Amazon Employees Layoff: ಈ ತಿಂಗಳು ಮತ್ತೆ ಅಮೆಜಾನ್ ಉದ್ಯೋಗಿಗಳ ವಜಾ, ಪ್ರಭಾವಿ ಹುದ್ದೆಯಲ್ಲಿರುವವರಿಗೆ ಸಂಕಷ್ಟ
ಅಮೆಜಾನ್ ಇತ್ತೀಚೆಗೆ 18 ಸಾವಿರ ತನ್ನ ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡಿತ್ತು. ಇದೀಗ ಮತ್ತೆ ಇನ್ನೂ ಕೆಲವರನ್ನು ವಜಾಗೊಳಿಸುವ ಬಗ್ಗೆ ಅಮೆಜಾನ್ ಸಿಇಒ ಆಂಡಿ ಜಾಸ್ಸಿ ಹೇಳಿಕೊಂಡಿದ್ದಾರೆ.
ಅಮೆಜಾನ್ ಇತ್ತೀಚೆಗೆ 18 ಸಾವಿರ ತನ್ನ ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡಿತ್ತು. ಇದೀಗ ಮತ್ತೆ ಇನ್ನೂ ಕೆಲವರನ್ನು ವಜಾಗೊಳಿಸುವ ಬಗ್ಗೆ ಅಮೆಜಾನ್ ಸಿಇಒ ಆಂಡಿ ಜಾಸ್ಸಿ ಹೇಳಿಕೊಂಡಿದ್ದಾರೆ. ಈಗಾಗಲೇ ಜಾಗತಿಕವಾಗಿ 18,000 ಕ್ಕೂ ಹೆಚ್ಚು ಅಮೆಜಾನ್ ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಲಾಗಿದೆ. ಇದೀಗ ಮತ್ತೆ ಕೆಲವರನ್ನು ವಜಾ ಮಾಡಲಾಗುವುದು ಎಂದು ಹೇಳಿದ್ದಾರೆ. ಈ ಬಾರಿ ಅಮೆಜಾನ್ ಉನ್ನತ ಹುದ್ದೆಯಲ್ಲಿರುವ ಪ್ರಭಾವಿತ ಉದ್ಯೋಗಿಗಳನ್ನು ಜನವರಿ 18 ರಿಂದ ವಜಾಗೊಳಿಸಲಾಗುವುದು ಎಂದು ಜಾಸ್ಸಿ ಅಧಿಕೃತ ಬ್ಲಾಗ್‌ಪೋಸ್ಟ್‌ನಲ್ಲಿ ಬರೆದಿದ್ದಾರೆ. ನವೆಂಬರ್‌ನಲ್ಲಿ, ಅಮೆಜಾನ್ ಸಾಧನಗಳು ಮತ್ತು ಪುಸ್ತಕಗಳ ವ್ಯವಹಾರಗಳ ಕೆಲವು ಉದ್ಯೋಗಿಗಳನ್ನು ವಜಾಗೊಳಿಸಿತ್ತು.
ಭಾರತದ ಅನೇಕ ಟಿಕ್ ಕಂಪನಿಗಳಲ್ಲಿ ಉದ್ಯೋಗಿಗಳನ್ನು ವಜಾಗೊಳಿಸುವ ಬಗ್ಗೆ ಸೂಚನೆಯನ್ನು ನೀಡಲಾಗಿತ್ತು ಎಂದು ಹೇಳಿದ್ದರು, ಮಾಧ್ಯಮ ವರದಿಯ ಪ್ರಕಾರ ಸುಮಾರು 1 ಪ್ರತಿಶತದಷ್ಟು ಅಮೆಜಾನ್ ಉದ್ಯೋಗಿಗಳು ಭಾರತದಲ್ಲಿ ಹೊರಗೆ ಕೆಲಸ ಮಾಡುವವರನ್ನು ವಜಾ ಮಾಡಲಾಗುವುದು ಎಂದು ಹೇಳಲಾಗಿತ್ತು.
ಮಾನವ ಸಂಪನ್ಮೂಲ, ಪ್ರೈಮ್ ಮತ್ತು ಟೆಕ್ ತಂಡಗಳ ಭಾಗವಾಗಿರುವ ಉದ್ಯೋಗಿಗಳು ವಜಾ ಮಾಡಲಾಗಿತ್ತು. ಆದರೆ ಮುಂಬರುವ ವಜಾಗೊಳಿಸುವ ಪ್ರಕ್ರಿಯೆ ಕುರಿತು ಅಮೆಜಾನ್ ಇಂಡಿಯಾ ಯಾವುದೇ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿಲ್ಲ.
ಇದನ್ನು ಓದಿ:Amazon employees layoff : ಅಮೆಜಾನ್ 8,000 ಉದ್ಯೋಗಿಗಳು ವಜಾ, ಕಾರಣ ಇಲ್ಲಿದೆ ನೋಡಿ
ಜನವರಿ 18 ರಿಂದ ಅಮೆಜಾನ್ ಉನ್ನತ ಹುದ್ದೆಯಲ್ಲಿರುವ ಉದ್ಯೋಗಿಗಳೊಂದಿಗೆ ಸಂವಹನ ನಡೆಸಲಿದೆ ಎಂದು CEO ಬಹಿರಂಗಪಡಿಸಿದರು. ಆಂತರಿಕ ತಂಡದಿಂದ ಯಾರೋ ವಜಾಗೊಳಿಸುವ ಬಗ್ಗೆ ಮಾಹಿತಿಯನ್ನು ಸೋರಿಕೆ ಮಾಡಿದ್ದಾರೆ ಮತ್ತು ಅದಕ್ಕಾಗಿಯೇ ಅವರು ಬ್ಲಾಗ್ ಅನ್ನು ಬರೆಯಬೇಕಾಯಿತು ಎಂದು ಜಾಸ್ಸಿ ಹೈಲೈಟ್ ಮಾಡಿದರು. ನಮ್ಮ ತಂಡದ ಸದಸ್ಯರಲ್ಲಿ ಒಬ್ಬರು ಈ ಮಾಹಿತಿಯನ್ನು ಬಾಹ್ಯವಾಗಿ ಸೋರಿಕೆ ಮಾಡಿದ್ದರಿಂದ, ಈ ಸುದ್ದಿಯನ್ನು ಮೊದಲೇ ಹಂಚಿಕೊಳ್ಳುವುದು ಉತ್ತಮ ಎಂದು ನಾವು ನಿರ್ಧರಿಸಿದ್ದೇವೆ, ಆದ್ದರಿಂದ ಈ ವಿಚಾರಗಳನ್ನು ವಜಾ ಮಾಡುವ ಮುನ್ನವೇ ಹೇಳಲಾಗಿದೆ ಎಂದು ಹೇಳಿದ್ದಾರೆ. ಜನವರಿ 18ರಿಂದ ಉನ್ನತ ಹುದ್ದೆಯಲ್ಲಿರುವ ಉದ್ಯೋಗಿಗಳನ್ನು ವಜಾ ಮಾಡುವ ಪ್ರಕ್ರಿಯೆಯನ್ನು ಪ್ರಾರಂಭ ಮಾಡುತ್ತೇವೆ ಎಂದು ಜಾಸ್ಸಿ ಬ್ಲಾಗ್ನಲ್ಲಿ ಬರೆದಿದ್ದಾರೆ.
ಅಮೆಜಾನ್ CEO ಹೇಳೀರುವಂತೆ ವೇತನ, ಆರೋಗ್ಯ ಪ್ರಯೋಜನಗಳು, ಅಗತ್ಯ ಸೌಲಭ್ಯಗಳನ್ನು ನೀಡಲಾಗುವುದು ಎಂದು ಹೇಳಿದ್ದಾರೆ. ಈ ಹುದ್ದೆಗಳಿಗೆ ಯಾರನ್ನೂ ಕೂಡ ಮರುನೇಮಕಾ ಮಾಡಲಾಗುವುದಿಲ್ಲ ಎಂದು ತಿಳಿಸಿದ್ದಾರೆ. ಅಮೆಜಾನ್ ಈ ಹಿಂದೆ ಅನಿಶ್ಚಿತ ಆರ್ಥಿಕ ಸಂಕಷ್ಟಗಲನ್ನು ಎದುರಿಸಿದೆ, ಈಗ ಅದೇ ಪರಿಸ್ಥಿತಿ ನಮಗೆ ಬಂದಿದೆ ಎಂದು ಹೇಳುವ ಮೂಲಕ ಮತ್ತಷ್ಟು ಉದ್ಯೋಗಿಗಳನ್ನು ವಜಾಗೊಳಿಸುವ ಬಗ್ಗೆ ತಿಳಿಸಿದ್ದಾರೆ.
ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ