AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

AI Agents: ಮೆಟಾ ಆದಾಯ ಹೆಚ್ಚಳ, ಜನರ ಮೊಬೈಲ್ ಆವರಿಸಲಿವೆ ಎಐ ಏಜೆಂಟ್ಸ್; ಶ್ರೀಮಂತಿಕೆಯಲ್ಲಿ ಅಂಬಾನಿ ಮೀರಿಸಿದ ಮಾರ್ಕ್ ಜುಕರ್​ಬರ್ಗ್

Meta Platforms Revenue And Share Price Rise: ಸತತ ಮೂರು ತ್ರೈಮಾಸಿಕ ಅವಧಿಯಲ್ಲಿ ಆದಾಯ ಇಳಿಮುಖ ಕಾಣುತ್ತಾ ನಿರಾಸೆ ಹೊಂದಿದ್ದ ಮೆಟಾ ಪ್ಲಾಟ್​ಫಾರ್ಮ್ಸ್ ಸಂಸ್ಥೆ ಈ ಕ್ಯಾಲೆಂಡರ್ ವರ್ಷದ ಮೊದಲ ಕ್ವಾರ್ಟರ್​ನಲ್ಲಿ ಅದ್ವಿತೀಯ ಆದಾಯ ಗಳಿಸಿರುವುದು ವರದಿಯಾಗಿದೆ. ಇದರ ಪರಿಣಾಮವಾಗಿ ಮಾರ್ಕ್ ಜುಕರ್​ಬರ್ಗ್ ಶ್ರೀಮಂತಿಕೆಯಲ್ಲಿ ಅಂಬಾನಿಯನ್ನು ಹಿಂದಿಕ್ಕಿದ್ದಾರೆ.

AI Agents: ಮೆಟಾ ಆದಾಯ ಹೆಚ್ಚಳ, ಜನರ ಮೊಬೈಲ್ ಆವರಿಸಲಿವೆ ಎಐ ಏಜೆಂಟ್ಸ್; ಶ್ರೀಮಂತಿಕೆಯಲ್ಲಿ ಅಂಬಾನಿ ಮೀರಿಸಿದ ಮಾರ್ಕ್ ಜುಕರ್​ಬರ್ಗ್
ಮಾರ್ಕ್ ಜುಕರ್​ಬರ್ಗ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Apr 28, 2023 | 10:58 AM

ಕ್ಯಾಲಿಫೋರ್ನಿಯಾ: ಸತತ ಮೂರು ತ್ರೈಮಾಸಿಕ ಅವಧಿಯಲ್ಲಿ ಆದಾಯ ಇಳಿಮುಖ ಕಾಣುತ್ತಾ ನಿರಾಸೆ ಹೊಂದಿದ್ದ ಮೆಟಾ ಪ್ಲಾಟ್​ಫಾರ್ಮ್ಸ್ ಸಂಸ್ಥೆ (Meta Platforms Inc.) ಈ ಕ್ಯಾಲೆಂಡರ್ ವರ್ಷದ ಮೊದಲ ಕ್ವಾರ್ಟರ್​ನಲ್ಲಿ ಅದ್ವಿತೀಯ ಆದಾಯ ಗಳಿಸಿರುವುದು ವರದಿಯಾಗಿದೆ. ವಾಟ್ಸಾಪ್, ಫೇಸ್​ಬುಕ್ ಮತ್ತು ಇನ್ಸ್​ಟಾಗ್ರಾಮ್​ನ ಮಾಲೀಕ ಸಂಸ್ಥೆ ಮೆಟಾ ಪ್ಲಾಟ್​ಫಾರ್ಮ್ಸ್​ನ ಆದಾಯ 2023 ಜನವರಿಯಿಂದ ಮಾರ್ಚ್​ವರೆಗಿನ ಅವಧಿಯಲ್ಲಿ 28.6 ಬಿಲಿಯನ್ ಡಾಲರ್ (ಸುಮಾರು 2.33 ಲಕ್ಷ ಕೋಟಿ ರೂ) ಇದೆ. ಹಿಂದಿನ ವರ್ಷದ ಇದೇ ಅವಧಿಗಿಂತ ಆದಾಯದಲ್ಲಿ ಹೆಚ್ಚಳವಾಗಿರುವುದು ಕೇವಲ ಶೇ. 3 ಮಾತ್ರ. ಆದರೆ, ಇದು ಷೇರುಪೇಟೆ ನುರಿತರು ಅಂದಾಜು ಮಾಡಿದ್ದಕ್ಕಿಂತ ಉತ್ತಮವಾಗಿದೆ. ಇದರ ಪರಿಣಾಮವಾಗಿ ಷೇರುಪೇಟೆಗಳಲ್ಲಿ ಮೆಟಾ ಪ್ಲಾಟ್​ಫಾರ್ಮ್ ಹಬ್ಬ ನಡೆದಿದೆ. ಮೆಟಾ ಷೇರು ಮೌಲ್ಯ ಶೇ. 15ರಷ್ಟು ಹೆಚ್ಚಳವಾಗಿದೆ.

ಏಪ್ರಿಲ್ 28 ಶುಕ್ರವಾರ ಮೆಟಾ ಷೇರುಬೆಲೆ 239 ಡಾಲರ್ (ಸುಮಾರು 19,500 ರೂ) ದಾಖಲಾಗಿದೆ. ಅಮೆರಿಕದ ಡೌ ಜೋನ್ಸ್, ಎಸ್ ಅಂಡ್ ಪಿ, ನಾಸ್ಡಾಕ್ ಷೇರುಪೇಟೆಗಳಲ್ಲಿ ಲಿಸ್ಟ್ ಆಗಿರುವ ಮೆಟಾ ಪ್ಲಾಟ್​ಫಾರ್ಮ್ ಅಲ್ಲೆಲ್ಲಾ ಕಡೆಯೂ ವೃದ್ಧಿ ಕಂಡಿದೆ. ಇದರ ಪರಿಣಾಮವಾಗಿ ಮೆಟಾದ ಷೇರುಸಂಪತ್ತು ಗಮನಾರ್ಹವಾಗಿ ಹೆಚ್ಚಾಗಿದೆ. ಇದರ ಜೊತೆಗೆ ಮೆಟಾ ಸಂಸ್ಥಾಪಕ ಮಾರ್ಕ್ ಜುಕರ್​ಬರ್ಗ್ (Mark Zuckerberg) ಅವರ ವೈಯಕ್ತಿಕ ಷೇರುಸಂಪತ್ತು 10 ಬಿಲಿಯನ್ ಡಾಲರ್​ನಷ್ಟು (ಸುಮಾರು 1.6 ಲಕ್ಷ ಕೋಟಿ ರೂ) ವೃದ್ಧಿ ಕಂಡಿದೆ.

ಇದನ್ನೂ ಓದಿDeepak Parekh: ಷೇರು ಬೇಡ, ಸಂಬಳ ಸಾಕು ಎನ್ನುವ ಮಾಲೀಕ; 5 ಲಕ್ಷ ಕೋಟಿ ಮೌಲ್ಯದ ಕಂಪನಿ ಛೇರ್ಮನ್​ನ ಸರಳತೆ ಎಲ್ಲರಿಗೂ ಮಾದರಿ

ಶ್ರೀಮಂತಿಕೆಯಲ್ಲಿ ಮುಕೇಶ್ ಅಂಬಾನಿಯನ್ನು ಹಿಂದಿಕ್ಕಿದ ಮಾರ್ಕ್ ಜುಕರ್​ಬರ್ಗ್

ಮೆಟಾ ಪ್ಲಾಟ್​ಫಾರ್ಮ್ಸ್​ನ ಷೇರುಬೆಲೆ ಒಂದೇ ದಿನದಲ್ಲಿ ಶೇ. 15ರಷ್ಟು ಹೆಚ್ಚಾದ ಬೆನ್ನಲ್ಲೇ ಮಾರ್ಕ್ ಜುಕರ್ಬರ್ಗ್ ಅವರ ಒಟ್ಟು ಸಂಪತ್ತು 87.3 ಬಿಲಿಯನ್ ಡಾಲರ್ (ಸುಮಾರು 7.13 ಲಕ್ಷ ಕೋಟಿ ರೂ) ತಲುಪಿದೆ. ಬ್ಲೂಮ್​ಬರ್ಗ್ ಬಿಲಿಯನೇರ್ಸ್ ಸೂಚ್ಯಂಕದಲ್ಲಿ ಜುಕರ್​ಬರ್ಗ್ 12ನೇ ಸ್ಥಾನಕ್ಕೇರಿದ್ದಾರೆ. ಈ ಮೂಲಕ ಶ್ರೀಮಂತಿಕೆಯಲ್ಲಿ ಮುಕೇಶ್ ಅಂಬಾನಿಯನ್ನು ಹಿಂದಿಕ್ಕಿದ್ದಾರೆ. ಭಾರತದ ಅತಿಶ್ರೀಮಂತ ವ್ಯಕ್ತಿ ಎನಿಸಿರುವ ರಿಲಾಯನ್ಸ್ ಸಾಮ್ರಾಜ್ಯದ ಒಡೆಯ ಮುಕೇಶ್ ಅಂಬಾನಿ 12ನೇ ಸ್ಥಾನದಲ್ಲಿದ್ದವರು ಮಾರ್ಕ್ ಜುಕರ್​ಬರ್ಗ್​ಗೆ ಸ್ಥಾನ ಬಿಟ್ಟುಕೊಟ್ಟು 13ನೇ ಸ್ಥಾನಕ್ಕೆ ಇಳಿಯಬೇಕಾಯಿತು.

2022ರಲ್ಲಿ ಮಾರ್ಕ್ ಜುಕರ್​ಬರ್ಗ್ ಕಂಡ ಪತನ ಮರೆಯಲು ಅಸಾಧ್ಯ

ಫೇಸ್​ಬುಕ್ ಸಂಸ್ಥಾಪಕರೆಂದೇ ಜನಪ್ರಿಯರಾಗಿರುವ ಮಾರ್ಕ್ ಜುಕರ್​ಬರ್ಗ್ ಅವರ ಸಂಪತ್ತು ಒಮ್ಮೆಗೇ 71 ಬಿಲಿಯನ್ ಡಾಲರ್​ನಷ್ಟು (ಸುಮಾರು 5.8 ಲಕ್ಷ ಕೋಟಿ ರೂ) ಕರಗಿದ್ದಕ್ಕೆ 2022ರ ವರ್ಷ ಸಾಕ್ಷಿಯಾಗಿತ್ತು. ಮಾರ್ಕ್ ಜುಕರ್​ಬರ್ಗ್ ಟಾಪ್-10 ಪಟ್ಟಿಯಿಂದ ದಿಢೀರ್ ಹೊರಗುಳಿದುಬಿಟ್ಟರು. ಈಗ 10 ಬಿಲಿಯನ್ ಡಾಲರ್​ನಷ್ಟು ಷೇರು ಸಂಪತ್ತು ಏರಿಕೆ ಆಗಿರುವುದು 2022ರ ಆಘಾತಕಾರಿ ಹಿನ್ನಡೆಗೆ ಹೋಲಿಸಿದರೆ ಅಲ್ಪ ಮಾತ್ರ. ಆದರೂ ಕೂಡ ಮಾರ್ಕ್ ಜುಕರ್​ಬರ್ಗ್ ಮತ್ತು ಮೆಟಾ ಮುನ್ನಡೆಗೆ ಈ ಬೆಳವಣಿಗೆ ಪ್ರೋತ್ಸಾಹ ಕೊಟ್ಟಿದೆ.

ಇದನ್ನೂ ಓದಿEPF: ಇಪಿಎಫ್ ಪೋರ್ಟಲ್ ಈಗಲೂ ತೆರೆಯುತ್ತಿಲ್ಲವಾ? ನಿಮ್ಮ ಪಿಎಫ್ ಬ್ಯಾಲೆನ್ಸ್ ನೋಡಲು ಬೇರೆ ಸರಳ ಮಾರ್ಗಗಳೂ ಉಂಟು

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಏಜೆಂಟ್ಸ್ ಬಿಡಲಿರುವ ಮೆಟಾ

ಮೆಟಾ ಪ್ಲಾಟ್​ಫಾರ್ಮ್ ಆದಾಯ ಮತ್ತು ಲಾಭದಲ್ಲಿ ಅನಿರೀಕ್ಷಿತ ಹೆಚ್ಚಳ ಮತ್ತು ಷೇರುಸಂಪತ್ತು ಅದ್ವಿತೀಯವಾಗಿ ಹೆಚ್ಚಳ ಕಂಡಿರುವುದು ಮಾರ್ಕ್ ಜುಕರ್​ಬರ್ಗ್ ಅವರ ಹುಮ್ಮಸ್ಸು ಹೆಚ್ಚಿಸಿದೆ. ಎಐ ಅಥವಾ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನದ ಬೆಳವಣಿಗೆಯತ್ತ ಸಂಸ್ಥೆ ಹೆಚ್ಚು ಗಮನ ಹರಿಸಲಿದೆ. ತನ್ನೆಲ್ಲಾ ಆ್ಯಪ್​ಗಳ ಬಳಕೆದಾರರಿಗೆ ಎಐ ಏಜೆಂಟ್ಸ್ ನೆರವು ಒದಗಿಸುವುದಾಗಿ ಮಾರ್ಕ್ ಹೇಳಿದ್ದಾರೆ.

ಅಂದರೆ ಫೇಸ್​ಬುಕ್, ಇನ್ಸ್​ಟಾಗ್ರಾಮ್, ವಾಟ್ಸಾಪ್​ಗಳಲ್ಲಿ ಎಐ ಚ್ಯಾಟ್​ಬಾಟ್​ಗಳು ಬರಲಿವೆ. ಜನರು ನಿರೀಕ್ಷಿಸಿದ್ದಕ್ಕಿಂತ ಹೆಚ್ಚೇ ನೆರವಿಗೆ ಬರಲು ಈ ಚ್ಯಾಟ್​ಬಾಟ್​ಗಳು ಸಹಾಯಕವಾಗಲಿವೆ. ಚ್ಯಾಟ್​ಜಿಪಿಟಿ ಬಂದ ಬಳಿಕ ಎಲ್ಲೆಡೆ ಎಐ ಬೋಟ್​ಗಳ ಹವಾ ಶುರುವಾಗುತ್ತಿದ್ದು, ಮೆಟಾ ಕೂಡ ಈ ಹಾದಿಯಲ್ಲಿ ಹಿಂದುಳಿಯದಿರಲು ನಿರ್ಧರಿಸಿದಂತಿದೆ. ಈ ಚ್ಯಾಟ್​ಬೋಟ್​ಗಳು ಯಶಸ್ವಿಯಾದರೆ ಮಾರ್ಕ್ ಜುಕರ್​ಬರ್ಗ್ ಅವರ ಕನಸಿನ ಮೆಟಾವರ್ಸ್​ಗೆ ಪುಷ್ಟಿ ಸಿಗುವ ನಿರೀಕ್ಷೆ ಇದೆ.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 10:58 am, Fri, 28 April 23

ನೀರು ಕುಡಿಯಲು ಬಂದ ಜಿಂಕೆಯನ್ನು ಬೇಟೆಯಾಡಿದ ಹುಲಿ: ವಿಡಿಯೋ ನೋಡಿ
ನೀರು ಕುಡಿಯಲು ಬಂದ ಜಿಂಕೆಯನ್ನು ಬೇಟೆಯಾಡಿದ ಹುಲಿ: ವಿಡಿಯೋ ನೋಡಿ
ತುಮಕೂರು ಸಿದ್ಧಗಂಗಾ ಶ್ರೀಗಳ ಆಶೀರ್ವಾದ ಪಡೆದ ನಟ ಯುವರಾಜ್ ಕುಮಾರ್
ತುಮಕೂರು ಸಿದ್ಧಗಂಗಾ ಶ್ರೀಗಳ ಆಶೀರ್ವಾದ ಪಡೆದ ನಟ ಯುವರಾಜ್ ಕುಮಾರ್
ಗಂಡನ ಮನೆಯಿಂದ ಮಗಳನ್ನ ಹೊತ್ತೊಯ್ದ ಪೋಷಕರು, ಮುಂದೇನಾಯ್ತು?
ಗಂಡನ ಮನೆಯಿಂದ ಮಗಳನ್ನ ಹೊತ್ತೊಯ್ದ ಪೋಷಕರು, ಮುಂದೇನಾಯ್ತು?
ನೀಟ್​ ನಲ್ಲಿ ಫಸ್ಟ್ ರ‍್ಯಾಂಕ್: ತಂದೆಗೆ ಫಾದರ್ಸ್ ಡೇ ಗಿಫ್ಟ್ ಕೊಟ್ಟ ಮಗ
ನೀಟ್​ ನಲ್ಲಿ ಫಸ್ಟ್ ರ‍್ಯಾಂಕ್: ತಂದೆಗೆ ಫಾದರ್ಸ್ ಡೇ ಗಿಫ್ಟ್ ಕೊಟ್ಟ ಮಗ
‘ಕಾಂತಾರ: ಚಾಪ್ಟರ್ 1’ ಶೂಟಿಂಗ್ ಅವಘಡ, ನಿಜಕ್ಕೂ ನಡೆದಿದ್ದೇನು?
‘ಕಾಂತಾರ: ಚಾಪ್ಟರ್ 1’ ಶೂಟಿಂಗ್ ಅವಘಡ, ನಿಜಕ್ಕೂ ನಡೆದಿದ್ದೇನು?
ಗ್ಯಾರಂಟಿ ಯೋಜನೆಗಳಿಂದ ಮಠಕ್ಕೆ ಪೆಟ್ಟು, ಖರ್ಚಿಗೆ ಹೊರೆ: ದಿಂಗಾಲೇಶ್ವರ ಶ್ರೀ
ಗ್ಯಾರಂಟಿ ಯೋಜನೆಗಳಿಂದ ಮಠಕ್ಕೆ ಪೆಟ್ಟು, ಖರ್ಚಿಗೆ ಹೊರೆ: ದಿಂಗಾಲೇಶ್ವರ ಶ್ರೀ
ಏಕಕಾಲದಲ್ಲಿ ಕುಸಿದು ಬಿದ್ದ 6 ಮನೆಗಳು, ಹಲವರು ಸಿಲುಕಿರುವ ಶಂಕೆ
ಏಕಕಾಲದಲ್ಲಿ ಕುಸಿದು ಬಿದ್ದ 6 ಮನೆಗಳು, ಹಲವರು ಸಿಲುಕಿರುವ ಶಂಕೆ
ನದಿಯಲ್ಲಿ ಕೊಚ್ಚಿ ಹೋದ ಸೇತುವೆ:ಬೆಳಗಾವಿ-ಗೋವಾ ರಸ್ತೆ ಸಂಚಾರ ಬಂದ್
ನದಿಯಲ್ಲಿ ಕೊಚ್ಚಿ ಹೋದ ಸೇತುವೆ:ಬೆಳಗಾವಿ-ಗೋವಾ ರಸ್ತೆ ಸಂಚಾರ ಬಂದ್
ಹಾಸನ ಜಿಲ್ಲಾಸ್ಪತ್ರೆ ಸೆಕ್ಯುರಿಟಿಗಾರ್ಡ್ ಕ್ರೌರ್ಯ:ಯುವಕನ ಮನಸೋ ಇಚ್ಚೇ ಥಳಿತ
ಹಾಸನ ಜಿಲ್ಲಾಸ್ಪತ್ರೆ ಸೆಕ್ಯುರಿಟಿಗಾರ್ಡ್ ಕ್ರೌರ್ಯ:ಯುವಕನ ಮನಸೋ ಇಚ್ಚೇ ಥಳಿತ
ಪಾತ್ರೆ ತೊಳೆಯುತ್ತಿದ್ದ ಗಂಡನಿಗೆ ಒದ್ದು ಹಿಂಸೆ ಕೊಟ್ಟ ಪತ್ನಿ
ಪಾತ್ರೆ ತೊಳೆಯುತ್ತಿದ್ದ ಗಂಡನಿಗೆ ಒದ್ದು ಹಿಂಸೆ ಕೊಟ್ಟ ಪತ್ನಿ