Lulu in Hyderabad: ಹೈದರಾಬಾದ್ನಲ್ಲಿಯೂ 3,500 ಕೋಟಿ ರೂ ಹೂಡಿಕೆಗೆ ‘ಲುಲು ಗ್ರೂಪ್’ ಒಪ್ಪಂದ, ಸೆಪ್ಟೆಂಬರ್ ತಿಂಗಳಲ್ಲಿ ಆರಂಭ
ಈಗಾಗಲೇ ಹೈದರಾಬಾದ್ ನಗರದಲ್ಲಿ 200 ಕೋಟಿ ಬಂಡವಾಳದಲ್ಲಿ ಲುಲು ಶಾಪಿಂಗ್ ಮಾಲ್ ಸ್ಥಾಪನೆಯಾಗುತ್ತಿದೆ. ಸೆಪ್ಟೆಂಬರ್ ಮೊದಲ ವಾರದಲ್ಲಿ ಹೈದರಾಬಾದ್ ನಲ್ಲಿ ಲುಲು ಮಾಲ್ ತೆರೆಯಲಿದೆ.
ಕೊಲ್ಲಿ ರಾಷ್ಟ್ರಗಳಲ್ಲಿ (ಯುಎಇ) ಪ್ರಧಾನ ಕಚೇರಿಯನ್ನು ಹೊಂದಿರುವ, ಬೆಂಗಳೂರಿನಲ್ಲಿಯೂ ಒಂದು ಕೇಂದ್ರವನ್ನು ಸ್ಥಾಪಿಸಿರುವ ಲುಲು ಗ್ರೂಪ್ ಇಂಟರ್‌ನ್ಯಾಶನಲ್ ತನ್ನ ಚಿಲ್ಲರೆ ಮಾರಾಟ ವ್ಯಾಪಾರದ ಹೆಜ್ಜೆ ಗುರುತನ್ನು ಇದೀಗ ಚೆನ್ನೈ , ಹೈದರಾಬಾದ್ ಮತ್ತು ಅಹಮದಾಬಾದ್‌ಗೆ ವಿಸ್ತರಿಸಲು ಯೋಜಿಸುತ್ತಿದೆ (Lulu company in Hyderabad) ಎಂದು ಕಂಪನಿ ತಿಳಿಸಿದೆ. ಲುಲು ಗ್ರೂಪ್ ಇಂಟರ್‌ನ್ಯಾಶನಲ್ ಪ್ರಸ್ತುತ ದೇಶದಲ್ಲಿ ಕೊಚ್ಚಿ, ಬೆಂಗಳೂರು, ತಿರುವನಂತಪುರಂ, ತ್ರಿಶೂರ್ ಮತ್ತು ಲಕ್ನೋದಲ್ಲಿ ಐದು ಮಾಲ್‌ಗಳನ್ನು ಹೊಂದಿದೆ. ಅಂತರಾಷ್ಟ್ರೀಯ ಕಂಪನಿ ಲುಲು ಗ್ರೂಪ್ ತೆಲಂಗಾಣದಲ್ಲಿ ಹಂತ ಹಂತವಾಗಿ 3500 ಕೋಟಿ ಹೂಡಿಕೆ ಮಾಡಲು (Investment) ಮುಂದೆ ಬಂದಿದೆ. ಬೇಗಂಪೇಟೆಯ ಐಟಿಸಿ ಕಾಕತೀಯ ಹೋಟೆಲ್‌ನಲ್ಲಿ ಸಚಿವ ಕೆಟಿ ರಾಮರಾವ್ (K T Rama Rao) ಮತ್ತು ಲುಲು ಪ್ರತಿನಿಧಿಗಳು ಈ ಸಂಬಂಧ ಸಭೆ ನಡೆಸಿದರು. ಈ ಸಂದರ್ಭದಲ್ಲಿ ಆಹಾರ ಸಂಸ್ಕರಣೆ, ರಫ್ತು ಮತ್ತು ಚಿಲ್ಲರೆ ಕ್ಷೇತ್ರದಲ್ಲಿ (Food processing and retail sectors) ತೆಲಂಗಾಣದಲ್ಲಿ ತಮ್ಮ ಕಾರ್ಯಾಚರಣೆಯನ್ನು ಪ್ರಾರಂಭಿಸಲು ಕೆಟಿಆರ್ ಅವರೊಂದಿಗೆ ಚರ್ಚೆ ನಡೆಸಲಾಯಿತು ಎಂದು ತೆಲಂಗಾಣ ಸರ್ಕಾರ ಮತ್ತು ಲುಲು ನಡುವಿನ ಒಪ್ಪಂದದ ನಂತರ.. ಮುಂದಿನ ದಿನಗಳಲ್ಲಿ ತಾವು ಕೈಗೊಳ್ಳಲಿರುವ ಚಟುವಟಿಕೆಗಳ ಬಗ್ಗೆ ಲುಲು ಕಂಪನಿ ಅಧಿಕೃತವಾಗಿ ಪ್ರಕಟಿಸಿದೆ.
ಇದೇ ವೇಳೆ ಕಳೆದ ಬಾರಿ ದಾವೋಸ್ ಭೇಟಿ ವೇಳೆ ಸಚಿವ ಕೆಟಿಆರ್ ಸಮ್ಮುಖದಲ್ಲಿ ಲುಲು ಕಂಪನಿ ಭಾರೀ ಬಂಡವಾಳ ಹೂಡುವ ಒಪ್ಪಂದಕ್ಕೆ ಸಹಿ ಹಾಕಿತ್ತು. ಲುಲು ಕಂಪನಿಯು ಹೈಪರ್‌ಮಾರ್ಕೆಟ್‌ಗಳು ಮತ್ತು ಮಲ್ಟಿಪ್ಲೆಕ್ಸ್‌ಗಳ ನಿರ್ಮಾಣದಲ್ಲಿ ಅಂತರರಾಷ್ಟ್ರೀಯ ದೈತ್ಯ ಎಂದು ಪರಿಗಣಿತವಾಗಿದೆ. ಇದು ಅಬುಧಾಬಿಯಲ್ಲಿ ತನ್ನ ಪ್ರಧಾನ ಕೇಂದ್ರ ಹೊಂದಿದ್ದು, ಜಾಗತಿಕವಾಗಿ ವ್ಯಾಪಾರವನ್ನು ಮುಂದುವರೆಸಿದೆ.
ಲುಲು ಪ್ರತಿನಿಧಿಗಳ ಜೊತೆಗಿನ ಸಭೆಯ ನಂತರ ಮಾತನಾಡಿದ ಸಚಿವ ಕೆಟಿಆರ್, ಹೈದರಾಬಾದ್‌ನಲ್ಲಿ ವಿಶ್ವದರ್ಜೆಯ ಕಂಪನಿಯೊಂದು ಬಂಡವಾಳ ಹೂಡಿಕೆಗೆ ಮುಂದಾಗಿರುವುದು ಸಂತಸ ತಂದಿದೆ. ತೆಲಂಗಾಣ ರಾಜ್ಯ ಎಲ್ಲ ಕ್ಷೇತ್ರಗಳಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿದೆ ಎಂದರು. ವಿಶ್ವ ದರ್ಜೆಯ ಸಂಸ್ಥೆಗಳೊಂದಿಗೆ ತೆಲಂಗಾಣವೂ ಅಭಿವೃದ್ಧಿ ಹೊಂದಲಿದೆ ಎಂದರು. ವಿಶ್ವದಲ್ಲೇ ಅತಿ ದೊಡ್ಡ ನೀರಾವರಿ ಯೋಜನೆ ತೆಲಂಗಾಣ ರಾಜ್ಯದಲ್ಲಿದೆ ಎಂದರು. ರಾಜ್ಯದಲ್ಲಿ ಲುಲು ಕಂಪನಿಗಳ ಸ್ಥಾಪನೆಯೊಂದಿಗೆ ತೆಲಂಗಾಣ ಪ್ರವಾಸೋದ್ಯಮವು ಹೆಚ್ಚಾಗುವ ನಿರೀಕ್ಷೆಯಿದೆ.
Starting the week with good news
Many thanks to Sri @Yusuffali_MA Ji the Chairman and MD of @LuLuGroup_India for committing to ₹3,500 Crore investment in Telangana State
These investments will be in Food processing and retail sectors pic.twitter.com/ARTXRQaGPZ
— KTR (@KTRBRS) June 26, 2023
3500 ಕೋಟಿ ಹೂಡಿಕೆಯೊಂದಿಗೆ ತೆಲಂಗಾಣ ರಾಜ್ಯದಲ್ಲಿ ಹೂಡಿಕೆ ಮಾಡಲಿದ್ದೇವೆ ಎಂದು ಲುಲು ಗ್ರೂಪ್ ಅಧ್ಯಕ್ಷ ಯೂಸುಫ್ ಅಲಿ ಹೇಳಿದ್ದಾರೆ. ಆಹಾರ ಸಂಸ್ಕರಣೆ ಮತ್ತು ರಫ್ತು ಕೇಂದ್ರವನ್ನು ಸ್ಥಾಪಿಸಲಾಗುವುದು. ಈಗಾಗಲೇ ಹೈದರಾಬಾದ್ ನಗರದಲ್ಲಿ 200 ಕೋಟಿ ಬಂಡವಾಳದಲ್ಲಿ ಲುಲು ಶಾಪಿಂಗ್ ಮಾಲ್ ಸ್ಥಾಪನೆಯಾಗುತ್ತಿದೆ. ಆಗಸ್ಟ್ ಅಥವಾ ಸೆಪ್ಟೆಂಬರ್ ಮೊದಲ ವಾರದಲ್ಲಿ ಹೈದರಾಬಾದ್ ನಗರದಲ್ಲಿ ಲುಲು ಮಾಲ್ ತೆರೆಯಲಿದೆ. ಲುಲು ಮಾಲ್‌ಗೆ ಸಂಬಂಧಿಸಿದ ಶೇ. 80ರಷ್ಟು ಕಾಮಗಾರಿ ಈಗಾಗಲೇ ಪೂರ್ಣಗೊಂಡಿದೆ ಎಂದರು. ದಾವೋಸ್ ಒಪ್ಪಂದದ ಪ್ರಕಾರ ತೆಲಂಗಾಣ ರಾಜ್ಯದಲ್ಲಿ ಹೂಡಿಕೆ ಮಾಡಲು ಮುಂದೆ ಬರುತ್ತಿದ್ದೇವೆ ಎಂದು ವಿವರಿಸಿದರು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 4:18 pm, Mon, 26 June 23