Manappuram: ಮಣಪ್ಪುರಂ ಫೈನಾನ್ಸ್ ಸಂಸ್ಥೆಗೆ 20 ಲಕ್ಷ ರೂ ದಂಡ ಹಾಕಿದ ಆರ್​ಬಿಐ; ಕಾರಣ ಇದು

|

Updated on: Jun 18, 2023 | 6:11 PM

RBI Imposes Penalty On Manappuram Finance: ಎನ್​ಪಿಎ ಘೋಷಿಸುವಲ್ಲಿ ಲೋಪ ಸೇರಿದಂತೆ ಕೆಲವಾರು ನಿಯಮಗಳ ಉಲ್ಲಂಘನೆ ಕಾರಣಕ್ಕೆ ಮಣಪ್ಪುರಂ ಫೈನಾನ್ಸ್ ಕಂಪನಿಗೆ ಭಾರತೀಯ ರಿಸರ್ವ್ ಬ್ಯಾಂಕ್ 20 ಲಕ್ಷ ರೂ ದಂಡ ಹಾಕಿದೆ.

Manappuram: ಮಣಪ್ಪುರಂ ಫೈನಾನ್ಸ್ ಸಂಸ್ಥೆಗೆ 20 ಲಕ್ಷ ರೂ ದಂಡ ಹಾಕಿದ ಆರ್​ಬಿಐ; ಕಾರಣ ಇದು
ಮಣಪ್ಪುರಂ ಫೈನಾನ್ಸ್
Follow us on

ನವದೆಹಲಿ: ಬ್ಯಾಂಕೇತರ ಹಣಕಾಸು ಸಂಸ್ಥೆಗಳು (NBFC) ಪಾಲಿಸಬೇಕಾದ ಕೆಲ ನಿಯಮಗಳ ಉಲ್ಲಂಘನೆ ಮಾಡಿದ ಕಾರಣಕ್ಕೆ ಮಣಪ್ಪುರಂ ಫೈನಾನ್ಸ್ ಸಂಸ್ಥೆಗೆ (Manappuram Finance) ಭಾರತೀಯ ರಿಸರ್ವ್ ಬ್ಯಾಂಕ್ 20 ಲಕ್ಷ ರೂ ದಂಡ ವಿಧಿಸಿದೆ. ಆದರೆ, ಗ್ರಾಹಕರ ವ್ಯವಹಾರದೊಂದಿಗೆ ಕಂಪನಿ ಯಾವುದೇ ಲೋಪ ಆಗಿದೆ ಎಂದು ಅರ್ಥೈಸಿಕೊಳ್ಳಬೇಕಿಲ್ಲ. ಕೆಲ ಕಾನೂನು ಪಾಲನೆಯಲ್ಲಿ ಲೋಪವಾಗಿದ್ದಕ್ಕೆ ದಂಡ ಹಾಕಲಾಗಿದೆ ಎಂದು ಆರ್​ಬಿಐ ಸ್ಪಷ್ಟಪಡಿಸಿದೆ.

ಎನ್​ಪಿಎ ಆಸ್ತಿ ಘೋಷಣೆಯಲ್ಲಿ ಲೋಪ?

ಮಣಪ್ಪುರಂ ಫೈನಾನ್ಸ್ ಕಂಪನಿಯ ಹಣಕಾಸು ಸ್ಥಿತಿಯನ್ನು ಆರ್​ಬಿಐ ಪರಿಶೀಲನೆ ನಡೆಸಿತ್ತು. ಕಂಪನಿಯ ರಿಸ್ಕ್ ಅಸೆಸ್ಮೆಂಟ್ ರಿಪೋರ್ಟ್, ಇನ್ಸ್​ಪೆಕ್ಷನ್ ರಿಪೋರ್ಟ್, ಸೂಪರ್​ವೈಸರಿ ಲೆಟರ್ ಇತ್ಯಾದಿ ದಾಖಲೆಗಳನ್ನೂ ಪರಿಶೀಲಿಸಿತ್ತು. 90 ದಿನಗಳಿಂದಲೂ ಪಾವತಿಯಾಗದೇ ಸ್ಥಗಿತಗೊಂಡಿದ್ದ ಕೆಲ ಗೋಲ್ಡ್ ಲೋನ್ ಖಾತೆಗಳನ್ನು ಎನ್​ಪಿಎ ಅಥವಾ ಅನುತ್ಪಾದಕ ಆಸ್ತಿ ಎಂದು ವರ್ಗೀಕರಿಸಲು ಕಂಪನಿ ವಿಫಲವಾಗಿದೆ. ಇದು ನಿಯಮದ ಉಲ್ಲಂಘನೆ ಎಂದು ಆರ್​ಬಿಐ ಪರಿಗಣಿಸಿದೆ.

ಇದನ್ನೂ ಓದಿPVR and Adipurush: ಆದಿಪುರುಷ್ ಎಫೆಕ್ಟ್; ಷೇರುಪೇಟೆಯಲ್ಲಿ ಮಕಾಡೆ ಬಿದ್ದ ಪಿವಿಆರ್ ಐನಾಕ್ಸ್; ಕೆಟ್ಟ ವಿಮರ್ಶೆಯ ಮಧ್ಯೆಯೂ ಪ್ರಭಾಸ್ ನಟನೆಯ ಸಿನಿಮಾ ಭರ್ಜರಿ ಓಟ

ಹಾಗೆಯೇ, 2020-21ರ ಹಣಕಾಸು ವರ್ಷದಲ್ಲಿ ಕೆಲ ಸಾಲದ ಖಾತೆಗಳಿಗೆ ಲೋನ್ಟುವ್ಯಾಲ್ಯೂ ರೇಷಿಯೋವನ್ನು ಸರಿಯಾಗಿ ಪಾಲಿಸಲಾಗಿಲ್ಲದಿರುವುದೂ ಬೆಳಕಿಗೆ ಬಂದಿದೆ. ಈ ಬಗ್ಗೆ ಮಣಪ್ಪುರಂ ಫೈನಾನ್ಸ್ ಕಂಪನಿಯಿಂದ ಆರ್​ಬಿಐ ಉತ್ತರ ಕೋರಿತ್ತು. ಇದಕ್ಕೆ ಸಮಂಜಸವಾದ ಉತ್ತರ ಬರದೇ ಹೋದ್ದರಿಂದ ಕಂಪನಿಗೆ 20 ಲಕ್ಷ ರೂ ದಂಡವನ್ನು ಆರ್​ಬಿಐ ವಿಧಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ