LPG cylinder price: ಎಲ್​ಪಿಜಿ ಸಿಲಿಂಡರ್ ದರ ಇಳಿಕೆ; ಯಾವ ನಗರದಲ್ಲಿ ಎಷ್ಟು ಕಡಿಮೆಯಾಯ್ತು? ಇಲ್ಲಿ ನೋಡಿ

ಪ್ರಸಕ್ತ ಹಣಕಾಸು ವರ್ಷದ ಮೊದಲ ದಿನವೇ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ವಾಣಿಜ್ಯ ಬಳಕೆಯ ಎಲ್​ಪಿಜಿ ಸಿಲಿಂಡರ್ ದರವನ್ನು (LPG cylinder rate) ಕಡಿಮೆ ಮಾಡಿವೆ. ಪ್ರತಿ ಸಿಲಿಂಡರ್ ದರ ಸುಮಾರು 92 ರೂ.ನಷ್ಟು ಕಡಿಮೆಯಾಗಿದೆ.

LPG cylinder price: ಎಲ್​ಪಿಜಿ ಸಿಲಿಂಡರ್ ದರ ಇಳಿಕೆ; ಯಾವ ನಗರದಲ್ಲಿ ಎಷ್ಟು ಕಡಿಮೆಯಾಯ್ತು? ಇಲ್ಲಿ ನೋಡಿ
ಸಾಂದರ್ಭಿಕ ಚಿತ್ರ
Follow us
Ganapathi Sharma
|

Updated on: Apr 01, 2023 | 10:33 AM

ನವದೆಹಲಿ: ಪ್ರಸಕ್ತ ಹಣಕಾಸು ವರ್ಷದ ಮೊದಲ ದಿನವೇ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ವಾಣಿಜ್ಯ ಬಳಕೆಯ ಎಲ್​ಪಿಜಿ ಸಿಲಿಂಡರ್ ದರವನ್ನು (LPG cylinder rate) ಕಡಿಮೆ ಮಾಡಿವೆ. ಪ್ರತಿ ಸಿಲಿಂಡರ್ ದರ ಸುಮಾರು 92 ರೂ.ನಷ್ಟು ಇಳಿಕೆಯಾಗಿದೆ. ಗೃಹ ಬಳಕೆಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬೆಲೆ ಪರಿಷ್ಕರಣೆಯಾಗಿಲ್ಲ. 14.2 ಕೆಜಿ ಸಿಲಿಂಡರ್ ಬೆಲೆ ಕಳೆದ ತಿಂಗಳಿನಷ್ಟೇ ಅಸ್ತಿತ್ವದಲ್ಲಿದೆ. ಕಳೆದ ತಿಂಗಳು ಗೃಹ ಬಳಕೆಯ ಎಲ್​ಪಿಜಿ ಸಿಲಿಂಡರ್ ದರವನ್ನು 50 ರೂ. ಹೆಚ್ಚಿಸಲಾಗಿತ್ತು. ಮಾರ್ಚ್​ ತಿಂಗಳಲ್ಲಿ ವಾಣಿಜ್ಯ ಬಳಕೆಯ ಸಿಲಿಂಡರ್ ದರವನ್ನು 350 ರೂ.ನಷ್ಟು ಹೆಚ್ಚಿಸಲಾಗಿತ್ತು. ಇದೀಗ 92 ರೂ. ಇಳಿಕೆ ಮಾಡಲಾಗಿದೆ.

ಇಂಡೇನ್​ ಗ್ಯಾಸ್ ಸಿಲಿಂಡರ್ ದರ ಹೀಗಿದೆ (19 ಕೆಜಿ)

ದೆಹಲಿ – ₹ 2028 ಕೋಲ್ಕತ್ತ – ₹ 2132 ಮುಂಬೈ – ₹ 1980 ಚೆನ್ನೈ – ₹ 2192.50 ಚೆನ್ನೈ – ₹ 2192.50

ಗೃಹ ಬಳಕೆಯ ಎಲ್​ಪಿಜಿ ಸಿಲಿಂಡರ್ ಬೆಲೆ

ಬೆಂಗಳೂರು – ₹1115.5 ಶ್ರೀನಗರ – ₹1,219 ದೆಹಲಿ – ₹1,103 ಪಟ್ನಾ – ₹1,202 ಲೇಹ್- ₹1,340 ಐಜ್ವಾಲ್ – ₹1255 ಅಂಡಮಾನ್ – ₹1179 ಅಹಮದಾಬಾದ್ – ₹1110 ಭೋಪಾಲ್ – ₹1118.5 ಜೈಪುರ – ₹1116.5 ಮುಂಬೈ – ₹1112.5 ಕನ್ಯಾಕುಮಾರಿ – ₹1187 ರಾಂಚಿ – ₹1160.5 ಶಿಮ್ಲಾ – ₹1147.5

ಗೃಹ ಬಳಕೆಯ ಎಲ್​ಪಿಜಿ ಸಿಲಿಂಡರ್​ಗಳಂತಲ್ಲದೆ, 19 ಕೆಜಿ ವಾಣಿಜ್ಯ ಬಳಕೆಯ ಸಿಲಿಂಡರ್​ಗಳ ದರ ಆಗಾಗ ಏರಿಳಿತಗೊಳ್ಳುತ್ತಲೇ ಇರುತ್ತವೆ.

ಸದ್ಯ ದೆಹಲಿಯಲ್ಲಿ ವಾಣಿಜ್ಯ ಬಳಕೆಯೆ ಎಲ್​ಪಿಜಿ ಸಿಲಿಂಡರದ ದರ 2,028 ರೂ. ಆಗಿದೆ. ಕಳೆದೊಂದು ವರ್ಷದಲ್ಲಿ ಈ ಸಿಲಿಂಡರ್ ದರ ದೆಹಲಿಯಲ್ಲಿ 225 ರೂ.ನಷ್ಟು ಇಳಿಕೆಯಾಗಿದೆ.

ಮತ್ತಷ್ಟು ಓದಿ: LPG Subsidy: 2023-24ನೇ ಸಾಲಿಗೂ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ ಸಬ್ಸಿಡಿ ವಿಸ್ತರಣೆ

ಪ್ರಧಾನ ಮಂತ್ರಿ ಉಜ್ವಲ​ ಯೋಜನೆಯ ಫಲಾನುಭವಿಗಳಿಗೆ ನೀಡಲಾಗುತ್ತಿರುವ 200 ರೂ. ಸಬ್ಸಿಡಿಯನ್ನು 2023-24ನೇ ಸಾಲಿಗೂ ವಿಸ್ತರಿಸುವುದಾಗಿ ಕಳೆದ ವಾರವಷ್ಟೇ ಕೇಂದ್ರ ಸರ್ಕಾರ ಘೋಷಿಸಿತ್ತು. ಉಜ್ವಲ ಯೋಜನೆ ಅಡಿ 9.59 ಕೋಟಿ ಫಲಾನುಭವಿಗಳು ಇದ್ದಾರೆ. ಇವರು 14.2 ಕೆಜಿ ಎಲ್​ಪಿಜಿ ಗ್ಯಾಸ್​ ಸಿಲಿಂಡರ್​ಗೆ 200 ರೂ. ಸಬ್ಸಿಡಿ ಪಡೆಯುತ್ತಾರೆ. ಫಲಾನುಭವಿಗಳಿಗೆ ಸರ್ಕಾರ ವರ್ಷಕ್ಕೆ 12 ಸಿಲಿಂಡರ್​ಗಳನ್ನು ತುಂಬಲು ಅನುಮತಿ ನೀಡಿದೆ. ಅಂದರೆ ಒಂದು ವರ್ಷದಲ್ಲಿ 12 ಅಡುಗೆ ಅನಿಲ ಸಿಲಿಂಡರ್​ಗಳ ಮೇಲೆ ಪ್ರತಿ ಸಿಲಿಂಡರ್​ಗೆ 200 ರೂ. ಸಬ್ಸಿಡಿ ನೀಡಿದಂತಾಗುತ್ತದೆ ಎಂದು ಸಚಿವ ಅನುರಾಗ್ ಠಾಕೂರ್ ಇತ್ತೀಚೆಗೆ ತಿಳಿಸಿದ್ದರು.

ವಾಣಿಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಗೆಳೆಯನನ್ನು ಕಚ್ಚಿ ಹಿಡಿದ ಸಿಂಹಕ್ಕೆ ಮನಬಂದಂತೆ ಥಳಿಸಿದ ವ್ಯಕ್ತಿ
ಗೆಳೆಯನನ್ನು ಕಚ್ಚಿ ಹಿಡಿದ ಸಿಂಹಕ್ಕೆ ಮನಬಂದಂತೆ ಥಳಿಸಿದ ವ್ಯಕ್ತಿ
ಮಹಾರಾಷ್ಟ್ರದಲ್ಲಿ ಪೊಲೀಸರ ಮೇಲೆ ಕಲ್ಲು ತೂರಾಟ
ಮಹಾರಾಷ್ಟ್ರದಲ್ಲಿ ಪೊಲೀಸರ ಮೇಲೆ ಕಲ್ಲು ತೂರಾಟ
ಸೋಮನಹಳ್ಳಿಯ ಚಿತಾಗಾರದಿಂದ ಭಾರವಾದ ಹೆಜ್ಜೆಹಾಕುತ್ತ ವಾಪಸ್ಸಾದರು ಪ್ರೇಮ
ಸೋಮನಹಳ್ಳಿಯ ಚಿತಾಗಾರದಿಂದ ಭಾರವಾದ ಹೆಜ್ಜೆಹಾಕುತ್ತ ವಾಪಸ್ಸಾದರು ಪ್ರೇಮ
ಒಕ್ಕಲಿಗ ಸಂಪ್ರದಾಯದಂತೆ ನಡೆದ ಅಂತಿಮ ಸಂಸ್ಕಾರದಲ್ಲಿ ಅನೇಕ ಗಣ್ಯರು ಭಾಗಿ
ಒಕ್ಕಲಿಗ ಸಂಪ್ರದಾಯದಂತೆ ನಡೆದ ಅಂತಿಮ ಸಂಸ್ಕಾರದಲ್ಲಿ ಅನೇಕ ಗಣ್ಯರು ಭಾಗಿ
ಉಗ್ರಂ ಮಂಜು ನಿಜವಾದ ಮುಖ ಬಯಲು ಮಾಡಿದ ಗೌತಮಿ; ಬದಲಾಯ್ತು ಆಟ
ಉಗ್ರಂ ಮಂಜು ನಿಜವಾದ ಮುಖ ಬಯಲು ಮಾಡಿದ ಗೌತಮಿ; ಬದಲಾಯ್ತು ಆಟ
ಮಗಳು ಮತ್ತು ಮೊಮ್ಮಗನೊಂದಿಗೆ ಆಗಮಿಸಿ ತಿರಂಗ ಸ್ವೀಕರಿಸಿದ ಪ್ರೇಮ ಕೃಷ್ಣ
ಮಗಳು ಮತ್ತು ಮೊಮ್ಮಗನೊಂದಿಗೆ ಆಗಮಿಸಿ ತಿರಂಗ ಸ್ವೀಕರಿಸಿದ ಪ್ರೇಮ ಕೃಷ್ಣ
ವಿಡಿಯೋ: ರಾಜಕೀಯ ಗುರುವಿಗೆ ಹೆಗಲು ಕೊಟ್ಟು ವಿದಾಯ ಹೇಳಿದ ಡಿಕೆ ಬ್ರದರ್ಸ್
ವಿಡಿಯೋ: ರಾಜಕೀಯ ಗುರುವಿಗೆ ಹೆಗಲು ಕೊಟ್ಟು ವಿದಾಯ ಹೇಳಿದ ಡಿಕೆ ಬ್ರದರ್ಸ್
ರಾಜ್ಯ ಮತ್ತು ರಾಷ್ಟ್ರದ ಹಲವಾರು ನಾಯಕರು ಕೃಷ್ಣರ ಅಂತ್ಯಕ್ರಿಯೆಯಲ್ಲಿ ಭಾಗಿ
ರಾಜ್ಯ ಮತ್ತು ರಾಷ್ಟ್ರದ ಹಲವಾರು ನಾಯಕರು ಕೃಷ್ಣರ ಅಂತ್ಯಕ್ರಿಯೆಯಲ್ಲಿ ಭಾಗಿ
ರಜತ್ ವಿರುದ್ಧ ಮುಗಿಬಿದ್ದ ಮಂಜು, ತ್ರಿವಿಕ್ರಮ್
ರಜತ್ ವಿರುದ್ಧ ಮುಗಿಬಿದ್ದ ಮಂಜು, ತ್ರಿವಿಕ್ರಮ್
ಅಂತ್ಯಕ್ರಿಯೆ ಉಸ್ತುವಾರಿ ವಹಿಸಿಕೊಂಡ ಡಿಕೆ ಶಿವಕುಮಾರ್​ರಿಂದ ಚುರುಕು ಓಡಾಟ
ಅಂತ್ಯಕ್ರಿಯೆ ಉಸ್ತುವಾರಿ ವಹಿಸಿಕೊಂಡ ಡಿಕೆ ಶಿವಕುಮಾರ್​ರಿಂದ ಚುರುಕು ಓಡಾಟ