Meta: ಟಾಟಾ ಕ್ಲಿಕ್ ಮಾಜಿ ಸಿಇಒ ವಿಕಾಸ್ ಪುರೋಹಿತ್​ಗೆ ಮೆಟಾ ಉನ್ನತ ಹುದ್ದೆ

| Updated By: Ganapathi Sharma

Updated on: Jan 09, 2023 | 3:06 PM

ವಿಕಾಸ್ ಪುರೋಹಿತ್ ಬೆಂಗಳೂರಿನ ಐಐಎಂ (ಇಂಡಿಯನ್ ಇನ್​ಸ್ಟಿಟ್ಯೂಟ್ ಆಫ್ ಮ್ಯಾನೇಜ್​ಮೆಂಟ್) ವ್ಯಾಸಂಗ ಮಾಡಿದವರು. ಉದ್ಯಮ ಕ್ಷೇತ್ರದಲ್ಲಿ 20 ವರ್ಷಗಳಿಗೂ ಹೆಚ್ಚಿನ ಅನುಭವ ಹೊಂದಿದ್ದಾರೆ. ಟಾಟಾ ಕ್ಲಿಕ್, ಅಮೆಜಾನ್, ರಿಲಯನ್ಸ್ ಬ್ರ್ಯಾಂಡ್ಸ್, ಆದಿತ್ಯ ಬಿರ್ಲಾ ಗ್ರೂಪ್ ಹಾಗೂ ಟಾಮಿ ಹಿಲ್ಫಿಗರ್​ನ ವಿವಿಧ ವಿಭಾಗಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ.

Meta: ಟಾಟಾ ಕ್ಲಿಕ್ ಮಾಜಿ ಸಿಇಒ ವಿಕಾಸ್ ಪುರೋಹಿತ್​ಗೆ ಮೆಟಾ ಉನ್ನತ ಹುದ್ದೆ
ವಿಕಾಸ್ ಪುರೋಹಿತ್ (ಚಿತ್ರ ಕೃಪೆ: ಲಿಂಕ್ಡ್ ಇನ್)
Image Credit source: Linkedin
Follow us on

ನವದೆಹಲಿ: ಟಾಟಾ ಸಮೂಹದ ಒಡೆತನದ ಟಾಟಾ ಕ್ಲಿಕ್ (Tata CLiQ) ಮಾಜಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ವಿಕಾಸ್ ಪುರೋಹಿತ್​ಗೆ (Vikas Purohit) ಸಾಮಾಜಿಕ ಮಾಧ್ಯಮ ಸಂಸ್ಥೆ ಮೆಟಾ (Meta) ಉನ್ನತ ಹುದ್ದೆ ನೀಡಿದೆ. ಮೆಟಾದ ಭಾರತದ ‘ಜಾಗತಿಕ ಉದ್ಯಮ ಸಮೂಹ’ದ ಸಿಇಒ ಆಗಿ ಪುರೋಹಿತ್ ಅಧಿಕಾರ ಸ್ವೀಕರಿಸಿದ್ದಾರೆ. ದೇಶದ ಪ್ರಮುಖ ಜಾಹೀರಾತುದಾರರು, ಏಜೆನ್ಸಿ ಪಾಲುದಾರರ ಜತೆಗಿನ ವಹಿವಾಟಿಗೆ ಸಂಬಂಧಿಸಿದ ತಂತ್ರಗಾರಿಕೆ ರೂಪಿಸುವುದು, ಚಟುವಟಿಕೆಗಳ ನೇತೃತ್ವವ ವಹಿಸುವ ಹೊಣೆಗಾರಿಕೆಯನ್ನು ಅವರಿಗೆ ವಹಿಸಲಾಗಿದೆ ಎಂದು ಮೆಟಾ ಪ್ರಕಟಣೆ ತಿಳಿಸಿದೆ. ಮೆಟಾ ಇಂಡಿಯಾದ ಜಾಹೀರಾತು ಉದ್ಯಮ ವಿಭಾಗದ ಮುಖ್ಯಸ್ಥ, ನಿರ್ದೇಶಕ ಅರುಣ್ ಶ್ರೀನಿವಾಸ್ ಅವರಿಗೆ ಪುರೋಹಿತ್ ವರದಿ ಮಾಡಲಿದ್ದಾರೆ ಎಂದು ಮೆಟಾ ತಿಳಿಸಿದೆ.

‘ವ್ಯವಹಾರಗಳನ್ನು ಸಕ್ರಿಯಗೊಳಿಸಲು, ಭಾರತದ ಆರ್ಥಿಕ ಬೆಳವಣಿಗೆಗೆ ಪೂರಕವಾಗಿ ಕಾರ್ಯನಿರ್ವಹಿಸಲು ಮತ್ತು ದೇಶದ ಡಿಜಿಟಲ್ ಜಾಹೀರಾತು ವ್ಯವಸ್ಥೆಯನ್ನು ಇನ್ನಷ್ಟು ಉತ್ತಮವಾಗಿ ರೂಪಿಸಲು ಮೆಟಾ ವಹಿಸಬಹುದಾದ ಪಾತ್ರಗಳ ಕಾರ್ಯತಂತ್ರ ರೂಪಿಸಲು ವಿಕಾಸ್ ನಮ್ಮ ತಂಡವನ್ನು ಸೇರುತ್ತಿರುವುದರಿಂದ ಸಂತಸಗೊಂಡಿದ್ದೇನೆ’ ಎಂದು ಶ್ರೀನಿವಾಸ್ ಪ್ರತಿಕ್ರಿಯಿಸಿದ್ದಾರೆ.

ಭಾರತದ ಅತಿದೊಡ್ಡ ಉದ್ಯಮ ಮತ್ತು ಏಜೆನ್ಸಿ ವ್ಯವಸ್ಥೆಯ ನೇತೃತ್ವವನ್ನು ಪುರೋಹಿತ್ ವಹಿಸಿಕೊಳ್ಳಲಿದ್ದಾರೆ. ಕಂಪನಿಯ ಮುಂಚೂಣಿ ಬ್ರ್ಯಾಂಡ್​ಗಳ ಜತೆಗೆ ಮತ್ತು ಏಜೆನ್ಸಿಗಳ ಜತೆಗೆ ಉತ್ತಮ ಹೊಂದಾಣಿಕೆ ರೂಪಿಸಿಕೊಂಡು ಹೋಗುವಲ್ಲಿ ಇವರು ಪ್ರಮುಖ ಪಾತ್ರ ವಹಿಸಲಿದ್ದು, ಆದಾಯ ಹೆಚ್ಚಳಕ್ಕೆ ಗಮನಹರಿಸಲಿದ್ದಾರೆ. ಡಿಜಿಟಲ್ ಉಪಕರಣಗಳನ್ನು ಬಳಸಿಕೊಂಡು ಜಾಹೀರಾತು ಮತ್ತು ಇತರ ವಿಭಾಗಗಳೊಂದಿಗೆ ಸಮನ್ವಯ ಸಾಧಿಸಿ ಆದಾಯ ಹೆಚ್ಚಿಸುವತ್ತ ಕ್ರಮ ಕೈಗೊಳ್ಳಲಿದ್ದಾರೆ ಎಂದು ಮೆಟಾ ತಿಳಿಸಿದೆ.

ಇದನ್ನೂ ಓದಿ: Fact Check: ಪೆನ್ನಿನಲ್ಲಿ ಗೀಚಿದ, ತಿದ್ದಿದ ನೋಟು ಚಲಾವಣೆ ಆಗುತ್ತಾ? ಸರ್ಕಾರದ ಸ್ಪಷ್ಟನೆ ಇಲ್ಲಿದೆ

ಕಂಪನಿಯ ಪ್ರಮುಖ ತಂಡಗಳು, ಏಜೆನ್ಸಿ ತಂಡಗಳು, ಬ್ಯುಸಿನೆಸ್ ಸೊಲ್ಯೂಷನ್ಸ್ ಅವರಿಗೆ ವರದಿ ಒಪ್ಪಿಸಲಿವೆ ಎಂದು ಕಂಪನಿ ತಿಳಿಸಿದೆ.

ಬೆಂಗಳೂರಿನ ಹಳೆ ವಿದ್ಯಾರ್ಥಿ ವಿಕಾಸ್ ಪುರೋಹಿತ್

ವಿಕಾಸ್ ಪುರೋಹಿತ್ ಬೆಂಗಳೂರಿನ ಐಐಎಂ (ಇಂಡಿಯನ್ ಇನ್​ಸ್ಟಿಟ್ಯೂಟ್ ಆಫ್ ಮ್ಯಾನೇಜ್​ಮೆಂಟ್) ವ್ಯಾಸಂಗ ಮಾಡಿದವರು. ಉದ್ಯಮ ಕ್ಷೇತ್ರದಲ್ಲಿ 20 ವರ್ಷಗಳಿಗೂ ಹೆಚ್ಚಿನ ಅನುಭವ ಹೊಂದಿದ್ದಾರೆ. ಟಾಟಾ ಕ್ಲಿಕ್, ಅಮೆಜಾನ್, ರಿಲಯನ್ಸ್ ಬ್ರ್ಯಾಂಡ್ಸ್, ಆದಿತ್ಯ ಬಿರ್ಲಾ ಗ್ರೂಪ್ ಹಾಗೂ ಟಾಮಿ ಹಿಲ್ಫಿಗರ್​ನ ವಿವಿಧ ವಿಭಾಗಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಮೆಟಾ ಸೇರ್ಪಡೆಗೂ ಮುನ್ನ ಟಾಟಾ ಕ್ಲಿಕ್ ಸಿಇಒ ಆಗಿದ್ದರು.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:00 pm, Mon, 9 January 23