
ಮುಂಬೈ, ಮೇ 1: ಕಂಟೆಂಟ್ ಕ್ರಿಯೇಟರ್ಸ್ಗೆ ಮಣೆ ಹಾಕುತ್ತಿರುವ ಸರ್ಕಾರ ಈ ನಿಟ್ಟಿನಲ್ಲಿ ಲೈವ್ ಇವೆಂಟ್ಸ್ನ ಪ್ರಾಮುಖ್ಯತೆಯನ್ನು ಗುರುತಿಸಿದೆ. ಇವತ್ತು ಚಾಲನೆಗೊಂಡಿರುವ ವೇವ್ಸ್ ಶೃಂಗಸಭೆಯಲ್ಲಿ (WAVES summit 2025) ಮನರಂಜನಾ ಉದ್ಯಮ ಮತ್ತು ಕ್ರಿಯೇಟರ್ಸ್ ಆರ್ಥಿಕತೆ ಗಟ್ಟಿಗೊಳಿಸುವ ಸಂಬಂಧ ಚರ್ಚೆಗಳು, ವಿಚಾರ ವಿನಿಮಗಳು ಆಗಲಿವೆ. ಶೃಂಗಸಭೆಯ ಮೂರನೇ ದಿನವಾದ ಮೇ 3ರಂದು ಕೇಂದ್ರ ಮಾಹಿತಿ ಪ್ರಸರಣ ಖಾತೆ ರಾಜ್ಯ ಸಚಿವ ಎಲ್ ಮುರುಗನ್ ಅವರು ಶ್ವೇತಪತ್ರವೊಂದನ್ನು ಬಿಡುಗಡೆ ಮಾಡಲಿದ್ದಾರೆ. ‘ಇಂಡಿಯಾಸ್ ಲೈವ್ ಇವೆಂಟ್ಸ್ ಎಕನಾಮಿ: ಎ ಸ್ಟ್ರಾಟಿಜಿಕ್ ಗ್ರೋತ್ ಇಂಪಿರೇಟಿವ್’ ಹೆಸರಿನ ಈ ಶ್ವೇತ ಪತ್ರವನ್ನು ವೇವ್ಸ್ ಸಮಿಟ್ನ ನಾಲೆಜ್ ಪಾರ್ಟ್ನರ್ ಆದ EventFAQs ಸಂಸ್ಥೆ ಸಿದ್ಧಪಡಿಸಿದೆ.
ಬಹಳ ವೇಗವಾಗಿ ಬೆಳೆಯುತ್ತಿರುವ ಲೈವ್ ಎಂಟರ್ಟೈನ್ಮೆಂಟ್ ಉದ್ಯಮ, ಹೊಸ ಟ್ರೆಂಡ್ಗಳು, ಈ ಸೆಕ್ಟರ್ ಅನ್ನು ಮತ್ತಷ್ಟು ಹೆಚ್ಚಿನ ಸ್ತರಕ್ಕೆ ತೆಗೆದುಕೊಂಡು ಹೋಗಲು ತೆಗೆದುಕೊಳ್ಳಬೇಕಾದ ಕ್ರಮ ಇತ್ಯಾದಿ ಅಂಶಗಳನ್ನು ಶ್ವೇತಪತ್ರದಲ್ಲಿಲ ಒಳಗೊಂಡಿರಲಾಗುತ್ತದೆ ಎಂದು ಸರ್ಕಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ಭಾರತದಲ್ಲಿ ಸೃಜಿಸಿ, ವಿಶ್ವಕ್ಕೆ ಸೃಜಿಸಿ; ಆರೆಂಜ್ ಆರ್ಥಿಕತೆಗೆ ಪ್ರಧಾನಿ ಒತ್ತು
ಭಾರತದಲ್ಲಿ ಲೈವ್ ಇವೆಂಟ್ಗಳ ಸೆಕ್ಟರ್ ದುರ್ಬಲವಾಗಿತ್ತು. ಇತ್ತೀಚೆಗೆ ವ್ಯವಸ್ಥಿತ ರೀತಿಯಲ್ಲಿ ಇದು ಬೆಳೆಯುತ್ತಿದೆ. 2024ರಿಂದ 2025ರ ಕಾಲ ಗಮನಾರ್ಹ ಎನಿಸಿದೆ. ಕೋಲ್ಡ್ಪ್ಲೇ ಇತ್ಯಾದಿ ಅಂತಾರಾಷ್ಟ್ರೀಯ ಶೋಗಳು ಅಹ್ಮದಾಬಾದ್ ಮತ್ತು ಮುಂಬೈನಲ್ಲಿ ಸೂಪರ್ ಸಕ್ಸಸ್ ಆಗಿದ್ದುವುದ. ಜಾಗತಿಕ ಮಟ್ಟದ ಲೈವ್ ಶೋಗಳನ್ನು ಭಾರತ ಯಶಸ್ವಿಯಾಗಿ ಆಯೋಜಿಸಬಹುದು ಎಂಬುದು ಖಾತ್ರಿಯಾಗಿದೆ.
ಈ ಲೈವ್ ಇವೆಂಟ್ಸ್ನಿಂದ ಇವೆಂಟ್ ಟೂರಿಸಂ ಕೂಡ ಸೃಷ್ಟಿಯಾಗುತ್ತದೆ. ಲೈವ್ ಕಾರ್ಯಕ್ರಮ ನೋಡಲು ವಿವಿಧೆಡೆಗಳಿಂದ ಲಕ್ಷಾಂತರ ಜನರು ಆಗಮಿಸುತ್ತಾರೆ. ಇದರಿಂದ ಆರ್ಥಿಕತೆ ಚಟುವಟಿಕೆ ಮತ್ತಷ್ಟು ಚುರುಕುಗೊಳ್ಳುತ್ತದೆ.
2024ರಲ್ಲಿ, ಲೈವ್ ಇವೆಂಟ್ ಸೆಕ್ಟರ್ ಶೇ. 17ರಷ್ಟು ಬೆಳವಣಿಗೆ ಕಂಡಿದೆ. ಆರ್ಥಿಕತೆಗೆ 13 ಬಿಲಿಯನ್ ಡಾಲರ್ ಹೆಚ್ಚುವರಿ ಕೊಡುಗೆ ನೀಡಿದೆ. ಭಾರತದ ಮಾಧ್ಯಮ ಮತ್ತು ಮನರಂಜನಾ ಇಕೋಸಿಸ್ಟಂನೊಳಗೆ ಲೈವ್ ಇವೆಂಟ್ ಬಹಳ ವೇಗವಾಗಿ ಬೆಳೆಯುತ್ತಿರುವ ಸೆಕ್ಟರ್ ಆಗಿದೆ.
ಇದನ್ನೂ ಓದಿ: ವೇವ್ಸ್ ಸಮಿಟ್ನಲ್ಲಿ ಚಿತ್ರರಂಗದ ದಿಗ್ಗಜರ ಅಂಚೆ ಚೀಟಿ ಬಿಡುಗಡೆ; ಮೋದಿಗೆ ನಾಗಾರ್ಜುನ ಧನ್ಯವಾದ
ಲೈವ್ ಇವೆಂಟ್ಗಳನ್ನು ಆಯೋಜಿಸುವುದರಲ್ಲಿ 2030ರೊಳಗೆ ಭಾರತ ಜಗತ್ತಿನ ಟಾಪ್ 5 ದೇಶಗಳ ಸಾಲಿಗೆ ಸೇರುವ ಗುರಿ ಇಡಲಾಗಿದೆ. ಈ ನಿಟ್ಟಿನಲ್ಲಿ ಹೂಡಿಕೆ, ಪೂರಕ ನೀತಿ, ಮೂಲಸೌಕರ್ಯ ಹೆಚ್ಚಳ ಇತ್ಯಾದಿ ಕಾರ್ಯಗಳಿಗೆ ಸರ್ಕಾರ ಗಮನ ಕೊಡಲಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ