗಳ ಬಗ್ಗೆ ಖಾತೆದಾರರಿಗೆ ತಿಳಿಸುತ್ತದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

-ಅನುಮೋದನೆಯನ್ನು ಪಡೆದ ನಂತರ, ಅರ್ಜಿದಾರರು ತಮ್ಮ ವಿವರವಾದ H-1B ಅರ್ಜಿಗಳನ್ನು USCIS ಗೆ ಸಲ್ಲಿಸಬೇಕು, ಅದು 90 ದಿನಗಳಲ್ಲಿ ಪೂರ್ಣಗೊಳ್ಳಬೇಕು.

-ಪ್ರಾಯೋಜಕ ಕಂಪನಿಯ ವಿವರಗಳನ್ನು ನಮೂದಿಸಿ

-ಅರ್ಜಿದಾರನು H-1B ಫಲಾನುಭವಿ ಉದ್ಯೋಗಿಯ ಲಿಂಗ ಮತ್ತು ಹುಟ್ಟಿದ ದಿನಾಂಕ, ಹುಟ್ಟಿದ ದೇಶ ಮತ್ತು ಉದ್ಯೋಗಿಯ ಪೌರತ್ವವನ್ನು ಸಹ ನಮೂದಿಸಬೇಕು.

-H-1B ಫಲಾನುಭವಿಯ ಪಾಸ್‌ಪೋರ್ಟ್ ಸಂಖ್ಯೆಯ ವಿವರವನ್ನು ಭರ್ತಿ ಮಾಡಿ

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 11:41 am, Tue, 28 February 23